ವಿಶ್ವ ಪ್ಯಾರಾ ಅಥ್ಲೆಟಿಕ್ಸ್ : ಭಾರತದಿಂದ ದೀರ್ಘ ನಂಟು
Update: 2017-07-20 05:18 GMT
ಲಂಡನ್, ಜು.20: ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ದೀರ್ಘ ನಂಟು ಹೊಂದಿದ್ದು, 1968 ರಲ್ಲಿ ಇಸ್ರೇಲ್ ನ ತೆಲ್ ಅವೀವ್ ನಲ್ಲಿ ನಡೆದ ಬೆಸಿಗೆ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿ ಸ್ಪರ್ಧಿಸಿತ್ತು.
ಸ್ಪರ್ಧೆ ಆರಂಭವಾಗಿ ಕೇವಲ ನಾಲ್ಕು ದಿನಗಳ ಬಳಿಕ ಮುರಳಿಕಾಂತ್ ಪೇಟ್ಕರ್ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.
ಭಾರತ ಪ್ಯಾರಾ ಒಲಿಂಪಿಕ್ ಪ್ರವೇಶಿಸಿ 49 ವರ್ಷ ಕಳೆದ ಬಳಿಕವೂ ವಿಕಲಚೇತನ ಅಥ್ಲೆಟ್ ಗಳು ದೀರ್ಘ ಹಾದಿ ಕ್ರಮಿಸಿದ್ದು, 2016ರ ರಿಯೋ ಪ್ಯಾರಾ ಒಲಿಂಪಿಕ್ಸ್ ನಲ್ಲಿ 4 ಪದಕಗಳನ್ನು ಜಯಿಸಿ ಶ್ರೇಷ್ಠ ಸಾಧನೆ ಮಾಡಿತ್ತು.