ಚಾರ್ಲಿ ಚಾಪ್ಲಿನ್: ಒಂದು ಅಪರೂಪದ ಸಂದರ್ಶನ

Update: 2017-07-23 05:01 GMT

ನಗು ನಗಿಸುತ್ತಲೇ ಅಳಿಸಿದ, ಹೊರಗಣ್ಣಿ ನಿಂದ ನೋಡುತ್ತಿದ್ದ ಪ್ರೇಕ್ಷಕರ ಒಳಗಣ್ಣನ್ನೂ ತೆರೆಸಬಲ್ಲವನಾಗಿದ್ದ ಜಗತ್ಪ್ರಸಿದ್ಧ ಚಿತ್ರನಟ ಚಾರ್ಲಿ ಚಾಪ್ಲಿನ್‌ನ ಅಪರೂಪದ ಸಂದರ್ಶನ ಇದು.

‘ದಿ ಗೋಲ್ಡ್ ರಶ್’, ‘ದಿ ಕಿಡ್’, ‘ಮಾಡ್ರನ್ ಟೈಮ್ಸ್’, ‘ದಿ ಗ್ರೇಟ್ ಡಿಕ್ಟೇಟರ್’, ‘ಸಿಟಿ ಲೈಟ್ಸ್’ ಮುಂತಾದ ಸಿನೆಮಾಗಳನ್ನು ಚಾಪ್ಲಿನ್ ತೆಗೆದಾಗ ಅದಿನ್ನೂ ಮೂಕಿ ಸಿನೆಮಾ ಯುಗ. ಇಂಗ್ಲೆಂಡಿನ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ತಬ್ಬಲಿ ಸ್ಥಿತಿ ಅನುಭವಿಸುತ್ತಾ ಕೊನೆಗೆ ಅಮೆರಿಕಕ್ಕೆ ಹೋದ ಚಾಪ್ಲಿನ್ ಇಡೀ ಮನುಷ್ಯ ಕುಲದ ಸಾಕ್ಷಿಪ್ರಜ್ಞೆಯನ್ನು ಕೆಣಕಿದ, ಅಣಕಿಸಿದ, ನಗಿಸಿದ, ನಲಿಸಿ ಕಣ್ಣೀರೂ ತರಿಸಿದ. ರಿಚರ್ಡ್ ಮೇರಿಮೆನ್ ಎಂಬವರೊಂದಿಗೆ ಚಾಪ್ಲಿನ್ ನಡೆಸಿದ ಮಾತುಕತೆ ಬಹುಶಃ ಅವನ ವ್ಯಕ್ತಿತ್ವ ಬಿಂಬಿಸುವ ಅಪರೂಪದ ಹಾಗೂ ಆತನ ಬದುಕಿನ ಕೊನೆಯ ಸಂದರ್ಶನ.

ಪ್ರಶ್ನೆ: ನೀವು ಧರಿಸುತ್ತಿದ್ದ ಡ್ರೆಸ್ ವಿನ್ಯಾಸ ಹಾಗೇಕಿರುತ್ತಿತ್ತು? ಅದು ಹೇಗಾಯಿತು?

   -ಚಾಪ್ಲಿನ್: ಅದೊಂದು ಅನಿರೀಕ್ಷಿತ ಅರ್ಜೆಂಟಾದ ಸಂದರ್ಭದಲ್ಲಿ ರೂಪು ತಳೆಯಿತು. ನಮ್ಮ ಸಿನೆಮಾದ ಕ್ಯಾಮರಾಮನ್ 'ಸ್ವಲ್ಪ ತಮಾಷೆಯಾಗಿ ಕಾಣುವಂತ ಕಾಸ್ಟೂಂ ಹಾಕಿಕೊ' ಅಂದಿದ್ದರು. ನಾನು ಬಟ್ಟೆಗಳ ವಿಭಾಗದತ್ತ ಯೋಚಿಸುತ್ತಾ ಹೋದೆ. ಕೊನೆಗೆ ಪ್ರತಿಯೊಂದು ವೈರುಧ್ಯಮಯವಾಗಿರುತ್ತದೆ ಎಂದು ನಿರ್ಧರಿಸಿದೆ.ಹಾಗಾಗಿ ದೊಗಲೆ ಬ್ಯಾಗಿ ಪ್ಯಾಂಟ್, ಬಿಗಿಯಾದ ಕೋಟ್, ದೊಡ್ಡ ತಲೆ, ಚಿಕ್ಕ ಹ್ಯಾಟ್, ಒಟ್ಟಿನಲ್ಲಿ ಚಿಂದಿಯುಟ್ಟ ಜೆಂಟಲ್‌ಮೆನ್.. ಇವೆಲ್ಲಾ ಅವತ್ತಿನ ಟ್ರೆಂಡ್‌ಗೆ ವಿರುದ್ಧವಾಗಿತ್ತು.ಇನ್ನು ಮುಖ, ದುಃಖಿತ, ಗಂಭೀರ ಮುಖಭಾವ ಇರಲಿ ಅಂದುಕೊಂಡಿದ್ದೆ. ಪ್ರೇಕ್ಷಕರಿಗೆ ಹೊರನೋಟಕ್ಕೆ ನನ್ನದು ಹಾಸ್ಯದ ಪಾತ್ರ ಅನಿಸಕೂಡದು ಎಂಬಯೋಚನೆ ಇತ್ತು. ಅದೇ ತರ ಒಂದು ಮೀಸೆ ಇರಿಸಿಕೊಂಡೆ, ಆ ಮೀಸೆ ನನ್ನ ಮುಖದ ಭಾವನೆಗಳನ್ನು ಜನರು ನೋಡಲು ಅಡ್ಡಿಯಾ ಗದಷ್ಟು ಪುಟ್ಟದಾಗಿ ಆದರೆ ತಮಾಷೆಯಾಗಿ ಎದ್ದು ಕಾಣುವಷ್ಟು ದಪ್ಪವಾಗಿ ರೆಡಿ ಮಾಡಿದೆ.

ಈ ವೇಷದಲ್ಲಿ ಮೊದಲ ಬಾರಿಗೆ ನೀವೇ ನೋಡಿಕೊಂಡಾಗ ಹೇಗನಿಸಿತ್ತು?

   - ಇದು ಕೆಲಸಕ್ಕೆ ಬರುತ್ತೆ ಅನಿಸಿತ್ತು. ಆ ನನ್ನ ವೇಷ ಭೂಷಣಗಳು ತಕ್ಷಣಕ್ಕೆ ಏನೂ ಅನಿಸದಂತಿದ್ದರೂ ಸಹ ಒಂದು ಸಾರಿ ಕ್ಯಾಮರಾ ಎದುರು ನಿಂತು ನಟಿಸಲು ಶುರು ಮಾಡಿದ ಮೇಲೆ ಅದರ ಮ್ಯಾಜಿಕ್ ಏನೆಂದು ಎಲ್ಲರಿಗೂ ಗೊತ್ತಾಯಿತು. ಅದಲ್ಲದೆ ನನ್ನವು ಪುಟ್ಟ ಪಾದಗಳಿದ್ದಾಗಲೂ ನನಗೆ ಸ್ಟುಡಿಯೋದಲ್ಲಿ ಸಿಕ್ಕಿದ್ದು ಮಾತ್ರ ದೊಡ್ಡ ಸೈಜಿನ ಶೂಗಳು, ಅವು ನನ್ನನ್ನು ಇನ್ನಷ್ಟು ದಯನೀಯ ವಾಗಿ, ತಮಾಷೆಯಾಗಿ ಬಿಂಬಿಸಿದವು.

ಆಧುನಿಕ ಕಾಲದಲ್ಲೂ ನಿಮ್ಮ ಈ ಟ್ರಾಂಪ್ ಪಾತ್ರ ಮತ್ತು ಉಡುಗೆ ನಡೆಯುತ್ತದೆ ಅನಿಸುತ್ತದೆಯಾ?

   -ಈಗ ಆ ಪಾತ್ರಕ್ಕೆ ಮತ್ತು ಸನ್ನಿವೇಶಗಳಿಗೆ ಅವಕಾಶ ಇಲ್ಲ. ಜಗತ್ತು ಈಗ ಇನ್ನಷ್ಟು ವ್ಯವಸ್ಥಿತವಾಗಿರುವಂತೆ ಕಾಣುತ್ತಿದೆ. ಮೇಲಾಗಿ ಚಿಕ್ಕ ಮಕ್ಕಳ ಬಟ್ಟೆಗಳು ಈಗ ನನ್ನದಕ್ಕಿಂತಾ ಕಿರಿದಾಗಿ ಇದೆ. ಅನೇಕರಿಗೆ ಟ್ರಾಂಪ್ ಪಾತ್ರದಂತೆ ಇರಬೇಕೆನಿಸಬಹುದು. ಆದರೆ ದೈನ್ಯ ಉಕ್ಕಿ ಸುವ ಪಾತ್ರವಾಗುಳಿಯಲಾರದು. ಅದೀಗ ಪ್ರಾಚ್ಯ ವಸ್ತು ತರ. ಬೇರೆ ಕಾಲಘಟ್ಟಕ್ಕೆ ಸೇರಿದಂತೆ ಭಾಸವಾಗಬಹುದು. ಹಾಗಾಗಿ ನಾನು ಆ ಪಾತ್ರಗಳಲ್ಲಿ ಮುಂದುವರಿಯಲು ಆಗಲಿಲ್ಲ. ಜೊತೆಗೆ ಟಾಕಿ ಸಿನೆಮಾ ಬಂದ ಮೇಲೆ ಚಾಪ್ಲಿನ್‌ನ ದನಿ ಹೇಗಿರಬೇಕೆಂದು ನಿರ್ಧರಿಸಲು ನನಗೆ ಆಗಲೇ ಇಲ್ಲ. ಹಾಗಾಗಿ ಆ ಪಾತ್ರ ನಿರ್ಗ ಮಿಸಲೇಬೇಕಾಗಿ ಬಂತು.

ನಿಮ್ಮ ಟ್ರಾಂಪ್ ಪಾತ್ರದ ಮಹತ್ವ ಏನು?

- ಮಹತ್ವ ಎನ್ನುವುದಕ್ಕಿಂತ ನಾನು ಬೇರೊಂದು ವಿಷಯ ಹೇಳು ತ್ತೇನೆ. ನನ್ನ ಟ್ರಾಂಪ್ ಪಾತ್ರ ನೋಡಿದ ಮೆಚ್ಚಿನ ಪ್ರೇಕ್ಷಕರಿಂದ ಉತ್ತೇಜನ ಪಡೆದಿದ್ದೇನೆ ನಿಜ, ಆದರೆ ಆ ನನ್ನ ಪಾತ್ರ ಪ್ರೇಕ್ಷಕರಿಗೆ ಸಂಬಂ ಧಿಸಿದ್ದಲ್ಲ. ಏಕೆಂದರೆ ಪ್ರೇಕ್ಷಕ ಬರುವುದು ಒಂದು ಸಿನೆಮಾ ರೆಡಿಯಾದ ನಂತರ ತಯಾರಾಗು ವಾಗ ಅಲ್ಲ. ಆದರೆ ಆ ಪಾತ್ರ ಅಭಿನ ಯಿಸುವಾಗಲೇ ನಾನೇ ಆ ಪಾತ್ರ ವಾಗಿರುತ್ತಿದ್ದೆ. ನನ್ನೊಳಗೆ ಒಂದು ವಿಡಂಬನೆ-ಕಿಡಿಗೇಡಿತನದ ಪ್ರೇರಣೆ ಇರುತ್ತಿತ್ತು. ನಾನ ದನ್ನು ತೋರಿಸಲು ಬಯಸು ತ್ತಿದ್ದೆ.

ಜನರನ್ನು ನೋಡಿ ನಿಮ್ಮ ಸಿನೆಮಾದ ಹಾಸ್ಯ ಸನ್ನಿವೇಶಗಳು ಸಿದ್ಧವಾದವೊ ಅಥವಾ ಅವೆಲ್ಲಾ ನಿಮ್ಮ ಕಲ್ಪನೆಗಳೊ?

    -ಇಲ್ಲ, ಅವೆಲ್ಲಾ ನಮ್ಮದೇ ಆದ ಪ್ರಪಂಚದ ಸೃಷ್ಟಿಗಳು. ಕ್ಯಾಲಿಫೋ ರ್ನಿಯಾದಲ್ಲಿ ನನ್ನದೊಂದು ಸ್ಟುಡಿಯೋ ಇತ್ತು. ಅಲ್ಲಿ ನಿತ್ಯ ಸಂಜೆ ನಾವು ಅನೇಕರು ಸೇರುತ್ತಿದ್ದೆವು. ಮಾತು, ಹರಟೆಗಳಲ್ಲಿ ನಮ್ಮ ಸಿನೆಮಾ ಜೀವ ತಳೆಯುತ್ತಿತ್ತು. ಅದರಂತೆ ಶೂಟ್ ಮಾಡು ತ್ತಿದ್ದೆವು.

ರಿಯಲಿಸಂ' ಎನ್ನುವುದು ಕಾಮಿಡಿಯ ಅಂತರ್ಗತ ಭಾಗವೇ?

    -ಖಂಡಿತಾ... ಒಂದು ಅಸಂಗತ ಸನ್ನಿವೇಶವಿದ್ದಾಗ ನೀವದನ್ನು ವಾಸ್ತವದ ನೆಲೆಯಲ್ಲಿ ಬಿಂಬಿಸಿದರೆ ಜನರಿಗೆ ತಲುಪುತ್ತದೆ. ಏಕೆಂದರೆ ಪ್ರೇಕ್ಷಕರಿಗೆ ಅದಾಗಲೇ ರಿಯಾಲಿಟಿ ತಿಳಿದಿರುತ್ತದೆ ಆದ್ದರಿಂದ.

ನಿಮ್ಮ ಸಿನೆಮಾದ ತಮಾಷೆಗಳೆಲ್ಲಾ ಘಟನೆಗಳನ್ನು ಆಧರಿಸಿರುವಂತವು? ಅವು ಬೌದ್ಧಿಕವಾಗಿರುವಂತವಲ್ಲ ಏಕೆ?

    -ಘಟನೆಗಳ ಸರಪಣಿಯೇ ಒಂದು ಕತೆಯನ್ನು ಬೆಳೆಸುತ್ತದೆ. ಅದೊಂದು ರೀತಿಯಲ್ಲಿ ಬಿಲಿಯರ್ಡ್ಸ್ ಟೇಬಲಿನ ಮೇಲಿರುವ ಬಾಲ್‌ಗಳಂತೆ. ಒಂದು ಇನ್ನೊಂದನ್ನು ತಾಕಿ, ದೂಡುತ್ತಾ ಚಲಿ ಸುತ್ತಾ ಕೊನೆಗೊಮ್ಮೆ ಒಂದು ಟ್ರಯಾಂಗಲ್‌ನಲ್ಲಿ ಮರಳಿ ಸೇರುವ ಹಾಗೆ.. ನನ್ನ ಕೆಲಸಗಳಲ್ಲಿ ನಿಮಗೆ ಇದೇ ಇಮೇಜ್ ಕಾಣುವುದು.

ನಿಮ್ಮ ಸಿನೆಮಾಗಳ ಚಲನೆ ಒಂದು ವೇಗದಲ್ಲಿ ರಭಸವಾಗಿ ಸಾಗುತ್ತವೆ. ಘಟನೆಗಳು ಒಂದಾದ ನಂತರ ಇನ್ನೊಂದು ಚುರುಕಾಗಿ ಸೇರಿಸಲ್ಪಟ್ಟಿರುತ್ತವೆ. ಅದು ನಿಮ್ಮ ವೈಶಿಷ್ಟ್ಯನಾ?

   -ಅದು ನನಗೆ ಗೊತ್ತಿಲ್ಲ. ನಾನು ಇತರ ಕಾಮಿಡಿ ಸಿನೆಮಾ ಕಲಾವಿದ ರನ್ನು ಗಮನಿಸಿದ್ದೇನೆ. ಅವರು ನಡುವೆ ಕೊಂಚ ವಿರಮಿಸಲು ಬಯ ಸುವಂತೆ ಕಾಣುತ್ತದೆ. ನಾನು ಒಂದು ಸಿನೆಮಾವನ್ನು ಚುರು ಕಾಗಿ ಮುಂದಕ್ಕೆ ಸಾಗಿಸಲು ಯೋಚಿಸುವವನು. ನನಗೆ ಅದೇ ಇಷ್ಟ.

ಭಾವುಕರಾಗಿರುವುದು ಇಲ್ಲ ಕ್ಲೀಷೆಯಾಗುವುದು ಇದರಲ್ಲಿ ನಿಮಗೆ ಯಾವುದು ಕಷ್ಟ?

   -ನಾವು ಇವುಗಳನ್ನು ಅವಾಯ್ಡ ಮಾಡಬೇಕು. ನನಗೆ ಯಾವುದೇ ಆಗಲಿ ಕ್ಲೀಷೆಯಾಗುವ ಬಗ್ಗೆ ಆತಂಕವಿಲ್ಲ. ನಾವೆಲ್ಲರೂ ದಿನಕ್ಕೆ ಮೂರೊತ್ತು ಊಟ ತಿಂದು, ಬದುಕಿ ಹೇಗೂ ಸಾಯುತ್ತೇವೆ. ಪ್ರೀತಿಸುತ್ತೇವೆ. ಅದರಿಂದ ಹೊರ ಬರುತ್ತೇವೆ. ಒಂದು ಪ್ರೇಮ ಕಥೆಗಿಂತಾ ದೊಡ್ಡ ಕ್ಲೀಷೆ ಇನ್ನೊಂ ದಿರಲಾರದು. ಯಾವುದು ಏನೇ ಇರಲಿ ಅದನ್ನು ಕುತೂಹಲಕಾರಿಯಾಗಿಸಬೇಕು ಅಷ್ಟೆ.

ಟಾಕಿ ಸಿನೆಮಾ ಬಂದ ಮೇಲೆ ನಿಮ್ಮ ಪಾತ್ರಕ್ಕೆ ಏನೇನಾಯಿತು?

   -ನಾನಾಗಲೇ ಹೇಳಿದ ಹಾಗೆ ಮಾತಾಡುವಂತಿದಿದ್ದರೆ ಟ್ರಾಂಪ್‌ನ (ಚಾಪ್ಲಿನ್) ದನಿ ಹೇಗಿರುತ್ತಿತ್ತೆಂಬ ಕಲ್ಪನೆ ನನಗೇ ಇರಲಿಲ್ಲ. ಆದ ರೂ ನಟನಾಗಿ ನಾನದನ್ನು ಬಗೆಹರಿಸಬಹುದಿತ್ತೇನೊ. ದನಿ ಎನ್ನುವು ದು ಬಹಳ ಸುಂದರವಾದದ್ದು, ಹೆಚ್ಚು ಪ್ರಕಟಪಡಿಸಿಕೊಳ್ಳುವಂಥ ದ್ದು, ಆದರೆ ನನ್ನ ಪಾತ್ರದ ಪೋಷಣೆ ಹಾಗೆ ಸಾಗಿ ಬಂದಿರಲಿಲ್ಲ.

ನಿಮಗೂ ಇಷ್ಟವಾದ ನಿಮ್ಮ ಸಿನೆಮಾ?

    -ಬಹುಶಃ 'ಸಿಟಿ ಲೈಟ್ಸ್', ರಿಯಲ್ ಕಾಮಿಡಿ ಅದು

ಪವರ್‌ಫುಲ್ ಸಿನೆಮಾ ಅದು, ಕಾಮಿಡಿ-ಟ್ರಾಜಿಡಿ ಎರಡೂ ಅದೆಷ್ಟು ಸಮೀಪದವು ಎನ್ನುವುದನ್ನು ಸಿಟಿ ಲೈಟ್ಸ್ ತೋರಿಸಿತು ಅಲ್ಲವಾ?

   -ಅದು ನನ್ನ ಆಸಕ್ತಿ ಆಗಿರಲಿಲ್ಲ. ನನ್ನೊಳಗಿರುವ ಮನೋನಿಷ್ಟ ಸ್ವಭಾ ವದ ಎರಡನೆ ಗುಣ ಅದಾಗಿತ್ತು. ನಾವು ಇನ್ನೊಬ್ಬರ ಬಗ್ಗೆ ತಮಾಷೆ ಯಾಗಿ ನೋಡುವಾಗಲೂ ನಮಗವರ ಬಗ್ಗೆ ಅನುಕಂಪ- ಸಹಾ ನುಭೂತಿ ಇರಬೇಕು ಅಂದುಕೊಳ್ಳುವವ ನಾನು.

ಟ್ರಾಜಿಡಿಯಿಂದ ನಮಗೆ ಸಿಗುವ ಪರಿಹಾರ ಇದು ಎಂದು ಅನಿಸುತ್ತಾ?

     -ಇಲ್ಲ, ಜೀವನ ಅದೆಲ್ಲದಕ್ಕಿಂತಲೂ ದೊಡ್ಡ ದು. ಅದ್ಭುತವಾದದ್ದು, ಬದುಕಿನ ಅನುಭವ ಗಳು ಟ್ರಾಜಿಡಿಯ ಎದುರಿನ ಕಾಮಿಡಿ ಯ ಕೆಲವಂಶಗಳನ್ನು ಒಳಗೊಂಡು ರಕ್ಷಣೆಯಾಗುತ್ತವೆ.

 ಜೀನಿಯಸ್ ಅಂತ ಒಂದು ಇದೆಯಾ?

- ಜೀನಿಯಸ್ ಅಂತಂದರೇನು ನನಗೆ ಗೊತ್ತಿಲ್ಲ. ಪ್ರತಿಯೊಬ್ಬರಿಗೂ ಏನೋ ಒಂದು ಟ್ಯಾಲೆಂಟ್ ಇರುತ್ತದೆ. ಅದನ್ನವರುಉತ್ತಮವಾಗಿ ಅಭಿವ್ಯಕ್ತಿಸಿದರೆ ಅದೇ ಪ್ರತಿಭೆ ಅನಿಸಿಕೊಳ್ಳುತ್ತದೆ. ಅಂತಹ ಹಲವು ಸಂಗತಿಗಳನ್ನು ಸಮ ರ್ಥವಾಗಿ ನಿಭಾಯಿಸಬಲ್ಲವರ ನ್ನು ಬಹುಶಃ ಜೀನಿಯಸ್ ಎಂದು ತಪ್ಪಾಗಿ ಭಾವಿಸಲಾ ಗುತ್ತದೆ!

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News