ನಾವು ಮರೆತಿರುವ 1857ರ ಧೀರ ಮಹಿಳೆಯರು

Update: 2017-04-01 15:49 GMT

ಅವಧ್ ನಗಣ್ಯರುಬೇಗಂಹಝ್ರತ್‌ಳ ಶೌರ್ಯ ಗಾಥೆಯನ್ನು ಜೀವಂತವಾಗಿರಿಸಿದರು. ಆದರೆ ಅವರ ರೀತಿ ಮಾತ್ರ ಜನಪದ ಹಾಡುಗಳಷ್ಟು ಪರಿಣಾಮಕಾರಿಯಾಗಿರಲಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳ ಪುಸ್ತಕಗಳಾದ ಅಮರ ಚಿತ್ರಕಥಾ ಮುಂತಾದ ಪುಸ್ತಕಗಳು ಕೆಲವೊಂದು ಆಯ್ದ ವೀರರನ್ನು ಜೀವಂತವಾಗಿರಿಸಿದೆ. ಆದರೆ ಬಹಳಷ್ಟು ಮಹಿಳೆಯರ ಹೆಸರು ಬ್ರಿಟಿಷರ ದಾಖಲೆ ಪುಸ್ತಕದಲ್ಲಿ ದಾಖಲಾಗಿದೆಯೇ ಹೊರತು ಉಳಿದಂತೆ ಅನಾಮಧೇಯರಾಗಿಯೇ ಉಳಿದಿದ್ದಾರೆ.

1857ರ ಇತರ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೆಚ್ಚೇನೂ ಬರೆಯದಿರುವುದು ಖೇದಕರ ಮತ್ತು ಅವರ ಬಗ್ಗೆ ಸಿಗುವ ಮಾಹಿತಿಗಳು ಕೂಡಾ ಬಹಳ ಕಡಿಮೆ. ಅಂಥಾದ್ದೊಂದು ಮಾಹಿತಿಗಳುಳ್ಳ ಪುಸ್ತಕವೆಂದರೆ ಶಂಸುಲ್ ಇಸ್ಲಾಂನ ‘‘ಹಿಂದೂ-ಮುಸ್ಲಿಂ ಒಗ್ಗಟ್ಟು: ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ಸಾಮಾನ್ಯ ಜನರು ಮತ್ತು ಮಹಿಳೆಯರ ಭಾಗವಹಿಸುವಿಕೆ’’ ಈ ಪುಸ್ತಕದಲ್ಲಿ ಒಂದು ಕೇವಲ 1857ರ ದಾಖಲೆ ಪುಸ್ತಕದಲ್ಲಷ್ಟೇ ಉಲ್ಲೇಖಿಸಲ್ಪಟ್ಟಿರುವ ಅನೇಕ ಧೀರ ಮಹಿಳೆಯರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ.

ಎಪ್ರಿಲ್ 7ರಂದು, 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ವಿರುದ್ಧ ಸೆಟೆದು ನಿಂತು ವೈರಿಗಳಿಗೆ ಸಿಂಹಸ್ವಪ್ನವಾದ ಧೀರ ಮಹಿಳೆ, ತನ್ನ ಸಾಹಸ ಮತ್ತು ಧೈರ್ಯದಿಂದ ಇತಿಹಾಸ ಪುಟಗಳಲ್ಲಿ ಅಜರಾಮರವಾದ ಬೇಗಂ ಹಝ್ರತ್ ಮಹಲ್ ಅವರ 137ನೆ ಪುಣ್ಯತಿಥಿ.
ಇದು ಕೇವಲ ಬೇಗಂ ಮಾತ್ರವಲ್ಲ, 1857ರಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಆದರೆ ಇಂದಿಗೂ ಅನಾಮಧೇಯರಾಗಿಯೇ ಉಳಿದಿರುವ ಅನೇಕ ಮಹಿಳೆಯರನ್ನು ನೆನೆಯಲು ಇದು ಸಕಾಲ.

1857ರ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ನಾವು ಮಾತನಾಡುವಾಗ ನಮಗೆ ಥಟ್ಟನೆ ನೆನಪಾಗುವುದು ರಾಣಿ ಲಕ್ಷ್ಮೀ ಬಾಯಿ ಮತ್ತು ಬೇಗಂ ಹಝ್ರತ್ ಮಹಲ್. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಕೇವಲ ಈ ಇಬ್ಬರು ಮಹಿಳೆಯರು ಮಾತ್ರ ಕಾಣಿಕೆ ನೀಡಿದ್ದಾರೆಯೇ? ಈ ಹೋರಾಟದಲ್ಲಿ ತುಳಿತಕ್ಕೊಳಗಾದ ವರ್ಗ (ಪಂಡಿತರು ಇವರನ್ನು ದಲಿತ ವೀರಾಂಗನೆಯರು ಎಂದು ಕರೆದಿದ್ದಾರೆ) ದ ಮಹಿಳೆಯರು, ಅನೇಕ ವೇಶ್ಯಾಗೃಹಗಳ ಮಾಲಕಿಯರು ಇದ್ದರು. ಇವರ ವೇಶ್ಯಾಗೃಹಗಳಲ್ಲಿಯೇ ಕುಳಿತು ದಂಗೆಕೋರರು ತಮ್ಮ ಯೋಜನೆಗಳನ್ನು ರೂಪಿಸುತ್ತಿದ್ದರು. ಇವರಿಗೆ ಅಲ್ಲಿನ ಪ್ರದರ್ಶಕರು ಮತ್ತು ವೇಶ್ಯೆಯರು ಸುದ್ದಿ ಮತ್ತು ಮಾಹಿತಿಗಳನ್ನು ಒದಗಿಸುತ್ತಿದ್ದರು ಮತ್ತು ಆರ್ಥಿಕ ನೆರವನ್ನೂ ನೀಡುತ್ತಿದ್ದರು.

ಆದರೆ ಯಾಕೆ ನಾವು ಈ ಮಹಿಳೆಯರ ಬಗ್ಗೆ ಹೆಚ್ಚೇನೂ ಮಾತನಾಡುವುದೇ ಇಲ್ಲ? ಯಾಕೆಂದರೆ ಈ ಮಹಿಳೆಯರು ಸಮಾಜದ ಸೀಮಿತ ವರ್ಗಕ್ಕೆ ಸೇರಿದವರಾಗಿದ್ದರು ಹಾಗಾಗಿ ಅವರ ತ್ಯಾಗವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ ಅಥವಾ ಯಾಕೆಂದರೆ ಯಾರು ಕೂಡಾ ಅವರ ಸಾಹಸದ ಕತೆಯನ್ನು ಸಾರುವ ಗೋಜಿಗೇ ಹೋಗಲಿಲ್ಲ ಅಥವಾ ಸಾಂಪ್ರದಾಯಿಕ ಪಿತೃಪ್ರಭುತ್ವದ ಸಮಾಜದಲ್ಲಿ ಮಹಿಳೆಯರನ್ನು ಯೋಧರು ಎಂದು ಪರಿಗಣಿಸಲಾಗುತ್ತಿರಲಿಲ್ಲ ಎಂಬ ಕಾರಣಕ್ಕೆ ಅವರ ಹೆಸರುಗಳನ್ನು ಪ್ರಸ್ತಾಪಿಸಲಾಗುತ್ತಿಲ್ಲವೇ?

ಗೆದ್ದವರು 1857 ನಂತರದ ಇತಿಹಾಸವನ್ನು ತಮಗೆ ಬೇಕಾದಂತೆ ಬರೆದರು. ಖಂಡಿತವಾಗಿಯೂ ತಮ್ಮ ವಿರುದ್ಧ ದಂಗೆಯಲ್ಲಿ ಭಾಗವಹಿಸಿದವರನ್ನು ವೈಭವೀಕರಿಸಿ ಬರೆಯುವ ಗೋಜಿಗೆ ಅವರು ಹೋಗಲಿಲ್ಲ. ಝಾನ್ಸಿ ರಾಣಿ ಯಾಕೆ ಅಷ್ಟೊಂದು ಪ್ರಸಿದ್ಧಳಾದರೆಂದರೆ ಆಕೆಯ ಬಗ್ಗೆ ವೌಖಿಕವಾಗಿ ಹರಡಿದ ಮಾತುಗಳು ಮತ್ತು ಆಕೆ ಬಗ್ಗೆ ಡಜನ್‌ಗಟ್ಟಲೆ ಇರುವ ಜನಪದ ಹಾಡುಗಳ ಕಾರಣದಿಂದಾಗಿ. ಅವಧ್‌ನ ಗಣ್ಯರು ಬೇಗಂ ಹಝ್ರತ್‌ಳ ಶೌರ್ಯ ಗಾಥೆಯನ್ನು ಜೀವಂತವಾಗಿರಿಸಿದರು ಆದರೆ ಅವರ ರೀತಿ ಮಾತ್ರ ಜನಪದ ಹಾಡುಗಳಷ್ಟು ಪರಿಣಾಮಕಾರಿಯಾಗಿರಲಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳ ಪುಸ್ತಕಗಳಾದ ಅಮರ್ ಚಿತ್ರಕಥಾ ಮುಂತಾದ ಪುಸ್ತಕಗಳು ಕೆಲವೊಂದು ಆಯ್ದ ವೀರರನ್ನು ಜೀವಂತವಾಗಿರಿಸಿದೆ. ಆದರೆ ಬಹಳಷ್ಟು ಮಹಿಳೆಯರ ಹೆಸರು ಬ್ರಿಟಿಷರ ದಾಖಲೆ ಪುಸ್ತಕದಲ್ಲಿ ದಾಖಲಾಗಿದೆಯೇ ಹೊರತು ಉಳಿದಂತೆ ಅನಾಮಧೇಯರಾಗಿಯೇ ಉಳಿದಿದ್ದಾರೆ.

ಬೇಗಂ ಹಝ್ರತ್ ಮಹಲ್

ಮೇ 10, 1857ರಂದು ಮೀರತ್‌ನ ಸಿಪಾಯಿಗಳು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ದಂಗೆಯೆದ್ದರು. ನೋಡನೋಡುತ್ತಲೇ ಮೊಘಲ್ ದೊರೆ, ಬ್ರಿಟಿಷರಿಂದ ಶಹೆನ್ಶಾ-ಎ-ಹಿಂದ್ ಎಂಬ ಬಿರುದಾಂಕಿತನಾದ ಬಹದೂರ್ ಶಾ 2 ನೇತೃತ್ವದಲ್ಲಿ ಇತರರೂ ಈ ದಂಗೆಯಲ್ಲಿ ಸೇರಿಕೊಂಡರು. ಕೊನೆಯಲ್ಲಿ ರಾಜರು, ಗಣ್ಯರು, ಜಮೀನುದಾರರು, ರೈತರು, ಬುಡಕಟ್ಟು ಜನಾಂಗದವರು ಮತ್ತು ಸಾಮಾನ್ಯ ಜನರು ಈ ದಂಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಣ್ಣದಾಗಿ ಆರಂಭವಾದ ಈ ಬಂಡಾಯ ಬೃಹತ್ ದಂಗೆಯ ರೂಪ ಪಡೆಯಿತು. ಆದರೂ ಇತಿಹಾಸಕಾರರು, ತಮ್ಮ ಮನೆಗಳಿಂದ ಹೊರಬಂದು ಬ್ರಿಟಿಷರ ವಿರುದ್ಧ ಹೋರಾಡಿದ ಮಹಿಳೆಯರನ್ನು ಸಂಪೂರ್ಣವಾಗಿ ಮರೆಯುವ ಮೂಲ ಅವರ ಕಾಣಿಕೆಯನ್ನು ನಿರ್ಲಕ್ಷಿಸಿದ್ದಾರೆ.

ಅವಧ್‌ನಲ್ಲಿ ಪದಚ್ಯುತ ನವಾಬ ವಾಜಿದ್ ಅಲಿ ಶಾನ ಪತ್ನಿ ಬೇಗಂ ಹಝ್ರತ್ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ಸೆಟೆದು ನಿಂತಳು ಮತ್ತು ಅದರಲ್ಲಿ ಬಹುತೇಕ ಯಶಸ್ವಿಯೂ ಆದಳು. ಬೇಗಂ ಮತ್ತಾಕೆಯ ನಂಬಿಕಸ್ಥ ಅನುಯಾಯಿಗಳಾದ ಸರಪದ್-ದುವಲಾ, ಮಹಾರಾಜಾ ಬಾಲಕೃಷ್ಣ, ರಾಜಾ ಜೈಲಾಲ್ ಮತ್ತು ಉಳಿದೆಲ್ಲರಿಗಿಂತಲೂ ಮಮ್ಮು ಖಾನ್ ಬ್ರಿಟಿಷರ ವಿರುದ್ಧ ಸುದೀರ್ಘ ಪ್ರತಿರೋಧವನ್ನು ತೋರಿದರು. ಬೈಸ್ವಾರಾದ ರಾಣಾ ಬೇನಿ ಮಧೊ ಬಕ್ಷ್, ಮಹೊನಾದ ರಾಜಾ ದೃಗ್ ಬಿಜೈ ಸಿಂಗ್, ಫೈಝಾಬಾದ್‌ನ ವೌಲ್ವಿ ಅಹ್ಮದುಲ್ಲಾಹ್ ಶಾ, ರಾಜಾ ಮಾನ್ ಸಿಂಗ್ ಮತ್ತು ರಾಜಾ ಜೈಲಾಲ್ ಸಿಂಗ್.

ಚಿನ್ಹಟ್ ಕದನದಲ್ಲಿ ಬಂಡಾಯಶಕ್ತಿಗಳು ಅಭೂತಪೂರ್ವ ಜಯ ಗಳಿಸಿದ ನಂತರ ಜೂನ್ 5, 1857ರಂದು ಬೇಗಂ ತನ್ನ 11ರ ಹರೆಯದ ಮಗ ಬಿರ್ಜಿಸ್ ಖಾದರ್‌ನನ್ನು ಮೊಘಲರ ಸಾರ್ವ ಭೌಮತ್ವದಡಿಯಲಿ್ಲ ಅವಧ್‌ನ ರಾಜನನ್ನಾಗಿ ನೇಮಿಸಿದಳು.

ಬ್ರಿಟಿಷರಿಗೆ ಲಕ್ನೊದಲ್ಲಿ ಆಶ್ರಯಪಡೆಯುವುದು ಅನಿವಾರ್ಯವಾಯಿತು, ಆಗ ನಡೆದ ಘಟನಾವಳಿಗಳು ಲಕ್ನೊ ಮುತ್ತಿಗೆ ಎಂದು ಪ್ರಸಿದ್ಧಿಯಾಯಿತು. ವಿಲಿಯಂ ಹಾವರ್ಡ್ ರಸೆಲ್ ತಮ್ಮ ಪುಸ್ತಕ ‘ಮೈ ಇಂಡಿಯನ್ ಮ್ಯೂಟಿನಿ’ ಡೈರಿಯಲ್ಲಿ ಹೀಗೆ ಬರೆಯುತ್ತಾರೆ: ‘‘ಬೇಗಂ ತೀವ್ರವಾದ ಶಕ್ತಿ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ. ಆಕೆ ಅವಧ್‌ನ ಜನರು ತನ್ನ ಮಗನ ಹಿತಾಸಕ್ತಿಯನ್ನು ಕಾಯುವಂತೆ ಮತ್ತು ಮುಖ್ಯಾಧಿಕಾರಿಗಳನ್ನು ಆತನಿಗೆ ಪ್ರಾಮಾಣಿಕರಾಗಿರುವಂತೆ ಪ್ರಮಾಣವಚನ ನೀಡುವಂತೆ ನೋಡಿಕೊಳ್ಳುತ್ತಿದ್ದರು. ಬೇಗಂ ನಮ್ಮ ವಿರುದ್ಧ ಕೊನೆಯಾಗದ ಯುದ್ಧವನ್ನು ಸಾರಿದ್ದರು.’’

ಬ್ರಿಟಿಷರು ಶಾಂತಿ ಸ್ಥಾಪನೆಗಾಗಿ ಆಕೆಯ ಮುಂದೆ ಮೂರು ಸಾಧ್ಯತೆಗಳನ್ನು ಇರಿಸಿದರು. ಅವುಗಳಲ್ಲಿ ಬ್ರಿಟಿಷರ ಸಾರ್ವಭೌಮತ್ವದಡಿಯಲ್ಲಿ ಆಕೆಯ ಪತಿಯ ರಾಜ್ಯವನ್ನು ಹಿಂದಿರುಗಿಸುವುದೂ ಒಂದಾಗಿತ್ತು. ಆದರೆ ಬೇಗಂ ಪಾಲಿಗೆ ಅವೆಲ್ಲವೂ ನಗಣ್ಯವಾಗಿತ್ತು. ಭಾರತದ ಸುದೀರ್ಘ ಮತ್ತು ಭೀಕರವಾದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಲಕ್ನೊದಲ್ಲಿ ನಡೆಯಿತು. ಬೇಗಂ ಹತ್ತು ತಿಂಗಳ ಕಾಲ ರಾಜಪ್ರತಿನಿಧಿಯಾಗಿ ಆಡಳಿತ ನಡೆಸಿದರು ಮತ್ತು 1857ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಬಂಡಾಯ ನಾಯಕರ ಪೈಕಿ ಅತ್ಯಂತ ದೊಡ್ಡ ಸೇನೆಯನ್ನೂ ಹೊಂದಿದ್ದರು. ಬ್ರಿಟಿಷರಿಗೆ ತೆರಿಗೆ ಪಾವತಿಸಲು ಇಷ್ಟವಿಲ್ಲದ ಜಮೀನುದಾರರು ಮತ್ತು ರೈತರು ಅದನ್ನು ಸ್ವಪ್ರೇರಣೆಯಿಂದ ಆಕೆಗೆ ನೀಡಿದರು. 1856ರಲ್ಲಿ ವಾಜಿದ್ ಅಲಿ ಶಾ ಕೋಲ್ಕತಾಗೆ ತೆರಳಿದಾಗಲೇ ಬೇಗಂಳ ಯುದ್ಧಸ್ಫೂರ್ತಿ ಮತ್ತು ಪರಾಕ್ರಮದ ಬಗ್ಗೆ ತಿಳಿದಿದ್ದ:

‘‘ನನ್ನ ನಗರದ ಮನೆಗಳ ಮೇಲೆ ವಿಪತ್ತು ಆವರಿಸಿದೆ, ಅಂಗಡಿಗಳನ್ನ್ನು ಕೊಳ್ಳೆಹೊಡೆಯಲಾಗುತ್ತಿದೆ. ಹಝ್ರತ್ ಮಹಲ್ ನೀನೊಬ್ಬಳೇ ಸಾಂತ್ವನದ ದಾರಿಯಾಗಿದ್ದೀಯಾ, ಬಡವರ ಪಾಲಿನ ಆಶಾಕಿರಣ, ಹಝ್ರತ್ ಮಹಲ್’’

ತನ್ನಿಂದ ಸಾಧ್ಯವಾದಷ್ಟು ಕಾಲ ಆಕೆ ಹೋರಾಡಿದಳು ಮತ್ತು ಅಂತಿಮವಾಗಿ ನೇಪಾಲದಲ್ಲಿ ಆಶ್ರಯಪಡೆದು ಅಲ್ಲೇ 1879ರಲ್ಲಿ ಮೃತಪಟ್ಟಳು. ಈ ಕೆಳಗಿನ ಸಾಲುಗಳು ಆಕೆಗೆ ಸಮರ್ಪಿತವಾಗಿದೆ:

ಈ ಮಾತುಗಳನ್ನು ಹಝ್ರತ್ ಮಹಲ್‌ನ ಸಮಾಧಿಯ ಮೇಲೆ ಕೆತ್ತಲಾಗುವುದು.

ಆಕಾಶದಿಂದಲೇ ದಬ್ಬಾಳಿಕೆಗೊಳಗಾದ ಆಕೆಗೆ ಅದೃಷ್ಟವೇ ಕಾರಾಗೃಹವಾಗಿತ್ತು.

ಝಾನ್ಸಿ ರಾಣಿ ಲಕ್ಷ್ಮೀಬಾಯಿ

ಬುಂದೇಲ್‌ಖಂಡ್‌ನ ಅನೇಕ ಜನಪದ ಕತೆಗಳು ಮತ್ತು ಹಾಡುಗಳಿಗೆ ಲಕ್ಷ್ಮೀಬಾಯಿಯ ಶೌರ್ಯವೇ ಮುಖ್ಯ ಆಧಾರವಾಗಿದೆ. ರಾಹಿ ಮಸೂನ್ ರಝಾ ಹೀಗೆ ಹೇಳುತ್ತಾರೆ: ‘‘ಒಮ್ಮೆಲೆ ಅಲ್ಲಿ ವೌನ ಆವರಿಸಿತು, ಆಗಲೇ ಅಲ್ಲಿ ಬಂದಿದ್ದಳು ರಾಣಿ

ಸೇನೆಯು ಒಂದು ಚಿಪ್ಪಾದರೆ ಅದರಲ್ಲಿರುವ ಮುತ್ತು ರಾಣಿ

ಯುದ್ಧಭೂಮಿಯಲ್ಲಿ ವೀರಾಧಿವೀರರನ್ನೇ ಸೋಲಿಸಬಲ್ಲಾಕೆ ರಾಣಿ

ಧೈರ್ಯ, ಪರಾಕ್ರಮದಲ್ಲಿ ಪುರುಷರಿಗೆ ಸಮಾನಳು ರಾಣಿ’’

ವಾರಣಾಸಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಲಕ್ಷ್ಮೀಬಾಯಿಯ ನಿಜವಾದ ಹೆಸರು ಮಣಿಕರ್ನಿಕಾ. ಮೇ 1842ರಲ್ಲಿ ಝಾನ್ಸಿಯ ಮಹಾರಾಜ ಗಂಗಾಧರ ರಾವ್‌ನನ್ನು ವಿವಾಹವಾದ ನಂತರ ಆಕೆಯ ಹೆಸರನ್ನು ಲಕ್ಷ್ಮೀಬಾಯಿ ಎಂದು ಬದಲಿಸಲಾಯಿತು. 1853ರಲ್ಲಿ ಆಕೆಯ ಪತಿಯ ಮರಣದ ನಂತರ ಬ್ರಿಟಿಷ್ ಅಧಿಕಾರಿ ಲಾರ್ಡ್ ಡಾಲ್‌ಹೌಸಿಯ ಕುಪ್ರಸಿದ್ಧ ದತ್ತುಪುತ್ರನಿಗೆ ಹಕ್ಕಿಲ್ಲ ಎಂಬ ಕಾನೂನಿನಡಿ ಲಕ್ಷ್ಮೀಬಾಯಿಯ ಸಾಕುಮಗ ದಾಮೋದರ ರಾವ್‌ನನ್ನು ಝಾನ್ಸಿಯ ರಾಜ ಎಂದು ಒಪ್ಪದ ಬ್ರಿಟಿಷ್ ಆಡಳಿತ ಝಾನ್ಸಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಲಕ್ಷ್ಮೀಬಾಯಿಯನ್ನು ಝಾನ್ಸಿಯಿಂದ ಹೊರದಬ್ಬಲಾಗಿ ಆಕೆಯನ್ನು ರಾಣಿಮಹಲ್‌ನಲ್ಲಿ ಕೇವಲ ಪಿಂಚಣಿಯ ಮೂಲಕ ಜೀವನ ಸಾಗಿಸುವಂತೆ ಮಾಡಲಾಯಿತು. ಆದರೆ ಝಾನ್ಸಿಯನ್ನು ಬಿಡಲೊಲ್ಲದ ರಾಣಿ ಈ ಸ್ವಾಧೀನದ ವಿರುದ್ಧ ಇಂಗ್ಲೆಂಡ್‌ಗೆ ಹಲವು ಬಾರಿ ಮನವಿ ಮಾಡಿದಳು. ಆದರೆ ಆಕೆಯ ಎಲ್ಲಾ ಮನವಿಗಳನ್ನು ತಿರಸ್ಕರಿಸಲಾಯಿತು. 1857ರಲ್ಲಿ ನೆರೆಹೊರೆಯ ಸಂಸ್ಥಾನಗಳು ಮತ್ತು ದೂರದ ವಾರಸುದಾರರಿಂದ ಝಾನ್ಸಿಯ ಮೇಲಿನ ಹಕ್ಕಿಗಾಗಿ ದಾಳಿಗಳನ್ನು ಎದುರಿಸಬೇಕಾದ ಸಂದರ್ಭ ಬಂದಾಗ ಲಕ್ಷ್ಮೀಬಾಯಿ ತನ್ನದೇ ಸೇನೆಯನ್ನು ನಿರ್ಮಿಸಿ ನರದ ಭದ್ರತೆಯನ್ನು ಹೆಚ್ಚಿಸಿದಳು.
ಮಖ್ಮೂರ್ ಜಲುಂದರಿು ಮಾತುಗಳಲ್ಲಿ ಹೇಳಬೇಕೆಂದರೆ:

‘‘ಲಕ್ಷ್ಮೀಬಾಯಿ ನಿನ್ನ ಕೈಯಲ್ಲಿರುವ ಖಡ್ಗ ಮತ್ತು ಗುರಾಣಿ ನಿನ್ನ ಆಭರಣಗಳು, ನಿನ್ನ ಮುತ್ತಿನಹಾರ’’ ಮಾರ್ಚ್ 1858ರಂದು ಬ್ರಿಟಿಷರು ಝಾನ್ಸಿಯ ಮೇಲೆ ದಾಳಿ ನಡೆಸಿದರು ಮತ್ತು ಅವರನ್ನು ತೀವ್ರವಾಗಿ ವಿರೋಧಿಸಲಾಯಿತು. ಅಂತಿಮವಾಗಿ ಬ್ರಿಟಿಷರು ಯುದ್ಧದಲ್ಲಿ ಮೇಲುಗೈ ಸಾಧಿಸಿದಾಗ ಲಕ್ಷ್ಮೀಬಾಯಿ ಕೋಟೆಯಿಂದ ತನ್ನ ಮಗನ ಜೊತೆ ತಪ್ಪಿಸಿಕೊಂಡಳು. ಕಲ್ಪಿಗೆ ತೆರಳಿದ ಆಕೆ ಅಲ್ಲಿ ತಾತ್ಯಾ ಟೋಪಿಯನ್ನು ಸೇರಿಕೊಂಡಳು. ಅವರು ಜೊತೆಯಾಗಿ ಗ್ವಾಲಿಯರನ್ನು ಗೆದ್ದುಕೊಂಡರು. ಆದರೆ ಬ್ರಿಟಿಷರು ಮತ್ತೊಮ್ಮೆ ಮೇಲುಗೈ ಸಾಧಿಸಿದರು. ಆಗ ಯುದ್ಧವು ಗ್ವಾಲಿಯನ್‌ನ ಹೊರವಲಯಕ್ಕೆ ಸ್ಥಳಾಂತರಗೊಂಡಿತು.
ಜೂನ್ 17, 1858ರಲ್ಲಿ ಗ್ವಾಲಿಯರ್‌ಗಿಂತ ಐದು ಮೈಲಿ ಆಗ್ನೇಯದಲ್ಲಿ ಕೋಟಾ-ಕಿ ಸೆರಾಯಿಯಲ್ಲಿ ರಾಣಿ ಪುರುಷರ ವೇಷ ಧರಿಸಿ ಹೋರಾಡುತ್ತಿದ್ದ ವೇಳೆ ಆೆಗೆ ಗುಂಡಿಕ್ಕಿ ಹತ್ಯೆ ಮಾಡಲಾಯಿತು.

ಝಾನ್ಸಿಯ ಜಲ್ಕರಿ ಬಾಯಿ ಮತ್ತು ದುರ್ಗಾ ದಳ

ಜಲ್ಕರಿ ಬಾಯಿ ಝಾನ್ಸಿಯ ದುರ್ಗಾದಳದ ಸದಸ್ಯೆಯಾಗಿದ್ದಳು. ಆಕೆಯ ಪತಿ ಝಾನ್ಸಿಯ ಸೇನೆಯಲ್ಲಿ ಸೈನಿಕನಾಗಿದ್ದ ಮತ್ತು ಆಕೆ ಕೂಡಾ ಬಿಲ್ವಿದ್ಯೆ ಮತ್ತು ಕತ್ತಿವರಸೆಯಲ್ಲಿ ತರಬೇತಿ ಪಡೆದಿದ್ದಳು. ಆಕೆಗೆ ಲಕ್ಷ್ಮೀಬಾಯಿ ಜೊತೆಗಿದ್ದ ಹೋಲಿಕೆ ಝಾನ್ಸಿ ಸೇನೆಯು ಬ್ರಿಟಿಷರ ವಿರುದ್ಧ ಯುದ್ಧತಂತ್ರವನ್ನು ರೂಪಿಸಲು ನೆರವಾಗಿತ್ತು. ಬ್ರಿಟಿಷರ ದಿಕ್ಕು ತಪ್ಪಿಸಲು ಜಲ್ಕರಿ ಬಾಯಿ, ಲಕ್ಷ್ಮೀಬಾಯಿಯಂತೆ ಬಟ್ಟೆ ಧರಿಸಿ ಝಾನ್ಸಿ ಸೇನೆಯನ್ನು ಮುನ್ನಡೆಸುವ ಮೂಲಕ ರಾಣಿ ಲಕ್ಷ್ಮೀಬಾಯಿ ಯಾರ ಗಮನಕ್ಕೂ ಬಾರದಂತೆ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಳು.

ಜಲ್ಕರಿಯನ್ನು ಬಂಧಿಸಿ ಕಾರಾಗೃಹಕ್ಕೆ ಹಾಕುವ ಸಂದರ್ಭದಲ್ಲಿ ಬ್ರಿಟಿಷರಿಗೆ ಆಘಾತವಾಗಿತ್ತು. ದಾಖಲೆಗಳ ಪ್ರಕಾರ ಬ್ರಿಟಿಷರು ಆಕೆ ಲಕ್ಷ್ಮೀಬಾಯಿ ಅಲ್ಲ ಎಂದು ತಿಳಿದಾಗ ಆಕೆಯನ್ನು ಜೈಲಿನಿಂದ ಬಿಡುಗಡೆ ಮಾಡಿದರು ಮತ್ತು ಆಕೆ 1890ರ ತನಕ ಜೀವಿಸಿದಳು.

ಝಾನ್ಸಿಯಲ್ಲಿ ದುರ್ಗಾ ದಳದ ಮೂಲಕ ಅನೇಕ ಮಹಿಳೆಯರು ತನ್ನ ರಾಣಿಗೆ ಹೆಗಲುಕೊಟ್ಟು ಯುದ್ಧದಲ್ಲಿ ಹೋರಾಡಿದರು ಮತ್ತು ರಾಜ್ಯಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದರು. ಅವರಲ್ಲಿ ಕೆಲವು ಪ್ರಮುಖರೆಂದರೆ ಮಂದರ್, ಸುಂದರಿ ಬಾಯಿ, ಮುಂದರಿ ಬಾಯಿ ಮ್ತು ಮೋತಿ ಬಾಯಿ.

ಈ ಮಹಿಳೆಯರು ಬದಿಗೆ ಸರಿಸಲ್ಪಡಲು ಮತ್ತು ವೈಧವ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿಸಲಿಲ್ಲ.

ಉಡಾ ದೇವಿ, ಒಬ್ಬ ಗುರಿಕಾರೆ ಮತ್ತು ವೀರವನಿತೆ

1857ರ ನವೆಂಬರ್‌ನಲ್ಲಿ ಸಿಕಂದರ್ ಬಾಗ್‌ನಲ್ಲಿ ನಡೆದ ಹೋರಾಟ ಲಕ್ನೊದಲ್ಲಿ ನಡೆದ ಅತ್ಯಂತ ಭೀಕರ ಯುದ್ಧ. ಬಂಡಾಯಗಾರರಿಂದ ನಿಯಂತ್ರಿಸಲ್ಪಡುತ್ತಿದ್ದ ಸಿಕಂದರ್ ಬಾಗ್ ತಮ್ಮ ನೆಲೆಯಲ್ಲಿ ಸುತ್ತವರಿಯಲ್ಪಟ್ಟಿದ್ದ ಯೂರೋಪಿಯನ್ನರ ರಕ್ಷಣೆಗೆ ಧಾವಿಸುತ್ತಿದ್ದ ಕಮಾಂಡರ್ ಕಾಲಿನ್ ಕ್ಯಾಂಪೆಲ್‌ನ ದಾರಿಯ ಮಧ್ಯೆ ಬರುತ್ತಿತ್ತು. ಘನಘೋರ ಯುದ್ಧವೊಂದು ನಡೆದು ಸಾವಿರಾರು ಭಾರತಿೀಯ ಯೋಧರು ಹತ್ಯೆಗೈಯಲ್ಪಟ್ಟರು.

ಒಂದು ಕತೆಯ ಪ್ರಕಾರ ಮರದ ಮೇಲೆ ಕುಳಿತು ಗುರಿಯಿಡುವ ವ್ಯಕ್ತಿಯ ಬಗ್ಗೆ ಬ್ರಿಟಿಷರಿಗೆ ತಿಳಿಯಿತು. ಆ ಮರವನ್ನು ಕಡಿದಾಗಲೇ ಅದರ ಮೇಲೆ ಕುಳಿತು ತಮ್ಮ ಮೇಲೆ ಗುರಿಯಿಡುತ್ತಿದ್ದ ವ್ಯಕ್ತಿ ಓರ್ವ ಮಹಿಳೆ ಎಂಬುದು ಆಕೆಗೆ ತಿಳಿಯಿತು. ಆಕೆ ಪಾರ್ಸಿ ಸಮುದಾಯದ ಉಡಾ ದೇವಿಯಾಗಿದ್ದಳು. ಇಂದು ಲಕ್ನೊದ ಸಿಕಂದರ್ ಬಾಗ್‌ನಲ್ಲಿ ಆಕೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ದಂಗೆಯ ಸ್ಮರಣಿಕೆಯಲ್ಲಿ ಪಾರ್ಬ್ಸ್ ಮಿಶೆಲ್, ಉಡಾ ದೇವಿಯ ಬಗ್ಗೆ ಹೀಗೆ ಬರೆಯುತ್ತಾರೆ: ‘‘ಆಕೆಯ ಬಳಿ ಹಳೇಕಾಲದ ಎರಡು ಪಿಸ್ತೂಲ್‌ಗಳಿದ್ದವು. ಅದರಲ್ಲಿ ಒಂದನ್ನು ಮದ್ದುಗುಂಡುಗಳನ್ನು ತುಂಬಿಸಿ ಆಕೆಯ ಬೆಲ್ಟ್ ನಲ್ಲಿ ಸಿಕ್ಕಿಸಲಾಗಿರುತ್ತಿತ್ತು ಮತ್ತಾಕೆಯ ಕೈಚೀಲದಲ್ಲಿ ಅರ್ಧದಷ್ಟು ಮದ್ದುಗುಂಡುಗಳು ಇರುತ್ತಿದ್ದವು. ದಾಳಿಗೂ ಮೊದಲು ಎಚ್ಚರಿಕೆಯಿಂದ ನಿರ್ಮಿಸಲಾಗುತ್ತಿದ್ದ ಮರದ ಕೊಂಬೆಯ ಮೇಲಿನ ಅಡಗುತಾಣದಲ್ಲಿ ಆಕೆ ಅರ್ಧ ಡಜನ್‌ಗೂ ಅಧಿಕ ಜನರನ್ನು ಹತ್ಯೆ ಮಾಡಿದ್ದಳು’’.

ಅವಧ್ ನವಾಬರ ಸಮಯದಲ್ಲಿ ಅನೇಕ ಆಫ್ರಿಕನ್ ಮಹಿಳೆಯರು ಹರೆಂಗಳನ್ನು (ನವಾಬರ ಪತ್ನಿಯರು ತಂಗುವ ಸ್ಥಳ) ಕಾಯಲು ನಿಯೋಜನೆಗೊಂಡಿದ್ದರು. ಅವರು ಕೂಡಾ 1857 ಲಕ್ನೊ ಯುದ್ಧದಲ್ಲಿ ನಾಶವಾದರು.

ಈ ಅಭೂತಪೂರ್ವ ದಂಗೆಯ ಒಂದು ವಿಶಿಷ್ಟ ಅಂಶವೆಂದರೆ ಇದರಲ್ಲಿ ಕೇವಲ ರಾಜಮನೆತನದ ಮತ್ತು ಶ್ರೀಮಂತ ಮನೆಯ ಮಹಿಳೆಯರು ಮಾತ್ರವಲ್ಲ ಆದರೆ ತುಳಿತಕ್ಕೊಳಗಾದ ಹಿಂದುಳಿದ ವರ್ಗಗಳ ಮಹಿಳೆಯರೂ ಭಾಗವಹಿಸಿದ್ದರು. ಇನ್ನೋರ್ವ ದಲಿತ ವೀರ ಮಹಿಳೆ ಮುಝಫ್ಫರ್ ನಗರ ಜಿಲ್ಲೆಯ ಮುಂದ್‌ಬರ್ ಗ್ರಾಮದ ಮಹಾಬಿರಿ ದೇವಿ. ಮಹಾಬಿರಿ 22 ಮಹಿಳೆಯರ ಗುಂಪೊಂದನ್ನು ರಚಿಸಿ 1857ರಲ್ಲಿ ಜೊತೆಯಾಗಿ ಹಲವು ಬ್ರಿಟಿಷ್ ಸೈನಿಕರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದರು. ನಂತರ ಎಲ್ಲಾ ಮಹಿಳೆಯರನು್ನ ಸೆರೆಹಿಡಿದು ಹತ್ಯೆ ಮಾಡಲಾಯಿತು.

ಅಝೀಝುನ್ ಬಾಯಿ

ಆದರೆ ಎಲ್ಲದಕ್ಕಿಂತಲೂ ವಿಶಿಷ್ಟವಾದ ಕತೆ ಕಾನ್ಪುರದ ವೇಶ್ಯೆ ಅಝೀಝುನ್ ಬಾಯಿಯದ್ದು. ಕಾನ್ಪುರದಲ್ಲಿ ನಾನಾ ಸಾಹಿಬ್ ಮತ್ತು ತಾತ್ಯಾ ಟೋಪೆಯ ಸೇನೆ ಹಾಗೂ ಬ್ರಿಟಿಷರ ಮಧ್ಯೆ ಭೀಕರ ಕಾಳಗ ನಡೆಯಿತು.

ವಸಾಹತು ಮತ್ತು ಭಾರತೀಯ ಇತಿಹಾಸಕಾರರು ಕಾನ್ಪುರ ಯುದ್ಧದಲ್ಲಿ ಅಝೀಝುನ್ ಪಾತ್ರದ ಬಗ್ಗೆ ಉಲ್ಲೇಖಿಸಿದ್ದಾರೆ. ಬಂಡಾಯದಲ್ಲಿ ಕೈಜೋಡಿಸಿದ್ದ ಇತರ ಅನೇಕ ಮಹಿಳೆಯರಂತಲ್ಲದೆ ಅಝೀಝುನ್‌ಗೆ ಯಾವುದೇ ವೈಯಕ್ತಿಕ ಲಾಭ ಅಥವಾ ದ್ವೇಷವಿರಲಿಲ್ಲ. ಆಕೆ ನಾಾ ಸಾಹಿಬ್‌ನಿಂದ ಸ್ಫೂರ್ತಿ ಪಡೆದಿದ್ದಳು.

ಕಾನ್ಪುರದ ಜನತೆಯ ನೆನಪಿನಲ್ಲಿ ಆಕೆಯು ಈಗಲೂ ಜೀವಂತವಾಗುಳಿದಿದ್ದಾಳೆ. ರಾಣಿ ಲಕ್ಷ್ಮೀಬಾಯಿಯಂತೆ ಪುರುಷರ ವೇಷ ತೊಟ್ಟು ಪಿಸ್ತೂಲುಗಳನ್ನು ಹಿಡಿದುಕೊಂಡು ಇತರ ಸೈನಿಕರ ಜೊತೆ ಕುದುರೆಯನ್ನೇರಿ ಆಕೆ ಸಾಗುತ್ತಿದ್ದಳು. ನಾನಾ ಸಾಹಿಬ್‌ನ ಆರಂಭಿಕ ಗೆಲುವನ್ನು ಆಚರಿಸಲು ಕಾನ್ಪುರದಲ್ಲಿ ಧ್ವಜವನ್ನು ಏರಿಸುವ ವೇಳೆ ನಡೆದ ಮೆರವಣಿಗೆಯಲ್ಲಿ ಆಕೆ ಭಾಗವಹಿಸಿದ್ದಳು.


 
‘‘ಅಝೀಝುನ್ ಕಾನ್ಪುರದಲ್ಲಿ ನಿಯೋಜಿಸಲಾಗಿದ್ದ 2ನೆ ಅಶ್ವದಳದಲ್ಲಿದ್ದ ಸಿಪಾಯಿಗಳ ಪೈಕಿ ಎಲ್ಲರ ಅಚ್ಚುಮೆಚ್ಚಿನವಳಾಗಿದ್ದಳು ಮುಖ್ಯವಾಗಿ ಶಂಸುದ್ದೀನ್ ಎಂಬ ಯೋಧನಿಗೆ ಸಮೀಪವಾಗಿದ್ದಳು. ಆಕೆಯ ಮನೆ ಸಿಪಾಯಿಗಳು ಸಭೆ ಸೇರುವ ತಾಣವಾಗಿತ್ತು. ಆಕೆ ಮಹಿಳೆಯರ ಗುಂಪೊಂದನ್ನು ಸ್ಥಾಪಿಸಿದ್ದಳು. ಈ ಗುಂಪು ಯಾವುದೇ ಭಯವಿಲ್ಲದೆ ಶಸ್ತ್ರಧಾರಿ ಪುರುಷರನ್ನು ಹುರಿದುಂಬಿಸುತ್ತಾ ಅವರ ಗಾಯಗಳಿಗೆ ಔಷಧಿ ಹಚ್ಚುವ ಮತ್ತು ಸಶಸ್ತ್ರಗಳನ್ನು ಪೂರೈಸುವ ಕೆಲಸ ಮಾಡುತ್ತಿತ್ತು. ಈ ಕೆಲಸಕ್ಕಾಗಿ ಒಂದು ಫಿರಂಗಿಯ ಗುಪ್ತಸ್ಥಳವನ್ನೇ ಆಕೆ ತನ್ನ ಮುಖ್ಯಕಚೇರಿಯನ್ನಾಗಿ ಮಾಡಿಕೊಂಡಿದ್ದು. ಕಾನ್ಪುರ ಅತಿಕ್ರಮಣದ ಅಷ್ಟೂ ಸಮಯ ಆಕೆ ಸೈನಿಕರ ಜೊತೆಗಿದ್ದು ಅವರನ್ನು ತನ್ನ ಗೆಳೆಯರಂತೆ ನೋಡಿಕೊಂಡಳು ಮತ್ತು ಆಕೆಯೂ ಸದಾ ತನ್ನ ಬಳಿ ಪಿಸ್ತೂಲು ಇರಿಸಿಕೊಂಡಿದ್ದಳು’’ ಎಂದು ಲತಾ ಸಿಂಗ್ ತಮ್ಮ ಅಂಕಣದಲ್ಲಿ ಬರೆಯುತ್ತಾರೆ. ಇತರ ಧೀರ ಮಹಿಳೆಯರು

ರುಡ್ಯರ್ಡ್ ಕಿಪ್ಲಿಂಗ್‌ನ ‘ಆನ್ ದ ಸಿಟಿ ವಾಲ್’ ಪುಸ್ತಕ 1857ರಲ್ಲಿ ವೇಶ್ಯೆಯರು ನಡೆಸಿದ ಬ್ರಿಟಿಷ್ ವಿರೋಧಿ ಚಟುವಟಿಕೆಗಳನ್ನು ವಿವರಿಸುತ್ತದೆ.

ವಾಸ್ತವದಲ್ಲಿ ಬಹಳಷ್ಟು ವೇಶ್ಯಾಗೃಹಗಳು ಬಂಡಾಯಗಾರರ ಸಭೆ ನಡೆಸುವ ಸ್ಥಳವಾಗಿದ್ದವು. 1875ರ ನಂತರ ಇಡೀ ಬ್ರಿಟಿಷ್ ಸಾಮ್ರಾಜ್ಯವೇ ಈ ವೇಶ್ಯಾಗೃಹಗಳ ಮೇಲೆ ಮುಗಿಬಿದ್ದಿತ್ತು. ಪ್ರಾಚೀನ ಸಂಸ್ಕೃತಿ ಮತ್ತು ಲಲಿತ ಕಲೆಯ ಕುರುಹಾಗಿದ್ದ ವೇಶ್ಯೆಯರು ಕೇವಲ ಸಾಮಾನ್ಯ ವೇಶ್ಯೆಯರ ಸ್ಥಾನಕ್ಕೆ ಇಳಿಸಲ್ಪಟ್ಟು ಅವರ ಅಗಾಧ ಸಂಪತ್ತ್ನು ಬ್ರಿಟಿಷರು ವಶಪಡಿಸಿಕೊಂಡರು.

ಪಶ್ಚಿಮ ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ಹೆಚ್ಚಿನ ಮಹಿಳೆಯರು ಸಕ್ರಿಯವಾಗಿ ಬಂಡಾಯದಲ್ಲಿ ಪಾಲ್ಗೊಂಡರು. ಅವರಲ್ಲಿ ಕೆಲವು ಪ್ರಮುಖರೆಂದರೆ ಆಶಾದೇವಿ, ಭಕ್ತಾವರಿ, ಹಬೀಬ, ಭಗ್ವತಿದೇವಿ ತ್ಯಾಗಿ, ಇಂದ್ರ ಕೌರ್, ಜಮೀಲಾ ಖಾನ್, ಮಾನ್ ಕೌರ್, ರಹೀಮಿ, ರಾಜ್ ಕೌರ್, ಶೋಭಾ ದೇವಿ ಮತ್ತು ಉಮ್ದಾ. ಇವರೆಲ್ಲರೂ ದೇಶಕ್ಕಾಗಿ ಹೋರಾಡುತ್ತಾ ತಮ್ಮ ಪ್ರಾಣತ್ಯಾಗ ಮಾಡಿದರು.

ದಾಖಲೆಗಳ ಪ್ರಕಾರ ಅಸ್ಗರಿ ಬೇಗಂ ಹೊರತುಪಡಿಸಿ ಉಳಿದ ಈ ಮಹಿಳೆಯರ�

Writer - ರಾಣಾ ಸಫ್ವಿ

contributor

Editor - ರಾಣಾ ಸಫ್ವಿ

contributor

Similar News