ಗೌರಿ ಲಂಕೇಶ್ ಹತ್ಯೆ ವಾಕ್‌ಸ್ವಾತಂತ್ರದ ಸದ್ದಡಗಿಸುವ ತಂತ್ರವೇ?

Update: 2017-09-09 18:42 GMT

ಹುಶಃ ಗೌರಿ ಲಂಕೇಶ್‌ರನ್ನು ಹತ್ಯೆಗೈದ ವರ್ಯಾರೆಂದು ನಮಗೆ ತಿಳಿಯದೇ ಹೋಗಲೂಬಹುದು. ಆದರೆ ಆಕೆಯನ್ನು ಯಾಕೆ ಕೊಲೆ ಮಾಡಲಾಯಿತೆಂಬುದನ್ನು ಸಮಂಜಸವಾಗಿ ಊಹಿಸಲು ನಮಗೆ ಸಾಧ್ಯವಿದೆ ಅಥವಾ ಅದಕ್ಕಿಂತ ಹೆಚ್ಚಾಗಿ ಆಕೆ ಯಾಕೆ ಕೊಲೆಗೀಡಾದರೆಂಬುದು ನಮಗೆ ಸ್ಪಷ್ಟವಾಗಿದೆ. ಈ ಬಗ್ಗೆ ಯೋಚಿಸಿದರೆ, ಇದರಲ್ಲಿ ಅಂತಹ ಯಾವುದೇ ರಹಸ್ಯವೂ ಇಲ್ಲ. ಮಾತ್ರವಲ್ಲ ಇದೇನೂ ಜಟಿಲವಾದ ಪ್ರಕರಣ ಕೂಡಾ ಅಲ್ಲ. ಗೌರಿ ಯಾಕೆ ಕೊಲೆಯಾದಳೆಂದರೆ, ಆಕೆ ಕೆಲವರ ಪಾಲಿಗೆ ಕಣ್ಣುರಿಯಾಗಿದ್ದಳು ಹಾಗೂ ನಮ್ಮ ನವ ಭಾರತದಲ್ಲಿ ನಮಗೆ ಕಣ್ಣುರಿಯನ್ನು ಸಹಿಸಿಕೊಳ್ಳುವಷ್ಟು ತಾಳ್ಮೆಯಿಲ್ಲ.

ಈ ಘಟನೆಯು ಸ್ಥಳೀಯ ಸನ್ನಿವೇಶಕ್ಕೆ ಸಂಬಂಧಿಸಿದ್ದೆಂಬು ದೇನೂ ನಿಜ. ಹಾಗೆ ನೋಡಿದರೆ ಎಲ್ಲಾ ರಾಜಕಾರಣವೂ ಸ್ಥಳೀಯವೇ ಆಗಿರುತ್ತದೆ. ಸೀಮಿತವಾದ ಒಂದು ಮಾಧ್ಯಮ ವಲಯದ ಹೊರಗೆ ಗೌರಿ ಲಂಕೇಶ್ ಅಷ್ಟೇನೂ ಚಿರಪರಿಚಿತರಲ್ಲ. ರಾಷ್ಟ್ರೀಯ ಮಟ್ಟದಲ್ಲಿ, ದೊಡ್ಡ ದೊಡ್ಡ ಮೆಗಾಫೋನ್‌ಗಳ ನಡುವೆ ಆಕೆಯದು ಅತ್ಯಂತ ದೂರದಿಂದ ಕೇಳಿಬರುತ್ತಿದ್ದ ಸಣ್ಣ ಧ್ವನಿಯಾಗಿತ್ತು. ಆದರೆ ಕನ್ನಡದ ಪರಿಸರದಲ್ಲಿ ಮೂಲಭೂತವಾದ ಹಾಗೂ ಅದರ ರಾಜಕೀಯ ಬೇಡಿಕೆಗಳ ವಿರುದ್ಧ ಆಕೆಯ ಅಸಮಾಧಾನ, ಪ್ರತಿಭಟನೆಗಳು ಖಂಡಿತವಾಗಿಯೂ ಬಲವಾಗಿ ಕೇಳಿಬರುತ್ತಿತ್ತು ಹಾಗೂ ಈ ರಾಜಕೀಯ ಪರಿಸರ ವ್ಯವಸ್ಥೆಯು ಬೆದರಿಕೆ ಹಾಗೂ ದಬ್ಬಾಳಿಕೆಯ ಹೊಸ ವ್ಯಾಕರಣವನ್ನು ಪ್ರಯೋಗಿಸತೊಡಗಿತ್ತು. ಒಂದೋ ಆಕೆ ವೌನವಾಗಿದ್ದುಬಿಡಬೇಕು ಇಲ್ಲವೇ ವೌನವಾಗಿಸಲ್ಪಡುವುದನ್ನು ಎದುರಿಸಲು ಆಕೆ ಸಿದ್ಧರಿರಬೇಕು. ತಮಗೆ ಅನುಕೂಲವಲ್ಲದ ಯಾವುದೇ ಧ್ವನಿಯು ನವ ಭಾರತದ ನೂತನ ಪಾರುಪತ್ತೆಗಾರರಿಗೆ ಕರ್ಕಶವೆನಿಸುತ್ತದೆ ಹಾಗೂ ಅಸ್ವೀಕಾರಾರ್ಹವಾಗುತ್ತದೆ.

ಆದಾಗ್ಯೂ, ಗೌರಿ ಲಂಕೇಶ್ ತುಂಬಾನೆ ಪ್ರತಿಭಟಿಸಿದರು. ಆಕೆಯಂತಹ ಧ್ವನಿಗಳಿಗೆ ಏಕಾಂಗಿಯಾಗಿ ಜಾತ್ಯತೀತರ ಅಸಮಾಧಾನವನ್ನು ರೂಪಿಸುವುದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಏನೇ ಇದ್ದರೂ, ಪಳಗಿಸಲು ಸಾಧ್ಯವಾಗದ ಈ ಧ್ವನಿಯು ಅವರನ್ನು ವಿಶೇಷವಾಗಿ ರೊಚ್ಚಿಗೆಬ್ಬಿಸಿತ್ತು. ಸೋಶಿಯಲ್ ಮೀಡಿಯಾಗಳಲ್ಲೂ, ನಾವು ವೈಯಕ್ತಿಕ ಧ್ವನಿಗಳ ವಿರುದ್ಧ ಸರ್ವೇಸಾಧಾರಣವಾಗಿ ಅತ್ಯಂತ ವಿಷಕಾರಿಯಾದ ನಿಂದನೆ ಹಾಗೂ ಬೈಗುಳಗಳನ್ನು ಕಾದಿರಿಸುತ್ತೇವೆ. ಹೀಗಿರುವಾಗ ಈ ಅಧಿಕೃತ ರೇಖೆಯನ್ನು ಪ್ರಶ್ನಿಸುವುದಕ್ಕೆ ವೈಯಕ್ತಿಕ ಧ್ವನಿಗಳಿಗೆ ಎಷ್ಟು ಧೈರ್ಯ?. ಬೃಹತ್ ಕಾರ್ಪೊರೇಟ್ ಮೀಡಿಯಾಗಳನ್ನು ಪಳಗಿಸುವುದು ತುಂಬಾ ಸುಲಭವೆಂದು ನಿರುಂಕುಶ ಆಡಳಿತಕ್ಕೆ ಅರಿವಾದ ಬಳಿಕ, ಈ ಅಸಮಾಧಾನವು ಇನ್ನಷ್ಟು ಹರಿತವಾಗಿರುತ್ತದೆ.

ನವಭಾರತದ ನವ ಸುಲ್ತಾನರಿಗೆ ಇರಿಸುಮುರಿಸುಂಟಾಗದಂತೆ ನಡೆದುಕೊಳ್ಳುವುದರಲ್ಲಿ ಜಾಣತನವಿದೆಯೆಂಬುದನ್ನು ಹೆಚ್ಚೇನೂ ಶ್ರಮವಿಲ್ಲದೆ, ಕಾಪೊರೇಟ್ ಮಾಧ್ಯಮ ರಂಗಕ್ಕೆ ಅದು ಮುದ್ರಣ ಅಥವಾ ಇಲೆಕ್ಟ್ರಾನಿಕ್ ಆಗಿರಲಿ, ಅರಿವು ಮೂಡಿಸಲಾಯಿತು. ನಮ್ಮ ನೂತನ ರಕ್ಷಕರಿಗೆ ಕಾರ್ಪೊರೇಟ್ ಮಾಧ್ಯಮರಂಗವು ರಾಷ್ಟ್ರೀಯ ಮಟ್ಟದಲ್ಲಿ ಅಭೂತಪೂರ್ವವಾದ ಸ್ಥಾನವನ್ನು ಪಡೆಯುವುದಕ್ಕೆ ಕಾರಣವಾದ ಅಗಾಧ ಸಂಪನ್ಮೂಲಗಳು ಹಾಗೂ ಅವು ಹೊಂದಿರುವ ಹಣದ ಥೈಲಿಗಳ ವ್ಯಾಪ್ತಿಯ ಬಗ್ಗೆ ಚೆನ್ನಾಗಿ ತಿಳಿದಿತ್ತು. ಹೀಗಿರುವಾಗ ‘ಅಧಿಕಾರದ ದಂಡ’ದ ಮೆದುವಾದ ಪೆಟ್ಟು, ಕಾರ್ಪೊರೇಟ್ ಮಾಧ್ಯಮರಂಗವನ್ನು ಸಾಂಘಿಕವಾಗಿ ಹಾಗೂ ವೃತ್ತಿಪರವಾಗಿ ದುರ್ಬಲಗೊಳಿಸಿತು.

ಕಾರ್ಪೊರೇಟ್ ಮಾಧ್ಯಮರಂಗವು, ‘‘ಒಂದು ದೇಶ, ಒಂದು ತೆರಿಗೆ, ಒಂದೇ ನಾಯಕ ಹಾಗೂ ಒಂದೇ ಧ್ವನಿ’’ಎಂಬ ಸಿದ್ಧಾಂತಕ್ಕೆ ಶರಣಾ ಯಿತು. ಈ ಸಿದ್ದಾಂತಕ್ಕೆ ದೇಶಭಕ್ತಿಯ ಬಣ್ಣವನ್ನು ಹೊದಿಸಲಾ ಯಿತು ಇದು ಎಷ್ಟರ ಮಟ್ಟಿಗೆಂದರೆ, ನಗದು ಅಮಾನ್ಯತೆಯ ಬಳಿಕ ಕಾರ್ಪೊರೇಟ್ ಮಾಧ್ಯಮರಂಗದ ಪ್ರಭಾವಿ ವರ್ಗಗಳು ಸರಕಾರದ ಬಿಟ್ಟಿ ಧ್ವನಿಗಳಾಗಿಬಿಟ್ಟಿವೆ.

ವಾಸ್ತವಿಕವಾಗಿ ‘ನವಭಾರತ’ದ ನಿರೀಕ್ಷೆಗಳಿಗೆ ಹಾಗೂ ಮನೋ ಭಾವಕ್ಕೆ ಹೊಂದಿಕೆಯಾಗುವಂತಹ ನೂತನ ಮಾಧ್ಯಮರಂಗದ ಉದಯ ವಾಗಿದೆ ಎಂದು ಹೇಳಲಾಗುತ್ತಿದೆ. ಹಿಂದೆಂದೂ ಭಾರತ ಮಾಧ್ಯಮ ರಂಗವು ತನ್ನ ಪಾತ್ರವನ್ನು ಮರುರೂಪಿಸಿಕೊಂಡಿದ್ದಿರಲಿಲ್ಲ. ಅಧಿಕಾರಾ ರೂಢರ ಮೇಲೆ ಹದ್ದಿನಕಣ್ಣಿಡಬೇಕಾದ ಬಾಧ್ಯತೆಯನ್ನು ಹೊಂದಿರಬೇ ಕಾದವರು ಈಗ ಪ್ರತಿಪಕ್ಷಗಳನ್ನು ಹಾಗೂ ಅವುಗಳ ನೈತಿಕಸ್ಥೈರ್ಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನೋಟು ನಿಷೇಧದಿಂದ ಹಿಡಿದು ದೋಕಾಲವರೆಗಿನ ಸರಕಾರದ ಅತ್ಯಂತ ಸಂದೇಹಾಸ್ಪದ ಹೇಳಿಕೆಗಳನ್ನು ಶಂಕಿಸುವ ಬದಲು ಕಾರ್ಪೊರೇಟ್ ಮಾಧ್ಯಮರಂಗವು ಸರಕಾರದ ಟೀಕಾಕಾರರನ್ನು ಹಾಗೂ ವಿರೋಧಿಗಳ ಬಾಯ್ಮುಚ್ಚುವ ಕೆಲಸ ಮಾಡುತ್ತಿದೆ. ಗೌರಿ ಲಂಕೇಶ್ ಈ ರೀತಿಯ ನಿಯಂತ್ರಣ ಕಾರ್ಯ ತಂತ್ರವನ್ನು ಅಣಕಿಸುತ್ತಿದ್ದಾರೆ. ಈ ಪ್ರತಿರೋಧದ ಧ್ವನಿಗಳನ್ನು ಶರಣಾಗಿಸಲು ಏನಾದರೂ ಮಾಡಬೇಕಿದೆ. ‘ಸುಲ್ತಾನ’ರ ಪರವಾನಿಗೆಯಿಂದ ಬಲಿಷ್ಠ ರಾಗಿರುವ ‘ಸುಬೇದಾರ’ರಿಗೆ ಧೈರ್ಯ ಬಂದಿದ್ದು ಈ ಗೌರಿ ಲಂಕೇಶ್‌ಗೆ ಏನಾದರೂ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ವಿಶಾಲವಾದ ನೆಲದಲ್ಲಿ ಪ್ರತಿದಿನವೂ ಲಕ್ಷಾಂತರ ದೌರ್ಜನ್ಯಗಳು ಹಾಗೂ ಲಕ್ಷಾಂತರ ಬಂಡಾಯಗಳು ನಡೆಯು ತ್ತಿರುತ್ತವೆ. ಅವು ಸಣ್ಣ ಹಾಗೂ ನಗಣ್ಯವಾದ ಬಂಡಾಯಗಳಾಗಿರಬಹುದು ಹಾಗೂ ಪ್ರಾದೇಶಿಕ ಪತ್ರಿಕೆಗಳಲ್ಲಿಯೂ ಮುಖಪುಟದ ಸುದ್ದಿಯಾಗುವುದು ತೀರಾ ಅಪರೂಪ. ಆದಾಗ್ಯೂ, ಈ ಪ್ರತಿಭಟನೆ ಹಾಗೂ ಆಕ್ರೋಶಗಳು ನಡೆಯುತ್ತಲೇ ಇರುತ್ತವೆ. ಹಳೆಯ ಭಾರತದ ವ್ಯವಸ್ಥೆಯಲ್ಲಿ ಹಾಗೂ ಅದರ ಹಳೆಯ ನೆಹರೂ ವೌಲ್ಯಗಳು ಹಾಗೂ ಚಿಂತನೆಗಳ ಬಗ್ಗೆ ನಂಬಿಕೆಯಿಟ್ಟಿ ರುವ ಕೋಟ್ಯಂತರ ಭಾರತೀಯರಿದ್ದಾರೆ. ಟಿವಿ ಸ್ಟುಡಿಯೋ ಗಳಲ್ಲಿ ನಡೆಯುವ ಬೊಬ್ಬಿರಿಯುವ ಚರ್ಚೆಗಳಲ್ಲಿ ತಮ್ಮ ಚಿಂತನೆ ಗಳನ್ನು ಮಂಡಿಸಲು ಅವರಿಗೆ ಸಾಧ್ಯವಿರದಿದ್ದರೂ, ಅವರು ಹಳ್ಳಿಹಳ್ಳಿಗಳಲ್ಲಿ, ಪೇಟೆಪಟ್ಟಣಗಳಲ್ಲಿ ಬಹುತ್ವವಾದ ಹಾಗೂ ಜಾತ್ಯತೀತತೆಯ ಸಂಪ್ರದಾಯದೊಂದಿಗೆ ಬದುಕುತ್ತಿದ್ದಾರೆ.

ಗೌರಿ ಲಂಕೇಶ್ ಮಾದರಿಯು ಅಸಮಾಧಾನ ಹಾಗೂ ಭಿನ್ನಾಭಿಪ್ರಾಯದ ಪರಂಪರೆಗೆ ಧ್ವನಿಯಾಗಿದೆ ಹಾಗೂ ನ್ಯಾಯಸಮ್ಮತತೆಯನ್ನು ಒದಗಿಸುತ್ತದೆ. ಈ ಕಾರಣಕ್ಕಾಗಿ ಕೆಲವು ಶಕ್ತಿಗಳಿಗೆ ಅದನ್ನು ಹತ್ತಿಕ್ಕಬೇಕಾಗಿತ್ತು ಹಾಗೂ ಭಗ್ನಗೊ ಳಿಸಬೇಕಿತ್ತು, ಅಗತ್ಯವಿದ್ದಲ್ಲಿ ಇದಕ್ಕಾಗಿ ಬಲವನ್ನು ಕೂಡಾ ಪ್ರಯೋಗಿಸಬೇಕಾಗಿತ್ತು. ತಥಾಕಥಿತ ರಾಷ್ಟ್ರೀಯ ಟೆಲಿವಿಶನ್‌ನ ಗ್ಲಾಮರ್‌ಭರಿತ ಹಾಗೂ ಸುಪರಿಚಿತ ಮುಖಗಳನ್ನು ಪಳಗಿಲು ಅಥವಾ ಪರಿವರ್ತಿಸಲು ಸಾಧ್ಯವಾಗುವುದಾದರೆ, ನಮ್ಮ ದಾರಿಗೆ ಬರಲು ನಿರಾಕರಿಸುತ್ತಿರುವ ಈ ಜುಜುಬಿ ಮಹಿಳೆ ಯಾರು!. ನವಭಾರತವು ತಂದುಕೊಟ್ಟಿರುವ ಮಹಾನ್ ರಾಷ್ಟ್ರೀಯ ಪುನರು ಜ್ಜೀವನ ಹಾಗೂ ಅಸಾಧಾರಣ ಪ್ರಗತಿಯನ್ನು ಪ್ರಶಂಸಿಸಲು ಈ ಮಹಿಳೆ ನಿರಾಕರಿಸಿದಲ್ಲಿ ಆಕೆಯನ್ನು ವೌನವಾಗಿಸಬೇಕಾಗಿದೆ ಎಂಬುದು ಅವುಗಳ ನಿರ್ಧಾರವಾಗಿತ್ತು.

ಇದೊಂದು ರೂಢಿಗತವಾದ ಪ್ರಲೋಭನೆಯಾಗಿದೆ. ತಮ್ಮ ಸಿದ್ಧಾಂತಗಳ ವಿರೋಧಿಗಳ ಸದ್ದಡಗಿಸುವುದು ಅಥವಾ ಅವರನ್ನು ಅಂಕೆಯಲ್ಲಿಟ್ಟುಕೊಳ್ಳುವುದು ಮಧ್ಯಯುಗೀನ ಕಾಲದ ಅಧಿಕಾ ರಾರೂಢರ ಆಚರಣೆಗಳಾಗಿವೆ. ‘‘ಈ ಉಪದ್ರವಿ ಧರ್ಮ ಗುರು ವನ್ನು ತೊಲಗಿಸಲು ನನಗೆ ಯಾರೂ ಕೂಡಾ ಸಿಗುವು ದಿಲ್ಲವೇ’’ ಎಂದು ಎರಡನೆ ಹೆನ್ರಿ ಗಟ್ಟಿಯಾಗಿ ಹೇಳಿದ್ದೇ ಸಾಕಾಗಿತ್ತು.

ಎರಡನೆ ಹೆನ್ರಿಯ ಕೆಲವು ನಿಷ್ಠಾವಂತರು ‘ತೊಂದರೆಗೇಡಿ’ ಧರ್ಮ ಗುರು ಕ್ಯಾಂಟರ್‌ಬರಿಯ ಅರ್ಚ್‌ಬಿಶಪ್‌ರನ್ನು ಶಾಶ್ವತವಾಗಿ ವೌನವಾಗಿ ಸುವ ಹೊಣೆಯನ್ನು ತಾವಾಗಿಯೇ ವಹಿಸಿಕೊಂಡರು. ಇದು ನಡೆದಿದ್ದು 1170ರಲ್ಲಿ. ಆವಾಗಿನಿಂದ, ಹಲವಾರು ಬಾರಿ ಈ ಭೂಮಿಯಲ್ಲಿ ಇಂತಹ ‘ಉಪದ್ರವಿ’ಗಳನ್ನು ತೊಲಗಿಸುವ ಕೆಲಸವು ನಡೆದುಕೊಂಡೇ ಬಂದಿದೆ.

ಆಧುನಿಕ ಕಾಲದಲ್ಲಿ, ನಿರಂಕುಶಾಧಿಕಾರವು ಜನಸಮೂಹದ ಬೆಂಬಲ ಹಾಗೂ ಅನುಮೋದನೆಯನ್ನು ಜನತೆಯ ‘ಶತ್ರು’ವನ್ನು ಅಥವಾ ‘ಪ್ರಗತಿ’ಯ ದಾರಿಗೆ ಯಾರಾದರೂ ಅಡ್ಡಿಬರುತ್ತಿದ್ದಾರೆಂದು ಅನಿಸುವ ಯಾರನ್ನಾದರೂ ತೊಲಗಿಸಲು ಪರವಾನಿಗೆಯಾಗಿ ಬಳಸಿಕೊಳ್ಳುತ್ತದೆ. ಈಗ ಈ ಡಿಜಿಟಲ್ ಯುಗದಲ್ಲಿ, ವಿನೂತನವಾದ ತಂತ್ರಜ್ಞಾನವು ನವಭಾರತದ ಪಾರುಪತ್ತೆದಾರರಿಗೆ ಘಟನೆಗಳನ್ನು ರೂಪಿಸುವ ಹಾಗೂ ಅನತಿದೂರದಲ್ಲಿರುವ ವ್ಯಕ್ತಿಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ನೀಡಿದೆ. ಗೌರಿ ಲಂಕೇಶ್‌ರಂತಹ ಸಣ್ಣಪುಟ್ಟ ಧ್ವನಿಗಳಿಗೆ ಪ್ರತಿಭಟನೆ ವ್ಯಕ್ತಪಡಿಸುವುದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ಆಕೆಯನ್ನು ಸಾಯಿಸಬೇಕಿತ್ತು.

ಆಧುನಿಕ ಕಾಲದಲ್ಲಿ, ನಿರಂಕುಶಾಧಿಕಾರವು ಜನಸಮೂಹದ ಬೆಂಬಲ ಹಾಗೂ ಅನುಮೋದನೆಯನ್ನು ಜನತೆಯ ‘ಶತ್ರು’ವನ್ನು ಅಥವಾ ‘ಪ್ರಗತಿ’ಯ ದಾರಿಗೆ ಯಾರಾದರೂ ಅಡ್ಡಿಬರುತ್ತಿದ್ದಾರೆಂದು ಅನಿಸುವ ಯಾರನ್ನಾದರೂ ತೊಲಗಿಸಲು ಪರವಾನಿಗೆಯಾಗಿ ಬಳಸಿಕೊಳ್ಳುತ್ತದೆ. ಈಗ ಈ ಡಿಜಿಟಲ್ ಯುಗದಲ್ಲಿ, ವಿನೂತನವಾದ ತಂತ್ರಜ್ಞಾನವು ನವಭಾರತದ ಪಾರುಪತ್ತೆದಾರರಿಗೆ ಘಟನೆಗಳನ್ನು ರೂಪಿಸುವ ಹಾಗೂ ಅನತಿದೂರದಲ್ಲಿರುವ ವ್ಯಕ್ತಿಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ನೀಡಿದೆ. ಗೌರಿ ಲಂಕೇಶ್‌ರಂತಹ ಸಣ್ಣಪುಟ್ಟ ಧ್ವನಿಗಳಿಗೆ ಪ್ರತಿಭಟನೆ ವ್ಯಕ್ತಪಡಿಸುವುದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ಆಕೆಯನ್ನು ಸಾಯಿಸಬೇಕಿತ್ತು.

Writer - ಹರೀಶ್ ಖರೆ

contributor

Editor - ಹರೀಶ್ ಖರೆ

contributor

Similar News

ಜಗದಗಲ
ಜಗ ದಗಲ