ಕೊಲ್ಕತ್ತಾದಲ್ಲಿ ಮನೆ ಬಾಗಿಲಿಗೆ ಮಾಂಸ ಮತ್ತು ಬಿರಿಯಾನಿ ತಲುಪಿಸುವ ವ್ಯವಸ್ಥೆ ಪ್ರಾರಂಭಿಸಿದ ಮಮತಾ

Update: 2017-03-30 03:55 GMT

ಕೊಲ್ಕತ್ತಾ, ಮಾ.30: ಉತ್ತರ ಪ್ರದೇಶದಲ್ಲಿ ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಹೊಸ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ರಾಜ್ಯದಲ್ಲಿ ಮಾಂಸದ ಆಭಾವ ಸ್ಥಿತಿ ತಲೆದೋರಿದ್ದರೆ, ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮನೆಬಾಗಿಲಿಗೆ ಮಾಂಸ, ಬಿರಿಯಾನಿ ಮತ್ತಿತರ ಮಾಂಸ ಖಾದ್ಯಗಳನ್ನು ವಿತರಿಸುವ "ಮೀಟ್ ಆನ್ ವೀಲ್ಸ್" ಯೋಜನೆ ಆರಂಭಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪಶು ಸಂಪನ್ಮೂಲ ಅಭಿವೃದ್ಧಿ ಸಚಿವ ಸ್ವಪನ್ ದೇವರತ್ ಈ ಯೋಜನೆಗೆ ಚಾಲನೆ ನೀಡಿದ್ದು, ಪಶ್ಚಿಮ ಬಂಗಾಳ ಜಾನುವಾರು ಅಭಿವೃದ್ಧಿ ನಿಗಮ ವತಿಯಿಂದ ಜನಪ್ರಿಯ ಹರಿಂಘಟ ಮಾಂಸವನ್ನು ನೀಡಲಾಗುತ್ತದೆ. ಯೋಜನೆಯ ಯಶಸ್ಸನ್ನು ನೋಡಿಕೊಂಡು ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉತ್ತರ ಪ್ರದೇಶ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಮತಾ, ಜನರು ಭಯಭೀತರಾಗಿದ್ದಾರೆ. ಜಾತಿ, ಧರ್ಮ ಹಿನ್ನೆಲೆಯಲ್ಲಿ ಜನರಲ್ಲಿ ಭಿನ್ನತೆ ಮೂಡಿಸಲಾಗುತ್ತಿದೆ. ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎನ್ನುವುದು ಕೇವಲ ಘೋಷಣೆಯಾಗಿಯೇ ಉಳಿದಿದೆ ಎಂದು ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News