ಬಿಜೆಪಿಯ ಕೀಳು ಭಾಷೆ

Update: 2017-07-16 05:28 GMT

ಪಾರ್ವತೀಶ ಬಿಳಿದಾಳೆ

ಸಾರ್ವಜನಿಕ ಜೀವನದಲ್ಲಿ ಇರುವವರು ತಮ್ಮ ನಿಲುವುಗಳನ್ನು ಮಂಡಿಸುವಾಗ ಅಥವಾ ತಮ್ಮ ಎದುರಾಳಿಗಳ ಅಭಿಪ್ರಾಯಗಳನ್ನು ವಿಮರ್ಷಿಸುವಾಗ ಎಂತಹ ಭಾಷೆ ಬಳಸುತ್ತಾರೆ ಎಂಬುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಒಬ್ಬರ ಆಲೋಚನೆ, ಅಭಿರುಚಿಗಳ ಲೆವೆಲ್‌ಅನ್ನು ನಿರೂಪಿಸುವುದು ಬಳಸುವ ಭಾಷೆ.

ಕರಾವಳಿ ಕರ್ನಾಟಕದ ಕೋಮು ಗಲಭೆಗಳ ವಿಷಯದಲ್ಲಿ ಒಂದು ಹೇಳಿಕೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ ‘ದಕ್ಷಿಣ ಕನ್ನಡದ ಜನ ಏನು ಪುಂಡರಲ್ಲ’ ಎಂದು ಇತ್ತೀಚೆಗೆ ಹೇಳಿದರು.

ಜನರನ್ನು ಕೆರಳಿಸುವ ದುರುದ್ದೇಶ ಇದರಲ್ಲಿರುವುದು ಹೌದು. ಶೋಭಾ ಕರಂದ್ಲಾಜೆಯವರಿಂದ ಉನ್ನತ ಯೋಚನೆಗಳ, ಗಾಂಭೀರ್ಯದ ಮಾತುಗಳನ್ನು ನಿರೀಕ್ಷಿಸಲು ಅಸಾಧ್ಯ. ಆದರೂ ಇಂತಹ ಮಾತುಗಳು ಯಾರಿಂದ, ಯಾಕೆ, ಯಾವಾಗ ಬರುತ್ತವೆಂಬುದು ಗಮನಿಸಬೇಕಾದ ವಿಷಯ.

ಕರಾವಳಿಯು ಒಟ್ಟಾರೆ ಸಾಮಾಜಿಕ ಸಂಯೋಜನೆಯಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರ ಸಂಖ್ಯೆ ಶೇಕಡಾ ನಲವತ್ತರಷ್ಟಿದೆ. ಚುನಾವಣೆಗಳಲ್ಲಿ ಇದನ್ನು ಹಿಂದೂ ಮುಸ್ಲಿಂ ಎಂದು ಖಡಕ್ಕಾಗಿ ವಿಭಜಿಸಲು ಸಾಧ್ಯವಾಗುವುದಾದರೆ ಅರವತ್ತು ನಲವತ್ತು ಎಂದಾಗುತ್ತದೆ. ಇಲ್ಲಿ ಬಿಜೆಪಿಯ ಲೆಕ್ಕಾಚಾರ ಏನೆಂದರೆ ಮೊದಲಿಗೆ ಹಿಂದೂ ಭಾವನೆ ನೆಪದಲ್ಲಿ ಜನರನ್ನು ತನ್ನ ಕಡೆ ಮಾಡಿಕೊಂಡು ನಂತರ ಕಾಂಗ್ರೆಸ್ ಮುಸ್ಲಿಮರ ಪರ ಹಾಗೂ ಹಿಂದೂ ವಿರೋಧಿ ಎಂದು ಬಿಂಬಿಸಿ ಚುನಾವಣಾ ಲಾಭ ಪಡೆಯುವುದೇ ಆಗಿದೆ. ಅಂದರೆ ಕಾಂಗ್ರೆಸ್ ಅನ್ನು ಅಲ್ಪಸಂಖ್ಯಾತ ಮತ ವಿಭಾಗಕ್ಕೆ ಮಾತ್ರ ಸೀಮಿತಗೊಳಿಸಿ ಹಿಂದೂ ಮತ ಬ್ಯಾಂಕ್ ವಲಯದಿಂದ ಕಾಂಗ್ರೆಸ್ ಅನ್ನು ಉಚ್ಚಾಟಿಸಬೇಕೆಂಬುದೇ ಬಿಜೆಪಿಯ ಕುತಂತ್ರವಾಗಿದೆ.

ವಾಸ್ತವದಲ್ಲಿ ಇದು ಮಹಾನ್ ಚುನಾವಣಾ ತಂತ್ರಗಾರಿಕೆ ಏನಲ್ಲ. ಕಾಂಗ್ರೆಸ್‌ಗಿರುವ ಇಚ್ಛಾಶಕ್ತಿ ಹಾಗೂ ಆತ್ಮವಿಶ್ವಾಸದ ಕೊರತೆಯೇ ಕರಾವಳಿಯಲ್ಲಿ ಆರೆಸ್ಸೆಸ್ ಇಷ್ಟು ಅನಾಹುತಗಳನ್ನು ನಡೆಸಿಕೊಂಡು ಬರಲು ಕಾರಣವಾಗಿದೆ.

ಕರಾವಳಿ ಕರ್ನಾಟಕದಲ್ಲಿ ಮೇಲ್ಜಾತಿ- ಮೇಲ್ವರ್ಗದ ಹಿಂದೂಗಳಲ್ಲಿ ಕೆಲವರು ಸಂಘ ಪರಿವಾರದೊಂದಿಗಿದ್ದರೂ ಅಲ್ಲಿ ಲಕ್ಷಗಟ್ಟಲೆ ದುಡಿಯುವ ವರ್ಗಕ್ಕೆ ಸೇರಿರುವ ಜನರಿದ್ದಾರೆ. ಸಮಾನತೆಯ, ಪ್ರಜಾಪ್ರಭುತ್ವದ ಹಾಗೂ ಸೆಕುಲರ್ ಆಶಯಗಳ ಪರಿಚಯ ಜನರಿಗಿದೆ. ಅದನ್ನು ಬೆಳೆಸಿ ಗಟ್ಟಿಗೊಳಿಸುವ ಕೆಲಸ ಬಹಳ ಹಿಂದೆಯೇ ಆಗಬೇಕಿತ್ತು.

ದಕ್ಷಿಣ ಕನ್ನಡದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಗೆದ್ದಿದ್ದರೂ ಅದು ಕೇವಲ ಚುನಾವಣಾ ಗೆಲುವಿಗೆ ಸೀಮಿತಗೊಂಡು, ಸಾಮಾಜಿಕವಾಗಿ ಸಂಘ ಪರಿವಾರವೇ ಈಗಲೂ ಹತೋಟಿ ಉಳಿಸಿಕೊಂಡು ಬರುತ್ತಿರುವುದನ್ನು ಬದಲಿಸಲು ಕಾಂಗ್ರೆಸ್ ಪ್ರಯತ್ನಿಸಲಿಲ್ಲ. ಕಾಂಗ್ರೆಸ್‌ನ ಈ ಇಬ್ಬಂದಿತನದಿಂದ ರೋಸಿಹೋದ ನಂತರವೇ ಅಲ್ಪಸಂಖ್ಯಾತರು ತಮ್ಮ ಹಕ್ಕು ಬಾಧ್ಯತೆಗಳಿಗಾಗಿ ತಮ್ಮದೇ ಸಂಘಟನೆಗಳನ್ನು ಕಟ್ಟಿ ಈಗ ರಾಜಕೀಯವಾಗಿಯೂ ದನಿ ಎತ್ತುತ್ತಿದ್ದಾರೆ. ಆಕ್ರಮಣಕಾರಿ ಮತ್ತು ಅಪಾಯಕಾರಿ ವಿದ್ಯಮಾನಗಳು ಸಂಭವಿಸುತ್ತಿರುವಾಗ ಆತ್ಮರಕ್ಷಣೆಗಾಗಿ ರೂಪು ತಳೆದ ಸಂಘಟನೆಗಳಿವು. ಈಗದು ವಿಶಾಲ ತಳಹದಿಯ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಂಬ ರಾಜಕೀಯ ಪಕ್ಷವಾಗಿ ಬೆಳೆಯುತ್ತಿದೆ. ಸೆಕುಲರಿಸಂ ಪರವಾಗಿ ದೃಢವಾಗಿ ನಿಲ್ಲಲಾಗದ ಕಾಂಗ್ರೆಸ್ ಈಗ ಕರಾವಳಿಯ ಗಲಭೆಗಳಿಗೆ ಹಿಂದೂ ಕೋಮುವಾದಿಗಳೊಂದಿಗೆ ಎಸ್‌ಡಿಪಿಐ ಅನ್ನು ಸೇರಿಸಿ ದೂಷಿಸುತ್ತಿರುವುದು ಖಂಡನಾರ್ಹ.

ಕಳೆದ ನಾಲ್ಕು ವರ್ಷಗಳಿಂದ ಆಳುವ ಕಾಂಗ್ರೆಸ್ ಕರಾವಳಿಯಲ್ಲಿ ಸಂಘ ಪರಿವಾರದ ಬಲಗುಂದಿಸಲು ಆಡಳಿತಾತ್ಮಕವಾಗಿಯಾಗಲಿ, ಕಾನೂನಿನ ಮೂಲಕವಾಗಲಿ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಇದೆಲ್ಲದರ ವೈಫಲ್ಯಗಳು ಗಲಭೆಗಳು ಸ್ಫೋಟಗೊಂಡಾಗ ನಿಚ್ಚಳವಾಗಿ ಗೋಚರಿಸುತ್ತವೆ. ಕರಾವಳಿಯು ಯುವಜನತೆಯನ್ನು ಕೋಮುವಾದಿ ಮನಸ್ಥಿತಿಯಿಂದ ಹೊರತರಲು ಕಾಂಗ್ರೆಸ್ ಬಳಿ ಈ ಮೊದಲು ಸಹ ಯಾವ ಖಚಿತ ಯೋಜನೆಯೂ ಇರಲಿಲ್ಲ. ಈಗಲೂ ಕಾಣುತ್ತಿಲ್ಲ. ಬಿಜೆಪಿಯನ್ನು ಕೇವಲ ಚುನಾವಣೆ ಬಂದಾಗ ಹೇಗೊ ಮಾಡಿ ಸೋಲಿಸಿಬಿಟ್ಟರೆ ಅಲ್ಲಿಗೆ ಕರಾವಳಿಯ ಕೋಮುದ್ವೇಷದ ಪರಿಸ್ಥಿತಿ ಬಗೆಹರಿದಂತೆ ಎಂದು ಕಾಂಗ್ರೆಸ್ ಭಾವಿಸಿದೆ. ಇದು ಹೊಣೆಗೇಡಿತನದ ಪರಮಾವಧಿ ಅಷ್ಟೆ.

ಶೋಭಾ ಕರಂದ್ಲಾಜೆಯವರ ಕೀಳು ಭಾಷೆಯ ಹೇಳಿಕೆಯು ಈ ಸಂಘರ್ಷದ ಅಭಿವ್ಯಕ್ತಿ.

ಈ ನಡುವೆ ಬೆಂಗಳೂರಿನ ಬಿಜೆಪಿ ಶಾಸಕ ವಿಜಯಕುಮಾರ್ ರಾಜ್ಯದ ಮುಖ್ಯಮಂತ್ರಿಯ ಮೇಲೆ ಇದೇ ಕೀಳು ಭಾಷೆಯಲ್ಲಿ ಮಾತನಾಡಿದ್ದಾರೆ. ಈ ಹಿಂದೆ ಹಿಂದುತ್ವದ ಪ್ರಚಾರಕ ಮಾಸ್ಟರ್ ಹಿರಣಯ್ಯ ಕೂಡ ಸಿದ್ದರಾಮಯ್ಯನವರನ್ನು ‘ತಲೆಹಿಡುಕ’ ಎಂದು ಹೀಯಾಳಿಸಿದ್ದರು.

ಇವರಿಗೆ ಇಷ್ಟೊಂದು ದಾರ್ಷ್ಟ್ಯ ಬರಲು ಮೇಲು ಜಾತಿಯ ಅಹಂಕಾರವೂ ಕಾರಣವಾಗಿರಬಹುದು. ಅಷ್ಟೇ ಅಲ್ಲ, ಕನಿಷ್ಠ ಮಾತಿನ ತಿರುಗೇಟನ್ನೂ ಕೊಡಲಾಗದ ಕಾಂಗ್ರೆಸ್‌ನ ಮುಖೇಡಿತನವೂ...

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News