ಬೀದಿ ಫೋಟೋಗ್ರಾಫರ್ ದೈದೊ ಮೊರಿಯಾಮ

Update: 2017-09-24 11:55 GMT

ದೈದೊ ಮೊರಿಯಾಮ ಜಪಾನಿನ ಪ್ರಮುಖ ಛಾಯಾಗ್ರಾಹಕರಲ್ಲಿ ಒಬ್ಬರು. ಮುಖ್ಯವಾಗಿ ತಮ್ಮ ಬೀದಿ ಛಾಯಾಗ್ರಹಣಕ್ಕೆ ಪ್ರಖ್ಯಾತರಾದ ಇವರ ಕುರಿತಾಗಿ ಮಾರ್ಟಿನ್ ಹ್ಯಾಂಪ್ಟನ್ ಮಾಡಿದ ಕಿರು ಚಿತ್ರದಲ್ಲಿ, ದೈದೊ ಮೊರಿಯಾಮ ಆಡಿರುವ ಮಾತುಗಳ ಒಂದು ಝಲಕ್ ಇಲ್ಲಿದೆ.

                     ಮೊರಿಯಾಮ

‘‘ ಈ ಜಗತ್ತು ನನಗೊಂದು ಶೃಂಗಾರಾತ್ಮಕ ಸ್ಥಳ[Erotic place]. ಅನೇಕ ವಿಚಾರಗಳು ನನ್ನನ್ನು ಆಕರ್ಷಿಸುತ್ತದೆ. ಈ ನಗರವೆಂಬುದು ಜನರ ಬಯಕೆಗಳ ಮಹಾಪೂರ. ನನ್ನ ಬಯಕೆಗಳನ್ನು ಅವುಗಳ ಮಧ್ಯೆ ಹುಡುಕುತ್ತೇನೆ. ಸಮಯವನ್ನು ಸೀಳಿ, ಅದರೊಳಗಿನ ಒಂದು ಕ್ಷಣವನ್ನು ನೋಡಲು ಪ್ರಯತ್ನಿಸುತ್ತೇನೆ. ಛಾಯಾಗ್ರಾಹಕನಾಗಿ ಇದೇ ನನ್ನ ಕೆಲಸ. ನಾನು ಮುಖ್ಯವಾಗಿ ರಸ್ತೆಗಳನ್ನು ಛಾಯಾಗ್ರಹಣ ಮಾಡುತ್ತೇನೆ. ನಾನು ದೊಡ್ಡ ಕ್ಯಾಮರವನ್ನು ಉಪಯೋಗಿಸುವುದಿಲ್ಲ. ಸಣ್ಣ ಕ್ಯಾಮರ ಜನರಿಗೆ ಮುಜುಗರವನ್ನು ತರಿಸುವುದಿಲ್ಲ.

ನಾನು ನೆಲೆಸುವ ಈ ಸಿಟಿ ಬಯಕೆಗಳಿಂದ ಸೃಷ್ಟಿಸಿದ ಒಂದು ದೊಡ್ಡ ಸ್ಟೇಡಿಯಂ ಹಾಗೆ ನನಗೆ ಗೋಚರಿಸುತ್ತದೆ. ಜನರಿಂದ ತುಂಬಿ ತುಳುಕುವ, ಆಲೋಚನೆಗಳ ಅಯೋಮಯವಾದ, ಬಯಕೆಗಳಿಂದ ಗುಯ್‌ಗುಟ್ಟುವ ನಗರದ ತೀವ್ರತೆ ನನಗೆ ತುಂಬ ಇಷ್ಟ ನಗರವೆಂಬುದಿಲ್ಲವೆಂದರೆ ನನಗೆ ಛಾಯಾಗ್ರಹಣ ಮಾಡಲು ಸಾಧ್ಯವೇ ಇಲ್ಲ. ನಗರವೆಂಬುದು ನನಗೊಂದು ಚಟ.

ನಾನು ಸದಾ ಸುತ್ತಾಡುತ್ತಾ ಇರುತ್ತೇನೆ. ನನ್ನೆಲ್ಲಾ ಚಿತ್ರಗಳನ್ನು ಒಂದು ಪುಸ್ತಕವಾಗಿ ನಾನು ನೋಡುತ್ತೇನೆ. ಸದಾ ಚಲನೆಯಲ್ಲಿರುವ ನಾನು ಹಾಗೂ ಹೊರ ಜಗತ್ತನ್ನು ಚಿತ್ರಿಸುವುದೇ ನನ್ನ ಧ್ಯೇಯ. ನಾನು ಬೀದಿ ಸುತ್ತುತ್ತೇನೆ. ಬಹುಶಃ ನನ್ನನ್ನು ಜನ ಬೀದಿ ನಾಯಿ ಎಂದೇ ಕರೆಯುತ್ತಾರೇನೋ! ನನ್ನ ಚಲನೆಯ ಒಂದು ಕ್ಷಣವನ್ನು ಮಾತ್ರ ನಾನು ಸೆರೆಹಿಡಿಯಬಲ್ಲೆ. ನಾನೇ ಆ ಕ್ಷಣವಾಗಿರುತ್ತೇನೆ.

ನಾನು 50 ವರ್ಷಗಳಿಂದ ಹೀಗೆಯೆ ಅಲೆಯುತ್ತಾ ಇದ್ದೇನೆ. ನನ್ನ ಸ್ನೇಹಿತರಿಗೆ ನನ್ನ ನೋಡಿ ಮಹಾ ಆಶ್ಚರ್ಯ, ನಿನಗೆ ಬೋರ್ ಆಗಲ್ವೇ? ಎಂದು ಕೇಳುತ್ತಾರೆ. ಆದರೆ ನನಗೆ ಬೋರ್ ಆಗೋದಿಲ್ಲ. ಈಗ ನನಗೆ 73 ವರ್ಷಗಳು. ನನಗೆ ಈ ನಗರವನ್ನು ಒಬ್ಬ ವಯಸ್ಸಾದವನ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅಥವಾ ಎಲ್ಲವೂ ಅರ್ಥವಾಗಿದೆ ಎಂದು ಹೇಳಲೂ ಸಾಧ್ಯವಿಲ್ಲ.

Derive are always really serious ಇದರ ಬಗ್ಗೆ ಮಾತನಾಡುವುದೇ ಅರ್ಥಹೀನ. ನನಗೆ ಚಿತ್ರಗಳನ್ನು ಮಾತ್ರ ತೆಗೆಯಲು ಸಾಧ್ಯ’’.

ದೈದೊ ಮೊರಿಯಾಮ ಜಪಾನಿನ ಪ್ರಮುಖ ಛಾಯಾಗ್ರಾಹಕರಲ್ಲಿ ಒಬ್ಬರು. ಮುಖ್ಯವಾಗಿ ತಮ್ಮ ಬೀದಿ ಛಾಯಾಗ್ರಹಣಕ್ಕೆ ಪ್ರಖ್ಯಾತರಾದ ಇವರ ಕುರಿತಾಗಿ ಮಾರ್ಟಿನ್ ಹ್ಯಾಂಪ್ಟನ್ ಮಾಡಿದ ಕಿರು ಚಿತ್ರದಲ್ಲಿ, ದೈದೊ ಮೊರಿಯಾಮ ಆಡಿರುವ ಮಾತುಗಳ ಒಂದು ಝಲಕ್ ಇಲ್ಲಿದೆ.

Writer - ಉಷಾ .ಬಿ.ಎನ್.

contributor

Editor - ಉಷಾ .ಬಿ.ಎನ್.

contributor

Similar News