ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಬೆಳ್ಳಿ, ಕಂಚು ಗೆದ್ದ ಭಾರತದ ಅಥ್ಲೀಟ್ ಗಳು
Update: 2017-07-24 08:27 GMT
ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 9ನೆ ದಿನ ಭಾರತದ ಅಥ್ಲೀಟ್ ಗಳು ಉತ್ತಮ ಪ್ರದರ್ಶನ ನೀಡಿ, ಪದಕಗಳನ್ನು ಗಳಿಸಿದ್ದಾರೆ.
ಪುರುಷರ T-42 ಹೈಜಂಪ್ ನಲ್ಲಿ ಶರದ್ ಕುಮಾರ್ ಹಾಗೂ ವರುಣ್ ಸಿಂಗ್ ಭಾಟಿ ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿದ್ದಾರೆ. ವಿದೇಶದ ಹಲವು ಅಥ್ಲೀಟ್ ಗಳು ಕೂಡ ಹಲವು ಪದಕಗಳನ್ನು ಗಳಿಸಿದ್ದು, ಮಹಿಳೆಯರ 100 ಮೀ. T-38 ವಿಭಾಗದಲ್ಲಿ ಸೋಫಿ ಹನ್ ಹೊಸ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.