ಕಫ್ತ 2016 ಪ್ರಶಸ್ತಿ ಪ್ರದಾನ

Update: 2017-09-23 08:12 GMT

ತೆರೆಯ ಹಿಂದೆ ಕೆಲಸ ಮಾಡುವ ಪ್ರತಿಭೆಗಳಿಗೆ 2016ರ ಸಾಲಿನ ವಾರ್ಷಿಕ ಪುರಸ್ಕಾರವನ್ನು ಟೈಮ್ಸ್ ಆಫ್ ಇಂಡಿಯಾ ಬಳಗದಿಂದ ಆಯೋಜಿಸಲಾಗಿತ್ತು.

"ಒಂದು ಚಿತ್ರ ಯಶಸ್ವಿಯಾದರೆ ಅದರ ಸಂಪೂರ್ಣ ಕ್ರಡಿಟ್‌ನ್ನು  ಕಲಾವಿದರಿಗೆ ನೀಡುತ್ತಾರೆ. ಆದರೆ ತೆರೆಯ ಹಿಂದೆ ಕೆಲಸ ಮಾಡಿದವರನ್ನು  ನೆನಪಿಸಿಕೊ ಳ್ಳುವುದಿಲ್ಲ. ಸಾಧಾರಣ ಚಿತ್ರವನ್ನು ಅಸಾಧಾರಣವಾಗಿ ತೋರಿಸುವುದು. ಕಲಾವಿದರಿಗೆ ನೀಡುವಷ್ಟು ಸಂಭಾವನೆಯನ್ನು ಇವರಿಗೆ ಪಾವತಿಸುವುದಿಲ್ಲ. ರಂಗಭೂಮಿಗೆ ಕಲಾವಿದರು, ಕಿರುತೆರೆಗೆ ಬರಹಗಾರರು ಹೀಗೆ ಚಿತ್ರರಂಗಕ್ಕೆ ತಂತ್ರಜ್ಞರು ಅಗತ್ಯವಾಗಿರುತ್ತಾರೆ. ಇವರುಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಅರ್ಧ ಕೆಲಸ ಮುಗಿದಂತೆ ಆಗುತ್ತದೆ. ಅದರಂತೆ ಎರಡನೇ ವರ್ಷದ ಕರ್ನಾಟಕ ಚಲನಚಿತ್ರ ತಂತ್ರಜ್ಞರ 2016ರ (ಕಫ್ತ) ಪ್ರಶಸ್ತಿ ಸಮಾರಂಭವು ಪಂಚತಾರ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಶ್ರೇಷ್ಠ ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿ ನೋಡಿ ಗೌರವಿಸಲಾಯಿತು.

ಸಾಹಸ ಸಂಯೋಜನೆ ವಿಭಾಗದಲ್ಲಿ ಕಿರಿಕ್ ಪಾರ್ಟಿ ರಿಶಬ್‌ಶೆಟ್ಟಿ, ಕಲಾ ನಿರ್ದೇಶನಕ್ಕಾಗಿ ಲಾಸ್ಟ್ ಬಸ್ ನ ಅವಿನಾಶ್, ನರಸಿಂಹರಾಜು, ಹಿನ್ನಲೆ ಸಂಗೀತ ಕ್ಕಾಗಿ ಕಿರಿಕ್ ಪಾರ್ಟಿ ಅಜನೀಶ್‌ಲೋಕನಾಥ್, ನೃತ್ಯ ಸಂಯೋಜನೆಗಾಗಿ ದೊಡ್ಮನೆ ಹುಡುಗ ಚಿತ್ರಕ್ಕೆ ಹರ್ಷ ಮಾಸ್ಟರ್, ಛಾಯಾಗ್ರಹಣಕ್ಕಾಗಿ ಕರ್ವ ಚಿತ್ರದ ಮೋಹನ್ , ವಸ್ತ್ರಲಂಕಾರ ವಿಭಾಗದಲ್ಲಿ ಸಂತು ಸ್ಟ್ರೈಟ್ ಫಾರ್ವಡ್ ನ ಸಾನಿಯಾ ಸರ್ದಾರಿಯಾ ಸಂಭಾಷಣೆಗಾಗಿ ತಿಥಿ ಈರೇಗೌಡ, ಸಾಹಿತ್ಯ ಗೋಧಿಬಣ್ಣ ಸಾಧಾರಣ ಮೈಕಟ್ಟು ರಕ್ಷಿತ್‌ಶೆಟ್ಟಿ, ಮೇಕಪ್ ನಲ್ಲಿ ಲಾಸ್ಟ್‌ಬಸ್ ರಮೇಶ್‌ಬಾಬು, ಸಂಗೀತ ಕ್ಕಾಗಿ ಗೋಧಿಬಣ್ಣ ಸಾಧಾರಣ ಮೈಕಟ್ಟು ಚರಣ್‌ರಾಜ್, ಪೋಸ್ಟರ್ ಡಿಸೈನ್ ಗೋಧಿಬಣ್ಣ ಸಾಧಾರಣ ಮೈಕಟ್ಟು ಪ್ರವೀಣ್ , ಸೌಂಡ್ ಡಿಸೈನ್ ಯು ಟರ್ನ್ ಹರಿ, ಕತೆಯ ವಿಭಾಗದಲ್ಲಿ ಗೋಧಿಬಣ್ಣ ಸಾಧಾರಣ ಮೈಕಟ್ಟು ಹೇಮಂತ್ ರಾವ್, ವಿಎಫ್‌ಎಕ್ಸ್ ವಿಭಾಗದಲ್ಲಿ ಲಾಸ್ಟ್‌ಬಸ್ ನ ಅಮರನಾಥ್, ಚಿತ್ರಕತೆ ಕಿರಗೂರಿನ ಗಯ್ಯಾಳಿಗಳು ಸುಮನಾಕಿತ್ತೂರು,       ಮೂಲ ಚಿತ್ರಕತೆ   ರಾಮರಾಮರೇ   ಸತ್ಯಪ್ರಕಾಶ್ ಹೀಗೆ ಬಹಳಷ್ಟು ತೆರೆ ಹಿಂದಿನ ಮಂದಿ ಪ್ರಶಸ್ತಿಗೆ ಭಾಜನರಾದರು.

ರಾಕಿಂಗ್ ಸ್ಟಾರ್ ಯಶ್, ಶರ್ಮಿಳಾಮಾಂಡ್ರೆ, ಸಂಜನಾ, ಕಾರುಣ್ಯರಾಮ್, ನಿರ್ಮಾಪಕ  ರಾಮು,  ನಿರ್ದೇಶಕ ದಯಾಳ್, ಸೇರಿದಂತೆ ಕಲಾವಿದರು ಮತ್ತು ಚಿತ್ರೋದ್ಯಮದ ಗಣ್ಯರು ಪ್ರಶಸ್ತಿಯನ್ನು ವಿತರಣೆ ಮಾಡಿದರು. ಹೊಂಬಾಳೆ ಗ್ರೂಪ್ಸ್ ಹಾಗೂ ಟೈಮ್ಸ್ ಪತ್ರಿಕೆ ವತಿಯಿಂದ ಕಾರ್ಯಕ್ರಮವು ನಡೆಯಿತು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News