ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಕರಂಜ್ಯೋತಿ ದಲಾಲ್‌ಗೆ ಕಂಚು

Update: 2017-07-22 06:53 GMT

 ಲಂಡನ್, ಜು.22: ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಎಫ್ 55 ಡಿಸ್ಕಸ್ ಎಸೆತದಲ್ಲಿ ಕಂಚು ಪಡೆದಿದ್ದಾರೆ.

 ಇದರೊಂದಿಗೆ ಭಾರತ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಡೆದ ಪದಕಗಳ ಸಂಖ್ಯೆ 3ಕ್ಕೆ ಏರಿದೆ.

ದಲಾಲ್ ಅವರು 19.02 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದು ಕಂಚು ಪಡೆದರು. ಇವರ ಎದುರಾಳಿ ಬಹರಿನ್‌ನ ಅಲೊಮಾರಿ ರೊಬಾ (19.01ಮೀ.) ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

 ಕಳೆದ ವರ್ಷ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ದಲಾಲ್ ಮೂರು ಬಾರಿ ಪ್ರಯತ್ನ ್ನ ನಡೆಸಿದ್ದರೂ ಪದಕ ಗೆಲ್ಲಲು ವಿಫಲರಾಗಿದ್ದರು. ಕಳೆದ ಮಾರ್ಚ್‌ನಲ್ಲಿ ದುಬೈನಲ್ಲಿ ನಡೆದ ಫಾಝಾ ಇಂಟರ್‌ನ್ಯಾಶನಲ್ ಐಪಿಸಿ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಗ್ರಾನ್ ಪ್ರಿಯಲ್ಲಿ ದಲಾಲ್ ಚಿನ್ನ ಗೆದ್ದುಕೊಂಡಿದ್ದರು.

   ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸುಂದರ್ ಸಿಂಗ್ ಗುರ್ಜಾರ್ ಜಾವೆಲಿನ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಪದಕದ ಖಾತೆ ತೆರೆದಿದ್ದರು. ಎರಡು ದಿನಗಳ ಬಳಿಕ ಅಮಿತ್ ಸರೋಹಾ ಕ್ಲಬ್ ಇವೆಂಟ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News