ದೇಶದ ಸ್ವಾತಂತ್ರಕ್ಕಾಗಿ ಕನವರಿಸಿದ ಇನ್ನೊಬ್ಬ ಅಜ್ಞಾತ ಬೋಸ್ ರಾಷ್ ಬಿಹಾರಿ ಬೋಸ್
ಭಾಗ-1
ಭಾರತ ಸ್ವಾತಂತ್ರ ಹೋರಾಟದಲ್ಲಿ ಯಾರೂ ಹಾಡಿ ಹೊಗಳದ ಹೀರೋ ಆಗಿರುವ ರಾಷ್ ಬಿಹಾರಿ ಬೋಸ್ ಒಂದೊಮ್ಮೆ ಬ್ರಿಟಿಷ್ ಸರಕಾರದಲ್ಲಿ ಓರ್ವ ಅಧಿಕಾರಿಯಾಗಿದ್ದರು. ಆದರೆ ಅವರು ತನ್ನ ನೌಕರಿ ಹಾಗೂ ಸುಖದ ಜೀವನವನ್ನು ತೊರೆದು ಭಾರತದ ಕ್ರಾಂತಿಕಾರಿ ಹೋರಾಟಕ್ಕೆ ಧುಮುಕಿದರು. ಬರಗಾಲದ ವಿಭಜನೆಯಿಂದ ತುಂಬ ನೊಂದ ಅವರು ದಿಲ್ಲಿ ಒಳಸಂಚು ಪ್ರಕರಣ (ಬ್ರಿಟಿಷ್ ವೈಸ್‌ರಾಯ್ ಲಾರ್ಡ್ ಹಾರ್ಡಿಂಗ್‌ರ ಹತ್ಯೆ ಪ್ರಯತ್ನ)ದಲ್ಲಿ, ಬನಾರಸ್ ಒಳಸಂಚು ಪ್ರಕರಣ ಮತ್ತು ಲಾಹೋರ್‌ನಲ್ಲಿ ಗದ್ದರ್ ಒಳಸಂಚು ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
‘‘ರಾಷ್ ಬಿಹಾರಿ ಬೋಸ್‌ರ ಕತೆ ಭಾರತದ ಸ್ವಾತಂತ್ರ ಹೋರಾಟದ ಒಂದು ಮುಖ್ಯ ಭಾಗ, ಮತ್ತು ಅಂತಿಮವಾಗಿ ಹೋರಾಟಕ್ಕೆ ದೊರೆತ ಜಯದಲ್ಲಿ ಅವರ ಸಂಘಟನಾ ಚಾತುರ್ಯ ಹಾಗೂ ಅದ್ಭುತವಾದ ತ್ಯಾಗದ ಪಾತ್ರ ಗಣನೀಯ. ನೇತಾಜಿಯವರು ಗರಿಬಾಲ್ಡಿಯಾಗಿ ಚಳವಳಿಯಲ್ಲಿ ಹೊರಹೊಮ್ಮಿದರೆ, ನಾಟಕದಲ್ಲಿ ರಾಷ್ ಬಿಹಾರಿ ವಹಿಸಿದ ಪಾತ್ರ ಮ್ಯಾಝಿನಿ ವಹಿಸಿದ ಪಾತ್ರಕ್ಕಿಂತ ದೊಡ್ಡದು’’
-ಥಾಕಿನ್ ನೂ, ಮ್ಯಾನ್ಮಾರ್‌ನ ಮಾಜಿ ಪ್ರಧಾನಿ ಆಝಾದ್ ಹಿಂದೂ ಸೇನೆ (ಇಂಡಿಯನ್ ನ್ಯಾಶನಲ್ ಆರ್ಮಿ ಅಥವಾ ಐಎನ್‌ಎ)ಯ ಹೆಸರು ಕೇಳಿದಾಗೆಲ್ಲ, ಮತ್ತು ಭಾರತದಲ್ಲಿ ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ಕಿತ್ತೆಸೆಯಲು ಅದು ಮಾಡಿದ ಧೈರ್ಯಶಾಲಿ ಪ್ರಯತ್ನಗಳನ್ನು ನೆನೆದಾಗೆಲ್ಲ ನಮ್ಮ ಮನಸ್ಸಿಗೆ ಬರುವ ಮೊದಲ ಹೆಸರು ಸುಭಾಶ್ಚಂದ್ರ ಬೋಸ್. ಆದರೆ ಒಂದು ದಂತಕತೆಯಾಗಿರುವ ಈ ಸಂಘಟನೆಗೆ ಆರಂಭಿಕ ಹಂತದ ಕೆಲಸ ಮಾಡಿದವರು ಇನ್ನೊಬ್ಬ ಬೋಸ್ ಎನ್ನುವುದು ಬಹಳ ಮಂದಿಗೆ ತಿಳಿದಿಲ್ಲ.
ಭಾರತ ಸ್ವಾತಂತ್ರ ಹೋರಾಟದಲ್ಲಿ ಯಾರೂ ಹಾಡಿ ಹೊಗಳದ ಹೀರೋ ಆಗಿರುವ ರಾಷ್ ಬಿಹಾರಿ ಬೋಸ್ ಒಂದೊಮ್ಮೆ ಬ್ರಿಟಿಷ್ ಸರಕಾರದಲ್ಲಿ ಓರ್ವ ಅಧಿಕಾರಿಯಾಗಿದ್ದರು. ಆದರೆ ಅವರು ತನ್ನ ನೌಕರಿ ಹಾಗೂ ಸುಖದ ಜೀವನವನ್ನು ತೊರೆದು ಭಾರತದ ಕ್ರಾಂತಿಕಾರಿ ಹೋರಾಟಕ್ಕೆ ಧುಮುಕಿದರು. ಬರಗಾಲದ ವಿಭಜನೆಯಿಂದ ತುಂಬ ನೊಂದ ಅವರು ದಿಲ್ಲಿ ಒಳಸಂಚು ಪ್ರಕರಣ (ಬ್ರಿಟಿಷ್ ವೈಸ್‌ರಾಯ್ ಲಾರ್ಡ್ ಹಾರ್ಡಿಂಗ್‌ರ ಹತ್ಯೆ ಪ್ರಯತ್ನ)ದಲ್ಲಿ, ಬನಾರಸ್ ಒಳಸಂಚು ಪ್ರಕರಣ ಮತ್ತು ಲಾಹೋರ್‌ನಲ್ಲಿ ಗದ್ದರ್ ಒಳಸಂಚು ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಬಂಧಿಸಲ್ಪಟ್ಟಲ್ಲಿ ಮರಣದಂಡನೆ ಶಿಕ್ಷೆಯಾಗುವುದು ಖಚಿತವೆಂದು ತಿಳಿದಿದ್ದ ಬೋಸ್ ಜಪಾನಿಗೆ ಪಲಾಯನಮಾಡಿ ಅಲ್ಲಿ ಅವರು ಭಾರತದ ಸ್ವಾತಂತ್ರ ಹೋರಾಟಕ್ಕೆ ತನ್ನ ಪ್ರಯತ್ನಗಳನ್ನು ಮುಂದುವರಿಸಿದರು. ಅಂದಿನ ಕಾಲದ ಜಪಾನಿ ಪತ್ರಿಕೆಗಳಲ್ಲಿ ಭಾರತದ ಪರಿಸ್ಥಿತಿ, ವ್ಯವಹಾರಗಳ ಬಗ್ಗೆ ನಿಗದಿತವಾಗಿ ಲೇಖನ ಬರೆಯುತ್ತಿದ್ದ ಒಬ್ಬ ಲೇಖಕನಾಗಿ, ಭಾರತ ಸ್ವಾತಂತ್ರ ಚಳವಳಿಗೆ ನೆರವು ನೀಡುವಂತೆ ಜಪಾನ್ ಸರಕಾರದ ಅಧಿಕಾರಿಗಳ ಮನ ಬದಲಿಸುವುದರಲ್ಲಿ ಅವರು ಗಣನೀಯ ಪಾತ್ರವಹಿಸಿದರು. ಅಲ್ಲದೆ ಐಎನ್‌ಎಯನ್ನು ಸುಭಾಸ್ ಚಂದ್ರ ಬೋಸರಿಗೆ ವಹಿಸಿಕೊಡುವ ಮೊದಲು ಅವರು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು. (ಇದು ಐಎನ್‌ಎಗೆ ನಾಂದಿಯಾಯಿತು.)
ತಾನು ಹುಟ್ಟಿ ಬೆಳೆದ ಬಂಗಾಲದ ಚಂದನ್ ನಗರದಲ್ಲಿ ಸುಮಾರು ಒಂದು ವರ್ಷ ಭೂಗತನಾಗಿದ್ದು, 1915ರ ಎಪ್ರಿಲ್‌ನಲ್ಲಿ ಬೋಸ್, ಕವಿ ಪಿ.ಎನ್ ಠಾಕೂರ್ ಎಂಬ ಸುಳ್ಳು ಹೆಸರಿನಲ್ಲಿ ಹಡಗಿನಲ್ಲಿ ಜಪಾನ್‌ಗೆ ಹೊರಟರು. 1915ರ ಜೂನ್‌ನಲ್ಲಿ ಅವರು ಬಂದರು ನಗರವಾದ ಕೊಬೆ ತಲುಪಿದರು. ಅಲ್ಲಿಂದ ಟೋಕಿಯೋಗೆ ಹೋದರು. ಇಲ್ಲಿ, ಭಾರತದ ಬಗ್ಗೆ ಅನುಕಂಪ ಹೊಂದಿದ್ದ ಫ್ರಾನ್ಸ್-ಏಶ್ಯನ್ ನಾಯಕರ ಸಂಪರ್ಕ ಸಾಧಿಸಿದರು. ಇವರಲ್ಲಿ ಪ್ರಭಾವೀ ಬಲಪಂಥೀಯ ರಾಜಕಾರಣಿ ಮಿತ್ಸುರು ತೊಯಾಮ ಕೂಡ ಸೇರಿದ್ದರು.
ಬ್ರಿಟಿಷರ ಮನಸ್ಸಿನಲ್ಲಿ ಬೋಸ್ ಎಷ್ಟೊಂದು ಭಯ ಹುಟ್ಟಿಸಿದ್ದರೆಂದರೆ ಬ್ರಿಟಿಷರು ಇವರನ್ನು ಪತ್ತೆಹಚ್ಚುವ ಅಥವಾ ಹತ್ಯೆಗೈಯುವ ಏಕೈಕ ಉದ್ದೇಶಕ್ಕಾಗಿ ಪತ್ತೆದಾರಿ ಏಜೆನ್ಸಿಗಳ ಮೊರೆಹೋದರು. ಅಂತಿಮವಾಗಿ ಅವರಿಗೆ ಬೊಸ್ ಟೋಕಿಯೊದಲ್ಲಿದ್ದಾರೆಂದು ತಿಳಿಯಿತು. ಬೋಸ್‌ರನ್ನು ಭಾರತಕ್ಕೆ ಮರಳಿಸುವಂತೆ ಅವರು ಜಪಾನ್ ಸರಕಾರದೊಡನೆ ವಿನಂತಿಸಿದರು. ಆಗ ಬೋಸ್ ತೊಯಾಮರ ಮನೆಯಲ್ಲಿದ್ದರು. ಇದು ಜಪಾನಿ ಪೊಲೀಸರು ತತ್‌ಕ್ಷಣ ಬೋಸರನ್ನು ಬಂಧಿಸದಂತೆ ಅವರನ್ನು ತಡೆಯಿತು. (ತೊಯಾಮರಷ್ಟು ಪ್ರಭಾವಶಾಲಿಯಾದ ಒಬ್ಬ ನಾಯಕನ ಮನೆಗೆ ದಾಳಿ ನಡೆಸಲು ಜಪಾನಿ ಪೊಲೀಸರಿಗೆ ಧೈರ್ಯವಾಗಲಿಲ್ಲ.) ಚಿಕ್ಕಪುಟ್ಟ ಅಂಗಡಿಗಳು ಹಾಗೂ ಅಗಲ ಕಿರಿದಾದ ರಸ್ತೆಗಳಿಂದ ಕೂಡಿದ ಸದಾ ಜನರಿಂದ ಗಿಜಿಗಿಡುತ್ತಿದ್ದ ಈ ಪ್ರದೇಶದಲ್ಲಿ ಶ್ರೀಮಂತ ಸುಮೊ ಕುಟುಂಬದ ಮಾಲಕತ್ವದಲ್ಲಿದ್ದ ನಕಮುರಾಯ ಬೇಕರಿಯಲ್ಲಿ ಬೋಸ್ ಆಶ್ರಯ ಪಡೆದರು.
ಐಜೊ ಮತ್ತು ಕೊಟ್ಸುಕೊ ಸುಮೊ ಭಾರತದ ಸ್ವಾತಂತ್ರದ ಹೋರಾಟದ ಬೆಂಬಲಿಗರಾಗಿದ್ದರು, ಅವರು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಬೋಸ್‌ರನ್ನು ಹಲವು ತಿಂಗಳ ಕಾಲ ಅಡಗಿಸಿಟ್ಟರು. ಬಹಳ ಬೇಗನೇ ಕ್ರಾಂತಿಕಾರಿ ಬೋಸ್ ಮತ್ತು ಸುಮೊ ಕುಟುಂಬದ ಮಧ್ಯೆ ಪ್ರೀತಿಯ ಸಂಬಂಧ ಬೆಳೆಯಿತು. ಬೋಸ್ ಈ ಅವಧಿಯಲ್ಲಿ ಸುಮೊ ಕುಟುಂಬಕ್ಕೆ ತನ್ನ ಹೃದಯಕ್ಕೆ ಹತ್ತಿರವಾದ ಒಂದು ರೆಸಿಪಿಯನ್ನು ಪರಿಚಯಿಸಿದರು. ಆ ಕುಟುಂಬಕ್ಕೆ ರುಚಿಕರವಾದ ಭಾರತೀಯ ಕರಿ ತುಂಬ ಇಷ್ಟವಾಯಿತು. ಸ್ವಲ್ಪ ಸಮಯದಲ್ಲೇ ಅದು ಕುಟುಂಬದ ಒಂದು ಫೇವರಿಟ್ ಖಾದ್ಯವಾಯಿತು. ಅದೇ ವೇಳೆ ಬ್ರಿಟಿಷ್ ಹಡಗೊಂದು ಜಪಾನಿನ ಸರಕು ಸಾಗಣೆ ಹಡಗೊಂದರ ಮೇಲೆ ಗುಂಡುಹಾರಿಸಿದ ಪರಿಣಾಮವಾಗಿ ಉಭಯ ದೇಶಗಳ ನಡುವಣ ಸಂಬಂಧ ಹದಗೆಟ್ಟಿತು. ಇದರ ಪರಿಣಾಮವಾಗಿ, ಬೋಸ್‌ರನ್ನು ಸ್ವದೇಶಕ್ಕೆ ಮರಳಿಸಬೇಕೆನ್ನುವ ಆಜ್ಞೆಯನ್ನು ಜಪಾನ್ ಸರಕಾರ ಹಿಂದಕ್ಕೆ ಪಡೆಯಿತು.
ಈಗ ಜಪಾನಲ್ಲಿ ಇರಲು, ಇದ್ದುಕೊಂಡು ಓಡಾಡಲು ಸಂಪೂರ್ಣ ಸ್ವತಂತ್ರರಾದ ಬೋಸ್, ಐಜೊ ಮತ್ತು ಕೊಟ್ಟುಕೊರ ಮಗಳು ತೊಶಿಕೊಳನ್ನು ವಿವಾಹವಾಗಲು ಅನುಮತಿ ಬೇಡಿದರು. ಅದಾಗಲೇ ಬೋಸ್ ತೊಶಿಕೊಳ ಪ್ರೇಮಪಾಶದಲ್ಲಿ ಸಿಲುಕಿದ್ದರು. ತೊಶಿಕೊ ಒಪ್ಪಿಗೆ ನೀಡಿದ್ದರಿಂದ ಹಾಗೂ ಅವರಿಗೂ ಬೋಸ್ ತುಂಬ ಪ್ರಿಯರಾಗಿದ್ದರಿಂದ, ಅವರು ಈ ವಿವಾಹ ಪ್ರಸ್ತಾವಕ್ಕೆ ಒಪ್ಪಿದರು. 1918ರ ಜುಲೈಯಲ್ಲಿ ನವ ಜೋಡಿಯ ವಿವಾಹ ನಡೆಯಿತು.
ವಿದೇಶೀಯರನ್ನು, ವಿಶೇಷವಾಗಿ ದೇಶ ಭ್ರಷ್ಟರಾಗಿ ವಿದೇಶದಲ್ಲಿ ನೆಲೆಸಿರುವ ಒಬ್ಬ ವ್ಯಕ್ತಿಯನ್ನು ವಿವಾಹವಾಗುವುದು ಎಂದರೆ ಅದೊಂದು ಅತ್ಯಂತ ಕೆಟ್ಟ ಸಂಗತಿ ಎಂದು ಜಪಾನಿ ಸಮಾಜ ಪರಿಗಣಿಸಿದ್ದ ಒಂದು ಕಾಲದಲ್ಲಿ ತೊಶಿಕೊ, ಬೋಸ್‌ರವರನ್ನು ವಿವಾಹವಾಗಿದ್ದಳು. ಆದರೂ ಆಕೆ ಓರ್ವ ಸಾಮಾಜಿಕ ಬಹಿಷ್ಕೃತೆಯ ಜೀವನವನ್ನು ಮನಸಾರೆ ಒಪ್ಪಿದ್ದಷ್ಟೇ ಅಲ್ಲ; ಬೋಸ್‌ರವರು ಸಂಪೂರ್ಣ ನಿಷ್ಠೆಯಿಂದ ಭಾರತದ ಸ್ವಾತಂತ್ರ ಹೋರಾಟದಲ್ಲಿ ತೊಡಗಿ ತನ್ನ ಗುರಿಯನ್ನು ತಲುಪಲು ಅನುವಾಗುವಂತೆ ಗೃಹಕೃತ್ಯದ ಹೆಚ್ಚಿನ ಜವಾಬ್ದಾರಿಗಳನ್ನು ತಾನೇ ಹೊತ್ತುಕೊಂಡಳು.
ಅವಳ ಅಚಲ ಪ್ರೇಮ ಮತ್ತು ಬೆಂಬಲದ ಪರಿಣಾಮವಾಗಿ ಬೋಸ್‌ರವರ ಪ್ರಯತ್ನಗಳು ಬಹಳ ಯಶಸ್ವಿಯಾಗುವಂತೆ ಕಂಡಿತಾದರೂ, ಅವರ ಭರವಸೆ ಬಹಳ ಸಮಯ ಉಳಿಯಲಿಲ್ಲ. 1925ರಲ್ಲಿ 28ರ ಹರೆಯದಲ್ಲಿ, ಕ್ಷಯರೋಗಕ್ಕೆ ತುತ್ತಾಗಿ, ಇಬ್ಬರು ಚಿಕ್ಕಮಕ್ಕಳನ್ನು ಬಿಟ್ಟು ತೊಶಿಕೊ ಹಠತ್ತಾಗಿ ನಿಧನ ಹೊಂದಿದಳು. ದುಃಖತಪ್ತರಾದ ಬೋಸ್ ದುಃಖದಿಂದ ಚೇತರಿಸಿಕೊಳ್ಳಲು ತನ್ನ ಕೆಲಸದಲ್ಲಿ ಸಂಪೂರ್ಣವಾಗಿ ಮುಳುಗಿದರು. ಎರಡು ವರ್ಷಗಳ ಬಳಿಕ ತನ್ನ ಮಾವನೊಂದಿಗೆ ಪಾಲುಗಾರಿಕೆಯಲ್ಲಿ ಬೇಕರಿಯ ಮಹಡಿಯಲ್ಲಿ ಭಾರತೀಯ ಶೈಲಿಯ ಕರಿ ಮತ್ತು ಅನ್ನವನ್ನು ಮಾರುವ ಒಂದು ಚಿಕ್ಕ ರೆಸ್ಟೋರೆಂಟ್ ತೆರೆಯಲು ನಿರ್ಧರಿಸಿದರು.
‘ಇಂಡೋ-ಕರಿ’ ಎಂಬ ಹೆಸರಿನ ಖಾದ್ಯ ತಯಾರಿಸುವುದರಲ್ಲಿ ವೈಯಕ್ತಿಕ ಉಸ್ತುವಾರಿ ನೋಡಿಕೊಂಡ ಪರಿಣಾಮವಾಗಿ, ಅದನ್ನು ಸವಿಯಲು ಕುತೂಹಲಿಗಳಾದ ಟೋಕಿಯೋ ನಾಗರಿಕರು ರೆಸ್ಟೋರೆಂಟ್‌ಗೆ ಗುಂಪು ಗುಂಪಾಗಿ ಬರತೊಡಗಿದರು. ಸ್ವಲ್ಪವೇ ಸಮಯದಲ್ಲಿ ‘ನಕಮುರಾಯ’ ಬೋಸ್ ಜಪಾನಿನ ಮನೆ ಮಾತಾದರು. ಅಲ್ಲಿಯ ಪತ್ರಿಕೆಗಳು ನೀಡಿದ ಪ್ರಚಾರದಿಂದಾಗಿ ‘ಇಂಡೋ-ಕರಿ’ಗೆ ‘‘ಪ್ರೇಮ ಮತ್ತು ಕ್ರಾಂತಿಯ ಸವಿರುಚಿ’’ ಎಂಬ ಪ್ರಸಿದ್ಧ ಹೆಸರು ಬಂತು.