ರೈತ ಮೃತ್ಯು: ಕೊಲೆ ಶಂಕೆ
Update: 2017-08-31 14:51 GMT
ಹೊನ್ನಾವರ, ಆ.31: ತಾಲೂಕಿನ ಮಂಕಿಯ ಕುಂಬಾರಕೇರಿಯಲ್ಲಿ ರೈತರೊಬ್ಬರು ನೆಲಬಾವಿಯಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದು, ಇದು ಸಾವಲ್ಲ ಎಂಬ ಶಂಕೆ ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗಿದೆ.
ಕುಂಬಾರಕೇರಿ ನಿವಾಸಿ ಚೆನ್ನಪ್ಪ ಶೇಖಯ್ಯ ನಾಯ್ಕ (33) ಮೃತ ರೈತ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚೆನ್ನಪ್ಪ ಶೇಖಯ್ಯ ನಾಯ್ಕ ಈತನು ತಮ್ಮ ಗದ್ದೆಗೆ ನೀರು ಹರಿಸಲು ಹೋಗಿದ್ದಾಗ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ನೀರಿನಿಂದ ನೆಲ ಬಾವಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ನುಗ್ಗಿತ್ತು. ಮರಳಿ ಮನೆಗೆ ಬರುವಾಗ ಆಕಸ್ಮಿಕವಾಗಿ ನೆಲಬಾವಿಯಲ್ಲಿ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ದೂರು ದಾಖಲಿಸಿಕೊಂಡಿದ್ದಾರೆ.