ಖಭೌತ ವಿಜ್ಞಾನಿ ಚಂದ್ರಶೇಖರ್ ಕಂಡಂತೆ ಶೇಕ್ಸ್ ಪಿಯರ್

Update: 2017-09-03 06:41 GMT

ಎ.ಎಲ್. ರಾಸ್ ಶೇಕ್ಸ್‌ಪಿಯರ್‌ನ ಆತ್ಮಕಥೆಯನ್ನು ಮುಗಿಸುತ್ತಾ, ‘‘ಸುರುಳಿ ಸುತ್ತಿಕೊಂಡು ಹೆಡೆಯೆತ್ತಿ ವರ್ಣರಂಜಿತವಾಗಿ, ಪ್ರಕಾಶಮಾನವಾಗಿ ಶೋಭಿಸುವ ಹಾವಿನ ಹಾಗೆ ಅವನ ಕೃತಿಗಳು ಸಂಪೂರ್ಣವಾಗಿ ಆವರಿಸಿ ಕೊಂಡು ಅವನ ಪ್ರತಿಭೆಯನ್ನು ಅವಿಸ್ಮರಣೀಯವಾಗಿಸಿದೆ’’ ಎಂದು ಬರೆಯುತ್ತಾನೆ.

ಪ್ರಸಿದ್ಧ ಭಾರತೀಯ ಖಭೌತವಿಜ್ಞಾನಿ ಸುಬ್ರಮಣ್ಯ ಚಂದ್ರಶೇಖರ್‌ರಿಗೆ 1983ರಲ್ಲಿ ನೊಬೆಲ್ ಬಹುಮಾನ ದೊರಕಿತು.

ಆಗ ಕೆಲ ಅಮೆರಿಕನ್ ಪತ್ರಕರ್ತರು ಚಂದ್ರಶೇಖರ್‌ರನ್ನು ಭೇಟಿಯಾಗಿ ಮಾತನಾಡುತ್ತಿದ್ದಾಗ ನಿಮ್ಮ ಮುಂದಿನ ಯೋಜನೆಗಳೇನು? ಎಂದು ಪ್ರಶ್ನಿಸುತ್ತಾರೆ.

ಆಗ ಚಂದ್ರಶೇಖರ್ ನನಗೆ ಬಹಳ ದಿನಗಳಿಂದಲೂ ಒಂದು ಇಚ್ಛೆ ಇದೆ. ನಾನು ಶೇಕ್ಸ್‌ಪಿಯರ್‌ನನ್ನು ಓದಬೇಕು. ಬಹುಶಃ ಈಗ ಅರಾಮಾಗಿ ಓದಬಲ್ಲೆ ಎಂದು ಉತ್ತರಿಸುತ್ತಾರೆ. ಇಡೀ ಪತ್ರಕರ್ತರ ಸಮೂಹ ಹಾಗೂ ಜಗತ್ತು ಬೆರಗಾದ ಕ್ಷಣ ಅದು.

ಒಬ್ಬ ಖ್ಯಾತ ಖಭೌತ ವಿಜ್ಞಾನಿಯು ತಮ್ಮ ಸಂಶೋಧನೆಯ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಹೇಳುತ್ತಾರೆಂದು ನಿರೀಕ್ಷಿಸಿದ್ದವರಿಗೆ ಆಶ್ಚರ್ಯ ತಂದ ಸಂದರ್ಭ ಅದಾಗಿತ್ತು.

ಚಂದ್ರಶೇಖರ್ ಶೇಕ್ಸ್‌ಪಿಯರ್‌ನನ್ನು ಓದಬೇಕು ಎಂದು ಸುಮ್ಮನೆ ಹೇಳಿರಲಿಲ್ಲ. ಅವರು ಓದಿದರು. ತಮ್ಮ ಓದನ್ನು ಅರಗಿಸಿಕೊಂಡರು. ಶೇಕ್ಸ್‌ಪಿಯರ್ ನ್ಯೂಟನ್ ಹಾಗೂ ಸಂಗೀತಗಾರ ಬೀಥೊವನ್‌ರ ಸೃಜನಶೀಲತೆಯ ಬಗ್ಗೆ ಬರೆದೂಬಿಟ್ಟರು.

1987 ರಲ್ಲಿ ಅವರ “Truth and Beauty: Aesthetics and Motivations in Science” ಎಂಬ ಕೃತಿ ಪ್ರಕಟವೂ ಆಯಿತು.

- ಈ ಮೇಲಿನ ವಿವರಗಳಿರುವ ಕಿರು ಬರಹವೊಂದನ್ನು ನಾನು ಇತ್ತೀಚೆಗೆ ಕನ್ನಡದ ಜಾಲತಾಣವೊಂದರಲ್ಲಿ ಓದಿದೆ.

ಭೌತವಿಜ್ಞಾನಿಯೊಬ್ಬರು ಸಾಹಿತ್ಯ-ಸಂಗೀತ ಕುರಿತು ಆಸಕ್ತಿ ವ್ಯಕ್ತಪಡಿಸಿ, ಅಧ್ಯಯನ ನಡೆಸಿ, ವಿಜ್ಞಾನದೊಂದಿಗೆ ಅವನ್ನೆಲ್ಲಾ ಸಮೀಕರಿಸಿ ಪುಸ್ತಕವನ್ನು ಬರೆಯುವ ವಿಚಾರ ಅದ್ಭುತ ಅನಿಸು ವಂತದ್ದು. ಹಾಗಾಗಿ ಕುತೂಹಲದಿಂದ ನಾನೂ ಅವರ ಪುಸ್ತಕ ಓದಿದೆ. ಚಂದ್ರಶೇಖರ್‌ರವರ ಈ ಪುಸ್ತಕದ ಓದು ಒಂದು ವಿಶಿಷ್ಟ ಅನುಭವ ನೀಡುವಂತಾದ್ದು.

Shakespeare, Newton and Beethoven- Patterns of Creativity ಈ ಪುಸ್ತಕ ಪ್ರಕಟಗೊಂಡಿದ್ದು 1987ರಲ್ಲಿ. ಅಂದರೆ ಚಂದ್ರಶೇಖರ್‌ರಿಗೆ ನೊಬೆಲ್ ಪಾರಿತೋಷಕ ಬಂದ ನಾಲ್ಕು ವರ್ಷಗಳ ನಂತರವಾ ದರೂ, ಅದರಲ್ಲಿರುವ ಲೇಖನಗಳು 1946ರಿಂದ 1986ರ ತನಕ ನಾಲ್ಕು ದಶಕಗಳ ಅವರ ಉಪನ್ಯಾಸಗಳ ಸಂಗ್ರಹ. ಆ ಕೃತಿಯ ಮೂರನೆಯ ಅಧ್ಯಾಯ, 1975ರಲ್ಲಿ ಬರೆದದ್ದು. ಅಂದರೆ ಅವರಿಗೆ ನೊಬೆಲ್ ಬಹುಮಾನ ಪ್ರಕಟವಾಗುವ ಮೊದಲೇ, ನಂತರದಲ್ಲಲ್ಲ. ಆದರೆ ಚಂದ್ರಶೇಖರ್ ಶೇಕ್ಸ್‌ಪಿಯರ್, ನ್ಯೂಟನ್ ಹಾಗೂ ಬೀಥೊವನ್‌ರ ಸೃಜನಶೀಲತೆಯ ಬಗ್ಗೆ ಬರೆದದ್ದು ನಿಜ. ಇದರಲ್ಲಿ ಅವರು ಒಟ್ಟಾರೆೆ ಒಬ್ಬರ ಸಾಧನೆಗೆ, ಶ್ರಮ ಮತ್ತು ಸೃಜನಶೀಲತೆ ಒಂದಕ್ಕೊಂದು ಹೇಗೆ ಪೂರಕವಾಗಿ ಜೊತೆ ಜೊತೆಯಲ್ಲಿ ಸಾಗುತ್ತದೆ ಮತ್ತು ಸಾಗಬೇಕೆಂಬುದನ್ನು ಶೇಕ್ಸ್‌ಪಿಯರ್, ಬೀಥೊವನ್ ಹಾಗೂ ನ್ಯೂಟನ್‌ರವರ ಸಾಧನೆ, ಶ್ರಮ ಮತ್ತು ಸೃಜನಶೀಲತೆಗಳ ಉದಾಹರಣೆಯೊಂದಿಗೆ ವಿವರಿಸುತ್ತಾರೆ.

ಮೊದಲಿಗೆ ಶೇಕ್ಸ್ ಪಿಯರ್‌ನನ್ನು ಉದಾಹರಿಸುತ್ತಾ ಚಂದ್ರಶೇಖರ್ ಹೀಗೆ ಬರೆಯುತ್ತಾರೆ:

ಶೇಕ್ಸ್‌ಪಿಯರ್ ಹುಟ್ಟು ಪ್ರತಿಭಾವಂತನಲ್ಲ, ಶ್ರೀಮಂತಿಕೆಯ ಮನೆತನದವನಲ್ಲ. ಅವನ ಓದು ಸರಳ ಸಾಮಾನ್ಯದ್ದಾಗಿರುತ್ತದೆ. ಶೇಕ್ಸ್ ಪಿಯರ್ 1587ರಲ್ಲಿ ಮೊದಲ ಸಲ ಲಂಡನ್ ನಗರಕ್ಕೆ ಬಂದಾಗ ಅವನಿಗೆ 23 ವರ್ಷ. ಅವನಿಗೆ ಲಂಡನ್ ಹಿನ್ನೆಲೆಯ ಯಾವ ಅನುಕೂಲವೂ ಇರುವುದಿಲ್ಲ. ಹಾಗೆಯೇ ಇತರ ವಿದ್ವಾಂಸರಂತೆ ಆಕ್ಸ್‌ಫರ್ಡ್, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳ ವಿದ್ಯಾರ್ಹತೆಯೂ ಇರುವುದಿಲ್ಲ. ಈ ಮಿತಿಗಳು ಅವನ ಧೃತಿಗೆಡಿಸುವುದಿಲ್ಲ. ಅವನ ಮನೋಭಾವವು ಮೊದಲ ಕವಿತೆಗಳ ಈ ಸಾಲುಗಳಲ್ಲಿಯೇ ಪ್ರಕಟವಾಗುತ್ತದೆ.

Small have continual plodders ever won

Save base authority from other's book

- ಈ ಸಾಲುಗಳು ‘‘ನಿಧಾನವೇ ಪ್ರಧಾನ’’ ಎನ್ನುವುದನ್ನು ಹಾಗೂ ‘‘ತನ್ನ ನಿರಂತರ ಪರಿಶ್ರಮದಿಂದ ಹಂತ ಹಂತವಾಗಿ ಕ್ರಮಿಸುವವನು ಮಹತ್ತನ್ನು ಸಾಧಿಸುತ್ತಾನೆ’’ ಎಂಬುದನ್ನು ಪ್ರತಿಪಾದಿಸುತ್ತದೆ. ಜೊತೆಗೆ ನಿರಂತರ ಓದಿನಿಂದ ಸಾಧನೆ ಸಾಧ್ಯವೆಂಬ ಅರಿವಿನೊಂದಿಗೆ ಹೆಚ್ಚಿನ ಓದು ಮತ್ತು ಸುತ್ತಮುತ್ತಲಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಹೊಸ ಅನುಭವಗಳೊಂದಿಗೆ ಈ ಮಿತಿಗಳು ಹಾಗೂ ನ್ಯೂನತೆಗಳನ್ನು ನಿವಾರಿಸಿಕೊಳ್ಳುತ್ತಾನೆ. ಇದಕ್ಕೆ ಆ ಕಾಲದ ವೃತ್ತ ಪತ್ರಿಕೆಯಾದ ‘‘ಕ್ರೋನಿಕಲ್ ಆಫ್ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್ ಮತ್ತು ಐರ್ಲೆಂಡ್’’ನ ಓದು ಸಮಯೋಚಿತವಾಗಿ ಹೆಚ್ಚು ಸ್ಫೂರ್ತಿ ತುಂಬುತ್ತದೆ. ಅವು ಆ ಕಾಲದ ಅವನ ಐತಿಹಾಸಿಕ ನಾಟಕಗಳ ರಚನೆಗೆ ಪೂರಕವಾಗುತ್ತದೆ.

1592ರಲ್ಲಿ ‘ಹೆನ್ರಿ -VI' 'The Comedy of Errors', 'Love's Labour's Los' 'Two Gentle Men of Verona' ರ ಮೂರು ಭಾಗಗಳು ಹಾಗೂ ನಗೆ ನಾಟಕಗಳಾದ ಮತ್ತು ಬರೆದು ಂುಶಸ್ವಿಯಾಗುತ್ತಾನೆ. ಅಂದಿನ ಆಕ್ಸ್‌ಫರ್ಡ್, ಕೇಂಬ್ರಿಡ್ಜ್ ಹಿನ್ನೆಲೆಯ ಲೇಖಕರಾದ ರಾಬರ್ಟ್ ಗ್ರೀನಿ, ಮಾರ್ಲೋ ಮುಂತಾದವರ ಕೆಂಗಣ್ಣಿಗೆ ಗುರಿಯಾಗುತ್ತಾನೆ.

ರಾಬರ್ಟ್ ಗ್ರೀನಿಯಂತೂ ಈ ನಾಟಕಗಳನ್ನು ವಿಶ್ಲೇಷಿಸುತ್ತಾ ಶೇಕ್ಸ್‌ಪಿಯರ್‌ನನ್ನು ಕುರಿತು ‘‘ಬೆಳೆಯುವ ಕಾಗೆ ನಮ್ಮ ಗರಿಗಳನ್ನು ಹಚ್ಚಿ ಸಿಂಗರಿಸಿಕೊಂಡು ಸುಂದರವಾಗಿ ಕಾಣುತ್ತಿದೆ. ನಾಟಕಕಾರನ ಎದೆಯಲ್ಲಿ ವ್ಯಾಘ್ರನ ಹೃದಯವಿದೆ’’ ಎಂದು ದೂಷಿಸುತ್ತಾನೆ. ಇದು ನೇರವಾಗಿ ಶೇಕ್ಸ್‌ಪಿಯರ್ ಹೊರಗಿನವನು, ನಮ್ಮನ್ನು ಅತಿಕ್ರಮಿಸುತ್ತಿದ್ದಾನೆ ಎನ್ನುವಂತಿರುತ್ತದೆ. ಈ ದೂಷಣೆ ಗ್ರೀನಿ ಸತ್ತ ಆರು ವರ್ಷಗಳ ನಂತರವೂ ಕಾಡುತ್ತಿರುತ್ತದೆ. ಇದಕ್ಕೆಲ್ಲಾ ಕಾರಣ ಶೇಕ್ಸ್‌ಪಿಯರ್‌ನಿಗೆ ವಿಶ್ವವಿದ್ಯಾನಿಲಯಗಳ ಹಿನ್ನೆಲೆಯಾಗಲೀ, ಶ್ರೀಮಂತಿಕೆಯ ಬಲವಾಗಲಿ ಇಲ್ಲದಿರುವುದು.

ನಟ, ನಾಟಕಕಾರನಾಗಿ ಮೊದಲ ಯಶಸ್ಸುಗಳಿದ್ದರೂ, ಅವನ ಬದುಕು ಅನಿಶ್ಚಿತವಾಗಿ ಕೂಡಿರುತ್ತದೆ. ಸತತವಾದ ಪ್ಲೇಗ್ ಮಾರಿಯ ಆಕ್ರಮಣ ಮತ್ತು ನಾಟಕ ಕಂಪೆನಿಗಳ ಮುಚ್ಚುವಿಕೆ ಇವಕ್ಕೆ ಕಾರಣವಾಗಿರುತ್ತದೆ. ಇದರ ನಡುವೆಯೂ ಅವನಿಗೆ 1590ರಲ್ಲಿ ಸೌತಾಂಪ್ಟನ್‌ನ ಹದಿಹರೆಯದ ಅಧಿಕಾರಯುತ ಗೆಳತಿಯ ಆಶ್ರಯ ಸಿಗುತ್ತದೆ. ಆ ಗೆಳೆತನ ಮತ್ತು ಪ್ರೇಮದ ನಾಲ್ಕು ವರ್ಷಗಳು ಅವನ ಸಾಹಿತ್ಯ ಕೃಷಿಯ, ಕಲೆಯ ಕೌಶಲ್ಯದ ಪ್ರಗತಿ ಮತ್ತು ಅವಕಾಶಗಳ ನಿರ್ಣಾಯಕ ಘಟ್ಟವಾಗುತ್ತದೆ. ಅವನ ಪ್ರತಿಭೆ, ಸೃಜನಶೀಲ ರಚನೆಗಳಿಂದ ಅರಳಿ ಪ್ರಬುದ್ಧತೆಯನ್ನು ಪಡೆಯುತ್ತದೆ.

'Merchant of Venice', 'The taming of Shre' 'Richard - III' 'Venus and Adonis' 'The rape of Lucrece'

ಈ ಪ್ರೌಢಿಮೆ ಮೇಲ್ಕಾಣಿಸಿದ ಕೃತಿಗಳ ಜೊತೆಗೆ ಮತ್ತು ಹಾಗೂ ಅವನ ಅತ್ಯುತ್ತಮ ನಿರೂಪಣೆಯ ಪದ್ಯಗಳಾದ ಮತ್ತು ಪ್ರಕಟಗೊಂಡು ಅವನ ಆಶ್ರಯದಾತಳಿಗೆ ಅರ್ಪಣೆಯಾಗುತ್ತದೆ. ಅದೇ ಸಮಯದಲ್ಲಿ ತನ್ನ ಆಶ್ರಯದಾತಳ ಸೇವೆಯ ಕುರುಹಾಗಿ ಕೆಲವು ಸಾನೆಟ್ (ಸುನೀತ)ಗಳನ್ನು ಬರೆಯುತ್ತಾನೆ. ಈ ಸಾನೆಟ್‌ಗಳು ಅವನ ಅಂದಿನ ಮನೋಭಾವ, ಅವನ ಕಲೆ, ಕೌಶಲ್ಯ, ಆಶ್ರಯದಾತಳೊಂದಿಗಿನ ಗೆಳೆತನ, ಅವಲಂಬನೆಯ ಅಸಹಾಯಕತೆ ಪ್ರಕಟಗೊಂಡಿದೆ. ಇಷ್ಟಾದರೂ ವಯಸ್ಸಿನ ಅಂತರವಿದ್ದ, ಶ್ರೀಮಂತಿಕೆಯ, ಅಧಿಕಾರದ ಆಶ್ರಯದಾತೆಗೂ ಹಾಗೂ ನಟ, ನಾಟಕಕಾರ ಶೇಕ್ಸ್ ಪಿಯರ್‌ನ ನೆಲೆಗಳ ಅಂತರ ಭಿನ್ನವಾಗಿರುವ ಕಾರಣ ಅವರ ಗೆಳೆತನ ನವಿರಾಗಿ ಸಾಗುವುದಿಲ್ಲ. ಅವನ ಸಾನೆಟ್‌ಗಳ ನಾಯಕಿ ತನ್ನ ಗಮನವನ್ನು ಶೇಕ್ಸ್ ಪಿಯರ್‌ನಿಂದ ಹೊರತುಪಡಿಸಿ ತನ್ನ ಅಧಿಕಾರದ ಜವಾಬ್ದಾರಿಗಳಲ್ಲಿ ಕೇಂದ್ರೀಕರಿಸುತ್ತಾಳೆ.

ಈ ಸಂಬಂಧವು ಎಷ್ಟು ಗಾಢವಾಗಿ ಅವನನ್ನು ಆವರಿಸಿಕೊಂಡಿ ರುತ್ತದೆಂದರೆ, ಅವನು ತನ್ನ ಭಾವನೆಗಳನ್ನೆಲ್ಲಾ ಪ್ರಾಮಾಣಿಕತೆಯಿಂದ ತನ್ನ ಸಾನೆಟ್‌ಗಳಲ್ಲಿ ತೀಕ್ಷ್ಣವಾಗಿ ಧಾರೆಯೆರೆಯುತ್ತಾನೆ. ಕೊನೆಗೆ ಆ ಪ್ರೀತಿಗಾಗಿ ಸಾವನ್ನು ಸಹ ಬಯಸಿ, ‘‘ನನ್ನ ಪ್ರಾಣ ಅವಳ ಪ್ರೀತಿಗಿಂತ ಹೆಚ್ಚು ದಿನ ಬಾಳುವುದಿಲ್ಲ’’ ಎಂದು ಭಾವಿಸುತ್ತಾನೆ. ಈ ಸಾನೆಟ್(ಸುನೀತ)ಗಳ ಉದ್ದಕ್ಕೂ ಅನಿಶ್ಚಿತ, ಅಸಹಾಯಕತೆಗಳು ಕಂಡುಬಂದರೂ ಸಹ, ಅವನ ಪ್ರವಾದಿಯಂತ ಮನೋಸ್ಥೈರ್ಯ ಆಗಾಗ ಚಿಮ್ಮುತ್ತಿರುತ್ತದೆ.

ಇದು ಅವನ 55ನೆಯ ಸುನೀತದಲ್ಲಿ ಪ್ರಕಟಗೊಳ್ಳುತ್ತದೆ. ಇಷ್ಟೆಲ್ಲಾ ಅನಿಶ್ಚಯಗಳಿಗೆ ಮತ್ತೊಂದು ಕಾರಣ ಶೇಕ್ಸ್‌ಪಿಯರ್‌ನ ಸೌತಾಂಪ್ಟನ್ ಆಶ್ರಯಕ್ಕೆ ಮಾರ್ಲೊ ಭಯಾನಕ ಶತ್ರುವಾಗಿ ಕಾಣಸಿಗುತ್ತಾನೆ. ಇವನ ‘ವೀನಸ್ ಅಂಡ್ ಅಡೋನಿಸ್’ ಪದ್ಯವನ್ನು ಪಕ್ಕಕ್ಕೆ ಸರಿಸುವ ಸಲುವಾಗಿ ಮಾರ್ಲೋ ’ಹೀರೋ ಮತ್ತು ಲಿಯಾಂಡರ್’ ಬರೆಯುತ್ತಾನೆ. ಶೇಕ್ಸ್ ಪಿಯರ್‌ನಿಗೆ ಕಸಿವಿಸಿಯಾಗುತ್ತದೆ. ಮಾರ್ಲೊನ ಶತ್ರುತ್ವ ಮತ್ತು ಉನ್ನತಿಯನ್ನು ಕಂಡು ತನ್ನ ಭಾವನೆಗಳನ್ನು ಸಾನೆಟ್‌ವೊಂದರಲ್ಲಿ ಪ್ರಕಟಿಸುತ್ತಾ:

"Or, being wrecked, I am worthless boat

He of tall building and of goodly pride

Then if he thrive and I be cast away

The worst was this, my love was my decay'' -ಎಂದು ಬರೆದುಕೊಳ್ಳುತ್ತಾನೆ.

"As you like itಈ ಹೋರಾಟ ಹೆಚ್ಚು ದಿನ ಉಳಿಯುವುದಿಲ್ಲ. ಮಾರ್ಲೋ 1593ರಲ್ಲಿ ಈ ಕಾದಾಟದಲ್ಲಿಯೇ ಸಾವನ್ನಪ್ಪುತ್ತಾನೆ. ಇದನ್ನು ಮನಸ್ಸಿನಲ್ಲಿಟ್ಟಿದ್ದ ಶೇಕ್ಸ್‌ಪಿಯರ್ ತನ್ನ ’’ ನಾಟಕದಲ್ಲಿ ಓರೆಗಲ್ಲಿಗೆ ಹಚ್ಚಿ,‘‘ಒಬ್ಬ ವ್ಯಕ್ತಿಯ ಕಾವ್ಯ ಅರ್ಥವಾಗ ದಿದ್ದಾಗ ಅಥವಾ ಅವನ ಪ್ರತಿಭೆಯನ್ನು ಮಗುವಿನ ಮುಗ್ಧತೆಯಿಂದ ಅರ್ಥಮಾಡಿ ಕೊಂಡು ಶ್ಲಾಘಿಸ ದಿದ್ದಾಗ ಅವನಿಗೆ ಸಾವಿಗಿಂತ ಹೆಚ್ಚಿನ ಆಘಾತವಾ ಗುತ್ತದೆ’’ ಎಂದು, "whoever loved that loved not at first sight?'' ಎನ್ನುತ್ತಾ ಮಾರ್ಲೋನಿಗೆ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಾನೆ.

ಅವನನ್ನು ‘‘ಸತ್ತ ಕುರಿಗಾಹಿ’’ ಎಂದು ಸಹ ಸಂಬೋಧಿಸುತ್ತಾನೆ.

ಇದರೊಂದಿಗೆ ಅವನ ಸಾನೆಟ್‌ಗಳ ನಾಯಕಿ, ಸೌತಾಂಪ್ಟನ್‌ನ ಆಶ್ರಯದಾತಳ ಗೆಳೆತನವೂ ಕೊನೆಯಾಗುತ್ತದೆ. ಅವನ ಭಾವನೆಗಳೆಲ್ಲಾ ಸೌತಾಂಪ್ಟನ್ ಸಂಕಲನದ ಕೊನೆಯ ಸಾನೆಟ್‌ನಲ್ಲಿ ಉತ್ಕೃಷ್ಟವಾಗಿ ಪ್ರಕಟವಾಗಿದೆ. ಅವನು, ಸುಳ್ಳು ಸಾಕ್ಷಿಗಳು ನನ್ನನ್ನು ಮೋಸಗೊಳಿಸಿದವು. ನನ್ನ ಆಣೆ ಪ್ರಮಾಣಗಳು ದುರುಪಯೋಗವಾದವು. ನಿನ್ನ ಮೇಲಿದ್ದ ನನ್ನ ಪ್ರಾಮಾಣಿಕ ನಂಬಿಕೆಗಳೆಲ್ಲಾ ನಿನ್ನಲ್ಲೆ ಕೊನೆಯಾದವು. ನಾನು ಮುಕ್ತ ಹಾಗು ಬಡವ, ಕಲ್ಮಶವಾಗದ ನಾನು ನಿನಗೆ ಮಾತ್ರ ಸೀಮಿತ’’ ಎಂದು ಬರೆಯುತ್ತಾನೆ.

1594ರಲ್ಲಿ ಆಗ ತಾನೆ ಪ್ರಾರಂಭವಾಗುತ್ತಿದ್ದ ಲಾರ್ಡ್ ಚೆಂಬರ್ಲೈನ್ ಕಂಪೆನಿಯ ಪಾಲುದಾರಿಕೆ ಪಡೆಯಲು 100 ಪೌಂಡ್‌ಗಳಷ್ಟು ಹಣವನ್ನು ಈ ಗೆಳತಿ ನೀಡಿರುತ್ತಾಳೆ. ಈ ಹೊಸ ಒಡಂಬಡಿಕೆಯಿಂದ ಅವನ ಭವಿಷ್ಯ ನಿರ್ಧಾರ ವಾಗಿ ಅವನ ಪ್ರತಿಭೆ ಮತ್ತಷ್ಟು ಪ್ರಬುದ್ಧತೆಯನ್ನು ಪಡೆಯುತ್ತದೆ. ಆ ವರ್ಷವೇ ಅವನು, "A Mid summer Night's Dream'', "Romeo and Juliet'', "As You Like It'' ಮತ್ತು "Much Ado About Nothing'' ನಾಟಕಗಳ ಜೊತೆಗೆ ಐತಿಹಾಸಿಕ ನಾಟಕಗಳಾದ ಹೆನ್ರಿ-IV, V, VIರ ಸರಣಿಗಳನ್ನು ಬರೆಯುತ್ತಾನೆ. ನಾವು ಈಗಾಗಲೇ ತಿಳಿದಿರುವಂತೆ ಮೇಲ್ಕಂಡ ನಾಟಕಗಳ ವಿಷಯ ಮತ್ತು ಭಾಷಾ ಪ್ರೌಢಿಮೆಯು ಎಲ್ಲರ ಶ್ಲಾಘನೆಗೆ ಒಳಪಟ್ಟಿದೆ. ಹೆನ್ರಿ-IV ನಾಟಕವನ್ನಂತೂ ಎಲ್ಲರೂ ಅದ್ಭುತ ಎಂದು ಪ್ರತಿಪಾದಿಸುತ್ತಾರೆ.

"A Mid summer Night's Dream'' "Hamlet''ಅವನ ಮಧ್ಯಕಾಲೀನ ಕೃತಿಗಳು ನಿಂದ ಶುರುವಾಗಿ, (16001601) ನಾಟಕದಲ್ಲಿ ಕೊನೆಗೊ ಳ್ಳುತ್ತದೆ. ಹ್ಯಾಮ್ಲೆಟ್ ನಾಟಕದಲ್ಲಿ ಶೇಕ್ಸ್‌ಪಿಯರ್ ವಯಸ್ಸು ಮತ್ತು ಸಮಯಗಳ ಪ್ರವೃತ್ತಿಯನ್ನು, ದೇಹ ಪ್ರಕೃತಿಗಳನ್ನು ಕಟ್ಟುವ ಜೊತೆಗೆ ಆಗ ಗರಿಗೆೆದರುತ್ತಿದ್ದ ಬೆಂಜಾನ್ಸನ್ ಮತ್ತು ಬ್ಲಾಕ್ ಫ್ರಿಯರ್ ಥಿಯೇಟರ್ ವೈರತ್ವವನ್ನು ಕಾಣಿಸುತ್ತಾನೆ. ಹ್ಯಾಮ್ಲೆಟ್ ನಂತರ ಬಂದ "All's well that ends well'' "Measure of Measure'' ಮತ್ತು ಕೃತಿಗಳು ಶೇಕ್ಸ್‌ಪಿಯರ್ ಎಲ್ಲಾ ಭ್ರಮೆಗಳಿಂದ ಹೊರಬರುವ ನಾಟಕಗಳಾಗಿ ಕಾಣುತ್ತವೆ. ಶೇಕ್ಸ್‌ಪಿಯರ್ ಕೃತಿಗಳ ವಿದ್ವಾಂಸ ಎ.ಎಲ್ ರಾಸ್, ‘‘ಈ ದುರಂತ ನಾಟಕಗಳು ಶೇಕ್ಸ್ ಪಿಯರ್‌ನ ಎಲ್ಲಾ ಒತ್ತಡಗಳನ್ನು ಹೊರಚೆಲ್ಲಿ ಹೊಸ ಬೆಳಕನ್ನು ಕಾಣುವಲ್ಲಿ ಸಹಕಾರಿಯಾಗಿವೆ’’ ಎಂದು ಬರೆಯುತ್ತಾನೆ.

1604-08ರಲ್ಲಿ ಒಂದರ ನಂತರ ಇನ್ನೊಂದು, ಮತ್ತೊಂದು ಎಂದು ತಮಗೆ ತಾವೇ ಪೈಪೋಟಿಗೆ ಬಿದ್ದಂತೆ ಶೇಕ್ಸ್‌ಪಿಯರ್‌ನ ಒಥೆಲೋ, ಕಿಂಗ್ ಲಿಯರ್, ಮ್ಯಾಕ್‌ಬೆತ್, ಆಂಥೋನಿ ಮತ್ತು ಕ್ಲಿಯೋಪಾತ್ರ ಹಾಗೂ ಕೊರಿಯೋಲನಸ್ ನಾಟಕಗಳು ಹೊರಬರುತ್ತವೆ. ಅವು ಅದ್ಭುತ ಭೂಮಿಕೆಯ ಹಾಗೂ ಅವನ ನಿಷ್ಕ್ಕಲ್ಮಶ ಪ್ರತಿಭೆ ಮತ್ತು ಸ್ಫೂರ್ತಿಯ ದ್ಯೋತಕವಾಗಿ ಕಾಣುತ್ತವೆ. ವಿದ್ವಾಂಸ ಹಜ್ಲಿಟ್,’’ಕಿಂಗ್ ಲಿಯರ್, ಮ್ಯಾಕ್‌ಬೆತ್ ,ಒಥೆಲೋ ಮತ್ತು ಹ್ಯಾಮ್ಲೆಟ್ ಈ ನಾಲ್ಕು ನಾಟಕಗಳು ಶೇಕ್ಸ್‌ಪಿಯರ್‌ನ ಪ್ರಮುಖ ದುರಂತ ನಾಟಕಗಳೆಂದು ಗುರುತಿಸಿಕೊಂಡಿವೆ.

 ಕಿಂಗ್ ಲಿಯರ್ ಮೋಹದ ಪರಮಾವಧಿಯನ್ನು ಪ್ರದರ್ಶಿಸಿದರೆ, ಮ್ಯಾಕ್‌ಬೆತ್ ಭ್ರಮೆಯ ಕ್ರೂರತನ ಹಾಗೂ ತ್ವರಿತ ಸಾಹಸಗಾಥೆಯನ್ನು ತೋರಿಸುತ್ತದೆ.

ಒಥೆಲೋ ಭಾವನೆ ಮತ್ತು ಕುತೂಹಲಗಳ ಸಮಾಗಮವಾದರೆ, ಹ್ಯಾಮ್ಲೆಟ್ ಭಾವೋತ್ಕರ್ಷ ಮತ್ತು ಕರುಣಾರಸದೊಂದಿಗೆ ಶೇಕ್ಸ್‌ಪಿಯರ್‌ನ ಆಲೋಚನೆಗಳು ಸುಸಂಸ್ಕೃತವಾಗಿ ಪರಿಷ್ಕೃತಗೊಂಡು ವಿಕಾಸ ಹೊಂದಿರುವುದನ್ನು ನೋಡಿಸುತ್ತದೆ. ಹೀಗೆ ಪ್ರತಿಯೊಂದು ನಾಟಕಗಳಲ್ಲೂ ತೋರಿಸಿದ ಪ್ರತಿಭೆ, ಆರಿಸಿಕೊಂಡ ವಿಷಯಗಳು ಅಸಾಧಾರಣ ಹಾಗೂ ಆಶ್ಚರ್ಯಕರ. ಈ ಎಲ್ಲವೂ ಒಬ್ಬ ವ್ಯಕ್ತಿಯ ಒಂದೇ ಮನಸ್ಸಿನ ವಿವಿಧ ಸೃಜನಶೀಲ ರಚನೆಗಳು. ಯಾವುದೂ ಇನ್ನೊಂದರ ಆಧಾರವನ್ನು ಬಿಟ್ಟುಕೊಡುವುದಿಲ್ಲ. ಈ ಸ್ವಂತಿಕೆ ಮತ್ತು ವಿಭಿನ್ನ ವೈಶಿಷ್ಟ್ಯ ಅವನ ಸ್ವಭಾವದ ಸತ್ಯದ ಅನಾವರಣ’’ ಎನ್ನುತ್ತಾನೆ.

ಹಜ್ಲಿಟ್ ಬಿಟ್ಟಿದ್ದ ‘‘ಆಂಥೋನಿ ಮತ್ತು ಕ್ಲಿಯೋಪಾತ್ರ’’ ದುರಂತ ನಾಟಕವನ್ನು ಟಿ.ಎಸ್. ಎಲಿಯಟ್, ವರ್ಣಿಸುತ್ತಾ, ವಿಶ್ಲೇಷಿಸುತ್ತಾ,

‘‘ಈ ನಾಟಕ ಪ್ರಬುದ್ಧ, ನಟರು ಮತ್ತು ಪ್ರಬುದ್ಧ ಪ್ರೇಕ್ಷಕರಿಗೆ ಮಾತ್ರ ಸೀಮಿತ. ಯಾವುದೇ ಅಪ್ರಬುದ್ಧ ನಟ ಅಥವಾ ಪ್ರೇಕ್ಷಕ ಮಧ್ಯವಯಸ್ಸಿನ ಪ್ರೇಮಿಗಳ ಭಾವನೆಗಳ ಒಳಹೊಕ್ಕಲಾರ. ಇದರ ಅಸಾಮಾನ್ಯ ಗೆಲುವಿರುವುದು ಒಂದೇ ಬಾಳಿನಲ್ಲಿ, ಒಂದೇ ಪಾತ್ರದಲ್ಲಿ ಮಿಳಿತಗೊಂಡಿರುವ ನಾಯಕತ್ವ ಮತ್ತು ಕಲ್ಮಶ ಗುಣಗಳ ಅನಾವರಣ. ಮಾರ್ಲೋ ಮತ್ತು ಡ್ರೈಡನ್‌ಗಿಂತ ಅತಿ ಘನತೆಯಿಂದ ಶೇಕ್ಸ್ ಪಿಯರ್ ಈ ಪಾತ್ರಗಳನ್ನು ರೂಪಿಸಿದ್ದಾನೆ. ಅವನು ಪಾತ್ರಗಳಲ್ಲಿ ಘನತೆಯ ಜೊತೆಗೆ ಬಲಹೀನತೆಗಳಲ್ಲಿ ಮಾನವೀಯ ಗುಣಗಳನ್ನು ತರುತ್ತಾನೆ. ಮಾನವ ಸಹಜ ಬಲಹೀನತೆ ಇಲ್ಲದಿದ್ದಲ್ಲಿ ನಮಗೆ ಶ್ರೇಷ್ಠತೆಯಾಗಲಿ ಮತ್ತು ದುರಂತದ ಭಯಾನಕತೆಯಾಗಲಿ ಗೋಚರಿಸುವುದಿಲ್ಲ. ಇತರರು ಗದ್ಯದಲ್ಲಿ ಹೇಳಲಾಗದ್ದನ್ನು ಶೇಕ್ಸ್ ಪಿಯರ್ ಕಾವ್ಯರೂಪದಲ್ಲಿ ಅದ್ಭುತವಾಗಿ ಕಟ್ಟಿಕೊಡುತ್ತಾನೆ’’ ಎಂದು ವಿಮರ್ಶಿಸುತ್ತಾನೆ.

-VIII''(But the mood of The Tempest is one of farewell)'' ಶೇಕ್ಸ್‌ಪಿಯರ್‌ನ ಕೊನೆಯ ಮೂರು ನಾಟಕಗಳು ‘‘ದ ವಿಂಟರ್ ಟೇಲ್’’, ‘‘ದ ಟೆಂಪೆಸ್ಟ್’’ ಮತ್ತು ‘‘ಹೆನ್ರಿ . ಹಜ್ಲಿಟ್ ‘‘ದ ವಿಂಟರ್ ಟೇಲ್’’ ನಾಟಕವನ್ನು ‘‘ಅತಿ ಸುಂದರ, ಮತ್ತೆ ಮತ್ತೆ ನೋಡಿಸಿಕೊಳ್ಳುವ ನಾಟಕ’’ ಎಂದರೆ ಇನ್ನೊಬ್ಬ ವಿದ್ವಾಂಸ ಕ್ಯೂ,‘‘ಇದು ಯಾವುದೇ ವಿಮರ್ಶೆಗೆ ಮತ್ತು ಹೊಗಳಿಕೆಗೆ ಹೊರತಾದ ನಾಟಕ’’ ಎನ್ನುತ್ತಾ, ಹಾಗೆಯೇ ತನ್ನ ವಿಮರ್ಶೆಯನ್ನು ಶೇಕ್ಸ್ ಪಿಯರ್ ನ ಕೊನೆಗಿಂತ ಹಿಂದಿನ ನಾಟಕ ‘‘ದ ಟೆಂಪೆಸ್ಟ್’’ ಕಡೆಗೆ ತಿರುಗಿಸುತ್ತಾ, ‘‘ಶೇಕ್ಸ್‌ಪಿಯರ್ ಹೊಸ ವಿಚಾರಗಳನ್ನು ಹುಡುಕುತ್ತಾ ಆ ಹೊತ್ತಿಗೆ ಕಾಡುವ ಪ್ರಧಾನ ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ. ಹಾಗೆ ಆ ನಾಟಕದಲ್ಲಿ ಸೃಷ್ಟಿಸಿರುವ ಭೂಮಿಕೆ ಹಾಗೂ ಮನೋಧರ್ಮ ಎಲ್ಲೋ ವಿದಾಯವನ್ನು ಹೇಳುವ ರೀತಿಯಲ್ಲಿದೆ ಎಂದಿರುವುದನ್ನು ವಿಜ್ಞಾನಿ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ.

–VIII ಇದಕ್ಕೆ ಪೂರಕವಾಗಿ ಚಂದ್ರಶೇಖರ್‌ರವರ ಬರಹದ ಹೊರತಾಗಿ ಹೇಳುವುದಾದರೆ, ನಮ್ಮ ರಾಷ್ಟ್ರ ಕವಿ ಕುವೆಂಪುರವರು ‘ದ ಟೆಂಪೆಸ್ಟ್’ ನಾಟಕವನ್ನು ‘ಬಿರುಗಾಳಿ’ ಎಂದು ಅನುವಾದಿಸಿ ಹಾಗೂ ವಿಮರ್ಶಿಸುತ್ತಾ, ‘‘ಶೇಕ್ಸ್ ಪಿಯರ್ ಕೊನೆ ಕೊನೆಗೆ ಬರೆದ ನಾಟಕಗಳಲ್ಲಿ ಟೆಂಪೆಸ್ಟ್ ಒಂದು. ಅದು ಕೊಟ್ಟ ಕೊನೆಯದಲ್ಲವಾದರೂ ಅದರ ಹಿಂದಿನದೆಂದು ಅನೇಕ ವಿದ್ವಾಂಸರ ಊಹೆ. ಅದೇನೆ ಇರಲಿ, ವೈವಿಧ್ಯಮಯ ಜೀವನವನ್ನು ಬಾಳಿ, ಬದುಕಿನ ಸಿಹಿ ಕಹಿಗಳನ್ನುಂಡು ಬಾಳಿನ ಗುಟ್ಟನ್ನು, ಬೆಲೆಯನ್ನು ಅರಿತ ಪರಿಪಕ್ವಾನುಭವದ, ಸಮಗ್ರ ದೃಷ್ಟಿಯ ಪಕ್ವ ಮನಸ್ಸಿನ ನಾಟಕಕಾರನ ಪರಿಣಿತ ಕೃತಿ ಅದು ಎಂಬುದು ನಿರ್ವಿವಾದ ಸಂಗತಿ’’ ಎಂದು ಬರೆಯುತ್ತಾರೆ. ಶೇಕ್ಸ್ ಪಿಯರ್ ಕೊನೆಯದಾಗಿ ಐತಿಹಾಸಿಕ ನಾಟಕಕ್ಕೆ ಮರಳಿ ಹೆನ್ರಿ ಬರೆ ಯುತ್ತಾನೆ. ಅವನ ಬರವಣಿಗೆ ಐತಿಹಾಸಿಕ ನಾಟಕಗಳಾದ ಹೆನ್ರಿ -VI–III–VIII , ರಿಚರ್ಡ್ ರಿಂದ ಮೊದಲ್ಗೊಂಡು ಹೆನ್ರಿ ಮತ್ತು ಎಲಿಜಬೆತ್‌ಳ ಜನನದೊಂದಿಗೆ ಮುಕ್ತಾಯವಾಗುತ್ತದೆ.

   (ಮಾರ್ಲೊ)

  

 

(ರಾಬರ್ಟ್ ಗ್ರೀನಿ )

ಎ.ಎಲ್. ರಾಸ್ ಶೇಕ್ಸ್‌ಪಿಯರ್‌ನ ಆತ್ಮಕಥೆಯನ್ನು ಮುಗಿಸುತ್ತಾ, ‘‘ಸುರುಳಿ ಸುತ್ತಿಕೊಂಡು ಹೆಡೆಯೆತ್ತಿ ವರ್ಣರಂಜಿತವಾಗಿ, ಪ್ರಕಾಶಮಾನವಾಗಿ ಶೋಭಿಸುವ ಹಾವಿನ ಹಾಗೆ ಅವನ ಕೃತಿಗಳು ಸಂಪೂರ್ಣವಾಗಿ ಆವರಿಸಿಕೊಂಡು ಅವನ ಪ್ರತಿಭೆಯನ್ನು ಅವಿಸ್ಮರಣೀಯವಾಗಿಸಿದೆ’’ ಎಂದು ಬರೆಯುತ್ತಾನೆ.

ಒಂದು ಕಾಲದ ಶತ್ರು ಬೆಂಜಾನ್ಸನ್ ಶೇಕ್ಸ್‌ಪಿಯರನಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ, ‘‘ಅವನು ಒಂದು ಕಾಲಘಟ್ಟಕ್ಕಷ್ಟೇ ಸೀಮಿತವಾಗಿಲ್ಲ, ಸದಾ ಸ್ಮರಣೀಯ’’ ಎನ್ನುತ್ತಾನೆ. ಇತ್ತೀಚಿನ ಪ್ರಖ್ಯಾತ ಬರಹಗಾರ್ತಿಯಾದ ವರ್ಜೀನಿಯಾ ವೂಲ್ಫ್, ‘‘ಶೇಕ್ಸ್‌ಪಿಯರ್ ನನಗೆ ತಿಳಿದಿರುವ ಹಾಗೆ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಒಮ್ಮೆಗೆ ಎಲ್ಲರನ್ನೂ ಮೀರಿಸಿದ ಬರಹಗಾರ’’ ಎನ್ನುತ್ತಾಳೆ.

 

( ಎಲಿಯಟ್ )

ಟಿ.ಎಸ್.ಎಲಿಯಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘‘ಶೇಕ್ಸ್‌ಪಿಯರ್ ಸಾಹಿತ್ಯ ಪ್ರಕಾರದಲ್ಲಿ ಒಂದು ಮಾದರಿಯನ್ನು ಸೃಷ್ಟಿಸಿದ್ದಾನೆ. ನಾಟಕ ಮತ್ತು ಕಾವ್ಯ ಪ್ರಕಾರಗಳ ವಸ್ತು ವಿಷಯದಲ್ಲಾಗಲಿ, ಭೂಮಿಕೆಯಲ್ಲಾಗಲಿ, ಮನೋಧರ್ಮದಲ್ಲಾಗಲಿ ಮೊದಲಿನಿಂದ ಕೊನೆಯ ತನಕ ನಿರಂತರವಾದ ವಿಕಾಸವನ್ನು ಸಾಧಿಸಿದ್ದಾನೆ. ಪ್ರತಿ ನಾಟಕದಲ್ಲಿ ವ್ಯಕ್ತಪಡಿಸಿದ ಮನೋಭಾವಗಳು ಒಂದರಿಂದ ಒಂದಕ್ಕೆ ಉತ್ಕೃಷ್ಟಗೊಂಡು ಪ್ರೌಢಿಮೆಯನ್ನು ಮೆರೆಯುತ್ತವೆ. ನಿಶ್ಚಯವಾಗಿ ಹೇಳುವುದಾದರೆ ಒಂದು ನಾಟಕದ ಪರಿಪೂರ್ಣತೆ ಆ ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಅವನ ಅಷ್ಟೂ ನಾಟಕಗಳಲ್ಲಿ ಯಾವ ಕ್ರಮದಲ್ಲಿದೆ ಹಾಗೂ ಅದರ ಮೊದಲಿನ ಮತ್ತು ನಂತರದ ಎಲ್ಲಾ ನಾಟಕಗಳಿಗೆ ಹೇಗೆ ಸಂಬಂಧಿಸಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಅವನ ಎಲ್ಲಾ ಕೃತಿಗಳನ್ನು ಅರಿತಿದ್ದರೆ ಮಾತ್ರ ಅವನ ಒಂದು ಕೃತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಹುದು. ಅಂದಿನ ಯಾವುದೇ ನಾಟಕಕಾರ ಶೇಕ್ಸ್‌ಪಿಯರ್‌ನ ಈ ಸೃಜನಶೀಲ ಪರಿಪೂರ್ಣತೆಗೆ ಹತ್ತಿರವೂ ಸುಳಿಯಲಾರ’’ ಎನ್ನುತ್ತಾನೆ.

 

(ಕುವೆಂಪು )

(ಬೀಥೊವನ್)

ಶೇಕ್ಸ್‌ಪಿಯರ್‌ನ ಸೃಜಶೀಲತೆಯ ಬಗ್ಗೆ ಇಷ್ಟು ಉಲ್ಲೇಖಗಳನ್ನು ನೀಡಿ ಬರೆದ ಚಂದ್ರಶೇಖರ್, ‘‘ಶೇಕ್ಸ್‌ಪಿಯರ್ ಕಲೆ, ಕಾವ್ಯ, ಬರವಣಿಗೆಯ ಕೌಶಲ್ಯ, ಪ್ರತಿಭೆಯ ವಿಕಾಸ ಅವನ ವೃತ್ತಿ ಜೀವನದ ಪ್ರಗತಿಗೆ ಪೂರಕವಾದದ್ದು ನಿಜಕ್ಕೂ ಅದ್ಭುತ. ಹ್ಯಾಮ್ಲೆಟ್‌ನಲ್ಲಿನ ಭಾವೋತ್ಕರ್ಷಗಳು ಅಸಂಖ್ಯಾತ ಹೃದಯಗಳನ್ನು ಆಳವಾಗಿ ನಾಟಿದ ಹಾಗೆ ಮತ್ತು ಧರೆ�

Writer - ರೂಪದರ್ಶಿ ಜಿ. ವೆಂಕಟೇಶ

contributor

Editor - ರೂಪದರ್ಶಿ ಜಿ. ವೆಂಕಟೇಶ

contributor

Similar News