ಬ್ರಿಟಿಷರ ಗುಂಡಿಗೆ ಬಲಿಯಾದ ದೇಶದ ಮೊತ್ತ ಮೊದಲ ಪತ್ರಕರ್ತ ಮೌಲ್ವಿ ಮುಹಮ್ಮದ್ ಬಕರ್

Update: 2017-04-09 07:22 GMT

ಮೇ 17, 1857ರ ‘‘ದೆಹಲಿ ಉರ್ದು ಪತ್ರಿಕೆ’’ಯು ದಂಗೆ ಭುಗಿಲೆದ್ದ ನಂತರದ ಮೊದಲ ಪತ್ರಿಕೆಯಾಗಿತ್ತು. 1857ರಲ್ಲಿ ದಂಗೆಯು ಉತ್ತರ ಭಾರತದಾದ್ಯಂತ ಹರಡಿತು. ಜುಲೈ 12, 1857ರಲ್ಲಿ ಬಕರ್ ‘ದೆಹಲಿ ಉರ್ದು’ ಪತ್ರಿಕೆಯ ಹೆಸರನ್ನು ‘ಅಕ್ಬರ್-ಉಜ್ ಝಫರ್’ ಎಂದು ಬದಲಾಯಿಸಿದ. ಇದು ದಿಲ್ಲಿಯ ಕೊನೆಯ ಮೊಘಲ್ ದೊರೆ ಬಹದ್ದೂರ್ ಶಾಗೆ ಸಲ್ಲಿಸಿದ ಶ್ರದ್ಧಾಂಜಲಿಯಾಗಿತ್ತು. ಆತನ ಕಾವ್ಯನಾಮ ಝಫರ್ ಆಗಿತ್ತು. ಬ್ರಿಟಿಷರು ‘ಸಬ್ಬತ್’ (ಅಂದರೆ ದೇವರಿಗಾಗಿ ಮೀಸಲಿಟ್ಟ ರಜಾದಿನ)ವನ್ನು ರವಿವಾರದಂದು ಆಚರಿಸುತ್ತಿದ್ದ ಕಾರಣ ಅವರನ್ನು ಕೆಣಕಲೆಂದೇ ಬಕರ್ ತನ್ನ ಪತ್ರಿಕೆ ಯನ್ನು ಶನಿವಾರದ ಬದಲಾಗಿ ರವಿವಾರ ಹೊರತರಲು ಆರಂಭಿ ಸಿದರು.

ಅದು ರಶ್ಯಾದ ಖ್ಯಾತ ಕಲಾವಿದ ವೆರೆಶ್ಚಗಿನ್ 1884ರಲ್ಲಿ ರಚಿಸಿದ ಚಿತ್ರ. ಭಾರತೀಯ ಸಿಪಾಯಿ ದಂಗೆ ಅಥವಾ ಪ್ರಥಮ ಸ್ವಾತಂತ್ರ ಹೋರಾಟದ ಸಂದರ್ಭವನ್ನು ವಿವರಿಸುವ ಚಿತ್ರ ಅದು. ಸ್ಫೋಟಿಸಲು ಸಿದ್ಧವಾಗಿದ್ದ ಫಿರಂಗಿಯ ಬಾಯಿಗೆ ವ್ಯಕ್ತಿಯೊಬ್ಬನನ್ನು ಕಟ್ಟಿ ಹಾಕಿರುವುದನ್ನು ಈ ಚಿತ್ರ ತೋರಿಸುತ್ತಿತ್ತು. ಆ ವ್ಯಕ್ತಿ ಇನ್ನಾರೂ ಅಲ್ಲ, ಅವರ ಹೆಸರು ವೌಲ್ವಿ ಮುಹಮ್ಮದ್ ಬಕರ್. ಅವರನ್ನು ಫಿರಂಗಿಯ ಬಾಯಿಗೆ ಕಟ್ಟಿ ಹತ್ಯೆ ಮಾಡಲಾ ಯಿತೋ ಎನ್ನುವ ವಿಷಯದಲ್ಲಿ ಗೊಂದಲವಿದೆ. ಆದರೆ ಸಿಪಾಯಿ ದಂಗೆ ಕಳೆದು ಮೂರು ದಶಕಗಳ ಬಳಿಕ ಬರೆದ ಚಿತ್ರ ಅದು. ಬಕರ್ ಅವರು ಜನರ ಯೋಚನೆಯನ್ನು ಯಾವ ರೀತಿ ಆಕ್ರಮಿಸಿಕೊಂಡಿದ್ದರು ಎನ್ನುವುದನ್ನು ಚಿತ್ರ ಹೇಳುತ್ತದೆ.

ಸೆಪ್ಟಂಬರ್ 14, 1857ರಂದು ದಿಲ್ಲಿ ಬ್ರಿಟಿಷರ ಪಾಲಾಯಿತು. ಸುಮಾರು ನಾಲ್ಕು ತಿಂಗಳ ಸಂಘರ್ಷದ ಬಳಿಕ ಭಾರತೀಯ ಸಿಪಾಯಿಗಳಿಗೆ ಸೋಲಾಯಿತು. ಬಕರ್ ಅವರ ವಿಶೇಷತೆಯೆಂದರೆ ಬ್ರಿಟಿಷ್ ಆಡಳಿತಕ್ಕೆ ಬಲಿಯಾದ ಮೊದಲ ಪತ್ರಕರ್ತರಾಗಿಯೂ ಅವರು ಗುರುತಿಸಿಕೊಳ್ಳುತ್ತಾರೆ. ಸೆ. 16, 1857ರಂದು ಅವರನ್ನು ಬ್ರಿಟಿಷರು ಹತ್ಯೆಗೈಯುತ್ತಾರೆ.

ಓರ್ವ ಧಾರ್ಮಿಕ ಪಂಡಿತನೂ ಆಗಿದ್ದ ಬಕರ್ ಪರ್ಶಿಯನ್, ಅರೆಬಿಕ್, ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಆತ ತನ್ನ ತಂದೆ ವೌಲಾನಾ ಮುಹಮ್ಮದ್ ಅಕ್ಬರ್ (ಪ್ರಸಿದ್ಧ ವಿದ್ವಾಂಸ) ಅವರಿಂದ ಧಾರ್ಮಿಕ ಶಿಕ್ಷಣವನ್ನು ಮತ್ತು 1825ರಲ್ಲಿ ದಿಲ್ಲಿ ಕಾಲೇಜಿಗೆ ಸೇರುವ ಮೂಲಕ ಇತರ ಶಿಕ್ಷಣವನ್ನು ಪಡೆದುಕೊಂಡಿದ್ದರು. ಮುಂದೆ ದಿಲ್ಲಿ ಕಾಲೇಜಿನಲ್ಲಿ ಪರ್ಶಿಯನ್ ಭಾಷೆ ಕಲಿಸುವ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಾರೆ.

ಆನಂತರ ಅವರು ಚಾರ್ಲ್ಸ್ ಮೆಟ್‌ಕಪ್ ನೇತೃತ್ವದ ಬ್ರಿಟಿಷ್ ಆಡಳಿತ ಸೇರಿಕೊಂಡಿ ದ್ದರೂ ಅಲ್ಲಿ ಸಂತೋಷವಾಗಿ ಕೆಲಸ ಮಾಡಲು ಅವರಿಗೆ ಮನ ಒಪ್ಪಲಿಲ್ಲ. ಬರವಣಿಗೆ ಮತ್ತು ಪತ್ರಿಕೋದ್ಯಮದ ಮೇಲೆ ಅವರಿಗಿದ್ದ ಒಲವಿನಿಂದ 1834ರಲ್ಲಿ ಮುದ್ರಣ ಸಂಸ್ಥೆಯನ್ನು ಖರೀದಿಸುತ್ತಾರೆ. 1836-37ರಲ್ಲಿ ದಿಲ್ಲಿ ಉರ್ದು ಪತ್ರಿಕೆ ಆರಂಭವಾಯಿತು. ಮಾಸಿಕ ಚಂದಾದರ ರೂ. 2 ಆಗಿದ್ದರೆ, ಆರು ತಿಂಗಳಿಗೆ ರೂ. 11 ಮತ್ತು ವಾರ್ಷಿಕ ಚಂದಾ ರೂ. 20 ಆಗಿತ್ತು. ‘‘ದೆಹಲಿ ಉರ್ದು ಪತ್ರಿಕೆ’’ಯು ದೇಶದ ಮೊದಲ ಉರ್ದು ಪತ್ರಿಕೆಯಲ್ಲ ದಿದ್ದರೂ ಅದು ದಿಲ್ಲಿಯ ಪ್ರಥಮ ಉರ್ದು ಪತ್ರಿಕೆಯಾಗಿತ್ತು. ಭಾರತದ ಮೊದಲ ಉರ್ದು ಪತ್ರಿಕೆ ಜಮ್-ಎ-ಜಹಾನ್ ನುಮ. ಇದನ್ನು ಮಾರ್ಚ್ 27,1822 ರಂದು ಕೋಲ್ಕತಾದಲ್ಲಿ ಆರಂಭಿಸಲಾಯಿತು. ದಿಲ್ಲಿಯಲ್ಲಿ ಅದಕ್ಕಿಂತ ಮೊದಲಿದ್ದ ಪತ್ರಿಕೆ ಗಳಾದ ಸುಲ್ತಾನುಲ್ ಅಕ್ಬರ್, ಸಿರಾಜುಲ್ ಅಕ್ಬರ್ ಮತ್ತು ಸಾದಿಕುಲ್ ಅಕ್ಬರ್ ಎಲ್ಲವೂ ಪರ್ಶಿಯನ್ ಭಾಷೆಯಲ್ಲಿದ್ದವು.

ಮೇ 17, 1857ರ ‘‘ದೆಹಲಿ ಉರ್ದು ಪತ್ರಿಕೆ’’ ದಂಗೆ ಭುಗಿಲೆದ್ದ ನಂತರದ ಮೊದಲ ಪತ್ರಿಕೆಯಾಗಿತ್ತು. 1857ರಲ್ಲಿ ದಂಗೆಯು ಉತ್ತರ ಭಾರತ ದಾದ್ಯಂತ ಹರಡಿತು. ಜುಲೈ 12, 1857ರಲ್ಲಿ ಬಕರ್ ‘ದೆಹಲಿ ಉರ್ದು’ ಪತ್ರಿಕೆಯ ಹೆಸರನ್ನು ‘ಅಕ್ಬರ್-ಉಜ್ ಝಫರ್’ ಎಂದು ಬದಲಾ ಯಿಸಿದರು. ಇದು ದಿಲ್ಲಿಯ ಕೊನೆಯ ಮೊಘಲ್ ದೊರೆ ಬಹದ್ದೂರ್ ಶಾಗೆ ಸಲ್ಲಿಸಿದ ಶ್ರದ್ಧಾಂಜಲಿಯಾಗಿತ್ತು. ಆತನ ಕಾವ್ಯನಾಮ ಝಫರ್ ಆಗಿತ್ತು. ಬ್ರಿಟಿಷರು ‘ಸಬ್ಬತ್’ (ಅಂದರೆ ದೇವರಿಗಾಗಿ ಮೀಸಲಿಟ್ಟ ರಜಾದಿನ)ವನ್ನು ರವಿವಾರದಂದು ಆಚರಿಸುತ್ತಿದ್ದ ಕಾರಣ ಅವರನ್ನು ಕೆಣಕಲೆಂದೇ ಬಕರ್ ತನ್ನ ಪತ್ರಿಕೆಯನ್ನು ಶನಿವಾರದ ಬದಲಾಗಿ ರವಿವಾರ ಹೊರತರಲು ಆರಂಭಿಸಿದರು. ಭಾರತೀಯರ ವಿರುದ್ಧ ಬ್ರಿಟಿಷರ ನೀತಿಗಳನ್ನು ಖಂಡಿಸಿ ಮೇ ಯಿಂದ ಸೆಪ್ಟಂಬರ್ 1857ರ ವರೆಗೆ ವೌಲ್ವಿ ಮುಹಮ್ಮದ್ ಬಕರ್ ಬರೆದಿರುವ ‘ಸಂಪಾದಕೀಯ’ ಗಳನ್ನು ಜಾಮಿಯಾ ಮಿಲ್ಲಿಯಾ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ಅಝೀಝುದ್ದೀನ್ ಹುಸೈನ್, ತನ್ನ ಪುಸ್ತಕ ‘‘ವೌಲ್ವಿ ಮುಹಮ್ಮದ್ ಬಕರ್ ದಅಲವಿ’ಯದಲ್ಲಿ ಉಲ್ಲೇಖಿಸುತ್ತಾರೆ.

ಸೆಪ್ಟಂಬರ್ 14, 1857ರಂದು ದಿಲ್ಲಿ ಬ್ರಿಟಿಷರ ಪಾಲಾಯಿತು. ಸುಮಾರು ನಾಲ್ಕು ತಿಂಗಳ ಸಂಘರ್ಷದ ಬಳಿಕ ಭಾರತೀಯ ಸಿಪಾಯಿಗಳಿಗೆ ಸೋಲಾಯಿತು. ಬಕರ್ ಅವರ ವಿಶೇಷತೆಯೆಂದರೆ ಬ್ರಿಟಿಷ್ ಆಡಳಿತಕ್ಕೆ ಬಲಿಯಾದ ಮೊದಲ ಪತ್ರಕರ್ತರಾಗಿಯೂ ಅವರು ಗುರುತಿಸಿಕೊಳ್ಳುತ್ತಾರೆ. ಸೆ. 16, 1857ರಂದು ಅವರನ್ನು ಬ್ರಿಟಿಷರು ಹತ್ಯೆಗೈಯುತ್ತಾರೆ.

ಈ ಪತ್ರಿಕೆಗಳನ್ನು ದಂಗೆಯ ಕಾಲದ ಪತ್ರಿಕಾ ಸಂಗ್ರಹದ ಭಾಗವಾಗಿ ದಿಲ್ಲಿಯ ರಾಷ್ಟ್ರೀಯ ಸಂಗ್ರಹದಲ್ಲಿ ಇಡಲಾಗಿದೆ. ‘‘ದೆಹಲಿ ಉರ್ದು’’ ಪತ್ರಿಕೆಯ ಮಾರ್ಚ್ 8, 1857ರಿಂದ ಸೆಪ್ಟಂಬರ್ 13, 1857ರ ವರೆಗಿನ ಕೇವಲ 16 ಆವೃತ್ತಿಗಳು ಮಾತ್ರ ಇವೆ.

1857ರ ಶಹಜಹನಾಬಾದ್ ಮತ್ತು ಸುತ್ತಮುತ್ತಲ ಲಕ್ನೊ, ಆಗ್ರಾ, ಕೋಲ್, ಬುಲಂದ್‌ಶಹರ್, ಝಜ್ಜರ್, ರೊಹ್ಟಕ್, ಬಲ್ಲಬ್‌ಘಡ್, ರೆವರಿ, ಅಂಬಲ, ಗ್ವಾಲಿಯರ್, ಝಾನ್ಸಿ ಮುಂತಾದ ಪ್ರದೇಶಗಳ ಬಗ್ಗೆ ಅದು ಸಾಕಷ್ಟು ಮಾಹಿತಿಗಳನ್ನು ಒದಗಿಸುತ್ತದೆ ಎಂದು ಅಝೀಝುದ್ದೀನ್ ಹುಸೈನ್ ತಮ್ಮ ಕೃತಿಯಲ್ಲಿ ಬರೆಯುತ್ತಾರೆ.

ಮೇ 11, 1857ಕ್ಕೂ ಮೊದಲು ದಿಲ್ಲಿ ಉರ್ದು ಅಕ್ಬರ್ ಪತ್ರಿಕೆಯು ಸರಕಾರಿ ಗೆಜೆಟ್, ಇತರ ಪತ್ರಿಕೆಗಳು ಮತ್ತು ಸ್ವತಂತ್ರ ಪತ್ರಕರ್ತರ ಮೂಲಕ ಸುದ್ದಿ ಯನ್ನು ಪಡೆಯುತ್ತಿತ್ತು. ಅದು ಜಗತ್ತಿನ ಉದ್ದಗಲದಿಂದ ವಿವಿಧ ಸುದ್ದಿಗಳನ್ನು ಹೊಂದಿತ್ತು. ಅದರಲ್ಲಿ ಚಕ್ರವರ್ತಿಗೆ ಸೀಮಿತ ವಾದ ‘ಹುಝೂರ-ಎ-ವಾಲಾ’ ಎಂಬ ಅಂಕಣವನ್ನು ಹೊಂದಿತ್ತು. ಆದರೆ ಒಮ್ಮೆ ದಂಗೆಯು ಭುಗಿಲೆದ್ದು ದಿಲ್ಲಿಯನ್ನು ತಲುಪಿದ ನಂತರ ನಗರವು ಮುತ್ತಿಗೆ ಗೊಳಗಾಗಿ ದೇಶದ ಇತರ ಪ್ರದೇಶಗಳಿಂದ ಪ್ರತ್ಯೇಕಗೊಂಡಿತು. ಬಕರ್‌ನ ಪತ್ರಿಕೆ ಕೂಡಾ ದಿಲ್ಲಿಯ ಗೋಡೆಯೊಳಗೆ ಬಂದಿಯಾಗಿ ಕೇವಲ ಸ್ಥಳೀಯ ಸುದ್ದಿಗಳನ್ನಷ್ಟೇ ಪ್ರಕಟಿಸುವಂತಾಯಿತು. ಮೇ 11, 1857ರಲ್ಲಿ ಸಿಪಾಯಿಗಳು ದಿಲ್ಲಿ ತಲುಪಿದರು ಮತ್ತು ಅವರೊಂದಿಗೆ ಮೀರತ್ ಜೈಲಿನಿಂದ ಬಿಡುಗಡೆ ಗೊಂಡ ಕೈದಿಗಳೂ ಆಗಮಿಸಿದರು. ದಿಲ್ಲಿಯ ಕಾರಾಗೃಹ ವನ್ನು ಕೂಡಾ ಭೇದಿಸಿ ಅದರಲ್ಲಿದ್ದ ಕೈದಿಗಳನ್ನು ಬಿಡುಗಡೆಗೊಳಿಸ ಲಾಯಿತು. ಆ ವೇಳೆ ನಡೆದ ಹಿಂಸಾಚಾರ ಮತ್ತು ಸುಲಿಗೆ ಯನ್ನು 1857ರಲ್ಲಿ ದಿಲ್ಲಿಯಲ್ಲಿದ್ದ ಬಹುತೇಕ ಸಮಕಾಲೀನ ಉರ್ದು ಪತ್ರಿಕೆಗಳು ಸವಿವರವಾಗಿ ವರದಿ ಮಾಡಿದವು. ಬಕರ್ ಕೂಡಾ ಅದನ್ನು ಅನುಸರಿಸಿದ್ದ.

ಆ ಸಮಯದಲ್ಲಿ ಆತ ಯಾವ ರೀತಿಯಲ್ಲೂ ತನ್ನ ನಿಷ್ಠೆಯನ್ನು ಬದಲಾಯಿಸುವ ಸೂಚನೆಯಿರಲಿಲ್ಲ, ಆದರೆ ಆತನ ನಿಷ್ಠೆಯೇನಿದ್ದರೂ ಸತ್ಯ ಆಧಾರಿತ ವರದಿಯನ್ನು ನೀಡುವುದಕ್ಕಷ್ಟೇ ಸೀಮಿತವಾಗಿತ್ತು. ದಿಲ್ಲಿ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿ ಹೀನಾ ಯೂನುಸ್ ಅನ್ಸಾರಿಯವರ ಮುದ್ರಣಗೊಳ್ಳದ ಪ್ರೌಢ ಪ್ರಬಂಧ ‘1857ರ ಬೃಹತ್ ದಂಗೆಯ ದೇಶೀಯ ಉಪನ್ಯಾಸ:ಲಕ್ನೊದಿಂದ ದಿಲ್ಲಿವರೆಗಿನ ಉರ್ದು ವಾರ ಪತ್ರಿಕೆಗಳ ಅಧ್ಯಯನ’ವು ದಿಲ್ಲಿ ಉರ್ದು ಅಕ್ಬಾರ್ ಮತ್ತು ತಿಲಿಸ್ಮ್-ಎ- ಲಕ್ನೊ ಪತ್ರಿಕೆಗಳನ್ನು ವಿಶ್ಲೇಷಿಸುತ್ತವೆ. ಸಿಪಾಯಿಗಳನ್ನು ಪತ್ರಿಕೆಯಲ್ಲಿ ಪ್ರೋತ್ಸಾಹಿಸ ಲಾಗಿತ್ತು. ಮೇ 24, 1857ರಲ್ಲಿ ಪ್ರಕಟವಾದ ಪತ್ರಿಕೆಯಲ್ಲಿ ಅವರು ಬರೆಯುತ್ತಾ, ‘‘ಅತ್ಯುತ್ತಮ ಚಕ್ರವರ್ತಿಗಳಾದ ಸೊಲೊಮನ್ ಮತ್ತು ಅಲೆಕ್ಸಾಂಡರ್, ಪ್ರಜಾಪೀಡಕರಾಗಿದ್ದ ಚೆಂಗಿಸ್ ಖಾನ್, ನಾದಿರ್ ಶಾ ಹಾಗೂ ಐತಿಹಾಸಿಕ ನಾಯಕರು ಮತ್ತು ಸನ್ಯಾಸಿಗಳು, ಎಲ್ಲರೂ ಮಾಯ ವಾಗಿದ್ದಾರೆ, ಹಾಗೆಯೇ ಒಂದು ದಿನ ಬ್ರಿಟಿಷರು ಕೂಡಾ ಮಾಯ ವಾಗುತ್ತಾರೆ’’ಎಂದು ಹೇಳುತ್ತಾ ಬಕರ್ ಸಿಪಾಯಿಗಳನ್ನು ಹುರಿ ದುಂಬಿಸಿದ್ದರು.

ಆಲಿಘಡ್ ಮುಸ್ಲಿಂ ವಿಶ್ವವಿದ್ಯಾ ನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಶಫಿ ಖಿದ್ವಾಯಿ, ಬಕರ್ ಉರ್ದು ಭಾಷೆಯ ಮೊದಲ ನೇರ ವೀಕ್ಷಕ ವರದಿ ಗಾರ ಎಂಬುದಾಗಿ ವಿವರಿಸಿದ್ದರು. ಅವರು ಬಕರ್‌ನ ಪತ್ರಿಕೆಯ ಮೇ 17, 1857ರ ಸಂಚಿಕೆಯನ್ನು ಅನುವಾದಿಸಿದ್ದರು.

 ‘‘ನಾನು ವಿಶೇಷವಾದ ದೃಶ್ಯಾವಳಿಗಳನ್ನು ನೋಡಿದೆ: ಜನರು ಕಾಶ್ಮೀರ ಗೇಟ್‌ನ ಕಡೆಯಿಂದ ಮಾರುಕಟ್ಟೆಯತ್ತ ಓಡುತ್ತಿದ್ದರು. ವೈಯಕ್ತಿಕ ಭದ್ರತೆ ಖಂಡಿತವಾಗಿಯೂ ಅಪಾಯದಲ್ಲಿತ್ತು. ಆದರೆ ನನಗೆ ನನ್ನ ವೈಯಕ್ತಿಯ ಸುರಕ್ಷತೆಗಿಂತಲೂ ಆ ಅಸಾಮಾನ್ಯ ದೃಶ್ಯಾವಳಿ ಗಳನ್ನು ವೀಕ್ಷಿಸುವ ಮತ್ತು ಅದಕ್ಕಿಂತಲೂ ಹೆಚ್ಚಾಗಿ ನನ್ನ ಓದುಗರಿಗೆ ನಂಬಲರ್ಹ ಪ್ರತ್ಯಕ್ಷದರ್ಶಿ ವರದಿಯನ್ನು ನೀಡುವುದು ಹೆಚ್ಚು ಮುಖ್ಯವಾಗಿತ್ತು. ನಾನು ಮುಂದೆ ಹೋಗುತ್ತಿದ್ದಂತೆ ನನ್ನ ಮುಂದೆಯೇ ಬಂದೂಕಿನ ಶಬ್ದಗಳು ಕೇಳುತ್ತಿದ್ದವು. ಅಲ್ಲೇ ನಾನು ಸಾಹೀಬ್ ಬಹದ್ದೂರ್ ಕೈಯಲ್ಲಿ ಕತ್ತಿಯನ್ನು ಹಿಡಿದು ಓಡುತ್ತಿರುವುದನ್ನು ಕಂಡೆ. ಅವರ ಹಿಂದೆ ಸ್ಥಳೀಯರು ಕೂಡಾ ಓಡುತ್ತಿದ್ದರು. ಪಕ್ಕದಲ್ಲೇ ಸಾಮಾನ್ಯ ಜನರು ಗುಂಪು ನಿಂತಿತ್ತು ಅದರಲ್ಲಿ ಕೆಲವರ ಕೈಯಲ್ಲಿ ದೊಣ್ಣೆಗಳಿದ್ದರೆ ಇತರರ ಕೈಯಲ್ಲಿ ಬಿದಿರಿನ ಕೋಲುಗಳಿದ್ದವು, ಅವರೆಲ್ಲಾ ಆಂಗ್ಲರನ್ನು ಝೀನತ್ ಬರಾದಿಂದ ಕಾಲುವೆಯತ್ತ ಓಡಿಸುತ್ತಿದ್ದರು.’’

ಉರ್ದು ಲೇಖಕ ಮತ್ತು ಕವಿ ಮುಹಮ್ಮದ್ ಹುಸೈನ್ ಆಝಾದ್, ಬಕರ್ ಅವರ ಪುತ್ರ. ಪತ್ರಿಕೆಯ ಮೇ ತಿಂಗಳ ಸಂಚಿಕೆಯಲ್ಲಿ ಈ ಸೂಚನಾ ದಂಗೆಯ ಗುಪ್ತವರ್ಷಲೇಖ ಎಂಬ ಹೆಸರಿನ ಕವನ ಮುದ್ರಿತವಾಗಿತ್ತು.

ಸಿಪಾಯಿಗಳು ಕೋಮು ಸೌಹಾರ್ದವನ್ನು ಪ್ರದರ್ಶಿಸಲು ಬದ್ಧರಾಗಿದ್ದರು ಮತ್ತು ತಮ್ಮ ತಮ್ಮ ದೇವರನ್ನು ಪ್ರಾರ್ಥಿಸುತ್ತಿದ್ದರು ಹಾಗೂ ಭೀಮ, ಅರ್ಜುನ, ರುಸ್ತಮ್, ಚೆಂಗಿಸ್‌ಖಾನ್ ಮತ್ತು ಮುಂತಾದವರನ್ನು ಅನುಕರಿಸಲು ಸಿದ್ಧವಾಗಿದ್ದರು. ಅವರನ್ನು ಈಗ ಸಿಪಾ-ಇ-ಹಿಂದೂಸ್ಥಾನ್ (ಭಾರತೀಯ ಸೇನೆ) ಎಂದು ಕರೆಯಲಾಗುತ್ತಿತ್ತು ಮತ್ತು ಹಿಂದೂಗಳು ಮತ್ತು ಮುಸಲ್ಮಾನರು ಜೊತೆಯಾಗಿ ಹೋ ರಾಟ ನಡೆಸಲು ತಮ್ಮ ಸಹಪ್ರಜೆಗಳಿಗೆ ಕರೆ ನೀಡಲಾಯಿತು ಎಂದು ಬಕರ್ ಪತ್ರಿಕೆಯಲ್ಲಿ ಬರೆಯುತ್ತಾರೆ.

ಬ್ರಿಟಿಷ್ ಇತಿಹಾಸಕಾರ ಜಾರ್ಜ್ ವಿಲಿಯಂ ಫಾರೆಸ್ಟ್, ದಂಗೆ ಕೊನೆಯಾದ ತಕ್ಷಣ ಸರಕಾರಿ ಪತ್ರಿಕೆಗಳ ಪರಿಚಯ ಪುಟದಲ್ಲಿ ಹೀಗೆ ಬರೆಯು ತ್ತಾರೆ: ‘‘ಭಾರತೀಯ ದಂಗೆಯು ಇತಿಹಾಸಕಾರರಿಗೆ ನೀಡುವ ಅನೇಕ ಪಾಠಗಳಲ್ಲಿ, ಯಾವುದೂ ಅಷ್ಟೊಂದು ಪ್ರಮುಖವಾ ದುದಲ್ಲ, ಆದರೆ, ಬ್ರಾಹ್ಮಣರು ಮತ್ತು ಶೂದ್ರರು, ಹಿಂದೂ ಗಳು ಮತ್ತು ಮುಸ್ಲಿಮರು ಜೊತೆಯಾಗಿ ನಮ್ಮ ವಿರುದ್ಧ ಕ್ರಾಂತಿ ನಡೆಸಲು ಸಾಧ್ಯವಿದೆ ಎಂಬ ಎಚ್ಚರಿಕೆಯನ್ನು ಅದು ನಮಗೆ ನೀಡುತ್ತದೆ. ಅದೇ ಪ್ರಮುಖವಾದುದು.’’ ಹಿಂದೂ ಮುಸ್ಲಿಮರ ನಡುವೆ ಬಿರುಕು ಮೂಡಿಸಲು ಬ್ರಿಟಿಷರು ಮಾಡುವ ಸಂಚನ್ನೂ ತನ್ನ ಪತ್ರಿಕೆಯಲ್ಲಿ ಬಕರ್ ಬಹಿರಂಗ ಪಡಿಸುತ್ತಾರೆ. ‘‘ಬ್ರಿಟಿಷ್ ಅಧಿಕಾರಿಗಳು ಸುಡು ಮದ್ದುಗಳಿಗೆ ದನದ ಕೊಬ್ಬನ್ನು ಬಳಸಲಾಗಿದೆ ಮತ್ತು ಹಂದಿ ಯದ್ದಲ್ಲ’’ ಎಂದು ಹೇಳುತ್ತಾರೆ. ಹಾಗಾಗಿದ್ದರೆ ಅದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಮತ್ತು ಇಂದು ಹಿಂದೂಗಳು ಕಷ್ಟ ಅನುಭವಿಸಿದರೆ ನಾಳೆಯ ಸರದಿ ನಮ್ಮದು. ಹಿಂದೂಗಳು ಮತ್ತು ಮುಸಲ್ಮಾನರು ಪರಸ್ಪರ ಕಚ್ಚಾಡುತ್ತಿದ್ದಾರೆ ಆದರೆ ಅವರೆಲ್ಲಾ ಭಾರತೀಯರು ಎಂಬ ನೆಲೆಯಲ್ಲಿ ಒಂದಾಗಬೇಕು ಮತ್ತು ಬ್ರಿಟಿಷರು ಭಾರತೀಯರ ಧಾರ್ಮಿಕ ಭಾವನೆಗಳ ಜೊತೆಗೆ ಆಟವಾಡುವುದನ್ನು ತಡೆಯಬೇಕು’’ ಎಂದು ಬಕರ್ ಹೇಳುತ್ತಾರೆ.

‘‘ಅವರು ನಿಜವಾಗಿಯೂ ಭಾರತೀಯರ ಹಿತಾಸಕ್ತಿಯ ಬಗ್ಗೆ ಚಿಂತಿಸುವುದಾದರೆ ಬ್ರಿಟಿಷರು ಸ್ವಲ್ಪ ಹೆಚ್ಚು ಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಜನರು ತಮ್ಮ ಧರ್ಮವನ್ನು ಬದಲಾಯಿಸಲು ಅಥವಾ ಪರಸ್ಪರ ಹೋರಾಡಲು ಒತ್ತಡ ಹೇರಬಾರದು’’ ಎಂದು ಬಕರ್ ವಾದಿಸುತ್ತಾರೆ.

‘‘ಎಲ್ಲಾ ಶ್ರೀಮಂತರು, ರಾಜರುಗಳು ಮತ್ತು ಭೂಮಾಲಕರು ಬ್ರಿಟಿಷರನ್ನು ಬೆಂಬಲಿಸ ಬಾರದು ಎಂಬುದಾಗಿ ನಾವು ಸಲಹೆ ನೀಡುತ್ತೇವೆ. ಯಾಕೆಂದರೆ ಅವರು ಪ್ರಾಮಾಣಿಕರಲ್ಲ. ಅವರು ತಾವು ನೀಡಿದ ಭರವಸೆಯನ್ನು ಉಳಿಸಿಕೊಳ್ಳುವುದಿಲ್ಲ. ಅವರು ದೇಶದ್ರೋಹಿಗಳು. ನೀವು ನನ್ನ ಮಾತನ್ನು ಕೇಳದಿದ್ದರೆ ಒಂದು ದಿನ ಪಶ್ಚಾತ್ತಾಪಪಡುತ್ತೀರಿ’’ ಎಂದು ಬಕರ್ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಾರೆ.

ಜುಲೈ 19, 1857ರ ಆವೃತ್ತಿಯಲ್ಲಿ ಶೇಕ್ ಸದಿಯ ಮಾನವರ ಒಗ್ಗಟ್ಟನ್ನು ಪ್ರತಿಪಾದಿಸುವ ವಾಕ್ಯಗಳನ್ನು ಬಕರ್ ಉಲ್ಲೇಖಿಸಿರುವುದಾಗಿ ಲೇಖಕ ಹುಸೈನ್ ಬರೆಯುತ್ತಾರೆ. ‘‘ಆದಮನ ಮಕ್ಕಳಾದ ಎಲ್ಲರೂ ಪರಸ್ಪರರ ಅಂಗಾಂಗವಾಗಿದ್ದಾರೆ. ಒಂದೇ ಸತ್ವದಿಂದ ಸೃಷ್ಟಿಯಾಗಿರುವ ಕಾರಣ ಒಂದು ಅಂಗಕ್ಕೆ ನೋವಾದರೆ ಇನ್ನೊಂದು ಆರಾಮವಾಗಿರಲು ಸಾಧ್ಯವಿಲ್ಲ.’

ಪರ್ಶಿಯನ್ ಭಾಷೆಯಲ್ಲಿರುವ ಈ ವಾಕ್ಯಗಳು ನ್ಯೂಯಾರ್ಕ್ ನಲ್ಲಿರುವ ಸಂಯುಕ್ತ ರಾಷ್ಟ್ರಗಳ ಕಟ್ಟಡದ ಮುಖ್ಯದ್ವಾರದ ಮೇಲೂ ಕೆತ್ತಲಾಗಿದೆ.

ಬಕರ್, ಭಾರತೀಯ ಸೈನಿಕರ ಉತ್ಸಾಹವನ್ನು ಹೆಚ್ಚಿಸಲು ಮತ್ತು ಬ್ರಿಟಿಷರ ವಿರುದ್ಧ ಹೋರಾಡುವ ಹಿಂದೂ ಮತ್ತು ಮುಸ್ಲಿಂ ಸೈನಿಕರ ಒಗ್ಗಟ್ಟನ್ನು ಕಾಪಾಡಲು ಸ್ಫೂರ್ತಿದಾಯಕ ಗದ್ಯ ಮತ್ತು ಪದ್ಯಗಳನ್ನು ಬಳಸುತ್ತಿದ್ದರು. ಬಕರ್ ಅವರ ವ್ಯಕ್ತಿತ್ವಕ್ಕೆ ತರಲು ಹಲವು ಬ್ರಿಟಿಷ್ ಲೇಖಕರು ಈ ಸಂದರ್ಭದಲ್ಲಿ ಪ್ರಯತ್ನಿಸಿದ್ದಾರೆ.

 ವಿಲಿಯಂ ಡಲ್ರಿಂಪಲ್ ತನ್ನ ಲಾಸ್ಟ್ ಮೊಘಲ್ ಪುಸ್ತಕದಲ್ಲಿ ಬಕರ್‌ನನ್ನು ‘‘ವಂಚಕ’’ ಎಂದು ವರ್ಣಿಸಿದ್ದಾರೆ. ಆದರೆ ಅದಕ್ಕೆ ಯಾವ ಸಾಕ್ಷಿಯೂ ಇಲ್ಲ. ಚಕ್ರವರ್ತಿ ಮತ್ತು ಬ್ರಿಟಿಷರ ಮಧ್ಯೆ ಶಾಂತಿ ಸ್ಥಾಪಿಸಲು ಬಕರ್ ಮಧ್ಯಸ್ಥಿಕೆ ವಹಿಸಿದ್ದರು ಎಂಬ ಆರೋಪವನ್ನು ಶಿರೀನ್ ಮೂಸ್ವಿ ತಳ್ಳಿ ಹಾಕುತ್ತಾರೆ.

‘‘ಅಂತಹ ಪತ್ರವನ್ನು ಬಕರ್ ನಿಜವಾಗಿಯೂ ಕಳುಹಿಸಿದ್ದಾರೆಯೇ ಇಲ್ಲವೇ ಎಂಬುದನ್ನು ರುಜುವಾತುಪಡಿಸಲು ಯಾವುದೇ ಪುರಾವೆಗಳಿಲ್ಲ. ಆದರೆ ಕನಿಷ್ಠ ಬ್ರಿಟಿಷರು ಆತನನ್ನು ತಮ್ಮ ಮಾಹಿತಿದಾರನಂತೆ ನೋಡಲಿಲ್ಲ. ಆತನನ್ನು ಸೆರೆಹಿಡಿದು ಗಲ್ಲಿಗೇರಿಸಲಾಯಿತು’’ ಎಂದು ಮೂಸ್ವಿ ನೆನಪಿಸುತ್ತಾರೆ.

ಬ್ರಿಟಿಷರು ಕಾಶ್ಮೀರ ಗೇಟನ್ನು ಭೇದಿಸಿ ಶಹಜಹನಾಬಾದ್ ನಗರವನ್ನು ಪ್ರವೇಶಿಸಿದ ಕೂಡಲೇ ಸೆಪ್ಟಂಬರ್ 14, 1857ರಂದು ಬಕರ್‌ರನ್ನು ಬಂಧಿಸಲಾಯಿತು. ಸೆಪ್ಟಂಬರ್ 16ರಂದು ಅವರನ್ನು ಮೇಜರ್ ವಿಲಿಯಂ ಸ್ಟೀವನ್ ರೇಕ್ಸ್ ಹಡ್ಸನ್ ಮುಂದೆ ಹಾಜರುಪಡಿಸಿದಾಗ ಆತ ಯಾವುದೇ ವಿಚಾರಣೆ ನಡೆಸದೆಯೇ ಬಕರ್‌ಗೆ ಮರಣದಂಡನೆಯನ್ನು ನೀಡಿದ. ಕೆಲವು ವರದಿಗಳಂತೆ ಹಡ್ಸನ್ ಖುದ್ದಾಗಿ ಬಕರ್ ಮೇಲೆ ಪಾಯಿಂಟ್ ಬ್ಯ್ಲಾಕ್ ರೇಂಜಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ದೊರೆಯು ಕೋಟೆಯೊಳಗೆ ಇರುವಂತೆಯೇ ಮತ್ತು ಮೊಘಲ್ ಸಾಮ್ರಾಜ್ಯ ಇನ್ನೂ ಅಧಿಕೃತವಾಗಿ ಕೊನೆಗೊಳ್ಳುವ ಮೊದಲೇ ಬಕರ್ ಸೆಪ್ಟಂಬರ್ 16ರಂದು ಕೊನೆಯುಸಿರೆಳೆದ.

Writer - ರಾಣಾ ಸಫ್ವಿ

contributor

Editor - ರಾಣಾ ಸಫ್ವಿ

contributor

Similar News