ಟಿಟಿವಿ ದಿನಕರನ್ ಪೊಲೀಸ್ ಠಾಣೆಗೆ ಹಾಜರು
Update: 2017-04-22 08:40 GMT
ಹೊಸದಿಲ್ಲಿ, ಎ.22: ಎಐಎಡಿಎಂಕೆ ಪಕ್ಷದ ಎರಡೆಲೆ ಚಿನ್ಹೆ ಉಳಿಸಿಕೊಳ್ಳಲು ಚುನಾವಣಾ ಆಯೋಗಕ್ಕೆ ಪ್ರಭಾವ ಬೀರಲು ಚುನಾವಣಾ ಧಿಕಾರಿಗಳಿಗೆ ಐವತ್ತು ಕೋಟಿ ರೂ. ಲಂಚ ನೀಡಲೆತ್ನಿಸಿದರೆಂಬ ಆರೋಪ ಹೊತ್ತಿರುವ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ದಿಲ್ಲಿ ಕ್ರೈಮ್ ಬ್ರ‍್ಯಾಂಚ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಚಾಣಕ್ಯಪುರಿಯಲ್ಲಿರುವ ದಿಲ್ಲಿ ಕ್ರೈಮ್ ಬ್ರ‍್ಯಾಂಚ್ ಪೊಲೀಸ್ ಠಾಣೆಗೆ ದಿನಕರನ್ ಅಗಮಿಸಿ ವಿಚಾರಣೆಗೆ ಹಾಜರಾದರು.
ಲಂಚ ಪ್ರಕರಣದಲ್ಲಿ ಶುಕ್ರವಾರ ರಾತ್ರಿ ಪೊಲೀಸರು ದಿನಕರನ್‌ಗೆ ಸಮನ್ಸ್ ಜಾರಿ ಮಾಡಿದ್ದರು