ಪ್ರಥಮ ಮಹಿಳಾ ಏರೋನಾಟಿಕಲ್ ಇಂಜಿನಿಯರ್

Update: 2017-06-09 18:15 GMT

ಬಿ. ರಂಗನಾಯಕಮ್ಮ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿಇ ಪದವಿ ಪಡೆದ ಪ್ರಥಮ ಮಹಿಳೆ. ಮುಂದೆ ಸಂಶೋಧನೆ ಮಾಡಿ ಪ್ರಥಮ ಮಹಿಳಾ ಏರೋನಾಟಿಕಲ್ ಇಂಜಿನಿಯರ್ ಎಂಬ ಕೀರ್ತಿಗೆ ಭಾಜನರಾದವರು. ಕಳೆದ ಶತಮಾನದ 60ರ ದಶಕ, ಮೈಸೂರಿನ ಯುವತಿಯೊಬ್ಬಳು ಇಂಜಿನಿಯರಿಂಗ್ ಕಾಲೇಜಿಗೆ ಸೇರಲು ಬಂದಾಗ ಇಡೀ ಕಾಲೇಜು ಅಚ್ಚರಿಯಿಂದ ನೋಡಿತ್ತು. ಅವರ ಸಾಧನೆಯ ಹಾದಿಯನ್ನು ಪರಿಚಯಿಸಿದ್ದಾರೆ ಬಿ. ಎಸ್. ಮಯೂರ ಅವರು. ‘ಬಿ. ರಂಗನಾಯಕಮ್ಮ-ಪ್ರಥಮ ಮಹಿಳಾ ಏರೋನಾಟಿಕಲ್ ಎಂಜಿನಿಯರ್’ ಕೃತಿ ಒಬ್ಬ ಮಹಿಳೆ ಸಾಧಿಸಿದರೆ ಯಾವ ಎತ್ತರಕ್ಕೂ ಏರಬಲ್ಲಳು ಎನ್ನುವುದನ್ನು ಕಥನ ರೂಪದಲ್ಲಿ ನಿರೂಪಿಸು ತ್ತದೆ. ಒಬ್ಬ ಮಹಿಳೆ ಉನ್ನತ ವಿದ್ಯಾಭ್ಯಾಸ ಕಲಿಯುವುದೇ ವಿಶೇಷ ಎನ್ನುವಂತಹ ಸಂದರ್ಭ ದಲ್ಲಿ, ಆಕೆ ಎಂಜಿಯರ್ ಕಲಿತು, ಪ್ರತಿವರ್ಷವೂ ಪ್ರಥಮ ಸ್ಥಾನ ಪಡೆದು, ಅಂತಿಮ ವರ್ಷದಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆಯಾಗಿರುವುದು ಒಂದು ಐತಿಹಾಸಿಕ ವಿಷಯವೇ. ಆಕೆಯ ಬಾಲ್ಯ, ಅವರ ಕಲಿಯುವಿಕೆ ಹಂತದಲ್ಲಿ ಸ್ಫೂರ್ತಿಯಾದ ವ್ಯಕ್ತಿ ಗಳು, ಇಂಜಿಯರ್ ಕಾಲೇಜು ಸೇರಲು ಕಾರಣರಾದವರ ಕುರಿತಂತೆಯೂ ಈ ಕೃತಿಯಲ್ಲಿ ವಿವರಗಳಿವೆ. ರಾಷ್ಟ್ರಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರ ಸಾಧನೆ, ಈ ಸಂದರ್ಭದಲ್ಲಿ ಇವರು ಎದುರಿಸಿದ ಸವಾಲುಗಳನ್ನೂ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಲೇಖಕಿ ನೇಮಿಚಂದ್ರ ಅವರು ಮುನ್ನುಡಿಯಲ್ಲಿ ಹೇಳುವಂತೆ, ಮಹಿಳಾ ಪರಂಪರೆಯ ಒಂದೊಂದು ಕತೆಯೂ ಅಮೂಲ್ಯವಾಗಿದೆ. ರಂಗನಾಯಕಮ್ಮನ ಬದುಕನ್ನು ಒಟ್ಟಾಗಿ ಓದುವುದರಿಂದ ಇನ್ನಷ್ಟು ಮಹಿಳೆಯರಿಗೆ ಅದು ಸ್ಫೂತಿ ರ್ಯಾಗುತ್ತದೆ. ಇಂದಿನ ಹೆಣ್ಣು ಮಕ್ಕಳ ಆತ್ಮವಿಶ್ವಾಸ ಮತ್ತು ಯಶಸ್ಸಿನ ಹಿಂದೆ ರಂಗನಾಯಕಮ್ಮನಂತಹ ಮೊದಲ ಗಿತ್ತಿಯರ ಶ್ರಮ, ದಿಟ್ಟತನ ಇದೆ ಎಂಬುದನ್ನು ನಾವು ಮರೆಯುವಂತಿಲ್ಲ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 40 ರೂಪಾಯಿ..
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News