ಕುಮಾರಸ್ವಾಮಿ ಜೊತೆಗಿನ ವಿಚ್ಛೇದನ ವದಂತಿ ಕುರಿತು ಮೌನ ಮುರಿದ ರಾಧಿಕಾ ಹೇಳಿದ್ದೇನು ?

Update: 2017-08-02 16:23 GMT

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಕೈಹಿಡಿದು ಶಮಿಕಾ ಎಂಬ ಮಗುವಿನ ತಾಯಿಯಾಗಿರುವವರು ನಟಿ ರಾಧಿಕಾ. ಆದರೆ ಕುಮಾರ ಸ್ವಾಮಿಯವರು ತಮ್ಮ ಮೊದಲ ಪತ್ನಿ ಅನಿತಾ ಜೊತೆಗೆ ಕಾಣಿಸಿಕೊಂಡಂತೆ ರಾಧಿಕಾ ಜೊತೆಗೆ ಕಾಣಿಸಿದ್ದು ಕಡಿಮೆ. ಇತ್ತೀಚೆಗಂತೂ ಇವರ ದಾಂಪತ್ಯ ವಿಚ್ಛೇದನದಲ್ಲಿ ಕೊನೆಯಾಯಿತು ಎಂಬ ಸುದ್ದಿಯೂ ಹರಡಿತು. ಇದಕ್ಕೆ  ರಾಧಿಕಾ ಪ್ರಥಮ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

'ನಾನು‌ ಅವರೊಂದಿಗೆ ಕಾಣಿಸಿಕೊಳ್ಳುತ್ತಿಲ್ಲ ಎಂದ ಮಾತ್ರಕ್ಕೆ ವಿಚ್ಛೇದಿತೆಯಾಗಿದ್ದೇನೆ ಎಂದು ಹೇಳಲಾಗದು. ಜನ ನೂರು ಮಾತನಾಡುತ್ತಾರೆ. ನನಗೆ ಒಟ್ಟು ಮೂವರು ಮಕ್ಕಳಿದ್ದಾರೆ, ಒಂದು ವಿದೇಶದಲ್ಲಿದ್ದರೆ ಇನ್ನೊಂದು ಮಗು ಪತ್ರಕರ್ತರೊಬ್ಬರ ಬಳಿ ಇದೆ ಎಂಬ ಸುಳ್ಳು ಸುದ್ದಿಗಳಿವೆ. ಅದನ್ನೆಲ್ಲ ನಾನು ತಲೆಗೆ ಹಚ್ಚಿಕೊಂಡರೆ ಅಷ್ಟೇ. ನಾನು ಇಂದಿಗೂ ರಾಧಿಕಾ ಕುಮಾರಸ್ವಾಮಿಯೇ, ಮುಂದೆಯೂ ಅಷ್ಟೇ. ನನಗೊಂದೇ ಮಗು ಮತ್ತು ಏಳೇಳು ಜನ್ಮಕ್ಕೂ ಅವರೇ ಪತಿ ಸಾಕು" ಎಂದು ನಗುಮುಖದಲ್ಲೇ ಉತ್ತರಿಸುತ್ತಾರೆ ರಾಧಿಕಾ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News