ಜಿಎಸ್‌ಟಿ: ಗೋಳು, ಗೋಳು, ಗೋಳು

Update: 2017-09-25 18:35 GMT

ಭಾಗ-2

ಒಂದು ಸಂಸ್ಥೆಯ ಒಂದು ತಿಂಗಳಿನ ಒಟ್ಟು ಮಾರಾಟ ಮತ್ತು ಖರೀದಿಯನ್ನು ಆಧರಿಸಿ ಅದು ಮಾಡಬೇಕಾಗಿರುವ ತೆರಿಗೆ ಪಾವತಿಯನ್ನು ಅಂತಿಮಗೊಳಿಸುವ ಜಿಎಸ್‌ಟಿ ಆರ್ 3- ನ್ನು ಜುಲೈ ತಿಂಗಳಲ್ಲಿ ಸಲ್ಲಿಸಬೇಕಾಗಿತ್ತು. ಇದನ್ನು ಈಗ ನವೆಂಬರ್ 10ರ ವರೆಗೆ ವಿಸ್ತರಿಸಲಾಗಿದೆ. ಮೊದಲು ಇದನ್ನು ಸಲ್ಲಿಸಲು ಆಗಸ್ಟ್ 20 ಕೊನೆಯ ದಿನವೆಂದು ಹೇಳಿದ ಸರಕಾರ, ಆ ಬಳಿಕ ಸೆಪ್ಟಂಬರ್ 30 ಎಂದು ಹೇಳಿದೆ.

ಡಿಸೈನ್ ಬಗ್ಸ್

ಪರೋಕ್ಷ ತೆರಿಗೆ, ತೆರಿಗೆ ಮತ್ತು ಸಲಹಾ ಸೇವೆಗಳ ಒಂದು ಸಂಸ್ಥೆಯಾಗಿರುವ ಕೆಪಿಎಂಜಿಯ ಪಾಲುದಾರ ಹರ್‌ಪ್ರೀತ್ ಸಿಂಗ್ ಜಿಎಸ್‌ಟಿ ತಂತ್ರಾಂಶದಲ್ಲಿರುವ ಡಿಸೈನ್ ಬಗ್ಸ್ ಇನ್ನಷ್ಟು ಸಮಸ್ಯೆಗಳನ್ನು ಹೆಚ್ಚಿಸಿದೆ ಎಂದಿದ್ದಾರೆ. ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸುವಾಗಲೇ ಅಲ್ಲಿ ಹಲವು ಸಮಸ್ಯೆಗಳಿರುವುದು ಸ್ಪಷ್ಟವಾಗಿಯೇ ಗೊತ್ತಿತ್ತು, ಮತ್ತು ಸಚಿವರ ಸಮಿತಿಯ ನೇಮಕದೊಂದಿಗೆ ಈ ಸಮಸ್ಯೆಗಳನ್ನು ಪತ್ತೆಹಚ್ಚಿ ಪರಿಹರಿಸುವ ನಿರೀಕ್ಷೆ ತಮ್ಮ ಸಂಸ್ಥೆಗಿತ್ತು. ‘‘ವ್ಯವಸ್ಥೆಯಲ್ಲೇ ಅಂತಹ ಹಲವು ಅನುಷ್ಠಾನ ಸಮಸ್ಯೆಗಳಿವೆ. ಆದರೆ ಹೊಸದಾಗಿ ಅಪ್‌ಗ್ರೇಡ್ ಮಾಡಲಾಗಿರುವ ವ್ಯವಸ್ಥೆ ಕಾರ್ಯನಿರ್ವಹಿಸುವವರೆಗೆ, ಯಾವ್ಯಾವ ಸಮಸ್ಯೆಗಳು ಪರಿಹಾರವಾಗದೆ ಉಳಿದುಬಿಡುತ್ತವೆ ಎಂಬುದನ್ನು ನೋಡಲು ನೀವು ಕಾಯಲೇಬೇಕಾಗುತ್ತದೆ’’ ಎಂದಿದ್ದಾರೆ ಸಿಂಗ್.

ಕ್ರೆಡಿಟ್ ನೋಟ್‌ಗಳಿಗೆ ಸಂಬಂಧಿಸಿದಂತೆ ಅವರು ಒಂದು ಸಮಸ್ಯೆಯನ್ನು ಗುರುತಿಸಿದ್ದಾರೆ. ಒಂದು ವಾಣಿಜ್ಯ ಸಂಸ್ಥೆಯು ತನ್ನ ಗಿರಾಕಿಗೆ ಹಣ ನೀಡಲು ಬಾಕಿ ಇದೆ, ಈ ಹಣವನ್ನು ಸರಕು ಅಥವಾ ಸೇವೆಗಳನ್ನು ಭವಿಷ್ಯದಲ್ಲಿ ಮಾಡುವ ಪರ್ಚೇಸ್‌ಗಳಿಗೆ ಹೊಂದಿಸಿಕೊಳ್ಳಬಹುದು ಎಂಬುದಕ್ಕೆ ನೀಡುವ ಸ್ವೀಕೃತಿ ಪತ್ರ (ಎಕ್ನಾಲೆಜ್‌ಮೆಂಟ್) ವೇ ಈ ಕ್ರೆಡಿಟ್ ನೋಟ್‌ಗಳು. ತನ್ನ ಸದ್ಯದ ರೂಪದಲ್ಲಿ ಅಥವಾ ಒಂದು ಇನ್‌ವಾಸ್‌ಗೆ ಪೋರ್ಟಲ್ ಒಂದು ಕ್ರೆಡಿಟ್ ನೋಟ್‌ಗೆ ಮಾತ್ರ ಅವಕಾಶ ನೀಡುತ್ತದೆ. ಹಲವು ವಾಣಿಜ್ಯ ಸಂಸ್ಥೆಗಳು ಕಾರ್ಯನಿರ್ವಹಿಸುವ ರೀತಿ ಇದಲ್ಲ. ಹೆಚ್ಚಿನ ಬಹುರಾಷ್ಟ್ರೀಯ ಕಂಪೆನಿಗಳು ಒಬ್ಬ ಗಿರಾಕಿಗೆ ಒಂದು ಇನ್‌ವಾಸ್‌ಗೆ ಹಲವು ಕ್ರೆಡಿಟ್ ನೋಟ್‌ಗಳನ್ನು ಇಶ್ಯೂ ಮಾಡುತ್ತವೆ. ಆದರೆ ಜಿಎಸ್‌ಟಿ ಪೋರ್ಟಲ್ ಇನ್ನೂ ಈ ಕ್ರಮವನ್ನು ಸ್ವೀಕರಿಸುತ್ತಿಲ್ಲ’’ ಎಂದಿದ್ದಾರೆ ಸಿಂಗ್.

ಸ್ವರಾಜ್ಯ ಮ್ಯಾಗಜಿನ್‌ನಲ್ಲಿ, ಆಶಿಶ್ ಚಂದೋರ್ಕರ್ ಇನ್ನೊಂದು ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದಾರೆ; ಏನನ್ನಾದರೂ ಪರೀಕ್ಷಿಸಲು, ವೆರಿಫೈ ಮಾಡಲು ಜನ ಕಂಪ್ಯೂಟರ್‌ನ ಇನ್ನೊಂದು ಸ್ಕ್ರೀನ್‌ಗೆ ಹೋದಾಗ, ಅವರು ಅದಾಗಲೇ ಭರ್ತಿ ಮಾಡಿರುವ ದತ್ತಾಂಶಗಳನ್ನು ಅಥವಾ ಮಾಹಿತಿಯನ್ನು ಜಿಎಸ್‌ಟಿ ಪೋರ್ಟಲ್ ಹಲವು ವೇಳೆ ಡಿಲಿಟ್ ಮಾಡಿ ಬಿಡುತ್ತದೆ. ‘‘ಉದಾಹರಣೆಗೆ, ಓರ್ವ ಬಳಕೆದಾರ ಒಬ್ಬ ಪೂರೈಕೆದಾರನಿಂದ ಇನ್‌ಪುಟ್ ಕ್ರೆಡಿಟ್‌ನ್ನು (ಒಂದು ಸಂಸ್ಥೆ ಕೊಂಡುಕೊಂಡ ಸರಕುಗಳ ಮೇಲೆ ದೊರಕುವ ತೆರಿಗೆ ಸಾಲವನ್ನು) ಚೆಕ್ ಮಾಡುತ್ತಿದ್ದರೆ ಮತ್ತು ಯಾವ ಪೂರೈಕೆದಾರನಿಗೆ ಈ ಇನ್‌ಪುಟ್ ಕ್ರೆಡಿಟ್ ಸೇರಿದ್ದೆಂದು ತಿಳಿಯಲು ಪೂರೈಕೆದಾರರ ಜಿಎಸ್‌ಟಿ ಸಂಖ್ಯೆಗಳನ್ನು ಚೆಕ್ ಮಾಡಲು ಬಯಸಿದರೆ, ಅದಾಗಲೇ ಎಂಟರ್ ಮಾಡಿರುವ ದತ್ತಾಂಶವನ್ನು ಕಳೆದುಕೊಳ್ಳದೆ ಹೀಗೆ ಚೆಕ್ ಮಾಡಲು ಸಾಧ್ಯವಾಗುವುದಿಲ್ಲ.

ಅಂತಿಮ ದಿನಾಂಕಗಳನ್ನು ಮುಂದೂಡಲಾಗುತ್ತದೆ.

ಇಂತಹ ಹತ್ತಾರು ಸಮಸ್ಯೆಗಳನ್ನು ಸರಕಾರ ಪರಿಹರಿಸಲು ಹೆಣಗಾಡುತ್ತಿರು ವಂತೆಯೇ, ತೆರಿಗೆ ರಿಟರ್ನ್ಸ್‌ಗಳನ್ನು ಸಲ್ಲಿಸುವ ಅಂತಿಮ ದಿನಾಂಕಗಳನ್ನು ಸತತವಾಗಿ ಮುಂದೂಡಲಾಗುತ್ತಿದೆ. ಅಂತಿಮ ದಿನಕ್ಕೆ ಮೊದಲೇ ತೆರಿಗೆ ರಿಟರ್ನ್ಸ್ ಗಳನ್ನು ಸಲ್ಲಿಸಬೇಕೆಂಬ ಧಾವಂತದಿಂದಾಗಿ ಜಿಎಸ್‌ಟಿ ನೆಟ್‌ವರ್ಕ್ ತಂತ್ರಾಂಶ ಕಾರ್ಯವೆಸಗಲು ಸಾಧ್ಯವಾಗಲಿಲ್ಲ. ಅಂತಿಮ ದಿನಗಳಿಗೆ ಐದು ದಿನಗಳಿರುವಾಗ, ಆಗಸ್ಟ್ ತಿಂಗಳಲ್ಲಿ ಸುಮಾರು 3 ಲಕ್ಷ ಡೀಲರ್‌ಗಳು ಮಾತ್ರ 3ಬಿ ರಿಟರ್ನ್ ಗಳನ್ನು ಫೈಲ್ ಮಾಡಿದ್ದರು. ಅದೇ ಜುಲೈ ತಿಂಗಳಲ್ಲಿ 46 ಲಕ್ಷ ಮಂದಿ ತೆರಿಗೆ ರಿಟರ್ನ್‌ಗಳನ್ನು ಫೈಲ್ ಮಾಡಿದ್ದರು. ಇದೇ ರೀತಿಯಾಗಿ ಇತರ ಎಲ್ಲ ರಿಟರ್ನ್ ಡೆಡ್‌ಲೈನ್‌ಗಳನ್ನು ವಿಸ್ತರಿಸಿರುವುದರಿಂದ ವ್ಯಾಪಾರ ವಾಣಿಜ್ಯ ಸಂಸ್ಥೆಗಳಲ್ಲಿ ಎಲ್ಲಿಲ್ಲದ ಗೊಂದಲ ಉಂಟಾಯಿತು. ಒಂದು ಸಂಸ್ಥೆ ಒಂದು ತಿಂಗಳಲ್ಲಿ ಜನರೇಟ್ ಮಾಡಿದ ಎಲ್ಲ ಮಾರಾಟ ಇನ್‌ವಾಸ್‌ಗಳ ಒಂದು ಸಂಗ್ರಹವಾಗಿರುವ ಜಿಎಸ್‌ಟಿ ಆರ್ 1-ಇದಕ್ಕೆ ನೀಡಲಾಗಿರುವ ಅಂತಿಮ ಗಡುವನ್ನು ಆಗಸ್ಟ್ 10ರಿಂದ ಸೆಪ್ಟ್ಟಂಬರ್ 5ಕ್ಕೆ ಮುಂದೂಡಿ ಈಗ ಅಂತಿಮವಾಗಿ ಅಕ್ಟೋಬರ್ 10ಕ್ಕೆ ನಿಗದಿಪಡಿಸಲಾಗಿದೆ.

ಅದೇ ರೀತಿಯಾಗಿ ಜಿಎಸ್‌ಟಿ ಆರ್ 2- ಇದಕ್ಕೆ ನೀಡಲಾಗಿರುವ ಅಂತಿಮ ಗಡುವನ್ನು ಆರಂಭದಲ್ಲಿ ಆಗಸ್ಟ್ 15ರಿಂದ ಸೆಪ್ಟಂಬರ್ 25ಕ್ಕೆ, ಮತ್ತು ಆ ಬಳಿಕ ಅಕ್ಟೋಬರ್ 31ಕ್ಕೆ ವಿಸ್ತರಿಸಲಾಯಿತು.

ಒಂದು ಸಂಸ್ಥೆಯ ಒಂದು ತಿಂಗಳಿನ ಒಟ್ಟು ಮಾರಾಟ ಮತ್ತು ಖರೀದಿಯನ್ನು ಆಧರಿಸಿ ಅದು ಮಾಡಬೇಕಾಗಿರುವ ತೆರಿಗೆ ಪಾವತಿಯನ್ನು ಅಂತಿಮಗೊಳಿಸುವ ಜಿಎಸ್‌ಟಿ ಆರ್ 3-ನ್ನು ಜುಲೈ ತಿಂಗಳಲ್ಲಿ ಸಲ್ಲಿಸಬೇಕಾಗಿತ್ತು. ಇದನ್ನು ಈಗ ನವೆಂಬರ್ 10ರ ವರೆಗೆ ವಿಸ್ತರಿಸಲಾಗಿದೆ. ಮೊದಲು ಇದನ್ನು ಸಲ್ಲಿಸಲು ಆಗಸ್ಟ್ 20 ಕೊನೆಯ ದಿನವೆಂದು ಹೇಳಿದ ಸರಕಾರ, ಆ ಬಳಿಕ ಸೆಪ್ಟಂಬರ್ 30 ಎಂದು ಹೇಳಿದೆ.

ಜಿಎಸ್‌ಟಿ ಪೋರ್ಟಲ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅದಕ್ಕೆ ಇನ್ನಷ್ಟು ಕೆಲಸದ ಆವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಕೆಲಸವಾಗಬೇಕಿದೆ ಎಂಬುದನ್ನು ಸರಕಾರ ಒಪ್ಪಿಕೊಂಡಂತಾಗಿದೆ. ಆದ್ದರಿಂದಲೇ ಅದು ತೆರಿಗೆ ರಿಟರ್ನ್ಸ್ ಗಳನ್ನು ಸಲ್ಲಿಸಲು ಎಲ್ಲರಿಗೆ ಇನ್ನಷ್ಟು ಕಾಲಾವಕಾಶ ನೀಡುತ್ತಿದೆ ಎಂದಿದ್ದಾರೆ, ಒಂದು ನೋಂದಾಯಿತ ಜಿಎಸ್‌ಟಿ ಸುವಿಧಾ ಸೇವೆಗಳನ್ನು ನೀಡುವ ಕ್ಲಿಯರ್ ಟ್ಯಾಗ್ಸ್ ಎಂಬ ಸಂಸ್ಥೆಯ ಸ್ಥಾಪಕ ಅರ್ಚಿತ್ ಗುಪ್ತ. ‘‘ಜಿಎಸ್‌ಟಿ ನಿಟ್ಟಿನಲ್ಲಿ ಸರಕಾರ ವೇಗವಾಗಿ ಮುಂದುವರಿಯುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಸಮಸ್ಯೆಗಳಿಗೆ ಏನಾದರೂ ಪರಿಹಾರ ದೊರಕಬಹುದು. ಆದ್ಯತೆಯ ನೆಲೆಯಲ್ಲಿ ನಿಜವಾದ ಸಮಸ್ಯೆಗಳನ್ನು ಪತ್ತೆಹಚ್ಚಿ ಪರಿಹರಿಸಿದಲ್ಲಿ ಜಿಎಸ್‌ಟಿಯಿಂದಾಗಿ ಈಗ ಒದ್ದಾಡುತ್ತಿರುವ ವ್ಯಾಪಾರ/ವಾಣಿಜ್ಯ ಸಂಸ್ಥೆಗಳಿಗೆ ದೊಡ್ಡ ಬಲ ಬಂದಂತಾಗುತ್ತದೆ, ತುಂಬಾ ನೆರವು ನೀಡಿದಂತಾ ಗುತ್ತದೆ.’’ ಎನ್ನುತ್ತಾರೆ ಅರ್ಚಿತ್ ಗುಪ್ತ.

ಕೃಪೆ: scroll.in

Writer - ಮಾಯಾಂಕ್ ಜೈನ್

contributor

Editor - ಮಾಯಾಂಕ್ ಜೈನ್

contributor

Similar News

ಜಗದಗಲ
ಜಗ ದಗಲ