ಮೊಬೈಲ್ ಮನಿ ವ್ಯಾಲೆಟ್ - ಆರ್‌ಬಿಐ ಹೊಸ ನಿಯಮಗಳು
Update: 2017-03-25 09:34 GMT
ಪೇಟಿಎಂ, ಏರ್‌ಟೆಲ್ ಮನಿ, ಮೊಬಿ ಕ್ವಿಕ್ ತರಹದ ಮನಿ ವ್ಯಾಲೆಟ್‌ಗಳಿಗೆ ಆರ್‌ಬಿಐ ಹೊಸ ನಿಯಮಗಳನ್ನು ರೂಪಿಸಿದೆ. ಅದರಲ್ಲಿ ಮುಖ್ಯವಾದವು ಈ ರೀತಿ ಇದೆ.
► ಒಂದು ವ್ಯಾಲೆಟ್‌ನಿಂದ ಇನ್ನೊಂದು ವ್ಯಾಲೆಟ್‌ಗೆ ಅಂದರೆ ಉದಾಹರಣೆಗೆ ಪೇಟಿಎಂನಿಂದ ಮೊಬಿಕ್ವಿಕ್‌ಗೆ ಇನ್ನು ಮುಂದೆ ಹಣ ವರ್ಗಾವಣೆ ಮಾಡಬಹುದು.
► ವ್ಯಾಲೆಟ್‌ನಲ್ಲಿ 20,000ಕ್ಕಿಂತ ಕಡಿಮೆ ಮೊತ್ತವಿರುವ ಪ್ರತೀ ಗ್ರಾಹಕರಿಂದಲೂ ಕೆವೈಸಿ(ಗ್ರಾಹಕರನ್ನು ಗುರುತಿಸುವ ಮಾಹಿತಿ) ಮಾಹಿತಿಯನ್ನು ಪಡೆದಿರಬೇಕು. ಇಲ್ಲವಾದರೆ, 60 ದಿನಗಳ ನಂತರ ಯಾವುದೇ ಮೊತ್ತವನ್ನು ವ್ಯಾಲೆಟ್‌ಗೆ ಸೇರಿಸಲಾಗುವುದಿಲ್ಲ.
► ರೂಟ್ ಮಾಡಿರುವಂತಹ ಮೊಬೈಲ್‌ಗಳಲ್ಲಿ ಈ ಆ್ಯಪ್‌ಗಳನ್ನು ಅಳವಡಿಸಲು ಬಿಡಬಾರದು.
► ವ್ಯಾಲೆಟ್‌ಗಳಿಗೆ ಪ್ರತ್ಯೇಕ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ಹೊಂದಿರಬೇಕು. ಉದಾಹರಣೆಗೆ: ಏರ್‌ಟೆಲ್‌ನ ಮೈ ಏರ್‌ಟೆಲ್ ಹಾಗೂ ಏರ್‌ಟೆಲ್ ಮನಿಗೆ ಒಂದೇ ಲಾಗಿನ್‌ನಿಂದ ಬಳಸುವ ಹಾಗಿಲ್ಲ. ಮನಿ ವ್ಯಾಲೆಟ್‌ಗೆ ಪ್ರತ್ಯೇಕ ಲಾಗಿನ್ ಇರಬೇಕು.