ಭಾವುಕತೆಯ ಶಕ್ತಿ
ಭಾಗ -3
ಭಾವುಕತೆ ವರ್ಸಸ್ ಭಾವೋದ್ವೇಗ
ಭಾವುಕತೆಗೂ ಅಥವಾ ಭಾವತೀವ್ರತೆಗೂ ಭಾವೋದ್ವೇಗಕ್ಕೂ ವ್ಯತ್ಯಾಸ ವಿದೆ. ಈ ವ್ಯತ್ಯಾಸವನ್ನು ತಿಳಿಯದೇ ಹೋದರೆ ಮತ್ತೆ ಎಡವಟ್ಟಾಯಿತೆಂದೇ ಅರ್ಥ. ಭಾವುಕತೆಗೂ ಭಾವೋದ್ವೇಗಕ್ಕೂ ಬಹಳ ವ್ಯತ್ಯಾಸವಿದೆ. ಭಾವುಕತೆ ಯನ್ನು ಗಮನಿಸಲು ಕಲಿತವರು ಭಾವೋದ್ವೇಗಕ್ಕೆ ಸಾಮಾನ್ಯವಾಗಿ ಒಳಗಾಗು ವುದಿಲ್ಲ. ಭಾವುಕತೆಯ ತೀವ್ರತರವಾದ ಮತ್ತು ಮಾನಸಿಕವಾಗಿನಿಯಂತ್ರಣ ಕಳೆದುಕೊಳ್ಳುವಂತಹ ರೀತಿ ಭಾವೋದ್ವೇಗದಲ್ಲಿ ಉಂಟಾಗುತ್ತದೆ.
ಈಗ ಭಾವುಕತೆಯ ಸಾಮರ್ಥ್ಯಕ್ಕೂ ಮತ್ತು ಭಾವೋದ್ವೇಗದ ತೀವ್ರತೆಯ ನಡುವಿನ ವ್ಯತ್ಯಾಸಗಳನ್ನು ತಿಳಿದುಕೊಳ್ಳೋಣ.
ಮಕ್ಕಳು ತಮ್ಮ ಭಾವುಕತೆಯನ್ನು ಪ್ರದರ್ಶಿಸುವಾಗ ಅವರು ನಿರುದ್ವೇಗ ರಾಗಿದ್ದು, ಸಮಚಿತ್ತರಾಗಿದ್ದಾರೆಂದರೆ ಭಾವೋದ್ವೇಗಕ್ಕೆ ಒಳಗಾಗಿಲ್ಲ ಎಂದು ಅರ್ಥ. ಉದ್ವೇಗಕ್ಕೆ ಒಳಗಾಗಿ ತಮ್ಮ ಮಾತನ್ನು ಅಥವಾ ತಪ್ಪುಗಳನ್ನು ಸಮರ್ಥಿ ಸಲು ಅಥವಾ ಸಾಧಿಸಲು ಯತ್ನಿಸುತ್ತಿದ್ದರೆ ಅದು ಭಾವುಕತೆಯಾಗುವುದಿಲ್ಲ, ಹೊರತಾಗಿ ಭಾವೋದ್ವೇಗವಾಗುತ್ತದೆ. ಇಂಥಹ ಭಾವೋದ್ವೇಗ ಎಮೋಶನಲ್‌ಇಂಟಲಿಜೆನ್ಸ್‌ಗೆ ಸೇರುವುದಿಲ್ಲ. ಇದು ಮನಸ್ಥಿತಿಯ ಅಸಮತೋಲನದಿಂದ ಉಂಟಾಗುತ್ತದೆ. ಈ ಮೊದಲು ಹೇಳಿದಂತಹ ಮಕ್ಕಳ ವಿವಿಧ ರೀತಿಯ ಭಾವು ಕತೆಯ ಪ್ರದರ್ಶನಗಳಲ್ಲಿಯೂ ಕೂಡ ನೀವು ಭಾವುಕತೆ ಮತ್ತು ಭಾವೋದ್ವೇಗ ವನ್ನು ಗುರುತಿಸಬಹುದು.
ಭಾವುಕವಾಗಿ ಅವರು ಕೆಲಸಗಳಲ್ಲಿ ಅಥವಾ ವ್ಯಕ್ತಿ ಮಾಡುತ್ತಿರುವ ಕೆಲಸಗ ಳಲ್ಲಿ ಸಹಭಾಗಿಯಾಗಲು ಬಯಸುವಾಗ ಮುಕ್ತವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ. ಕುತೂಹಲ ತೋರುತ್ತಾರೆ. ನಮ್ಮ ನಿಲುವಿನಲ್ಲಿ ಮತ್ತು ಒಲವಿನಲ್ಲಿ ತಾವು ನಿಲ್ಲುವ ಆಸಕ್ತಿ (ಎಂಪತಿ) ತೋರಿಸುತ್ತಾರೆ. ವಿಶ್ವಾಸಾರ್ಹ ವಾಗಿರುತ್ತಾರೆ ಹಾಗೂ ವಿಶ್ವಾಸವನ್ನೂ ತೋರುತ್ತಾರೆ.
ಇವುಗಳನ್ನೆಲ್ಲಾ ಹೊಂದಿರುವಂತಹ ಭಾವುಕತೆ ಮಾತ್ರವೇ ಪ್ರಾಮಾಣಿ ಕವಾದ ಕಳಕಳಿಯಿಂದ ಕೆಲಸ ಮಾಡುವಂತಹ ಚಾತುರ್ಯವನ್ನು ಹೊಂದಿರುತ್ತದೆ. ಹಾಗೆಯೇ ಹಿರಿಯರಾ ದವರು ನೆನಪಿಡಬೇಕಾಗಿರು ವುದೇನೆಂದರೆ, ಈ ಮೇಲಿನ ಗುಣಗಳನ್ನು ನಾವು ಮಕ್ಕಳ ಬಳಿ ಹೊಂದಿದ್ದರೆ ಮಾತ್ರವೇ ಅದು ಅವರಿಂದ ಪ್ರತಿಸ್ಪಂದಿಸುವುದು. ಇಂಥಾ ಭಾವುಕತೆಯ ಬಲದಿಂದ ದೊಡ್ಡ ದೊಡ್ದ ಸಮಸ್ಯೆಗಳೂ ಕೂಡ ಮಂಜಿನ ಹಾಗೆ ಕರಗಿ ಹೋಗುತ್ತವೆ. ಅಲ್ಲದೇ, ಯಾರ್ಯಾರಿಂದಲೂ ಬಗೆ ಹರಿಯದ ಸಮಸ್ಯೆ ಭಾವುಕತೆಯ ಚತುರತೆಯನ್ನು ಬಳಸುವುದರಿಂದ ಯಶಸ್ವಿಯಾಗಿ ಸರಿಯಾಗುವುದು. ಆದ್ದರಿಂದ ಸಮಾಲೋಚಕರಿಗೆ ಈ ಭಾವುಕತೆಯ ಚಾತುರ್ಯದ ಅರಿವು ಬಹಳ ಮುಖ್ಯವಾಗುತ್ತದೆ.
ಧ್ವನಿಯಲ್ಲಿನ ಸ್ಪಷ್ಟತೆ, ಮುಖವನ್ನು ನೋಡುವ ರೀತಿ, ಕಣ್ಣುಗಳಲ್ಲಿನ ಪ್ರಾಮಾಣಿಕತೆ, ಆಕ್ರಮಣಕಾರಿಯಲ್ಲದ ಅಂಗಭಾಷೆ, ಗೌರವವನ್ನು ಮತ್ತು ಸಂಪೂರ್ಣ ಗಮನವನ್ನು ಸೂಚಿಸುವಂತಹ ಧ್ವನಿಯ ಏರಿಳಿತಗಳೆ ಲ್ಲವೂ ಭಾವುಕತೆಯ ಚಾತುರ್ಯವೇ ಆಗಿರುತ್ತದೆ. ಇದರಿಂದ (ಸಮಾಲೋಚನೆಯಲ್ಲಿ) ಕೇಳುಗರು ಹೇಳುವವರ ಮಾತುಗಳನ್ನು ಕೇಳುವುದಕ್ಕಷ್ಟೇ ಅಲ್ಲದೇ ಸ್ವೀಕರಿಸಲು ಕೂಡ ಸಿದ್ಧರಾಗಿರುತ್ತಾರೆ.
ಉಗ್ರ ಚೈತನ್ಯ
ಮಕ್ಕಳ ಭಾವುಕತೆಯನ್ನು ಹುರಿದುಂಬಿಸಲು ಅಥವಾ ಕೆಲಸದಲ್ಲಿ ಸಹಭಾಗಿತ್ವದ ಗುಣಮಟ್ಟವನ್ನು ಹೆಚ್ಚಿಸಲು ಅಗ್ರೆಸಿವ್ ಆಗಿ ಎನರ್ಜಿಟಿಕ್ ಆಗಬೇಕೆಂದು ಬಹಳಷ್ಟು ಜನರು ಭಾವಿಸಿರುತ್ತಾರೆ. ಹಾಗೆಯೇ ವರ್ತಿಸುವ ವರನ್ನು ಕಂಡು ಮಕ್ಕಳು ಅಥವಾ ಆ ಬಗೆಯ ಚೈತನ್ಯಕ್ಕೆ ಹೊರತಾದವರು ತಮ್ಮನ್ನು ಅಂತಹ ಜನರಿಂದ ಹೊರತುಪಡಿಸಿಕೊಂಡು ಬಿಡುತ್ತಾರೆ.
ಸಾಮೂಹಿಕ ಚಟುವಟಿಕೆಗಳಲ್ಲಿ ‘‘ಕಮಾನ್ ಕಮಾನ್, ನಿಮಗೆ ಇದನ್ನು ಮಾಡಕ್ಕೆ ಆಗಲ್ವಾ? ನಿಮ್ಮ ವಯಸ್ಸಲ್ಲಿ ನೀವು ಏನೇನೋ ಮಾಡಿ ಬಿಡಬಹುದು. ಈಗ ನೀನು ಈ ಭಾರವನ್ನು ಎತ್ತಿ ಒಗೆದು ಬಿಡುತ್ತೀಯಾ’’ ಎಂದು ಗಟ್ಟಿಯಾಗಿ ಮಾತಾಡಿಕೊಂಡು ಹುಮ್ಮಸ್ಸಿನಿಂದ ಹುರಿದುಂಬಿಸಲು ಯತ್ನಿಸುತ್ತಾರೆ. ಇದು ಹುರಿದುಂಬಿಸುವುದು ಎನ್ನುವುದಕ್ಕಿಂತ ಸಾಮರ್ಥ್ಯಕ್ಕೆ ಮೀರಿದ ಒತ್ತಡವನ್ನು ಹಾಕುವಂತ್ತಿರುತ್ತದೆ. ನೀರಿಗೆಸೆದರೇನೇ ಈಜು ಬರುವುದು ಎಂಬಂತಹ ಧೋರಣೆ ಅವರದು. ಇವರು ಭಾವೋದ್ವೇಗವನ್ನು ಉಂಟುಮಾಡುತ್ತಾರೆ. ಆದರೆ ಇದು ನಿಜಕ್ಕೂ ವ್ಯರ್ಥ. ಏಕೆಂದರೆ, ಆತನೇನೋ ಅನ್ಯಗ್ರಹದಿಂದ ಬಂದಿರುವವನು ಹಾಗೆ ವರ್ತಿಸುತ್ತಿದ್ದಾನೆ, ಆತನಿಗೆ ಮಾಡಲು ಸಾಧ್ಯವಾಗುತ್ತದೆ. ಆದರೆ ನಾನು ಎಂದಿಗೂ ಈ ಕೆಲಸವನ್ನು ಮಾಡಿಲ್ಲ. ಮಾಡಲಾಗುವುದೂ ಇಲ್ಲ ಎಂದು ಮಕ್ಕಳು ತಮ್ಮ ಹಳೆಯ ಅನುಭವದ ಆಧಾರದಲ್ಲಿಯೇ ತಮ್ಮ ಭಾವುಕತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾರೆ. ಒಂದು ವೇಳೆ ಯತ್ನಿಸಿದರೂ ಆಗುವ ಸಂಭವಗಳು ಕಡಿಮೆ.
ಜೊತೆಗೆ ಇಂತಹ ಉಗ್ರ ಚೈತನ್ಯವು ಆಯಾಸವನ್ನು ಉಂಟುಮಾಡುತ್ತದೆ. ಅದೇ ಬಗೆಯ ಚೈತನ್ಯವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಆ ವ್ಯಕ್ತಿಯ ನಿರ್ಗಮನದ ನಂತರ ಅದೇ ರೀತಿಯ ಉಗ್ರ ಚೈತನ್ಯವನ್ನು ತುಂಬಲು ಮಕ್ಕಳಿಗೆ ದೊರಕುವುದಿಲ್ಲ.
ಪ್ರಶಾಂತ ಚೈತನ್ಯ
ಇದು ಅಪೇಕ್ಷಿತವಾದಂತಹ ಚೈತನ್ಯ. ಒತ್ತಡವು ಕಡಿಮೆ ಇದ್ದು ಚೈತನ್ಯವು ಉನ್ನತ ಮಟ್ಟದಲ್ಲಿರುತ್ತದೆ. ಮಾನಸಿಕವಾದಂತಹ ಸ್ಥಿತಿಯೂ, ದೈಹಿಕವಾಗಿರುವಂತಹ ಒತ್ತಡವೂ ಸಲಿಲವಾಗಿದ್ದು, ಸಮಚಿತ್ತದಿಂದ ವಿಷಯವನ್ನು ಅಥವಾ ಸನ್ನಿವೇಶವನ್ನು ಗಮನಿಸಿಕೊಂಡು ಕೆಲಸ ಮಾಡುವುದು.
ಇದರಲ್ಲಿ ಭಾವುಕವಾಗಿ ಕೆಲಸದಲ್ಲಿ ಸಹಭಾಗಿತ್ವ ಉಂಟಾಗುತ್ತದೆ. ಎಚ್ಚರಿಕೆಯಿಂದ ಗಮನಿಸುವ ಒಂದು ಸಾಮಾನ್ಯ ಪ್ರಕ್ರಿಯೆ ಅಲ್ಲಿರುತ್ತದೆ. ಆವೇಗದಲ್ಲಿ, ಆವೇಶದಲ್ಲಿ ಕೆಲಸವನ್ನು ಸಾಧಿಸಲು ಹೋಗುವುದಲ್ಲ. ಶತಾಯಗತಾಯ ಮಾಡಿಯೇ ತೀರಿ ನಾನೊಂದು ಅಪ್ರತಿಮ ಸಾಧಕನ ಪಟ್ಟವನ್ನು ಪಡೆಯಬೇಕೆಂಬ ಉಗ್ರ ಆಸೆ ಇರುವುದಿಲ್ಲ. ಎಷ್ಟರಮಟ್ಟಿಗೆ ನಾನು ಕೆಲಸ ಮಾಡಲು ಸಾಧ್ಯವಾಗುವುದೋ ಎಂದು ನೋಡಿಕೊಳ್ಳುವ ಉತ್ಸಾಹ ಮತ್ತು ಹುಮ್ಮಸ್ಸು ಅಲ್ಲಿರಬೇಕೇ ಹೊರತು, ಅಸಾಧ್ಯವನ್ನು ಸಾಧಿಸುವಂತಹ ಅಪ್ರತಿಮ ವೀರ ನಾನು ಎಂಬ ಹುಂಬತನ ಅಲ್ಲಿರಬಾರದು. ಪ್ರಶಾಂತ ಚೈತನ್ಯದ ಮೊರೆ ಹೊಕ್ಕವರು ಭಾವುಕತೆಯ ಸಂಪೂರ್ಣ ಪ್ರಯೋಜನ ಪಡೆಯುತ್ತಾರೆ. ಪ್ರಶಾಂತ ಚೈತನ್ಯದಲ್ಲಿ ನಿಮಗೆ ಒತ್ತಡವಿರುವುದಿಲ್ಲ. ಗುರಿಯ ಸ್ಪಷ್ಟತೆ ಇರುತ್ತದೆ. ಆದರೆ ಹಟವಿರುವುದಿಲ್ಲ. ಮಾಡುವ ಆಶಯವಿರುತ್ತದೆ.
ಮಕ್ಕಳು ತಮ್ಮ ಭಾವುಕತೆಯನ್ನು ಪ್ರದರ್ಶಿಸುವಾಗ ಅವರು ನಿರುದ್ವೇಗರಾಗಿದ್ದು, ಸಮಚಿತ್ತರಾಗಿದ್ದಾರೆ ಎಂದರೆ ಭಾವೋದ್ವೇಗಕ್ಕೆ ಒಳಗಾಗಿಲ್ಲ ಎಂದು ಅರ್ಥ. ಉದ್ವೇಗಕ್ಕೆ ಒಳಗಾಗಿ ತಮ್ಮ ಮಾತನ್ನು ಅಥವಾ ತಪ್ಪುಗಳನ್ನು ಸಮರ್ಥಿಸಲು ಅಥವಾ ಸಾಧಿಸಲು ಯತ್ನಿಸುತ್ತಿದ್ದರೆ ಅದು ಭಾವುಕತೆಯಾಗುವುದಿಲ್ಲ, ಹೊರತಾಗಿ ಭಾವೋದ್ವೇಗವಾಗುತ್ತದೆ. ಇಂಥಹ ಭಾವೋದ್ವೇಗ ಎಮೋಶನಲ್ ಇಂಟಲಿಜೆನ್ಸ್‌ಗೆ ಸೇರುವುದಿಲ್ಲ. ಇದು ಮನಸ್ಥಿತಿಯ ಅಸಮತೋಲನದಿಂದ ಉಂಟಾಗುತ್ತದೆ.