ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-2017ರ ದಾಖಲೆಗಳು
Update: 2017-08-01 13:47 GMT
8ನೆ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2017ರಲ್ಲಿ 31ಕ್ಕೂ ಹೆಚ್ಚು ದಾಖಲೆಗಳು ನಿರ್ಮಾಣವಾಗಿವೆ. ಚಾಂಪಿಯನ್ ಶಿಪ್ ಅನ್ನು ವೀಕ್ಷಿಸಲು ಸುಮಾರು 31 ಸಾವಿರ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ನೆರೆದಿದ್ದರು. ಹಲವಾರು ವಿಶ್ವ ದಾಖಲೆಗಳನ್ನು ಮುರಿದ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಹಲವು ಪದಕಗಳನ್ನು ಗೆದ್ದರು. ವಾಲಿದ್ ಕೆ ತಿಲಾ, ತತ್ಯಾನಾ ಮೆಕ್ ಫ್ಯಾಡೆನ್, ಹನ್ನಾ ಕೋಕ್ರೋಫ್ಟ್ ಹಾಗೂ ಜಾನ್ನಿ ಪಿಕಾಕ್ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.