ಅಮೆರಿಕದಲ್ಲಿ ಅತಿ ಉದ್ದದ ಗಗನಚುಂಬಿ ಕಟ್ಟಡ ನಿರ್ಮಾಣ?
ಹೌದು, ನೀವು ಓದಿದ್ದು ಸರಿಯಾಗಿದೆ. ಎತ್ತರದ ಅಲ್ಲ, ಅತೀ ಉದ್ದದ ಗಗನಚುಂಬಿ ಕಟ್ಟಡವೊಂದು ಅಮೆರಿಕದ ಮ್ಯಾನ್‌ಹಟನ್‌ನಲ್ಲಿ ನಿರ್ಮಾಣವಾಗಲಿದೆಯಂತೆ. ಒಯಿಯೊ ಸ್ಟುಡಿಯೊ ಎನ್ನುವ ಬಿಲ್ಡರ್ ಕಂಪೆನಿಯೊಂದು ಇದಕ್ಕೆ ನೀಲನಕ್ಷೆ ತಯಾರಿಸಿದೆ.
ಇಂಗ್ಲಿಷ್‌ನ ಯು (ಖಿ) ಆಕಾರವನ್ನು ಉಲ್ಟಾ ನಿಲ್ಲಿಸಿದರೆ ಹೇಗಿರಬಲ್ಲುದೋ, ಅದೇ ಆಕಾರದಲ್ಲಿ ಈ ಕಟ್ಟಡ ಇರಲಿದೆಯಂತೆ. ಕಟ್ಟಡ ನಿರ್ಮಾಣ ಕಾರ್ಯ ಮುಗಿದರೆ, ಒಂದು ತಳದಿಂದ ಇನ್ನೊಂದು ತಳದ ಉದ್ದ ಸುಮಾರು 4000 ಅಡಿ ಆಗಲಿದೆಯಂತೆ. ಸಾಮಾನ್ಯವಾಗಿ ಎಲ್ಲಾ ಕಡೆ ಲಿಫ್ಟ್ ಗಳು ಮೇಲೆ ಕೆಳಗೆ ಲಂಬವಾಗಿ ಮಾತ್ರ ಚಲಿಸಿದರೆ, ಇಲ್ಲಿ ಅಡ್ಡವಾಗಿಯೂ ಚಲಿಸಲಿದೆಯಂತೆ (ಜಯಿಂಟ್ ವೀಲ್ ನೆನಪಿಸಿಕೊಳ್ಳಿ). ಈಗ ಅತೀ ಎತ್ತರದ ಕಟ್ಟಡವಿರುವುದು ದುಬೈನಲ್ಲಿನ ಬುರ್ಝ್ ಖಲೀಫ. ಅದು 2,722ಅಡಿ ಎತ್ತರವಿದೆ.
ಒಯಿಯೊ ತನ್ನ ಅಧಿಕೃತ ವೆಬ್‌ಸೈಟಿನಲ್ಲಿ ಹಾಕಿರುವ ಫೋಟೋಗಳು ಈಗಾಗಲೇ ವೈರಲ್ ಆಗಿದೆ. ಆದರೆ, ಕಟ್ಟಡ ನಿರ್ಮಾಣಕ್ಕೆ ಕೆಲವು ಕಾನೂನು ತೊಡಕುಗಳಿವೆಯಂತೆ. ಅವುಗಳಲ್ಲಿ ಮುಖ್ಯವಾಗಿ ಎರಡು ತಳಪಾಯ ಇರುವಂತಹ ಈ ಕಟ್ಟಡ ನಿರ್ಮಿಸಲು ಬೇಕಾದಷ್ಟು ಜಾಗ ಮ್ಯಾನ್‌ಹಟನ್‌ನಲ್ಲಿ ಲಭ್ಯವಿಲ್ಲವಂತೆ!