ವಾಟ್ಸಾಪ್‌ನಲ್ಲಿ ನೀವೀಗ ರಿಯಲ್ ಟೈಮ್‌ನಲ್ಲಿ ನಿಮ್ಮ ತಾಣವನ್ನು ಶೇರ್ ಮಾಡಿಕೊಳ್ಳಬಹುದು
ಬಳಕೆದಾರರು ತಾವಿರುವ ತಾಣವನ್ನು ತಮ್ಮ ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಂದಿಗೆ ರಿಯಲ್ ಟೈಮ್‌ನಲ್ಲಿ ಶೇರ್ ಮಾಡಿಕೊಳ್ಳಲು ಅವಕಾಶ ನೀಡುವ ಹೊಸ ವೈಶಿಷ್ಟವನ್ನು ವಾಟ್ಸಾಪ್ ಪರಿಚಯಿಸಲಿದೆ.
ನೀವು ಎಲ್ಲಿದ್ದೀರೆಂದು ಜನರು ತಿಳಿದುಕೊಳ್ಳಲು ಲೈವ್ ಲೊಕೇಷನ್ ಸರಳ ಮತ್ತು ಸುರಕ್ಷಿತ ವಿಧಾನವಾಗಿದೆ ಎಂದು ವಾಟ್ಸಾಪ್ ಹೇಳಿದೆ.
ಈ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಫೀಚರ್‌ನಿಂದಾಗಿ ನೀವು ಯಾರೊಂದಿಗೆ ಮತ್ತು ಎಷ್ಟು ಹೊತ್ತು ಶೇರ್ ಮಾಡಿಕೊಳ್ಳುತ್ತೀರಿ ಎನ್ನುವುದನ್ನು ನಿಯಂತ್ರಿಸಲು ಸಾಧ್ಯ ವಾಗುತ್ತದೆ. ಯಾವುದೇ ಸಮಯದಲ್ಲಿಯೂ ಶೇರ್ ಮಾಡಿಕೊಳ್ಳುವುದನ್ನು ನೀವು ನಿಲ್ಲಿಸಬ ಹುದು ಅಥವಾ ಲೈವ್ ಲೊಕೇಷನ್ ಟೈಮರ್ ಅಂತ್ಯಗೊಳ್ಳುವಂತೆ ಮಾಡಬಹುದು ಎಂದು ಅದು ತಿಳಿಸಿದೆ.
ಈ ಹೊಸ ಫೀಚರ್ ಹೇಗೆ ಕೆಲಸ ಮಾಡುತ್ತದೆ?
ನೀವು ಶೇರ್ ಮಾಡಿಕೊಳ್ಳಲು ಬಯಸುವ ವ್ಯಕ್ತಿ ಅಥವಾ ಗುಂಪಿನೊಂದಿಗೆ ಚಾಟ್ ಅನ್ನು ಓಪನ್ ಮಾಡಿ. ಅಟ್ಯಾಚ್ ಬಟನ್‌ನಲ್ಲಿಯ ‘ಲೋಕೇಷನ್’ನಡಿ ‘ಶೇರ್ ಲೈವ್ ಲೊಕೇಷನ್’ ಎಂಬ ಆಯ್ಕೆ ಹೊಸದಾಗಿ ಸೇರ್ಪಡೆಯಾಗಿದ್ದು, ಎಷ್ಟು ಹೊತ್ತು ನೀವು ಶೇರ್ ಮಾಡಲು ಬಯಸುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿಕೊಂಡು ಸೆಂಡ್ ಅನ್ನು ಟ್ಯಾಪ್ ಮಾಡಿ. ಚಾಟ್‌ನಲ್ಲಿರುವ ಪ್ರತಿ ವ್ಯಕ್ತಿಯೂ ನಿಮ್ಮ ರಿಯಲ್ ಟೈಮ್ ಲೊಕೇಷನ್ ಅನ್ನು ಮ್ಯಾಪ್‌ನಲ್ಲಿ ಕಾಣಬಹುದಾಗಿದೆ. ಗುಂಪಿನಲ್ಲಿಯ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳು ತಮ್ಮ ಲೈವ್ ಲೊಕೇಷನ್ ಶೇರ್ ಮಾಡಿಕೊಂಡಿದ್ದರೆ ಎಲ್ಲ ಲೊಕೇಷನ್‌ಗಳೂ ಒಂದೇ ಮ್ಯಾಪ್‌ನಲ್ಲಿ ಕಾಣುತ್ತವೆ.
ಲೈವ್ ಲೊಕೇಷನ್ ಆ್ಯಂಡ್ರಾಯ್ಡಾ ಮತ್ತು ಐಫೋನ್‌ಗಳಲ್ಲಿ ಲಭ್ಯವಿದ್ದು,ಶೀಘ್ರವೇ ಆ್ಯಪ್‌ನಲ್ಲಿ ಬರಲಿದೆ.