ಬ್ಲಾಕ್‌ವ್ಯೂ s8:ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ ವಿಶ್ವದ ಮೊದಲ ಫುಲ್‌ಸ್ಕ್ರೀನ್ ಸ್ಮಾರ್ಟ್‌ಫೋನ್
ಚೀನಾದ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಬ್ಲಾಕ್‌ವ್ಯೂ ಸದ್ದಿಲ್ಲದೆ ನಾಲ್ಕು ಕ್ಯಾಮೆರಾ ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆಗೊಳಿಸಿದೆ. ಇದು ವಿಶ್ವದ ಇಂತಹ ಮೊದಲ ಫುಲ್ ಸ್ಕ್ರೀನ್ ಸ್ಮಾರ್ಟ್‌ಫೋನ್ ಎಂದು ಕಂಪನಿಯು ಹೇಳಿಕೊಂಡಿದೆ. ಈ ಫೋನ್ ಮುಂದೆ ಎರಡು ಮತ್ತು ಹಿಂದೆ ಎರಡು ಕ್ಯಾಮೆರಾಗಳನ್ನು ಹೊಂದಿದೆ.
ಈ ವರ್ಷಾಂತ್ಯದೊಳಗೆ ಆ್ಯಂಡ್ರಾಯ್ಡಾ ಓರಿಯೋಕ್ಕೆ ಅಪ್‌ಡೇಟ್ ಆಗಲಿರುವ ಬ್ಲಾಕ್‌ವ್ಯೂ s8 ಬಿಡುಗಡೆಗೆ ಮೊದಲೇ ಭರ್ಜರಿ ಬೇಡಿಕೆಗಳನ್ನು ಪಡೆದಿದ್ದು, ಬಹಳಷ್ಟು ಜನರು ಈ ನೂತನ ಫೋನ್ ಬಗ್ಗೆ ಆಸಕ್ತರಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತಿದೆ. ಶೇ.90ರಷ್ಟು ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬಂದಿರುವ ಈ ಪೋನ್ ಕೇವಲ 8.5 ಮಿ.ಮೀ.ದಪ್ಪವಿದೆ. ಇದು ಫೋನ್‌ಗೆ ಆಕರ್ಷಕ ನೋಟವನ್ನು ನೀಡಿದೆ.
ಆ್ಯಂಡ್ರಾಯ್ಡಾ 7 ನೋಗಾಟ್‌ನ್ನು ಆಧರಿಸಿರುವ ಬ್ಲಾಕ್‌ವ್ಯೂ s8 13 ಎಂಪಿ+13 ಎಂಪಿ ಸೆನ್ಸರ್ ಮತ್ತು ‘ಎಸ್‌ಎಲ್‌ಆರ್-ಲೆವೆಲ್ ಬೋಕೇಹ್ ಎಫೆಕ್ಟ್’ನೊಂದಿಗೆ ಹಿಂಭಾಗದಲ್ಲಿ ಡುಯೆಲ್ ಕ್ಯಾಮೆರಾ ಸಿಸ್ಟಮ್ ಮತ್ತು ಮುಂಭಾಗದ ಕ್ಯಾಮೆರಾ ಸಿಸ್ಟಮ್ ಕೂಡ ಸೆಲ್ಫಿ ಪ್ರೇಮಿಗಳಿಗಾಗಿ ಬ್ಯೂಟಿ ಫಂಕ್ಷನ್‌ನೊಂದಿಗೆ ಒಂದು 13 ಎಂಪಿ ಸೆನ್ಸರ್‌ನ್ನು ಒಳಗೊಂಡಿದೆ.
ನೂತನ ಬ್ಲಾಕ್‌ವ್ಯೂ s8ನ ವೈಶಿಷ್ಟಗಳು
ಡಿಸ್‌ಪ್ಲೇ 5.7 ಇಂಚು,ಎಚ್‌ಡಿ+720*1440,18:9 ರೇಶ್ಯೊ
ಪ್ರಾಸೆಸರ್ ಒಕ್ಟಾ-ಕೋರ್ ಎಂಟಿ 6750ಟಿ
ಕ್ಯಾಮೆರಾ(ರಿಯರ್) 13.0 ಎಂಪಿ+0.3 ಎಂಪಿ,ಸೋನಿ ಐಎಂಎಕ್ಸ್ 258
ಕ್ಯಾಮೆರಾ(ಫ್ರಂಟ್) 13.0 ಎಂಪಿ+0.3 ಎಂಪಿ
ಆರ್‌ಎಎಂ/ಆರ್‌ಒಎಂ 4 ಜಿಬಿ+64 ಜಿಬಿ
ಬ್ಯಾಟರಿ ಬಾಕ್ 3180 ಎಂಎಎಚ್,ಕ್ವಿಕ್ ಚಾರ್ಜ್ 2.0
ಆಪರೇಟಿಂಗ್ ಸಿಸ್ಟಮ್ ಆ್ಯಂಡ್ರಾಯ್ಡ್ 7.0
ವರ್ಷಾಂತಕ್ಕೆ ಆ್ಯಂಡ್ರಾಯ್ಡ್ 8.1ಕ್ಕೆ ಅಪ್‌ಡೇಟ್
ಬಣ್ಣ ಮ್ಯಾಜಿಕ್ ಬ್ಲಾಕ್,ಸಿಲ್ಕ್ ಗೋಲ್ಡ್,ಕೋರಲ್ ಬ್ಲೂ
ಕಾರ್ಯ ನಿರ್ವಹಣೆ ಯುಎಸ್‌ಬಿ ಟೈಪ್-ಸಿ,ಒಟಿಜಿ,ಫಿಂಗರ್‌ಪ್ರಿಂಟ್,ಜೆಸ್ಚರ್, ಆರ್‌ಜಿಬಿ
ಬೆಲೆ 149.99 ಡಾ.(9753 ರೂ.)