ಅವ್ಯಾಹತವಾಗಿ ಸಾಗಿದೆ ಮ್ಯಾನ್‌ಹೋಲ್ ಸಾವಿನ ಸರಣಿ

Update: 2017-03-14 18:20 GMT

ಜಾಡಮಾಲಿಗಳನ್ನು ನೇಮಕ ಮಾಡಿಕೊಳ್ಳುವ ಮತ್ತು ಒಣ ಶೌಚಾಲಯ (ನಿಷೇಧ) ಕಾಯ್ದೆ ಜಾರಿಗೆ ಬಂದು 24 ವರ್ಷ ಕಳೆದಿದೆ. ಈ ಕಾಯ್ದೆ ಜಾಡಮಾಲಿ ಪದ್ಧತಿಯನ್ನು ನಿಷೇಧಿಸುವುದು ಮಾತ್ರವಲ್ಲದೆ, ಕಾಯ್ದೆ ಉಲ್ಲಂಘಿಸಿ ಜಾಡಮಾಲಿಗಳನ್ನು ನೇಮಕ ಮಾಡಿಕೊಳ್ಳುವವರಿಗೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಲು ಹಾಗೂ 2,000 ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ಇದು ಒಣ ಶೌಚಾಲಯಗಳನ್ನು ನಿರ್ಮಿಸುವುದನ್ನು ಕೂಡಾ ನಿಷೇಧಿಸುತ್ತದೆ. ಆದರೆ ಈ ಕಾಯ್ದೆಯನ್ನು ಎಂದೂ ಗಂಭೀರವಾಗಿ ಅನುಷ್ಠಾನಗೊಳಿಸಲೇ ಇಲ್ಲ. ಅಂತೆಯೇ ಕಳೆದ 20 ವರ್ಷಗಳಲ್ಲಿ ಯಾವ ಪ್ರಕರಣವನ್ನು ಕೂಡಾ ಕಾಯ್ದೆ ಉಲ್ಲಂಘನೆಗಾಗಿ ದಾಖಲಿಸಿಲ್ಲ. ಈ ಕಾಯ್ದೆ ಜಾರಿಯಾಗಲು ಯಾವ ಅರ್ಥಪೂರ್ಣ ಕ್ರಮಗಳನ್ನೂ ಕೈಗೊಂಡಿಲ್ಲ.

ಜಾಡಮಾಲಿಗಳ ಬಗೆಗಿನ ನಿರ್ಲಕ್ಷ್ಯ ಹಾಗೂ 2013ರ ಕಾಯ್ದೆಯ ಅನುಷ್ಠಾನ ಕುರಿತ ಉದಾಸೀನ ಮುಂದುವರಿದಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾರ್ಚ್ 7ರಂದು ಮ್ಯಾನ್‌ಹೋಲ್ ಸ್ವಚ್ಛಗೊಳಿಸುವಾಗ ಮೂವರು ಪೌರಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಕಳೆದ ವರ್ಷದ ಎಪ್ರಿಲ್ 4ರಂದು ಉದ್ಯಾನನಗರಿಯ ಕೆಲವೇ ಕಿಲೋಮೀಟರ್ ದೂರದಲ್ಲಿ ನಾಲ್ವರು ಸಾವಿಗೀಡಾದ ಘಟನೆಯ ನೆನಪು ಇನ್ನೂ ಮಾಸಿಲ್ಲ. ಜಾಡಮಾಲಿ ಪದ್ಧತಿಯನ್ನು ಕಾನೂನು ನಿಷೇಧಿಸಿದ್ದರೂ ಈ ಪೈಕಿ ಇಬ್ಬರನ್ನು ಗುತ್ತಿಗೆದಾರರು ನೇಮಕ ಮಾಡಿಕೊಂಡಿದ್ದರು. ಉಳಿದ ಇಬ್ಬರು ಮೊದಲು ಮ್ಯಾನ್‌ಹೋಲ್‌ನ ಆಳಕ್ಕೆ ಇಳಿದಿದ್ದವರ ಸ್ಥಿತಿ ಏನಾಗಿದೆ ಎಂದು ನೋಡಲು ಇಳಿದವರು. ಸಹಾಯಕ್ಕಾಗಿ 15 ಅಡಿ ಆಳದ ಮ್ಯಾನ್‌ಹೋಲ್‌ಗೆ ಇಳಿದವರು ಮೇಲೆ ಬಂದದ್ದು ಶವವಾಗಿ.

ಜಾಡಮಾಲಿಗಳನ್ನು ನೇಮಕ ಮಾಡಿಕೊಳ್ಳುವ ಮತ್ತು ಒಣ ಶೌಚಾಲಯ (ನಿಷೇಧ) ಕಾಯ್ದೆ ಜಾರಿಗೆ ಬಂದು 24 ವರ್ಷ ಕಳೆದಿದೆ. ಈ ಕಾಯ್ದೆ ಜಾಡಮಾಲಿ ಪದ್ಧತಿಯನ್ನು ನಿಷೇಧಿಸುವುದು ಮಾತ್ರವಲ್ಲದೆ, ಕಾಯ್ದೆ ಉಲ್ಲಂಘಿಸಿ ಜಾಡಮಾಲಿಗಳನ್ನು ನೇಮಕ ಮಾಡಿಕೊಳ್ಳುವವರಿಗೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಲು ಹಾಗೂ 2,000 ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ಇದು ಒಣ ಶೌಚಾಲಯಗಳನ್ನು ನಿರ್ಮಿಸುವುದನ್ನು ಕೂಡಾ ನಿಷೇಧಿಸುತ್ತದೆ. ಆದರೆ ಈ ಕಾಯ್ದೆಯನ್ನು ಎಂದೂ ಗಂಭೀರವಾಗಿ ಅನುಷ್ಠಾನಗೊಳಿಸಲೇ ಇಲ್ಲ. ಅಂತೆಯೇ ಕಳೆದ 20 ವರ್ಷಗಳಲ್ಲಿ ಯಾವ ಪ್ರಕರಣವನ್ನು ಕೂಡಾ ಕಾಯ್ದೆ ಉಲ್ಲಂಘನೆಗಾಗಿ ದಾಖಲಿಸಿಲ್ಲ. ಈ ಕಾಯ್ದೆ ಜಾರಿಯಾಗಲು ಯಾವ ಅರ್ಥಪೂರ್ಣ ಕ್ರಮಗಳನ್ನೂ ಕೈಗೊಂಡಿಲ್ಲ.

ಇಂತಹ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಧಿಕಾರಶಾಹಿತ್ವವನ್ನು ಮೊಟ್ಟಮೊದಲ ಬಾರಿಗೆ ಬಹಿರಂಗಗೊಳಿಸಿದ್ದು ಸಫಾಯಿ ಕರ್ಮಚಾರಿ ಆಂದೋಲನ. ಈ ಕಾಯ್ದೆಯನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಿರುವುದನ್ನು ಮತ್ತು ಅಧಿಕಾರಿಗಳ ಪೊಳ್ಳು ಭರವಸೆಗಳ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದೆ. ಈ ಶತಮಾನದ ಆರಂಭದ ವೇಳೆಗೆ, ಸರಕಾರ ಅಧಿಕೃತವಾಗಿ ಜಾಡಮಾಲಿಗಳ ಸಂಖ್ಯೆಯನ್ನು ಪ್ರಕಟಿಸಿದ್ದು, ದೇಶಾದ್ಯಂತ ಸುಮಾರು 6,97 ಲಕ್ಷ ಜಾಡಮಾಲಿಗಳಿದ್ದಾರೆ ಎಂದು ಒಪ್ಪಿಕೊಂಡಿತು. ಆದರೆ ಇದನ್ನು ಅಲ್ಲಗಳೆದ ಸಫಾಯಿ ಕರ್ಮಚಾರಿ ಆಂದೋಲನ, ದೇಶದಲ್ಲಿ ಕನಿಷ್ಠ 13 ಲಕ್ಷ ಮಂದಿ ಜಾಡಮಾಲಿಗಳಿದ್ದಾರೆ ಎನ್ನುವುದನ್ನು ದಾಖಲೆ ಸಮೇತ ನಿರೂಪಿಸಿತು. ಅದು ರಾಷ್ಟ್ರವ್ಯಾಪಿ ಸಮೀಕ್ಷೆ ನಡೆಸಿ ಅಂಕಿ ಅಂಶಗಳನ್ನು ಸಂಗ್ರಹಿಸಿತು. ಸರಕಾರ ಈ ಅಮಾನವೀಯ ಪದ್ಧತಿಯ ಅಂತ್ಯಕ್ಕೆ ಗಡುವನ್ನು ಪದೇ ಪದೇ ವಿಸ್ತರಿಸುತ್ತಲೇ ಬಂದಿದೆ. ಮೊದಲು 1995 ಎಂದು ನಿಗದಿಪಡಿಸಿದ್ದ ಗಡುವನ್ನು 2000, 2003, 2005, 2012 ಹಾಗೂ 2014 ಎಂದು ವಿಸ್ತರಿಸಿತು. ಈ ಎಲ್ಲ ಮೈಲುಗಲ್ಲುಗಳು ಕಳೆದಿದ್ದರೂ, ಹಳೇರಾಗ ಮುಂದುವರಿದಿದೆ.

ಗಂಭೀರ ಪ್ರತಿಪಾದನೆ

ಆಂದೋಲನ 2003ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವೇಳೆ, ದೇಶದಲ್ಲಿ ಜಾಡಮಾಲಿ ಪದ್ಧತಿ ಇಲ್ಲ ಎಂಬ ಸರಕಾರದ ವಾದವನ್ನು ಅರ್ಜಿದಾರರ ಪರ ವಕೀಲರು ಅಲ್ಲಗಳೆದು, ಜಾಡಮಾಲಿಗಳು ಬರಿಮೈಯಲ್ಲಿ ಶೌಚಾಲಯಗಳನ್ನು ಶುಚಿಗೊಳಿಸುತ್ತಿರುವ ಫೋಟೊಗಳನ್ನು ಕೂಡಾ ಪ್ರಸ್ತುತಪಡಿಸಿದ್ದರು.ಆಂದೋಲನವನ್ನು 2007ರಲ್ಲಿ ಆರಂಭಿಸಲಾಗಿದ್ದು, ಇದಕ್ಕೆ ನಾಗರಿಕ ಸಮಾಜ ಸಂಘಟನೆಗಳಿಂದ ಬೆಂಬಲ ದೊರಕಿ 2010ರಲ್ಲಿ ಈ ಪದ್ಧತಿ ಅಂತ್ಯಗೊಳಿಸಬೇಕು ಎಂಬ ಆಗ್ರಹ ಮಾಡಿದರು. ಆದರೂ ಬಹಳಷ್ಟು ಸಾಧನೆ ಸಾಧ್ಯವಾಗಲಿಲ್ಲ. ಇದಕ್ಕಾಗಿ ಆಂದೋಲನ, ಸಮಾಜ ಪರಿವರ್ತನಾ ಯಾತ್ರೆಯನ್ನೂ ಕೈಗೊಂಡು, ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನವನ್ನು ಅದೇ ವರ್ಷ ಕೈಗೊಂಡಿತು. ಈ ಯಾತ್ರೆ ವೇಳೆ ಮ್ಯಾನ್‌ಹೋಲ್‌ಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಮಂದಿಯ ಫೋಟೊ ಕ್ಲಿಕ್ಕಿಸಿದ್ದರು. ಇದಕ್ಕೆ ಪ್ರತಿಯಾಗಿ ನೂರಾರು ಮಂದಿ ಜಾಡಮಾಲಿಗಳು ಕೆಲಸ ತೊರೆದಿದ್ದರು. 1993ರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು. ಇದರ ಜತೆಗೆ ಈ ಕೆಲಸ ತೊರೆದವರಿಗೆ ಪುನರ್ವಸತಿ ಕಲ್ಪಿಸುವಂತೆ ಬೇಡಿಕೆ ಮಂಡಿಸಿದ್ದರು.

ಹಿಂದಿನ ಯುಪಿಎ ಸರಕಾರದಡಿ ರಾಷ್ಟ್ರೀಯ ಸಲಹಾ ಮಂಡಳಿ ವಿಶೇಷ ನಿರ್ಣಯ ಆಂಗೀಕರಿಸಿ, 2012ರ ಮಾರ್ಚ್ 31ರಂದು ದೇಶಾದ್ಯಂತ ಈ ಪದ್ಧತಿಗೆ ಅಂತ್ಯ ಹಾಡುವುದಾಗಿ 2010ರ ಅಕ್ಟೋಬರ್ 23ರಂದು ಘೋಷಿಸಿತು. ತದನಂತರ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಕಾರ್ಯಪಡೆಗಳನ್ನು ನೇಮಕ ಮಾಡುವ ನಿರ್ಧಾರವನ್ನು ಜನವರಿ 24 ಮತ್ತು 25ರಂದು ನಡೆದ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡಿತು. ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಸಾರ್ವಜನಿಕ ನೈರ್ಮಲ್ಯಕ್ಕೆ ಕರಡು ಯೋಜನೆ ಸಿದ್ಧಪಡಿಸುವಂತೆ ಸೂಚಿಸಲಾಯಿತು. ಅಂತಿಮವಾಗಿ ಜಾಡಮಾಲಿಗಳ ನೇಮಕ ಮತ್ತು ಅವರ ಪುನರ್ವಸತಿ ಕಾಯ್ದೆ- 2013ನ್ನು 2013ರ ಸೆಪ್ಟಂಬರ್‌ನಲ್ಲಿ ಅಂಗೀಕರಿಸಲಾಯಿತು. ಅದೇ ವರ್ಷದ ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಲಾಯಿತು.

ಮಹತ್ವದ ತಿರುವು

ದೇಶಾದ್ಯಂತ ಜಾಡಮಾಲಿ ಪದ್ಧತಿಯನ್ನು ಅಂತ್ಯಗೊಳಿಸುವ ಪ್ರಕ್ರಿಯೆ 2014ರ ಮಾರ್ಚ್ 27ರಂದು ಮತ್ತೊಂದು ಮಹತ್ವದ ತಿರುವು ಪಡೆಯಿತು. ಸಫಾಯಿ ಕರ್ಮಚಾರಿ ಆಂದೋಲನ ಹಾಗೂ ಸರಕಾರದ ನಡುವಿನ ಸಿವಿಲ್ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಎಲ್ಲ ರಾಜ್ಯ ಸರಕಾರಗಳು ಹಾಗೂ ಕೇಂದ್ರ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತು. 2013ರ ಕಾಯ್ದೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಹಾಗೂ ಇದನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎರಡನೆಯದಾಗಿ, ಮ್ಯಾನ್‌ಹೋಲ್‌ಗಳಲ್ಲಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳಲ್ಲಿ ಜಾಡಮಾಲಿಗಳ ಸಾವು ಸಂಭವಿಸಲು ಅವಕಾಶ ನೀಡಬಾರದು. ತುರ್ತು ಸಂದರ್ಭಗಳಲ್ಲಿ ಕೂಡಾ ಜಾಡಮಾಲಿಗಳು ಒಳಚರಂಡಿ ಸ್ವಚ್ಛಗೊಳಿಸುವಂತಾಗಬಾರದು. ಮೂರನೆಯದಾಗಿ 1993ರ ಬಳಿಕ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ವೇಳೆ ಮೃತಪಟ್ಟವರ ಕುಟುಂಬಗಳಿಗೆ ತಕ್ಷಣ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು.

1,327 ಸಾವು

ಸುಪ್ರೀಂಕೋರ್ಟ್ ತೀರ್ಪು ಕೊಟ್ಟ ಬಳಿಕ ಕಳೆದ ವರ್ಷದ ಎಪ್ರಿಲ್‌ವರೆಗೆ 1,327 ಮಂದಿ ಸಫಾಯಿ ಕರ್ಮಚಾರಿಗಳು ಚರಂಡಿ ಸ್ವಚ್ಛಗೊಳಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ಸಫಾಯಿ ಕರ್ಮಚಾರಿ ಆಂದೋಲನ ವರದಿ ಮಾಡಿದೆ. ಆದರೆ ಈ ಸಾವುನೋವಿನ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಕಾಯ್ದೆಯಡಿ ಆರೋಪಿಗಳ ವಿರುದ್ಧ ಎಫ್‌ಐಆರ್ ಕೂಡಾ ದಾಖಲಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಇಂಥ ಸಾವಿಗೆ ನಿರ್ಲಕ್ಷ್ಯವೇ ಕಾರಣ ಎನ್ನುವುದೂ ಸ್ಪಷ್ಟವಾಗಿದೆ. ಮೃತಪಟ್ಟ 1,327 ಮಂದಿಯ ಪೈಕಿ ಶೇ.3ರಷ್ಟು ಮಂದಿಗೆ ಮಾತ್ರ ಪರಿಹಾರ ಸಿಕ್ಕಿದೆ. ಹಲವು ಹಂತಗಳಲ್ಲಿ ಶಾಸನಗಳನ್ನು ತರಲಾಗಿದ್ದರೂ, ಸಾವಿನ ಸರಣಿ ಮುಂದುವರಿದಿದೆ.

ದುರ್ಬಲ ಹಾಗೂ ನಿಮ್ನವರ್ಗದವರ ಏಳಿಗೆಗೆ ಜೀವಮಾನವಿಡೀ ಶ್ರಮಿಸಿದ ಡಾ.ಭೀಮರಾವ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಎಪ್ರಿಲ್ 14ರಂದು ಅವರ 126ನೆ ಜನ್ಮದಿನಾಚರಣೆ ಸಂದರ್ಭದಲ್ಲಿ, ಮ್ಯಾನ್‌ಹೋಲ್‌ಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಈ ನತದೃಷ್ಟರ ಪರ ಬದ್ಧತೆಯನ್ನು ತೋರಿಸಬೇಕಾದ್ದು ದೇಶದ ಜವಾಬ್ದಾರಿ. ಸಫಾಯಿ ಕರ್ಮಚಾರಿ ಆಂದೋಲನ 2015ರ ಡಿಸೆಂಬರ್ 10ರಂದು ಅಂದರೆ ಮಾನವ ಹಕ್ಕು ದಿನದಂದು, ಭೀಮ್ ಯಾತ್ರೆಯ 125ನೆ ದಿನವಾಗಿ ಆಚರಿಸಿತು. ಅಂಬೇಡ್ಕರ್ ಅವರ 125ನೆ ಜನ್ಮದಿನದಂದು ಈ ಯಾತ್ರೆ ದಿಲ್ಲಿಗೆ ತಲುಪಿದೆ. ಪ್ರತಿಭಟನಾಕಾರರು, ‘‘ನಮ್ಮ ಹತ್ಯೆ ನಿಲ್ಲಿಸಿ’’ ಎಂದು ಘೋಷಣೆ ಕೂಗಿದರು. ಈ ಯಾತ್ರೆ ದೇಶದ 30 ರಾಜ್ಯಗಳ 500 ಜಿಲ್ಲೆಗಳನ್ನು ತಲುಪಿದೆ.

Writer - ಎಂ. ಎ. ಸಿರಾಜ್

contributor

Editor - ಎಂ. ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ