ಶಿಕ್ಷಣ ವ್ಯವಸ್ಥೆಗೂ ಹಬ್ಬಿದ ಆತ್ಮಹತ್ಯೆ ಪಿಡುಗು

Update: 2017-05-08 18:29 GMT
Editor : ಕೆ.ಎಂ.

ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ನಿಧಾನವಾಗಿ ಆತ್ಮಹತ್ಯೆ ಎಂಬ ಸಾಂಕ್ರಾಮಿಕ ಹಬ್ಬುತ್ತಿದೆ. ಆದರೆ ಇದು ಎಷ್ಟು ಮನ ಸೆಳೆಯಬೇಕೋ ಅಷ್ಟೊಂದು ಗಮನ ಸೆಳೆದಿಲ್ಲ. ಶಿಕ್ಷಣ ತಜ್ಞರು ಹಾಗೂ ಸರಕಾರ ಈ ಸಮಸ್ಯೆಯನ್ನು ಬಗೆಹರಿಸಲು ವಿಲರಾಗಿದ್ದು, ಇದು ಆತಂಕಕಾರಿ ಪ್ರಮಾಣದಲ್ಲಿ ಬೆಳೆಯುತ್ತಿದೆ.

ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋದ ಇತ್ತೀಚಿನ ಅಂಕಿ ಅಂಶಗಳನ್ನೊಮ್ಮೆ ಗಮನಿಸಿ. ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. 2015ರಲ್ಲಿ ಸುಮಾರು 9 ಸಾವಿರ ವಿದ್ಯಾರ್ಥಿಗಳು ತಮ್ಮ ಜೀವ ಕಳೆದುಕೊಂಡಿದ್ದಾರೆ. 2011ರಿಂದ 2015ರ ಅವಯಲ್ಲಿ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 40 ಸಾವಿರಕ್ಕೆ ತಲುಪಿದೆ. ಆತ್ಮಹತ್ಯೆ ಪ್ರಕರಣಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ರಾಜ್ಯದಲ್ಲಿ 2015ರಲ್ಲಿ 1,230 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಮಿಳುನಾಡು ಮತ್ತು ಛತ್ತೀಸ್‌ಗಡ ಕ್ರಮವಾಗಿ ಎರಡು ಮತ್ತು ಮೂರನೆ ಸ್ಥಾನದಲ್ಲಿದ್ದು, ಕ್ರಮವಾಗಿ 955 ಮಂದಿ ಮತ್ತು 730 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಭಾರತದ ಐಐಟಿಗಳಲ್ಲಿ ಎಷ್ಟು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಕೃತ ಅಂಕಿ ಅಂಶಗಳ ದಾಖಲೆಯನ್ನು ನಿರ್ವಹಿಸುವ ಯಾವುದೇ ಸಂಸ್ಥೆಗಳಿಲ್ಲ. ಐಐಟಿ ಮದ್ರಾಸ್‌ನ ಹಳೆ ವಿದ್ಯಾರ್ಥಿ ರಾಮ್ ಕೃಷ್ಣಸ್ವಾಮಿ ತಮ್ಮ ಬ್ಲಾಗ್‌ನಲ್ಲಿ ಹೇಳಿರುವ ಪ್ರಕಾರ, ಐಐಟಿಯಲ್ಲಿ 1981ರಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 83. ದೇಶದ ಐಐಟಿಗಳಿಗೆ ಪ್ರವೇಶ ಪಡೆಯುವವರು ದೇಶದ ಅತ್ಯುತ್ತಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಎನ್ನುವುದು ನಿರ್ವಿವಾದ. ಇಂಥ ಭಯಾನಕ ಸ್ಥಿತಿ ಇಂಥ ಸಂಸ್ಥೆಗಳಲ್ಲಿ ಮುಂದುವರಿಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಕೆಲ ಧನಾತ್ಮಕ ಕ್ರಮಗಳು ಕೊನೆಗೂ ಕಾರ್ಯರೂಪಕ್ಕೆ ಬಂದಂತಿವೆ.

ದಿಲ್ಲಿ ಐಐಟಿ ಈ ವಾರ ತನ್ನ ಪಠ್ಯಕ್ರಮವನ್ನು ಪರಿಷ್ಕರಿಸಲು ನಿರ್ಧರಿಸಿದೆ. ಈ ಮೂಲಕ ಪ್ರಯೋಗಗಳಿಗೆ, ಸಿದ್ಧಾಂತ ಅಥವಾ ಪಠ್ಯಕ್ಕಿಂತ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಹೀಗೆ ಪಠ್ಯದಿಂದ ಪ್ರಯೋಗಕ್ಕೆ ಹೆಚ್ಚು ಒತ್ತು ನೀಡಿರುವುದು ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಗಣನೀಯ ಮಟ್ಟದಲ್ಲಿ ಕಡಿಮೆ ಮಾಡಲು ಅನುಕೂಲವಾಗಲಿದೆ.

ಈ ಕ್ರಮಕ್ಕೆ ಪೂರಕವಾಗಿ, ಐಐಟಿ ಮಂಡಳಿಯ ಇನ್ನೊಂದು ಕ್ರಮವೆಂದರೆ, ಎಲ್ಲ ಐಐಟಿ ಸಂಸ್ಥೆಗಳಲ್ಲಿ ಒಂದು ಕ್ಷೇಮ ಕೇಂದ್ರವನ್ನು ಸ್ಥಾಪಿಸಲು ದೇಶದ ಎಲ್ಲ 23 ಐಐಟಿಗಳ ಆಡಳಿತ ಮಂಡಳಿಗಳು ನಿರ್ಧರಿಸಿರುವುದು. ಅತ್ಯಕ ಸ್ಪರ್ಧಾತ್ಮಕ ಪರಿಸರ, ಅಕ ವೇತನದ ಉದ್ಯೋಗವನ್ನು ಪಡೆಯುವ ಒತ್ತಡ, ಅದ್ಭುತವಾದ ಶೈಕ್ಷಣಿಕ ಸಾಧನೆ, ಮಾದಕ ವ್ಯಸನ ಸಮಸ್ಯೆಗಳು ಮತ್ತಿತರ ಸಮಸ್ಯೆಗಳು ವಿದ್ಯಾರ್ಥಿಗಳ ವಿಶ್ವಾಸ ಹಾಗೂ ಆತ್ಮಗೌರವವನ್ನು ಕುಂದಿಸುತ್ತವೆ. ಇದು ಕೇವಲ ಐಐಟಿ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರದೇ ಇಡೀ ದೇಶದ ಶಿಕ್ಷಣ ವಲಯದಲ್ಲಿ ಈ ವಾತಾವರಣ ಇದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಸಣ್ಣ ಹೆಜ್ಜೆಗಳು ಖಂಡಿತಾ ಸ್ವಾಗತಾರ್ಹ. ಆದರೆ, ಸಮಗ್ರ ನೀತಿ ಆಧರಿತ ಕ್ರಮಗಳನ್ನು ಕೈಗೊಳ್ಳುವವರೆಗೂ ಆತ್ಮಹತ್ಯೆಯಂಥ ಪಿಡುಗು ಕೊನೆಗೊಳ್ಳುವುದು ಕಷ್ಟ.

Writer - ಕೆ.ಎಂ.

contributor

Editor - ಕೆ.ಎಂ.

contributor

Similar News

ಜಗದಗಲ
ಜಗ ದಗಲ