ಬಾಬರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿಗೆ ಹಿನ್ನಡೆ; ಮೋದಿಗೆ ಲಾಭ

Update: 2017-04-20 18:47 GMT

ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು, ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಹಾಗೂ ಉಮಾಭಾರತಿ ವಿರುದ್ಧದ ಅಪರಾಧ ಪಿತೂರಿ ಆರೋಪ ಮರುಹುಟ್ಟು ಪಡೆದಂತಾಗಿದೆ. ಇದು ವೈಯಕ್ತಿಕವಾಗಿ ಈ ನಾಯಕರಿಗೆ ಹಿನ್ನಡೆಯಾದರೂ, ಬಿಜೆಪಿ ಈ ಬಗ್ಗೆ ರಾಜಕೀಯ ಬೆಲೆ ತೆರಬೇಕಾಗುವ ಪರಿಸ್ಥಿತಿ ಅಸಂಭವ.

ಸುಪ್ರೀಂಕೋರ್ಟ್ ಬುಧವಾರ ನೀಡಿರುವ ಮಹತ್ವದ ತೀರ್ಪು, 1992ರ ಡಿಸೆಂಬರ್ 6ರಂದು ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಹಾಗೂ ಉಮಾಭಾರತಿ ವಿರುದ್ಧದ ಅಪರಾಧ ಪಿತೂರಿ ಆರೋಪ ಮರುಹುಟ್ಟು ಪಡೆದಂತಾ ಗಿದೆ. ಇದು ವೈಯಕ್ತಿಕವಾಗಿ ಈ ನಾಯಕರಿಗೆ ಹಿನ್ನಡೆಯಾದರೂ, ಬಿಜೆಪಿ ಈ ಬಗ್ಗೆ ರಾಜಕೀಯ ಬೆಲೆ ತೆರಬೇಕಾಗುವ ಪರಿಸ್ಥಿತಿ ಅಸಂಭವ. ವಿಚಾರಣೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಈ ವಿಚಾರಣೆ ಹಿಂದುತ್ವದ ಕುಡಿಕೆ ಸದಾ ಕುದಿಯುತ್ತಿರಲು ಕಾರಣ ವಾಗಲಿದ್ದು, ಇದನ್ನು ಅಭಿವೃದ್ಧಿಯ ಮಂತ್ರದೊಂದಿಗೆ ಮಿಶ್ರಗೊಳಿಸುವ ಮೂಲಕ ಕಳೆದ ಮೂರು ವರ್ಷಗಳಲ್ಲಿ ಸರಣಿ ಸರಣಿ ಚುನಾವಣೆಗಳನ್ನು ಗೆದ್ದ ಪಕ್ಷಕ್ಕೆ ಇದು ಅನಪೇಕ್ಷಿತ ಪರಿಸ್ಥಿತಿಯನ್ನು ಸೃಷ್ಟಿಸುವ ಸಾಧ್ಯತೆ ಇಲ್ಲ. ಅಯೋಧ್ಯೆಯ ವಿವಾದಿತ ನಿರ್ಮಾಣ, ಮಧ್ಯಮವರ್ಗ ಹಾಗೂ ಉದಾರವಾದಿಗಳು ಸೇರಿದಂತೆ ಒಂದು ವರ್ಗದ ಜನರನ್ನು ಪ್ರತ್ಯೇಕಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ವೈಯಕ್ತಿಕ ವರ್ಚಸ್ಸು ಹಾಗೂ ಅಭಿವೃದ್ಧಿಯ ಬಣ್ಣನೆಯೊಂದಿಗೆ ಪಕ್ಷದ ತೆಕ್ಕೆಗೆ ಮತ್ತೆ ಕರೆತಂದಿದೆ.

ನೈತಿಕ ಸ್ಥೈರ್ಯ ಕಳೆದುಕೊಂಡಿರುವ ವಿರೋಧ ಪಕ್ಷಗಳು ಅಯೋಧ್ಯೆ ವಿಚಾರವಾಗಿ ಬಿಜೆಪಿ ಮೇಲೆ ದಾಳಿ ಮಾಡುವ ಸಾಧ್ಯತೆ ಕಡಿಮೆ. ವ್ಯತಿರಿಕ್ತ ಚುನಾವಣಾ ಫಲಿತಾಂಶದಿಂದಾಗಿ ಜರ್ಜರಿತವಾದ ಕಾಂಗ್ರೆಸ್ ಪಕ್ಷ, ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದು, ಬಿಜೆಪಿ ಯಶಸ್ವಿಯಾಗಿ ಕಟ್ಟಿರುವ ಅಲ್ಪಸಂಖ್ಯಾತರನ್ನು ಓಲೈಸುವ ಪಕ್ಷ ಎಂಬ ಹಣೆಪಟ್ಟಿ ಯನ್ನು ಕಳಚಿಕೊಳ್ಳುವ ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡುತ್ತಿದೆ.

ಮಸೀದಿಗಳು ಪ್ರಾರ್ಥನೆಗೆ ಕರೆ ನೀಡಲು (ಅಝಾನ್) ಧ್ವನಿವರ್ಧಕಗಳನ್ನು ಬಳಸುವ ಸಂಬಂಧ ಗಾಯಕ ಸೋನು ನಿಗಮ್ ವ್ಯಕ್ತಪಡಿಸಿದ ಅಭಿಪ್ರಾಯದಿಂದ ಉದ್ಭವಿಸಿರುವ ವಿವಾದದ ಬಗ್ಗೆ ಮೌನ ವಹಿಸಿರುವುದರಿಂದ ಆ ಪಕ್ಷದ ನಿಲುವು ಸ್ಪಷ್ಟವಾಗಿದೆ. ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ಮಂಗಳವಾರ ಮೌನ ಮುರಿದು, ‘‘ಅಝಾನ್ ಎನ್ನುವುದು ನಮಾಝ್‌ಗೆ ಅಗತ್ಯ ಅಂಶ. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಧ್ವನಿವರ್ಧಕಗಳು ಆಲ್ಲ’’ ಎಂದು ಟ್ವೀಟ್ ಮಾಡಿದ್ದಾರೆ.

ವಿರೋಧ ಪಕ್ಷದ ಮೌಲ್ಯಮಾಪನದ ಪ್ರಕಾರ ಹಿರಿಯ ಮುಖಂಡ ಎ.ಕೆ.ಆ್ಯಂಟನಿ 2014ರ ಲೋಕಸಭಾ ಚುನಾವಣೆ ಬಳಿಕ ನಡೆದ ಪಕ್ಷದ ಸಭೆಯಲ್ಲಿ ಸ್ಪಷ್ಟಪಡಿಸಿದಂತೆ, ಪಕ್ಷವು ಅಲ್ಪಸಂಖ್ಯಾತರನ್ನು ಓಲೈಸುವ ನೀತಿ ಚುನಾವಣೆಗಳಲ್ಲಿ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಿತು. ಈ ಅಭಿಪ್ರಾಯವನ್ನು ಪಕ್ಷದ ಹಲವರು ಅನುಮೋದಿಸಿದರು. ಇದು ಕಾಂಗ್ರೆಸ್‌ನ ಉತ್ಸಾಹವನ್ನು ಜಗಜ್ಜಾಹೀರುಗೊಳಿಸಿದ್ದು, ಉಪಾಧ್ಯಕ್ಷ ರಾಹುಲ್ ಗಾಂಧಿಯವರು ದೇವಸ್ಥಾನಗಳಿಗೆ ನೀಡುವ ಭೇಟಿಗೆ ವ್ಯಾಪಕ ಪ್ರಚಾರ ನೀಡಲು ನಿರ್ಧರಿಸಿತು.

ಹಿಂದುತ್ವ ವಿಚಾರದಲ್ಲಿ ಬಹುತೇಕ ಎಲ್ಲ ವಿರೋಧ ಪಕ್ಷಗಳು ರಕ್ಷಣಾತ್ಮಕ ಕ್ರಮಕ್ಕೆ ಮುಂದಾಗಿವೆ ಮತ್ತು ಇಂಥ ವಿವಾದಗಳನ್ನು ಬಯಲಿಗೆಳೆಯುವ ಕ್ರಮವನ್ನು ರಾಜಕೀಯ ಎದುರಾಳಿಗಳು ತಮ್ಮ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಬಳಸಿಕೊಳ್ಳುತ್ತವೆ ಎಂಬ ಅಂಜಿಕೆ ಇದೆ. ಉದಾಹರಣೆಗೆ ಅಯೋಧ್ಯೆ ವಿವಾದದ ಬಗ್ಗೆ ಭಾಷಣ ಮಾಡಿದಷ್ಟೂ ಬಿಜೆಪಿಗೆ ಲಾಭ ಎಂಬ ಅಭಿಪ್ರಾಯ ಮುಂದಿನ ಎರಡು ವರ್ಷಗಳ ಅವಧಿಗೂ ಮುಂದುವರಿಯುವ ಸಾಧ್ಯತೆ ಇದ್ದು, 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆ ವರೆಗೂ ಇದೇ ಸ್ಥಿತಿ ಇರಲಿದೆ.

ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯದ ತೀರ್ಪು ಏನೇ ಬಂದರೂ ಬಿಜೆಪಿ ಅದರ ಲಾಭ ಎತ್ತುವ ಸಾಧ್ಯತೆಯೇ ಹೆಚ್ಚು. ಬಿಜೆಪಿ ನಾಯಕರ ವಿರುದ್ಧದ ಆರೋಪಗಳು ಸಾಬೀತಾದರೆ, ಅದನ್ನು ಪಕ್ಷದ ಹಿಂದುತ್ವದ ಹಣೆಪಟ್ಟಿಗೆ ದೊರೆತ ಒಪ್ಪಿಗೆಯ ಮುದ್ರೆಯಾಗಿ ಬಹಳಷ್ಟು ಮಂದಿ ಬಿಂಬಿಸುವ ಸಾಧ್ಯತೆ ಇದೆ. ಒಂದು ವೇಳೆ ನ್ಯಾಯಾಲಯ ಇವರನ್ನು ಆರೋಪಮುಕ್ತಗೊಳಿಸಿದರೆ, ಕೇಸರಿ ಪಕ್ಷ ತನ್ನ ಅಮಾಯಕತೆಯನ್ನು ಸಮರ್ಥಿಸಿಕೊಳ್ಳುವ ಮತ್ತು ತನ್ನ ಜಾತ್ಯತೀತ ತತ್ವಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ವಿರೋಧ ಪಕ್ಷಗಳು ಮಾಡಿದವು ಎಂಬ ಕಾರಣಕ್ಕೆ ಅಣಕವಾಡುವ ಸಾಧ್ಯತೆ ಇದೆ.

ತಕ್ಷಣಕ್ಕೆ ಬಿಜೆಪಿ ಹಾಗೂ ನರೇಂದ್ರ ಮೋದಿ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೂ, ಇವು ಆಡಳಿತಾತ್ಮಕ ಸ್ವರೂಪದ ನಿರ್ಧಾರಗಳು. ನ್ಯಾಯಾಲಯ ವಿಚಾರಣೆ ಎದುರಿಸುತ್ತಿರುವ ಹಿಂದುತ್ವದ ಪ್ರತಿರೂಪ ಎನಿಸಿದ ಉಮಾಭಾರತಿ ಯವರನ್ನು ಸಚಿವರಾಗಿ ಉಳಿಸಿಕೊಳ್ಳಬೇಕೇ ಎನ್ನುವುದು ಪ್ರಧಾನಿ ವಿವೇಚನೆಗೆ ಬಿಟ್ಟ ನಿರ್ಧಾರ. ಮೋದಿ ಹಾಗೂ ಬಿಜೆಪಿಗೆ ಎದುರಾಗುವ ಇನ್ನೊಂದು ಪ್ರಶ್ನೆ ಎಂದರೆ, ಕಲ್ಯಾಣ್ ಸಿಂಗ್ ಅವರನ್ನು ಜೈಪುರ ರಾಜಭವನದಲ್ಲಿ ಮುಂದುವರಿಯಲು ಅನುವು ಮಾಡಿಕೊಡಬೇಕೇ ಎನ್ನುವುದು. ರಾಜ್ಯಪಾಲರಾಗಿ ಅವರು ಸಂವಿಧಾನಾತ್ಮಕ ವಿಶೇಷಾಧಿಕಾರವನ್ನು ಹೊಂದಿರುವ ಹಿನ್ನೆಲೆಯಲ್ಲಿ, ಅವರ ಅಧಿಕಾರಾವಧಿ ಮುಗಿದ ಬಳಿಕ ಅವರ ವಿಚಾರಣೆಯನ್ನು ನಡೆಸಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಮೋದಿ ಸಾರ್ವಜನಿಕ ಜೀವನದಲ್ಲಿ ನೈತಿಕತೆಯನ್ನು ಪ್ರತಿಪಾದಿಸುತ್ತಾ ಬಂದಿದ್ದು, ಕಲ್ಯಾಣ್ ಸಿಂಗ್ ಪ್ರಕರಣದಲ್ಲಿ ಮುಂದಿನ ನಡೆ ಬಗ್ಗೆ ಅವರು ಸಂದಿಗ್ಧತೆಯನ್ನು ಎದುರಿಸಬೇಕಾಗಬಹುದು.

Writer - ಡಿ.ಕೆ.ಸಿಂಗ್

contributor

Editor - ಡಿ.ಕೆ.ಸಿಂಗ್

contributor

Similar News

ಜಗದಗಲ
ಜಗ ದಗಲ