ಬಡತನ ಅಪರಾಧವೇ?
ಭಿಕ್ಷಾಟನೆ ಯು ಜಾಮೀನು ರಹಿತ ಅಪರಾಧ ವಾಗಿದ್ದು ಆರೋಪಿಯು ವಿಚಾರಣೆ ನಡೆಯುವ ಸಮಯದಲ್ಲಿ ಜೈಲಿನಿಂದ ಹೊರಬರಲು ನ್ಯಾಯಾಲಯದಲ್ಲಿ ಅರ್ಜಿಯನ್ನು ಹಾಕಬೇಕಾಗುತ್ತದೆ. ಭಾರತದಲ್ಲಿ ಉಚಿತ ಕಾನೂನು ಪ್ರಾತಿನಿಧ್ಯದ ಬಗ್ಗೆಯಿರುವ ಜಾಗೃತಿಯ ಮಟ್ಟ ಬಹಳ ಕಡಿಮೆಯಾಗಿದ್ದು ಈ ಪ್ರಾತಿನಿಧ್ಯದ ಗುಣಮಟ್ಟ ಕೂಡಾ ಬಹಳ ಕಳಪೆಯಾಗಿರುವುದು ಸಾಮಾಜಿಕ ಕಾರ್ಯಕರ್ತರ ಗಮನಕ್ಕೆ ಬಂದಿದೆ. ಭಿಕ್ಷಾಟನೆ ಆರೋಪದಡಿ ಬಂಧಿತನಾಗಿರುವ ವ್ಯಕ್ತಿಗೆ ಕಾನೂನು ಪ್ರತಿನಿಧಿಯನ್ನು ನಿಗದಿಪಡಿಸಿಕೊಳ್ಳಲು ಯಾವುದೇ ಮೂಲಗಳಿರುವುದಿಲ್ಲ ಹಾಗಾಗಿ ಆತನಿಗೆ ಜಾಮೀನು ಸಿಗುವುದು ಬಹಳ ಕಷ್ಟವಾಗಿಬಿಡುತ್ತದೆ.
ಭಾರತದ 20 ರಾಜ್ಯಗಳಲ್ಲಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಿಕ್ಷೆ ಬೇಡುವುದು ಅಪರಾಧವನ್ನಾಗಿಸಿರುವುದು ಬಡತನವನ್ನು ಒಪ್ಪಲು ಸಮಾಜ ಮುಜುಗರಪಡುತ್ತಿರುವ ಜೊತೆಗೆ ಬಡವರು ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿದ್ದಾರೆ ಎಂಬ ಬಗ್ಗೆ ಅಸಮಾಧಾನ ಹೊಂದಿರುವುದನ್ನು ಪ್ರತಿಫಲಿಸುತ್ತದೆ.
18 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನನ್ನು ವಿಶ್ಲೇಷಿಸಿದಾಗ ಬಹಳಷ್ಟು ಪ್ರದೇಶಗಳಲ್ಲಿ ಜನರು ಕೇವಲ ಬಡವರಂತೆ ಕಾಣುವ ಕಾರಣಕ್ಕಾಗಿಯೇ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ. ಯಾವುದೇ ವಾರಂಟ್ ಇಲ್ಲದೆಯೇ ಪೊಲೀಸರು ಭಿಕ್ಷುಕರನ್ನು ಬಂಧಿಸುವ ಮತ್ತು ನ್ಯಾಯಾಧೀಶರು ಅವರನ್ನು ದೀರ್ಘ ಅಥವಾ ಅನಿರ್ದಿಷ್ಟ ಸಮಯಕ್ಕೆ ಸರಕಾರ ನಡೆಸುವ ಸಂಸ್ಥೆಗಳಲ್ಲಿ ಕೂಡಿಹಾಕುವ ಅವಕಾಶವನ್ನು ಕಾನೂನು ನೀಡಿದೆ. ಇದು ಸಾಂವಿಧಾನಿಕ ತತ್ವಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಕಾನೂನಿನ ಪರಿಭಾಷೆಯು ಪ್ರಮುಖವಾಗಿ ಕಾನೂನು ಜಾರಿ ಸಂಸ್ಥೆಗಳು ಮತ್ತು ನ್ಯಾಯಾಲಯಗಳು ಸಮಾಜದ ಒಂದು ವಿಭಾಗದ ವಿರುದ್ಧ ವೈರತ್ವದ ಭಾವನೆಯನ್ನು ಅಳವಡಿಸಿಕೊಳ್ಳಲು ಮತ್ತು ಅದನ್ನು ನ್ಯಾಯಬದ್ಧಗೊಳಿಸಲು ಅವಕಾಶವನ್ನು ನೀಡುತ್ತದೆ.
ಕಾನೂನು ಮತ್ತು ಬಡತನದ ತಜ್ಞೆಯಾಗಿರುವ ಉಷಾ ರಮನಾಥನ್ ದಿಲ್ಲಿಯ ಭಿಕ್ಷಾಟನ ವಿರೋಧಿ ಕಾನೂನಿನ ವಿಶ್ಲೇಷಣೆ ನಡೆಸಿ ಆ ಕಾನೂನಿನಲ್ಲಿ ಅಸಾಂವಿಧಾನಿಕತೆಯ ದಟ್ಟ ಛಾಪು ಇದೆ ಎಂಬುದನ್ನು ಬೊಟ್ಟು ಮಾಡಿದ್ದಾರೆ. ಇದು ಇತರ ರಾಜ್ಯಗಳಲ್ಲಿ ಭಿಕ್ಷಾಟನೆ ಬಗ್ಗೆಯಿರುವ ಕಾನೂನಿನ ವಿಷಯದಲ್ಲಿ ನಿಜವಾಗಿದ್ದು ಈ ಸಮುದಾಯದ ಜೊತೆ ಸರಕಾರದ ಸಂಬಂಧದ ಬಗ್ಗೆ ಪುನರ್‌ಯೋಚಿಸುವ ಮತ್ತು ಮರುಮಾಪನ ನಡೆಸುವ ಅಗತ್ಯವನ್ನು ತೋರಿಸುತ್ತದೆ.
2016ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನಿರ್ಗತಿಕ ಜನರಿಗಾಗಿ ನೂತನ ಮಾದರಿ ಮಸೂದೆಯ ಬಗ್ಗೆ ಸಮಾಲೋಚನೆಯನ್ನು ನಡೆಸಿ ತಮ್ಮ ಅಭಿಪ್ರಾಯವನ್ನು ತಿಳಿಸಲು ರಾಜ್ಯಗಳ ಮುಂದೆ ಆ ಮಸೂದೆಯನ್ನು ಇಡಲಾಯಿತು. ಮಾದರಿ ಕಾನೂನುಗಳನ್ನು ಸಾಮಾನ್ಯವಾಗಿ ಕೇಂದ್ರ ಸರಕಾರದ ಸಚಿವಾಲಯಗಳು ಸಿದ್ಧಪಡಿಸಿ ರಾಜ್ಯ ಸರಕಾರಗಳು ಸ್ವಯಂಪ್ರೇರಿತವಾಗಿ ಅವುಗಳನ್ನು ಬದಲಾವಣೆಗಳೊಂದಿಗೆ ಅಥವಾ ಇಲ್ಲದೆಯೇ ಅನುಷ್ಠಾನಗೊಳಿಸಲಾಗುತ್ತದೆ.
ನಿರ್ಗತಿಕ ಜನರ (ರಕ್ಷಣೆ, ಕಾಳಜಿ ಮತ್ತು ಪುನರ್ವಸತಿ) ಮಾದರಿ ಕಾಯ್ದೆ 2016 ವಸತಿರಹಿತ ಜನರ, ಭಿಕ್ಷಾಟನೆ ನಡೆಸುವವರ ಮತ್ತು ಅಂಗವೈಕಲ್ಯವನ್ನು ಹೊಂದಿರುವ ನಿರ್ಗತಿಕರ ಪುನರ್ವಸತಿ ರೂಪುರೇಷೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಅದು ಭಿಕ್ಷಾಟನೆಯನ್ನು, ಪನರಾವರ್ತಿತ ಮತ್ತು ಸಂಘಟನಾತ್ಮಕ ಭಿಕ್ಷಾಟನೆಯ ಹೊರತಾಗಿ, ಅಪರಾಧವ ನ್ನಾಗಿಸುವುದಿಲ್ಲ ಮತ್ತು ಅದನ್ನು ಅವಲಂಬಿಸಿಕೊಂಡಿರುವ ವರನ್ನು ಬಂಧಿಸಲು ಅವಕಾಶ ನೀಡುವುದಿಲ್ಲ. ಬದಲಾಗಿ ಅದು ನಿರ್ಗತಿಕರಿಗೆ ಉತ್ತಮ ಸವಲತ್ತುಗಳನ್ನು ಒದಗಿಸುವುದರ ಜೊತೆಗೆ ಅವರಿಗೆ ಔದ್ಯೋಗಿಕ ತರಬೇತಿ ಮತ್ತು ಸಮಾಲೋಚನೆಯನ್ನು ಒದಗಿಸಲು ಎಲ್ಲಾ ಸವಲತ್ತುಗಳನ್ನು ಮತ್ತು ಸಿಬ್ಬಂದಿಯನ್ನು ಹೊಂದಿರುವ ಪುನರ್ವಸತಿ ಕೇಂದ್ರಗಳನ್ನು ತೆರೆಯುವ ಹೊಣೆಯನ್ನು ರಾಜ್ಯ ಸರಕಾರಗಳ ಮೇಲೆ ಹೊರಿಸಿದೆ. ಮಾದರಿ ಮಸೂದೆಯು ನಿರ್ಗತಿಕ ಜನರನ್ನು ಗುರುತಿಸಲು, ಜಾಗೃತಿ ಮೂಡಿಸಲು ಮತ್ತು ಸಮುದಾಯಗಳನ್ನು ಕ್ರೋಡೀಕರಿಸುವ ಸಲುವಾಗಿ ಹರಡುವಿಕೆ ಮತ್ತು ಕ್ರೋಡೀಕರಣ ಘಟಕಗಳನ್ನು ರಚಿಸುವ ಅವಕಾಶವನ್ನು ಕಲ್ಪಿಸುತ್ತದೆ.
ಆದರೆ ಈ ಮಸೂದೆಯು ಭಿಕ್ಷಾಟನೆಯ ಬಗ್ಗೆ ಪ್ರಗತಿಶೀಲ ಮತ್ತು ಮಾನವೀಯ ದೃಷ್ಟಿಕೋನವನ್ನು ಹೊಂದುವಲ್ಲಿ ವಿಫಲ ವಾಗಿದೆ ಮತ್ತು ಆ ಕಾರಣಕ್ಕಾಗಿ ವಿಸ್ತಾರವಾದ ಚರ್ಚೆಯ ನಂತರ ಮರುರಚಿಸಬೇಕಾದ ಅಗತ್ಯವಿದೆ. ಸರಕಾರಿ ಅಂಕಿಅಂಶಗಳಲ್ಲಿ (2011 ಜನಗಣತಿ ಆಧಾರ ದಲ್ಲಿ) ದೇಶಾದ್ಯಂತ 4,00,000ಕ್ಕೂ ಅಧಿಕ ನಿರ್ಗತಿಕ ಜನರನ್ನು ಭಿಕ್ಷುಕರು, ಅಲೆಮಾರಿಗಳು ಎಂಬಿತ್ಯಾದಿಯಾಗಿ ವರ್ಗೀಕ ರಿಸಲಾಗಿದೆ.
ರಾಜ್ಯವಾರು ಸ್ಥಿತಿ
ಆದರೆ ಈ ಅಂಕಿಅಂಶಗಳ ಬಗ್ಗೆ ಅನುಮಾನಗಳಿದ್ದು ಸರಕಾರ ಕೂಡಾ ಈ ಬಗ್ಗೆ ಅಧಿಕೃತ ಅಂಕಿಅಂಶಗಳು ಲಭ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತದೆ. ಸರಕಾರದ ಲೆಕ್ಕಾಚಾರದಲ್ಲಿ ಭಿಕ್ಷುಕರ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಕಾರ್ಯಕರ್ತರು ಹೇಳುತ್ತಾರೆ. ಉದಾಹರಣೆಗೆ 2011ರ ಜನಗಣತಿ ವರದಿಯಲ್ಲಿ ದಿಲ್ಲಿಯಲ್ಲಿರುವ ಭಿಕ್ಷುಕರ ಸಂಖ್ಯೆ 2,187 ಎಂದು ಹೇಳಲಾಗಿದೆ. ಆದರೆ ಸರಕಾರಿ ಇಲಾಖೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳು ಮಾಡಿರುವ ಅಂದಾಜಿನ ಪ್ರಕಾರ 2004 ಮತ್ತು 2010ರ ಮಧ್ಯೆ ಈ ಸಂಖ್ಯೆ 60,000ದಿಂದ 1,00,000ವಿತ್ತು.
ಇನ್ನು ಭಿಕ್ಷಾಟನೆ ವಿರೋಧಿ ಕಾನೂನಿನಡಿ ಬಂಧಿಸಲ್ಪಟ್ಟಿರುವ ಜನರ ಸಂಖ್ಯೆಯ ಬಗ್ಗೆ ಯಾವುದೇ ಸಿದ್ಧ ಮಾಹಿತಿ ಲಭ್ಯವಾಗಿಲ್ಲ. ಐದು ರಾಜ್ಯಗಳಲ್ಲಿ ಭಿಕ್ಷಾಟನೆಯನ್ನು ಅಪರಾಧ ಎಂದು ಘೋಷಿಸುವ ಕಾನೂನಿನ ಲಿಖಿತ ಮಾಹಿತಿ ಕೂಡಾ ಯಾವುದೇ ಸಾರ್ವಜನಿಕವಾಗಿ ಪಡೆಯಬಹುದಾದ ಮೂಲಗಳಲ್ಲಿ ಸಿಗುತ್ತಿಲ್ಲ.
ಬಹುತೇಕ ರಾಜ್ಯಗಳ ಕಾನೂನಿನಲ್ಲಿ (ಅಸ್ಸಾಂ ಮತ್ತು ತಮಿಳುನಾಡನ್ನು ಹೊರತುಪಡಿಸಿ) ಬದುಕಲು ಯಾವುದೇ ವ್ಯವಸ್ಥೆಯಿಲ್ಲದಿರುವುದು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡು ವುದನ್ನು ಭಿಕ್ಷಾಟನೆ ಎಂದು ಪರಿಗಣಿಸ ಲಾಗಿದೆ. ಇನ್ನೊಂದರ್ಥದಲ್ಲಿ ನೀವು ಬಡವರಂತೆ ಕಂಡರೆ ನಿಮ್ಮನ್ನು ಬಂಧಿಸುವ ಸಾಧ್ಯತೆಯಿದೆ. ವಸತಿರಹಿತ ಕಾರ್ಮಿಕ ಜನರನ್ನು ಮತ್ತು ಅಲೆಮಾರಿ ಬುಡಕಟ್ಟು ಜನರನ್ನು ಭಿಕ್ಷುಕರೆಂದು ಪರಿಗಣಿಸಿ ಪೊಲೀಸ್ ದಾಳಿಗಳು ನಡೆದ ವರದಿಗಳೂ ಬಂದಿವೆ.
ಪಶ್ಚಿಮ ಬಂಗಾಳದ ಕಾನೂನು ಹಳೆಯ ವಸಾಹತು ಶೈಲಿಯ ಕಾನೂನಿನ ಪರಿಭಾಷೆಯನ್ನೇ ಹೊಂದಿದ್ದು ಅಲೆಮಾರಿಗಳು ಎಂಬ ಶಬ್ದವನ್ನೇ ಬಳಸುತ್ತದೆ. ಕೆಲವು ಕಾನೂನುಗಳು ಸ್ವಾತಂತ್ರ್ಯಪೂರ್ವದವಾಗಿದ್ದರೆ (ತಮಿಳುನಾಡು) ಇನ್ನು ಕೆಲವು ತೀರಾ ಇತ್ತೀಚೆಗೆ ಅಂದರೆ 2004ರಲ್ಲಿ ರೂಪುಗೊಂಡವಾಗಿವೆ (ಸಿಕ್ಕಿಂ), ಆದರೆ ಭಿಕ್ಷಾಟನೆ ಒಂದು ಅಪರಾಧ ಕೃತ್ಯ ಎಂಬ ವರ್ಗೀಕರಣ ಮಾತ್ರ ಬದಲಾಗದೆ ಉಳಿದಿದೆ.
ಕರ್ನಾಟಕ ಮತ್ತು ಅಸ್ಸಾಂನಲ್ಲಿ ಧಾರ್ಮಿಕ ಕಾರಣಗಳಿಗಾಗಿ ಭಿಕ್ಷೆ ಬೇಡುವ ಮತ್ತು ಮಂದಿರ ಹಾಗೂ ಮಸೀದಿಗಳ ಹೊರಗೆ ಭಿಕ್ಷಾಟನೆ ಮಾಡುವವರನ್ನು ಈ ಕಾನೂನಿನಿಂದ ಹೊರಗಿಡಲು ತಿದ್ದುಪಡಿಯನ್ನು ಮಾಡಲಾಗಿದೆ. ಈ ಕಾನೂನು ಧರ್ಮದ ಹೆಸರಲ್ಲಿ ಭಿಕ್ಷೆ ಬೇಡುವುದಕ್ಕೆ ಅನುಮತಿ ನೀಡುತ್ತದೆ. ಆದರೆ ಹಾಡುವ, ಕುಣಿಯುವ ಮತ್ತು ವಿವಿಧ ಕಸರತ್ತುಗಳನ್ನು ಪ್ರದರ್ಶಿಸುವ ಮೂಲಕ ಹಣ ಬೇಡುವುದು ಭಿಕ್ಷಾಟನೆಯ ಪರಿಧಿಯಲ್ಲಿ ಬೀಳುತ್ತದೆ ಮತ್ತು ಅದು ದಂಡನಾರ್ಹವಾಗಿದೆ.
ಆದರೆ ತಮಿಳುನಾಡಿನಲ್ಲಿ ವೌಖಿಕ ಸಂಪ್ರದಾಯದ ಬೀದಿ ಕಲಾವಿದರು ಮತ್ತು ಪ್ರದರ್ಶಕರು, ಕವಿಗಳು, ಗಾರುಡಿಗರು ಮತ್ತು ಬೀದಿ ಜಾದೂಗಾರರನ್ನು ಈ ಕಾನೂನಿನಿಂದ ಹೊರಗಿಡಲಾಗಿದೆ.
ಬಹುತೇಕ ಕಾನೂನುಗಳಲ್ಲಿ (ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಬಿಹಾರ ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ) ನ್ಯಾಯಾಲಯವು ಭಿಕ್ಷಾಟನೆಗಾಗಿ ಬಂಧನಕ್ಕೊಳಗಾಗಿರುವ ವ್ಯಕ್ತಿಯ ಅವಲಂಬಿತರನ್ನೂ ಬಂಧಿಸಲು ಆದೇಶ ನೀಡಬಹುದಾಗಿದೆ. ಅಂದರೆ ಓರ್ವ ವ್ಯಕ್ತಿಯನ್ನು ಭಿಕ್ಷಾಟನೆ ಆರೋಪದಲ್ಲಿ ಬಂಧಿಸಿದರೆ ಆತನ ಪತ್ನಿ ಮತ್ತು ಮಕ್ಕಳನ್ನೂ ವಶಕ್ಕೆ ತೆಗೆದುಕೊಳ್ಳಬಹುದಾಗಿದೆ.
ಹಿಮಾಚಲ ಪ್ರದೇಶದಲ್ಲಿ ಈ ಕಾನೂನು ಇನ್ನೊಂದು ಹೆಜ್ಜೆ ಮುಂದೆ ಸಾಗಿ ಭಿಕ್ಷುಕನ ಆದಾಯದಲ್ಲಿ ಪ್ರಜ್ಞಾಪೂರ್ವಕವಾಗಿ ಬದುಕುತ್ತಿರುವ ವ್ಯಕ್ತಿಗಳನ್ನು ಜೈಲಿಗೆ ಕಳುಹಿಸಲೂ ನ್ಯಾಯಾಲಯಕ್ಕೆ ಅವಕಾಶ ನೀಡುತ್ತದೆ. ಈ ಕಾನೂನಿನ ಪ್ರಕಾರ ಓರ್ವ ವ್ಯಕ್ತಿ ಭಿಕ್ಷುಕನ ಜೊತೆ ಬದುಕುತ್ತಿದ್ದಾನೆ ಅಥವಾ ದಿನಂಪ್ರತಿ ಜೊತೆಯಾಗಿರುತ್ತಾನೆ ಎಂಬುವುದು ಸಾಬೀತಾದರೆ ಆತ ಶಿಕ್ಷೆಗೆ ಅರ್ಹನಾಗುತ್ತಾನೆ. ಈ ಕಾನೂನಿನ ಪ್ರಕಾರ ಪೊಲೀಸರು ಇಡೀ ಕುಟುಂಬವನ್ನೇ ಬಂಧಿಸಬಹುದು ಅಥವಾ ವಶಕ್ಕೆ ಪಡೆಯಬಹುದು.
ಮಾದರಿ ಮಸೂದೆಯಲ್ಲಿ ರಾಜ್ಯ ಕಾನೂನುಗಳಲ್ಲಿ ಸದ್ಯ ಪ್ರಸ್ತಾಪಿಸಲಾಗಿರುವ ವ್ಯಾಖ್ಯಾನದ ಮಾದರಿಯನ್ನೇ ಉಳಿಸಿಕೊಳ್ಳಲಾಗಿದೆ. ಇದರಲ್ಲಿ ಜೀವನಕ್ಕೆ ಯಾವುದೇ ಆಧಾರವು ಇಲ್ಲದಿರುವುದು ಮತ್ತು ಅಲೆದಾಡುವುದು ಮತ್ತು ಯಾವುದಾದರೂ ಸಾರ್ವಜನಿಕ ಸ್ಥಳಗಳಲ್ಲಿ ಉಳಿದುಕೊಳ್ಳುವುದು ಭಿಕ್ಷಾಟನೆಗೆ ಸಮ ಎಂದು ಹೇಳಲಾಗಿದೆ. ಈ ಕಾನೂನು ಗಮನವನ್ನು ಶಿಕ್ಷೆಯಿಂದ ಪುನರ್ವಸತಿ ಕಡೆಗೆ ಬದಲಾಯಿಸಿದರೂ ಮುಖ್ಯವಾಗಿ ಯಾರೇ ಆದರೂ ಬಡವರಂತೆ ಕಂಡರೆ ಅವರು ಭಿಕ್ಷುಕರು ಎಂಬ ಗ್ರಹಿಕೆಯನ್ನು ಅದು ಮುಂದುವರಿಸಿಕೊಂಡು ಹೋಗಿದೆ.
ಬೀದಿಗಳನ್ನು ಸ್ವಚ್ಛಗೊಳಿಸುವುದು
ಬೀದಿಗಳಲ್ಲಿರುವ ಭಿಕ್ಷುಕರನ್ನು ಓಡಿಸಲು ಸ್ಥಳೀಯ ಪೊಲೀಸರು ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿಗಳು ಪದೇಪದೆ ದಾಳಿ ನಡೆಸುತ್ತಲೇ ಇರುತ್ತಾರೆ. ಈ ಸಂದರ್ಭದಲ್ಲಿ ಹೆಚ್ಚಾಗಿ ಬಂಧನಕ್ಕೊಳಗಾಗುವವರು ಭಿಕ್ಷಾಟನೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿರುವ ಮಂಗಳಮುಖಿಯರು.
ಹಲವು ರಾಜ್ಯ ಕಾನೂನುಗಳು ಭಿಕ್ಷಾಟನೆಯನ್ನು ಒಂದು ಪ್ರತ್ಯಕ್ಷ ಅಥವಾ ವೇದ್ಯ ಮತ್ತು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಿವೆ ಹಾಗೂ ಅಪರಾಧ ಸಾಬೀತುಪಡಿಸಲು ಮತ್ತು ಶಿಕ್ಷೆ ವಿಧಿಸಲು ಸಾರಾಂಶ ವಿಚಾರಣೆ ನಡೆಸಬಹುದಾಗಿದೆ.
ಅಪರಾಧ ಪ್ರಕ್ರಿಯೆಗಳ ಭಾರತೀಯ ಸಂಹಿತೆಯ ಪ್ರಕಾರ ಪೊಲೀಸರ ತಕ್ಷಣ ಮಧ್ಯಪ್ರವೇಶ ಅಗತ್ಯವಿರುವ ಅಪರಾಧಗಳನ್ನು ವೇದ್ಯ ಅಪರಾಧಗಳು ಎಂದು ಪರಿಗಣಿಸಲಾಗುತ್ತದೆ. ಈ ಪ್ರಕರಣಗಳಲ್ಲಿ ಪೊಲೀಸರು ಯಾವುದೇ ದೂರು ದಾಖಲಾಗದಿದ್ದರೂ ಮತ್ತು ನ್ಯಾಯಾಲಯದ ಅನುಮತಿಗೂ ಮೊದಲು ತನಿಖೆಯನ್ನು ಆರಂಭಿಸುವ ಮತ್ತು ಬಂಧಿಸುವ ಅಧಿಕಾರವನ್ನು ಹೊಂದಿದ್ದಾರೆ. ಬಹುತೇಕ ರಾಜ್ಯ ಕಾನೂನುಗಳು ಭಿಕ್ಷುಕರಂತೆ ಕಾಣುವ ಯಾರನ್ನು ಬೇಕಾದರೂ ಯಾವುದೇ ವಾರೆಂಟ್ ಇಲ್ಲದೆ ಬಂಧಿಸುವ ಅಧಿಕಾರವನ್ನು ಪೊಲೀಸರಿಗೆ ನೀಡುತ್ತದೆ. ಭಿಕ್ಷಾಟನೆಯು ಜಾಮೀನುರಹಿತ ಅಪರಾಧವಾಗಿದ್ದು ಆರೋಪಿಯು ವಿಚಾರಣೆಯ ನಡೆಯುವ ಸಮಯದಲ್ಲಿ ಜೈಲಿನಿಂದ ಹೊರಬರಲು ನ್ಯಾಯಾಲಯದಲ್ಲಿ ಅರ್ಜಿಯನ್ನು ಹಾಕಬೇಕಾಗುತ್ತದೆ. ಭಾರತದಲ್ಲಿ ಉಚಿತ ಕಾನೂನು ಪ್ರಾತಿನಿಧ್ಯದ ಬಗ್ಗೆಯಿರುವ ಜಾಗೃತಿಯ ಮಟ್ಟ ಬಹಳ ಕಡಿಮೆಯಾಗಿದ್ದು ಈ ಪ್ರಾತಿನಿಧ್ಯದ ಗುಣಮಟ್ಟ ಕೂಡಾ ಬಹಳ ಕಳಪೆಯಾಗಿರುವುದು ಸಾಮಾಜಿಕ ಕಾರ್ಯಕರ್ತರ ಗಮನಕ್ಕೆ ಬಂದಿದೆ.
ಭಿಕ್ಷಾಟನೆ ಆರೋಪದಡಿ ಬಂಧಿತನಾಗಿರುವ ವ್ಯಕ್ತಿಗೆ ಕಾನೂನು ಪ್ರತಿನಿಧಿಯನ್ನು ನಿಗದಿಪಡಿಸಿಕೊಳ್ಳಲು ಯಾವುದೇ ಮೂಲಗಳಿರುವುದಿಲ್ಲ ಹಾಗಾಗಿ ಆತನಿಗೆ ಜಾಮೀನು ಸಿಗುವುದು ಬಹಳ ಕಷ್ಟವಾಗಿಬಿಡುತ್ತದೆ.
ಕಾಮನ್‌ವೆಲ್ತ್ ಗೇಮ್ಸ್ ಪ್ರಯುಕ್ತ ನಗರವನ್ನು ಸುಂದರಗೊಳಿಸುವ ಅಭಿಯಾನದ ಸಂದರ್ಭದಲ್ಲಿ ದಿಲ್ಲಿ ಸರಕಾರವು ನಗರವನ್ನು ಭಿಕ್ಷುಕಮುಕ್ತವಾಗಿಸಲು ನಿರ್ಧರಿಸಿತು. ಅದಕ್ಕಾಗಿ ಸಂಚಾರಿ ನ್ಯಾಯಾಲಯಗಳನ್ನು ತೆರೆಯಲಾಗಿ ಸಣ್ಣ ಬಸ್‌ನೊಳಗೆ ಕುಳಿತ ನ್ಯಾಯಾಧೀಶರು ಬಂಧಿತರಾಗಿರುವ ಭಿಕ್ಷುಕರ ಸಾರಾಂಶವಾಗಿ ವಿಚಾರಣೆ ನಡೆಸಿದರು. ಇಲ್ಲಿ ಏಳುವ ಪ್ರಶ್ನೆಯೆಂದರೆ; ಭಿಕ್ಷಾಟನೆಯು ವೇದ್ಯ ಮತ್ತು ಜಾಮೀನುರಹಿತವಾಗುವಷ್ಟು ಗಂಭೀರವಾದ ಅಪರಾಧವೆಂದಾದರೆ ಆರೋಪವನ್ನು ಸಾಬೀತುಪಡಿಸಲು ಸಾರಾಂಶ ವಿಚಾರಣೆ ಸಾಕಾಗುವುದೇ? ಮಾದರಿ ಮಸೂದೆಯಲ್ಲಿ ಭಿಕ್ಷಾಟನೆಯನ್ನು ಅಪರಾಧಿಕೃತ್ಯ ಎಂದು ಹೇಳಿಲ್ಲವಾದರೂ ಪದೇಪದೆ ಭಿಕ್ಷೆ ಬೇಡುತ್ತಾ ಕಂಡುಬರುವ ವ್ಯಕ್ತಿಗಳನ್ನು ಪುನರ್ವಸತಿ ಕೇಂದ್ರಗಳಲ್ಲಿ ಅನಿರ್ದಿಷ್ಟಾವಧಿ ಕಾಲ ಬಂದಿಯಾಗಿಸುವ ಅವಕಾಶವನ್ನು ನೀಡುತ್ತದೆ ಮತ್ತು ಇದು ನಿರ್ಗತಿಕರ ಹಿತಾಸಕ್ತಿಯ ಪರವಾಗಿದೆ ಎಂದು ತಿಳಿಸುತ್ತಾ ಅಗತ್ಯಬಿದ್ದರೆ ಪೊಲೀಸರ ಸಹಕಾರವನ್ನೂ ಪಡೆಯುವ ಅವಕಾಶವನ್ನು ಕಲ್ಪಿಸುತ್ತದೆ. ಜೊತೆಗೆ ಈ ಮಸೂದೆಯು ಗುರುತಿನ ಚೀಟಿಗಳನ್ನು ಜಾರಿ ಮಾಡುವ ಬಗ್ಗೆಯೂ ಪ್ರಸ್ತಾಪ ಹೊಂದಿದ್ದು ಇದರಿಂದ ನಿಗಾಯಿಡಲು ಸುಲಭವಾಗುತ್ತದೆ.
ಈ ನಿಬಂಧನೆಗಳು ಪೊಲೀಸರಿಗೆ ದಾಳಿ ನಡೆಸಲು ಮತ್ತು ಸ್ವಚ್ಛತಾ ಅಭಿಯಾನಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ. ಇದರಿಂದ ಪರಿಸ್ಥಿತಿಯು ಈಗಿರುವುದಕ್ಕಿಂತ ಭಿನ್ನವಾಗೇನೂ ಇರುವುದಿಲ್ಲ. ಬಂಧಿತ ಭಿಕ್ಷುಕರು ಎಲ್ಲಿಗೆ ಹೋಗುತ್ತಾರೆ? ವಿವಿಧ ರಾಜ್ಯ ಕಾನೂನುಗಳು ಭಿಕ್ಷುಕರು ಎಂದು ಘೋಷಿಸಲಾದ ವ್ಯಕ್ತಿಗಳನ್ನು ಮತ್ತು ಕೆಲಮ ಪ್ರಕರಣಗಳಲ್ಲಿ ಅವರ ಅವಲಂಬಿತರನ್ನು ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಕಳುಹಿಸುವ ಸಲಹೆ ನೀಡುತ್ತವೆ. ಈ ಕೇಂದ್ರಗಳನ್ನು ಹಲವು ಕಡೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ, ಉದಾಹರಣೆಗೆ ಪ್ರಮಾಣೀಕೃತ ಸಂಸ್ಥೆಗಳು, ಅನಾಥಾಲಯಗಳು, ವಿಶೇಷ ಮನೆ, ಭಿಕ್ಷುಕರ ಮನೆ ಅಥವಾ ಸಾಂತ್ವನ ಕೇಂದ್ರ. ಕೆಲವು ರಾಜ್ಯಗಳ ಕಾರ್ಯಾಗಾರ ಮತ್ತು ವಿಶೇಷ ಮನೆಗಳು ವ್ಯತ್ಯಾಸ ಹೊಂದಿವೆ, (ಅನಾಥಾಲಯಗಳಲ್ಲಿ ದೈಹಿಕವಾಗಿ ಕೆಲಸ ಮಾಡಬಲ್ಲವರನ್ನು ಕೂಡಿಹಾಕಲಾಗುತ್ತದೆ ಮತ್ತು ವಿಶೇಷ ಮನೆಗಳಲ್ಲಿ ದೈಹಿಕ ಅಸಾಮರ್ಥ್ಯ ಹೊಂದಿರುವವರನ್ನು ಕೂಡಿಹಾಕಲಾಗುತ್ತದೆ).
ಈ ಸಂಸ್ಥೆಗಳ ಬಗ್ಗೆ ಯಾವುದೇ ಸಮಗ್ರ ಅಂಕಿಅಂಶಗಳು ಲಭ್ಯವಿಲ್ಲ, ಆದರೆ ಲಭ್ಯ ವರದಿಗಳು ಇವುಗಳಲ್ಲಿನ ಶೋಚನೀಯ ಪರಿಸ್ಥಿತಿಯನ್ನು ಸೂಚಿಸುತ್ತವೆ ಮತ್ತು ಇಂತಹ ಕೆಲವು ಮನೆಗಳಲ್ಲಿ ಪ್ರತೀವರ್ಷ ಬಹಳಷ್ಟು ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿರುವುದನ್ನು ತಿಳಿಸುತ್ತದೆ. ಈ ಕಾನೂನುಗಳು ಸಾಮಾನ್ಯವಾಗಿ ಗ್ರಹಿಸಲಾಗಿರುವ ಭಿಕ್ಷಾಟನೆ ಮತ್ತು ಅಪರಾಧಿಕೃತ್ಯಗಳ ಮಧ್ಯೆಯ ಸಂಬಂಧವನ್ನು ಹೇಗೆ ಪ್ರತಿಫಲಿಸುತ್ತದೆ ಎಂಬುದನ್ನು ತಿಳಿಯುವುದು ಬಹಳ ಸುಲಭ.
ಬಾಂಬೆ ಭಿಕ್ಷಾಟನೆ ತಡೆ ಕಾಯ್ದೆ 1959ನ್ನು ಅಳವಡಿಸಿಕೊಂಡಿರುವ ರಾಜ್ಯಗಳು (ಉದಾ; ದಿಲ್ಲಿ) ಪ್ರಮಾಣೀಕೃತ ಸಂಸ್ಥೆಗಳಲ್ಲಿ ಕೂಡಿಹಾಕುವುದನ್ನು ಸಾಮಾನ್ಯ ಶಿಕ್ಷೆ ಎಂದು ಸೂಚಿಸುತ್ತದೆ. ಇನ್ನು ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಂತಹ ಅನೇಕ ರಾಜ್ಯಗಳಲ್ಲಿ ವ್ಯಕ್ತಿಯನ್ನು ಜೈಲಿಗೆ ಕಳುಹಿಸುವ ಅಥವಾ ಇಂತಹ ಸಂಸ್ಥೆಗಳಿಗೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನ್ಯಾಯಾಲಯಕ್ಕೆ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮನೆಯ ಪ್ರಮುಖ ವ್ಯಕ್ತಿಗೆ ಉದ್ಯೋಗ ಸಿಕ್ಕ ನಂತರ ಅಥವಾ ಸಂಬಂಧಿಯೋರ್ವ ವೈಯಕ್ತಿಕ ಖಾತರಿ ನೀಡಿದ ನಂತರವಷ್ಟೇ ಬಂಧಿತ ವ್ಯಕ್ತಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆ ಮೂಲಕ ಆ ವ್ಯಕ್ತಿಯನ್ನು ಅನಿರ್ದಿಷ್ಟಾವಧಿಗೆ ಬಂಧನದಲ್ಲಿಡಲು ಸಾಧ್ಯವಾಗುತ್ತದೆ.
ಪದೇಪದೇ ತಪ್ಪು ಮಾಡಿದರೆ ಶಿಕ್ಷೆಯೂ ಕಠಿಣವಾಗುತ್ತಾ ಹೋಗುತ್ತದೆ. ಒಬ್ಬ ವ್ಯಕ್ತಿ ಮೂರನೆ ಬಾರಿ ಭಿಕ್ಷೆ ಬೇಡುವುದು ಕಂಡರೆ ಆ ವ್ಯಕ್ತಿಯನ್ನು ಹತ್ತು ವರ್ಷಗಳ ಕಾಲ ಸರಕಾರಿ ಸಂಸ್ಥೆಗೆ ಕಳುಹಿಸುವ ಸಾಧ್ಯತೆಯಿದೆ ಮತ್ತು ಅದರಲ್ಲಿ ಎರಡು ವರ್ಷ ಆತ ಜೈಲಿನಲ್ಲಿ ಕಳೆಯಬೇಕಾಗುತ್ತದೆ. ವಿಶ್ಲೇಷಣೆ ನಡೆಸಿದ ಒಂಬತ್ತು ರಾಜ್ಯಗಳಲ್ಲಿ ನ್ಯಾಯಾಧೀಶರು ಆರೋಪಿಯನ್ನು ಹತ್ತು ವರ್ಷಗಳ ಕಾಲಕ್ಕೆ ಸರಕಾರಿ ಸಂಸ್ಥೆಗಳಿಗೆ ಕಳುಹಿಸಬಹುದಾಗಿದೆ. ಹತ್ತು ವರ್ಷಗಳ ಗರಿಷ್ಠ ಶಿಕ್ಷೆಯನ್ನು ನೀಡುವ ವೇಳೆ ಆ ವ್ಯಕ್ತಿಯನ್ನು ಎಂಟು ವರ್ಷಗಳ ಕಾಲ ಸಂಸ್ಥೆಗೆ ಮತ್ತು ಎರಡು ವರ್ಷ ಜೈಲಿಗೆ ಕಳುಹಿಸುವ ಅಧಿಕಾರ ನ್ಯಾಯಾಧೀಶರಿಗೆ ಇದೆ.
ಇಂಥದೇ ಮಾದರಿಯನ್ನು ಅಸ್ಸಾಂ, ಹರ್ಯಾಣ ಮತ್ತು ಉತ್ತರ ಪ್ರದೇಶಗಳಂತಹ ರಾಜ್ಯಗಳಲ್ಲೂ ಅನುಸರಿಸಲಾಗುತ್ತಿದೆ. ಆದರೆ ಶಿಕ್ಷೆಯ ಗರಿಷ್ಠ ಪ್ರಮಾಣ ಮಾತ್ರ ಕಡಿಮೆಯಿದೆ (ಮೂರರಿಂದ ಐದು ವರ್ಷಗಳು). ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ನ್ಯಾಯಾಧೀಶರು ಕೇವಲ ಪುನರಾವರ್ತಿತ ಆರೋಪಿಯನ್ನು ಮಾತ್ರ ಸರಕಾರಿ ಸಂಸ್ಥೆಗಳಿಗೆ ಕಳುಹಿಸಬಹುದಾಗಿದೆ. ಹಿಮಾಚಲ ಪ್ರದೇಶದಲ್ಲಿ ಪುನರಾವರ್ತಿತ ಅಪರಾಧಿ (ಮಹಿಳೆ ಮತ್ತು ಮಕ್ಕಳನ್ನು ಹೊರತುಪಡಿಸಿ) ಯನ್ನು ಜೈಲಿಗೆ ಕಳುಹಿಸಲಾಗುತ್ತದೆ. ಮಹಿಳೆಯರು ಮತ್ತು ಮಕ್ಕಳನ್ನು ಅದಕ್ಕೆ ಬದಲಾಗಿ ಭಿಕ್ಷುಕರ ಮನೆಗೆ ಕಳುಹಿಸಲಾಗುತ್ತದೆ.
ಇಲ್ಲಿ ಕೂಡಾ ಗರಿಷ್ಠ ಶಿಕ್ಷೆಯ ಪ್ರಮಾಣ ಮೂರರಿಂದ ಹತ್ತು ವರ್ಷಗಳವರೆಗೆ ಇದೆ. ಇಲ್ಲಿ ಮೂಡುವ ಪ್ರಶ್ನೆಯೆಂದರೆ ಭಿಕ್ಷಾಟನೆಯೆಂಬುದು ಒಂದು ರಾಜ್ಯಕ್ಕಿಂತ ಇನ್ನೊಂದು ರಾಜ್ಯದಲ್ಲಿ ಗಂಭೀರವಾದ ಅಪರಾಧ ಹೇಗಾಗುತ್ತದೆ? ಹರ್ಯಾಣ ಮತ್ತು ಪಂಜಾಬ್‌ನಂತಹ ರಾಜ್ಯಗಳಲ್ಲಿ ಪ್ರಮಾಣೀಕೃತ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ದೈಹಿಕ ಕೆಲಸಗಳನ್ನು ಮಾಡಬೇಕು (ವೈದ್ಯಕೀಯ ಪರೀಕ್ಷೆಯ ನಂತರ) ಎಂದು ಕಾನೂನು ಸೂಚಿಸುತ್ತದೆ. ಕಡ್ಡಾಯ ಕೆಲಸ ಕೂಡಾ ಬಂಧನವು ದಂಡನಾತ್ಮಕವಾಗಿದ್ದು ಪುನಃಶ್ಚೈತನ್ಯದಂತಿಲ್ಲ ಎಂಬುದನ್ನು ಸೂಚಿಸುತ್ತದೆ.
ಪ್ರಮಾಣೀಕೃತ ಸಂಸ್ಥೆಗಳಲ್ಲಿರುವ ಸಂದರ್ಭದಲ್ಲಿ ತಮ್ಮ ಬೆರಳಚ್ಚು ನೀಡಲು ತಿರಸ್ಕರಿಸಿದ್ದಾರೆ ಎಂಬ ಕಾರಣಕ್ಕೆ ಮೂರು ತಿಂಗಳ ಕಾಲ ಜೈಲಿಗೆ ಕಳುಹಿಸುವ ಅಧಿಕಾರವನ್ನು ಬಹಳಷ್ಟು ರಾಜ್ಯಗಳಲ್ಲಿ ನ್ಯಾಯಾಧೀಶರಿಗೆ ನೀಡಲಾಗಿದೆ. ಗುಜರಾತ್‌ನಂತಹ ರಾಜ್ಯಗಳಲ್ಲಿ ವ್ಯಕ್ತಿಯು ನಿಯಮಗಳನ್ನು ಪಾಲಿಸಲು ಒಪ್ಪದಿದ್ದಲ್ಲಿ ಆತನ ಪ್ರಮಾಣೀಕೃತ ಸಂಸ್ಥೆಗಳಲ್ಲಿ ಉಳಿದಿರುವ ಅವಧಿಯನ್ನು ಜೈಲುವಾಸವನ್ನಾಗಿ ಬದಲಾಯಿಸುವ ಅವಕಾಶವೂ ಇದೆ.
ಮಕ್ಕಳ ಪಾಡೇನು?
ಭಿಕ್ಷೆಯನ್ನು ಬೇಡುವ ಮಕ್ಕಳನ್ನು ನಿಭಾಯಿಸುವ ವಿಷಯದಲ್ಲಿ ರಾಜ್ಯಗಳಲ್ಲಿನ ಭಿಕ್ಷಾಟನೆ ಕಾನೂನುಗಳಲ್ಲಿ ಮೂಲಭೂತವಾದ ವ್ಯತ್ಯಾಸಗಳಿವೆ. ಅಪ್ರಾಪ್ತ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾನೂನು 2015ರ ಪ್ರಕಾರ ಭಿಕ್ಷಾಟನೆ ಮಾಡುತ್ತಾ ಕಂಡುಬರುವ ಮಕ್ಕಳನ್ನು ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಸಂತ್ರಸ್ತರು ಎಂದು ಪರಿಗಣಿಸಬೇಕು ಮತ್ತು ಅವರನ್ನು ಮಕ್ಕಳ ಕಲ್ಯಾಣ ಮಂಡಳಿಗಳು ನಿಭಾಯಿಸಬೇಕು ಎಂದು ಸೂಚಿಸಲಾಗಿದೆ. ಆದರೆ ಕೆಲವು ರಾಜ್ಯ ಕಾನೂನುಗಳು ಈ ಮಕ್ಕಳನ್ನೂ ಅಪರಾಧಿಗಳಂತೆ ಕಂಡು ಅವರನ್ನು ಕೂಡಾ ಸರಕಾರಿ ಸಂಸ್ಥೆಗಳಿಗೆ ಕಳುಹಿಸುತ್ತವೆ. ಇನ್ನು ಮಗು ಎಂದು ಪರಿಗಣಿಸಲು ಯಾರು ಅರ್ಹರು ಎಂ