ಪ್ರತಿ iPhone X ಮಾರಾಟದಿಂದ ಸ್ಯಾಮ್ಸಂಗ್ ಖಾತೆಗೆ 7,200 ರೂ. ಆದಾಯ !

Update: 2017-10-03 16:48 GMT

ಆ್ಯಪಲ್ ಸಂಸ್ಥೆಯ ನೂತನ ಉತ್ಪನ್ನ iPhone X ನ ಪ್ರತಿ ಫೋನ್ ನ ಮಾರಾಟದಿಂದ ಆ್ಯಪಲ್ ಪ್ರತಿಸ್ಪರ್ಧಿ ಸ್ಯಾಮ್ಸಂಗ್ ಖಾತೆಗೆ 110 ಡಾಲರ್ ಅಂದರೆ 7,200 ರೂ. ಆದಾಯ ದೊರಕಲಿದೆ. ಈ ಸುದ್ದಿಯನ್ನು ನಂಬಲು ಅಸಾಧ್ಯವಾದರೂ ಇದುವೇ ಸತ್ಯ. 'ಆ್ಯಪಲ್ ಸಂಸ್ಥೆಯ iPhone X ಮಾರಾಟದಿಂದ ಸ್ಯಾಮ್ಸಂಗ್ ಸಂಸ್ಥೆ ಆದಾಯ ಗಳಿಸುವುದಾದರೂ ಹೇಗೆ?' ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ...

ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ಗಳು ಕಂಪೆನಿಯ ಗ್ರಾಹಕರಿಗೆ ಅಚ್ಚುಮೆಚ್ಚಿನ ಫೋನ್ ಗಳಾಗಿವೆ. ಈ ಫೋನ್ ಗಳ ಮಾರಾಟದಿಂದ ಕಂಪೆನಿಯು ಭಾರೀ ಲಾಭವನ್ನು ಗಳಿಸುತ್ತಿದೆ. ಆದರೆ iPhone X ಮಾರಾಟದಿಂದ ಸ್ಯಾಮ್ಸಂಗ್ ಸಂಸ್ಥೆ ಗಳಿಸುವ ಆದಾಯ ಗ್ಯಾಲಕ್ಸಿ S8 ನ ಭಾಗಗಳನ್ನು ತಯಾರಿಸುವುದಕ್ಕಿಂತಲೂ ಹೆಚ್ಚು ಎಂದರೆ ನಂಬಲೇ ಬೇಕು.

ಏಕೆಂದರೆ, ಕಾರ್ಪೊರೇಟ್ ದೈತ್ಯ ಸ್ಯಾಮ್ಸಂಗ್ ಬಿಡಿಭಾಗಗಳನ್ನು ತಯಾರಿಸುವ ಸಂಘಟಿತ ಸಂಸ್ಥೆಯಾಗಿದೆ. OLED ಡಿಸ್ ಪ್ಲೇಗಳನ್ನು, NAND ಫ್ಲ್ಯಾಶ್ ಗಳನ್ನು ಹಾಗು DRAM ಚಿಪ್ ಗಳನ್ನು ತಯಾರಿಸುವ ಏಕೈಕ ಸಂಸ್ಥೆಯಾಗಿದೆ ಸ್ಯಾಮ್ಸಂಗ್. ಈ ಎಲ್ಲಾ ಫೀಚರ್ ಗಳು ಆ್ಯಪಲ್ ಐಫೋನ್ ಗಳಿಗೆ ಅತ್ಯಗತ್ಯವಾಗಿದೆ. ಆದ್ದರಿಂದ ಈ ಫೀಚರ್ ಗಳಿಗೆ ಆ್ಯಪಲ್ ಸ್ಯಾಮ್ಸಂಗನ್ನು ಅವಲಂಬಿಸಿದೆ. ಸ್ಯಾಮ್ಸಂಗ್ ನ ವ್ಯವಹಾರಗಳಿಗೆ ಈ ಭಾಗಗಳಿಗಾಗಿ ಆ್ಯಪಲ್ ನ ಬೇಡಿಕೆಯು ಬಹುದೊಡ್ಡ ಮೂಲವಾಗಿದೆ. ಅಂದರೆ ಕಂಪೆನಿಯ ಆದಾಯದ ಶೇ.35ರಷ್ಟು ಈ ಆರ್ಡರ್ ಅಥವಾ ಬೇಡಿಕೆಯಿಂದಲೇ ಬರುತ್ತದೆ ಎಂದು ‘ದ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

iPhone X ಮಾರಾಟದಿಂದ ಸ್ಯಾಮ್ಸಂಗ್ ಕಂಪೆನಿಯ ಆದಾಯ 2,61,95,60,00,000 ರೂ. ಹೆಚ್ಚಾಗಲಿದೆ. ಇದು ಗ್ಯಾಲಕ್ಸಿ s8 ನ ಭಾಗಗಳನ್ನು ತಯಾರಿಸುವುದಕ್ಕಿಂತಲೂ ಹೆಚ್ಚು!.

ಈ ಬಗೆಗಿನ ಹೆಚ್ಚಿನ ವಿವರಗಳಿಗೆ ಈ ಕೆಳಗಿನ ವಿಡಿಯೋ ವೀಕ್ಷಿಸಿ (ಕೃಪೆ-Nerdwriter1)

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News