ಚಾರಣಿಗರ ಮಾರ್ಗದರ್ಶಿ ಯೂತ್ ಹಾಸ್ಟೆಲ್ಸ್

Update: 2017-06-11 06:28 GMT

ದೇಶ ಸುತ್ತು, ಕೋಶ ಓದು ಎಂಬ ಮಾತು ಜನಜನಿತ, ಪ್ರಕೃತಿ ಪರಿಸರಗಳ ನಡುವೆ ನಡೆದಾಡುತ್ತಾ ಸೃಷ್ಟಿಯ ದಿವ್ಯ ಸೌಂದರ್ಯವನ್ನು ತಾದಾತ್ಮ್ಯತೆಯಿಂದ ಅನುಭವಿಸುವ ಅವಕಾಶ ಕಲ್ಪಿಸುವ ಚಾರಣ ಎಲ್ಲಾ ವಯೋಮಾನದವರನ್ನು ಸೆಳೆಯುವ ಹವ್ಯಾಸ. ವೀಕೆಂಡ್, ಪ್ರವಾಸ, ಪ್ಯಾಕೇಜ್ ಟೂರ್‌ಗಳಿಗಿಂತ ವಿಭಿನ್ನ ಅನುಭೂತಿ ನೀಡುವ ಚಾರಣಕ್ಕೆ ದೇಶದಾದ್ಯಂತ ಅತ್ಯಲ್ಪ ದರದಲ್ಲಿ ಅನುಕೂಲತೆ ಕಲ್ಪಿಸುವ ಅಂತಾರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ ಯೂತ್ ಹಾಸ್ಟೆಲ್ಸ್. ಸುಮಾರು ನೂರಕ್ಕೂ ಹೆಚ್ಚು ದೇಶಗಳಲ್ಲಿ ಶಾಖೆಗಳನ್ನು ಹೊಂದಿದ್ದು ದೇಶದ ಎಲ್ಲಾ ರಾಜ್ಯಗಳಲ್ಲಿ ಚಾರಣ ಕಾರ್ಯಕ್ರಮಗಳನ್ನು ಆಯೋಜಿಸಿ ಕಡಿಮೆ ದರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿ ಯುವಜನರಿಗೆ ಉತ್ತೇಜನ ನೀಡಲಾಗುತ್ತಿದೆ.

ಯೂತ್ ಹಾಸ್ಟೆಲ್ಸ್ ಚಳವಳಿಯ ನೇತಾರ ಜರ್ಮನಿಯ ಶಿಕ್ಷಕ ರಿಚರ್ಡ್ ಷೆರ್‌ಮನ್ 1909 ರಲ್ಲಿ ಯುವಜನರಲ್ಲಿ ಪರಿಸರ ಪ್ರೀತಿ, ಕಾಳಜಿಗಳನ್ನು ಮೂಡಿಸುವ ಸಲುವಾಗಿ ಶಾಲಾ ಆವರಣಗಳನ್ನು ತಂಗಣೆಗೆ ಅನುಕೂಲವಾಗುವಂತೆ ಬಳಸಿ ಕೊಂಡು ಚಾರಣ ಚಟುವಟಿಕೆಗಳನ್ನು ನಡೆಸುವ ಮೂಲಕ ಪ್ರಾರಂಭಿಸಿದರು. ನಿಧಾನವಾಗಿ ವಿಶ್ವದಾದ್ಯಂತ ಈ ಕಾರ್ಯಕ್ರಮ ಜನಪ್ರಿಯಗೊಂಡಿತು. ಭಾರತದಲ್ಲಿ ಮೊದಲಿಗೆ ಸ್ಕೌಟ್ ಚಳವಳಿಯೊಂದಿಗೆ ಅಡಿಯಿರಿಸಿದ ಯೂತ್ ಹಾಸ್ಟೆಲ್ಸ್ ಅನ್ನು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಕೆಲವು ಉತ್ಸಾಹಿ ಯುವಜನರು 1949 ರಲ್ಲಿ ಪ್ರಾರಂಭಿಸಿದರು. ದಿಲ್ಲಿಯ 1956ರ ರಾಷ್ಟ್ರೀಯ ಸಮ್ಮೇಳನದ ಮೂಲಕ ಚಳವಳಿ ದೇಶದಾದ್ಯಂತ ಪಸರಿಸಿತು. 1970 ರಲ್ಲಿಯೂತ್ ಹಾಸ್ಟೆಲ್ಸ್ ಪ್ರತಿಷ್ಠಾನ ಸ್ಥಾಪನೆಗೊಂಡು ಹೊಸದಿಲ್ಲಿಯ ಚಾಣಕ್ಯಪುರಿಯಲ್ಲಿ 120 ಹಾಸಿಗೆಗಳ ಸಾಮರ್ಥ್ಯದ ಕಟ್ಟಡ ಆಡಳಿತ ಭವನ ನಿರ್ಮಾಣಗೊಂಡಿತು. ಇಂದು ಭಾರತದಾದ್ಯಂತ ಇನ್ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಯೂತ್ ಹಾಸ್ಟೆಲ್ಸ್ ಸುಸಜ್ಜಿತ ವಸತಿ ಆಶ್ರಯಗಳನ್ನು ಕಲ್ಪಿಸುತ್ತಿದೆ. ಕಳೆದ ವರ್ಷ ಮೈಸೂರಿನಲ್ಲಿ ಆರು ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡವನ್ನು ಪ್ರಾರಂಭಿಸಲಾಯಿತು.

ರಾಷ್ಟೀಯ ಹಿಮಾಲಯ ಚಾರಣ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಚಂದ್ರಖನಿ ಪಾಸ್, ಸರ್‌ಪಾಸ್, ದಿಯೋ ತಿಬ್ಬ ಬೇಸ್, ಡಾಲ್‌ಹೌಸಿ, ಲೇಹ್-ಲಡಾಕ್, ಕಾಶ್ಮೀರ್ ಸರೋವರ ಚಾರಣ, ಹಮ್ತಾಪಾಸ್- ಚಂದ್ರತಾಲ್ ಚಾರಣಗಳು ಪ್ರತೀವರ್ಷ ಹತ್ತಾರು ಸಾವಿರ ಯುವಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಕೇವಲ ಐದಾರು ಸಾವಿರ ವೆಚ್ಚದಲ್ಲಿ ಎಂಟುಹತ್ತು ದಿನಗಳ ಕಾಲ ಊಟ, ವಸತಿ, ಮಾರ್ಗದರ್ಶಕರನ್ನು ನೀಡಿ ಸುರಕ್ಷಿತವಾಗಿ ತಲುಪಿಸುವ ಈ ಚಾರಣ ಕಾರ್ಯಕ್ರಮಗಳು ಅತ್ಯಂತ ಜನಪ್ರಿಯವಾಗಿವೆ.

ಯೂತ್ ಹಾಸ್ಟೆಲ್ಸ್ ಚಳವಳಿಯ ಧ್ಯೇಯವೇ ನೆಂದರೆ, ದೇಶದ ಲಕ್ಷಾಂತರ ಯುವ ಜನತೆಯಲ್ಲಿ ಸಾಹಸ ಮನೋ ಭಾವ ಬೆಳೆಸಿ, ಪ್ರವಾಸ, ಪ್ರಯಾಣ, ಚಾರಣ, ಆರೋಗ್ಯ, ಶಿಕ್ಷಣ, ರಾಷ್ಟೀಯ ಭಾವೈಕ್ಯ, ಪರಿಸರ ಪ್ರೇಮಗಳನ್ನು ಉತ್ತೇಜಿಸುವುದು, ಅತ್ಯಲ್ಪ ದರಗಳಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ದೇಶ ಸುತ್ತುವ ಅವಕಾಶ ನೀಡುವುದು. ಜೇನುಹುಳ ವೊಂದು ಹಾರಾಡುತ್ತಾ ಸುತ್ತಿ ರುಚಿಯಾದ ಮಧುವನ್ನು ಸಂಗ್ರಹಿಸುವಂತೆ ಚಾರಣಿಗ ಅನೇಕ ಸ್ಥಳಗಳಲ್ಲಿ ನಡೆದಾಡುವ ಮೂಲಕ ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರ, ಭಾಷೆ, ಇತಿಹಾಸ ಪರಂಪರೆಗಳನ್ನು ಅರಿತುಕೊಳ್ಳುತ್ತಾನೆ, ಪ್ರಕೃತಿಯೆಡೆಗೆ ಪ್ರೀತಿಯನ್ನು ಬೆಳೆಸಿ ಕೊಳ್ಳುತ್ತಾನೆ. ಇದೇ ಯೂತ್ ಹಾಸ್ಟೆಲ್ಸ್ ಚಳವಳಿಯ ಧ್ಯೇಯ ವಾಗಿದೆ.

ಯೂತ್ ಹಾಸ್ಟೆಲ್ಸ್ ಕಾರ್ಯ ಕ್ರಮಗಳನ್ನು ಪ್ರಮುಖ ವಾಗಿ ಐದು ಗುಂಪುಗಳಾಗಿ ವಿಭಾಗ ಮಾಡಬಹುದು. ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ಚಾರಣ ಕಾರ್ಯಕ್ರಮಗಳು, ಸ್ವಯಂಸೇವಾ ಚಟುವಟಿಕೆಗಳು, ಮೌಂಟೆನ್ ಬೈಕಿಂಗ್ (ಸೈಕ್ಲಿಂಗ್), ಫ್ಯಾಮಿಲಿ ಕ್ಯಾಂಪ್, ಮತ್ತು ನೇಚರ್ ಸ್ಟಡಿ ಕ್ಯಾಂಪ್. ಇವುಗಳ ವಿಶೇಷತೆಯೇನೆಂದರೆ ಪ್ರಕೃತಿ ಪರಿಸರಗಳಿಗೆ ಯಾವುದೇ ಹಾನಿಯಾಗದಂತೆ ಗ್ರಾಮೀಣ ಪ್ರದೇಶಗಳಲ್ಲಿ, ಹಿಮಾಲಯ ಗಿರಿಶಿಖರಗಳಲ್ಲಿ ಕಾಡು ಕಡಲುಗಳ ಪರಿಸರಗಳಲ್ಲಿ ನಡೆಸುವ ಚಾರಣ ಕಾರ್ಯಕ್ರಮಗಳಾಗಿವೆ.

ರಾಷ್ಟೀಯ ಹಿಮಾಲಯ ಚಾರಣ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಚಂದ್ರಖನಿ ಪಾಸ್, ಸರ್‌ಪಾಸ್, ದಿಯೋತಿಬ್ಬ ಬೇಸ್, ಡಾಲ್‌ಹೌಸಿ, ಲೇಹ್-ಲಡಾಕ್, ಕಾಶ್ಮೀರ್ ಸರೋವರ ಚಾರಣ, ಹಮ್ತಾಪಾಸ್- ಚಂದ್ರತಾಲ್ ಚಾರಣಗಳು ಪ್ರತೀವರ್ಷ ಹತ್ತಾರು ಸಾವಿರ ಯುವಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಕೇವಲ ಐದಾರು ಸಾವಿರ ವೆಚ್ಚದಲ್ಲಿ ಎಂಟುಹತ್ತು ದಿನಗಳ ಕಾಲ ಊಟ, ವಸತಿ, ಮಾರ್ಗ ದರ್ಶಕರನ್ನು ನೀಡಿ ಸುರಕ್ಷಿತವಾಗಿ ತಲುಪಿಸುವ ಈ ಚಾರಣ ಕಾರ್ಯಕ್ರಮಗಳು ಅತ್ಯಂತ ಜನಪ್ರಿಯವಾಗಿವೆ. ಇವುಗಳೊಂದಿಗೆ ಮಧುಮಲೈ ಅಭಯಾರಣ್ಯ, ಸೈಲೆಂಟ್ ವ್ಯಾಲಿ, ನೀಲಗಿರಿ ಟ್ರೆಕ್, ಕೊಡೈಕೆನಾಲ್, ಮುನ್ನಾರ್ ಟ್ರೆಕ್, ಗೋವಾ ಟ್ರೆಕ್, ಪಶ್ಚಿಮಘಟ್ಟ ಚಾರಣ, ರಾಜಸ್ಥಾನ್ ಡೆಸರ್ಟ್ ಟ್ರೆಕ್, ಮಿಜೋರಾಂ ಕೇವ್ ಎಕ್ಸ್‌ಪೆಡಿಷನ್, ರೂಪ್‌ಕುಂಡ್, ವ್ಯಾಲಿ ಆಫ್ ಫ್ಲವರ್ಸ್‌, ಅರುಣಾಚಲ ಪ್ರದೇಶ್ ಸಿಲ್ಕ್‌ರೂಟ್ ಟ್ರೆಕ್, ಅರಾವಳಿ ರಣಕ್‌ಪುರ್- ಕುಂಭಾಲ್‌ಘರ್ ಚಾರಣ, ಮಡಿಕೇರಿ, ಸಹ್ಯಾದ್ರಿ, ಚಾರಣಗಳು, ಕಾಲಕಾಲಕ್ಕೆ ತಕ್ಕಂತೆ ರಾಜ್ಯ ಶಾಖೆಗಳು ಆಯೋಜಿಸುವ ಚಾರಣ ಕಾರ್ಯಕ್ರಮಗಳಲ್ಲಿ ಎಲ್ಲಾ ವಯೋಮಾನದವರೂ ಪಾಲ್ಗೊಳ್ಳಬಹುದು. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಆಯೋಜಿಸುವ ಸೈಕ್ಲಿಂಗ್ ಕಾರ್ಯಕ್ರಮಗಳು ಯುವಜನರಲ್ಲಿ ರೋಮಾಂಚನ ಮೂಡಿಸಿ ಅದ್ಭುತ ಅನುಭವ ನೀಡುತ್ತವೆ. ಲೇಹ್- ಖರದೂಂಗ್ಲ ಪಾಸ್, ಲೇಹ್- ಶ್ರೀನಗರ, ಜಮ್ಮು-ಶ್ರೀನಗರ, ಡೆಸರ್ಟ್ ಸೈಕ್ಲಿಂಗ್, ಕಾರ್ಯಕ್ರಮಗಳು ಪ್ರತೀವರ್ಷನಿಯಮಿತವಾಗಿ ನಡೆಯುತ್ತಿವೆ. 15 ವರ್ಷದೊಳಗಿನ ಮಕ್ಕಳಿಗಾಗಿ ಮನಾಲಿ, ಧೋಬಿ, ಡಾಲ್‌ಹೌಸಿ ಮೊದಲಾದ ಕಡೆಗಳಲ್ಲಿ ಪ್ರಕೃತಿ ಅಧ್ಯಯನ ಶಿಬಿರಗಳನ್ನು ನಡೆಸಲಾಗುತ್ತಿದೆ. ಗಂಡ, ಹೆಂಡತಿ,ಇಬ್ಬರು ಮಕ್ಕಳನ್ನು ಒಳಗೊಂಡ ಕುಟುಂಬಕ್ಕೆ ಐದು ದಿನಗಳ ಫ್ಯಾಮಿಲಿ ಕ್ಯಾಂಪ್‌ಗಳನ್ನು ಮನಾನಿ, ಕುಲು, ಡಾಲ್‌ಹೌಸಿ, ಒಡಿಶಾ, ಪಶ್ಚಿಮ ಬಂಗಾಲ, ಲೇಹ್, ಕಾಶ್ಮೀರ, ಮೊದಲಾದ ಕಡೆಗಳಲ್ಲಿ ಆಯೋಜಿಸಲಾ ಗುತ್ತಿದೆ, ಒಂದು ಕುಟುಂಬಕ್ಕೆ ಐದು ಸಾವಿರ ಶುಲ್ಕವೆಂದರೆ ಆಶ್ಚರ್ಯವಾದರೂ ಸತ್ಯ. ಯೂತ್ ಹಾಸ್ಟಲ್ ಚಳವಳಿಯಲ್ಲಿ ತೊಡಗಿಸಿಕೊಳ್ಳುವ ಉತ್ಸಾಹಿ ಜನರಿಗೆ ಹಾಗೂ ವೈದ್ಯರಿಗೆ ಸ್ವಯಂಸೇವೆ ಮಾಡುವ ಅವಕಾಶವನ್ನು ಕಲ್ಪಿಸುವ ಕ್ಯಾಂಪ್ ಲೀಡರ್ ಕಾರ್ಯಕ್ರಮಗಳು ಜನಪ್ರಿಯ. ಆಸಕ್ತರು ಹೆಚ್ಚಿನ ವಿವರಗಳಿಗೆ yhaindia.org, yhai.org, yhaikarnataka.com, ಭೇಟಿ ನೀಡಬಹುದು. ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಆವರಣದಲ್ಲಿರುವ ರಾಜ್ಯಶಾಖೆ ದೂರವಾಣಿ ಸಂಖ್ಯೆ 080-22113491 ಸಂಪರ್ಕಿಸಬಹುದು.

ರಾಷ್ಟೀಯ ಹಿಮಾಲಯ ಚಾರಣ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಚಂದ್ರಖನಿ ಪಾಸ್, ಸರ್‌ಪಾಸ್, ದಿಯೋ ತಿಬ್ಬ ಬೇಸ್, ಡಾಲ್‌ಹೌಸಿ, ಲೇಹ್-ಲಡಾಕ್, ಕಾಶ್ಮೀರ್ ಸರೋವರ ಚಾರಣ, ಹಮ್ತಾಪಾಸ್- ಚಂದ್ರತಾಲ್ ಚಾರಣಗಳು ಪ್ರತೀವರ್ಷ ಹತ್ತಾರು ಸಾವಿರ ಯುವಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಕೇವಲ ಐದಾರು ಸಾವಿರ ವೆಚ್ಚದಲ್ಲಿ ಎಂಟುಹತ್ತು ದಿನಗಳ ಕಾಲ ಊಟ, ವಸತಿ, ಮಾರ್ಗದರ್ಶಕರನ್ನು ನೀಡಿ ಸುರಕ್ಷಿತವಾಗಿ ತಲುಪಿಸುವ ಈ ಚಾರಣ ಕಾರ್ಯಕ್ರಮಗಳು ಅತ್ಯಂತ ಜನಪ್ರಿಯವಾಗಿವೆ.

Writer - ಜಿ.ಎನ್. ಸತೀಶ್ ಕನಕಪುರ.

contributor

Editor - ಜಿ.ಎನ್. ಸತೀಶ್ ಕನಕಪುರ.

contributor

Similar News