ಮಾನಸಿಕ ಗುಲಾಮಗಿರಿ ಸೃಷ್ಟಿಸುವ ಸೋಶಿಯಲ್ ಮೀಡಿಯಾ

Update: 2017-11-03 09:27 GMT

 ಇಂಜಿ ಪೆಣ್ಣು ಎಂಬ ಹೆಸರಿನಲ್ಲಿ ಬರೆಯುವ ಖ್ಯಾತ ಲೇಖಕಿ, ಹೋರಾಟಗಾರ್ತಿ, ಕೇರಳ ಮೂಲದವರು, ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ತಾಂತ್ರಿಕ ನಿರ್ದೇಶಕಿ. globalvoices.orgನಲ್ಲಿ ಹವ್ಯಾಸಿ ಪತ್ರಕರ್ತೆ. ಪ್ರಖರ ಸ್ತ್ರೀವಾದಿ, ಕೋಮು ರಾಜಕೀಯದ ವಿರೋಧಿ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳನ್ನು ಸದೆಬಡಿಯುವ ದಿಟ್ಟೆ. ಇಂಟರ್ನೆಟ್‌ನಲ್ಲಿ ಸ್ವತಂತ್ರವಾಗಿ ನಿಲುವು ಪ್ರಕಟಿಸಲು ಇರುವ ಷಡ್ಯಂತ್ರ, ಅಡೆತಡೆಗಳ ವಿರುದ್ಧ ಜಾಗೃತಿ ಮೂಡಿಸುತ್ತಿರುವ, ಅದಕ್ಕಾಗಿ ಬೃಹತ್ ಕಂಪೆನಿಗಳ ಜೊತೆ ನಿರಂತರ ಸೆಣಸುತ್ತಿರುವ ಕಾರ್ಯಕರ್ತೆ.

ಇಂಟರ್‌ನೆಟ್‌ನ ಆರಂಭಿಕ ಯುಗ

ಮಾಹಿತಿಯ ಪ್ರಜಾತಾಂತ್ರೀಕರಣ ಹಾಗೂ ಸಾಮಾಜೀಕರಣವು ಇಂಟರ್‌ನೆಟ್ ಯುಗದ ಆರಂಭಿಕ ಭರವಸೆಯಾಗಿತ್ತು. ಮಾಹಿತಿಯ ಅಸಮಾನ ವಿತರಣೆಯನ್ನು ಪರಿಹರಿಸುವಲ್ಲಿ ಎದುರಾಗುವ ಸವಾಲುಗಳನ್ನು ತೊಡೆದು ಹಾಕುವಲ್ಲಿ ಇಂಟರ್‌ನೆಟ್ ಏಕೈಕ ಮಾಧ್ಯಮವೆಂಬಂತೆ ಆಗ ಭಾಸವಾಗಿತ್ತು.

ಜ್ಞಾನದ ಕ್ರಾಂತಿಗೆ ಇಂಟರ್‌ನೆಟ್ ತ್ವರಿತ ಚಾಲನೆಯನ್ನು ನೀಡಿರುವಂತೆ ಮೇಲ್ನೋಟಕ್ಕೆ ಕಾಣುತ್ತದೆ. ಈಗ ಉಚಿತ ಜ್ಞಾನ ಎಂಬ ಪದವನ್ನು ಇಂಟರ್‌ನೆಟ್ ಪದಕ್ಕೆ ಬದಲಿಯಾಗಿ ಬಳಕೆಯಾಗುತ್ತಿದೆ. ಇಂಟರ್‌ನೆಟ್ ಸಂಪರ್ಕವೊಂದು ಇದ್ದರೆ ಸಾಕು, ಕೀಟ ಕಡಿತದ ತೊಂದರೆಗೆ ಪರಿಹಾರದಿಂದ ಹಿಡಿದು ಜಗತ್ತಿನ ಇತಿಹಾಸದವರೆಗಿನ ಎಲ್ಲಾ ವಿಷಯಗಳು ನಮ್ಮ ಬೆರಳ ತುದಿಯಲ್ಲಿರುವಂತೆ ನಮಗನಿಸುತ್ತದೆ. ಸರಕಾರಗಳು ಕೂಡಾ ತಾವಾಗಿಯೇ ಮುಂದೆ ಬಂದು ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ಇಂಟರ್‌ನೆಟ್ ಸಂಪರ್ಕ ಕ್ಕಾಗಿ ಮೂಲಸೌಲಭ್ಯ ಯೋಜನೆಗಳನ್ನು ಉತ್ತೇಜಿಸುತ್ತಿವೆ. ಸಂದೇಹಕ್ಕೆ ಆಸ್ಪದ ನೀಡುವಂತಹ ರೀತಿಯಲ್ಲಿ ಕಾರ್ಪೊರೇಟ್ ಕಂಪೆನಿಗಳು ಕೂಡಾ ಅಂತರ್ಜಾಲದ ಸಾಮಾಜೀಕರಣದ ತುರ್ತು ಅಗತ್ಯವನ್ನು ಬಲವಾಗಿ ಪ್ರತಿಪಾದಿಸುತ್ತಿವೆ.

2002ರ ಜುಲೈನಲ್ಲಿ ರಿಲಾಯನ್ಸ್ ಕಂಪೆನಿ ವರಿಷ್ಠ ಧೀರೂಭಾಯಿ ಅಂಬಾನಿ ಅವರ ನಿಧನದ ಸ್ವಲ್ಪ ಸಮಯದ ಬಳಿಕ, ಭಾರತದ ಪ್ರಮುಖ ಇಂಗ್ಲಿಷ್ ಹಾಗೂ ಇತರ ಭಾಷೆಗಳ ಸುದ್ದಿಪತ್ರಿಕೆಗಳ ಮುಖಪುಟದಲ್ಲಿ ವಿಶಿಷ್ಟವಾದ ಜಾಹೀರಾತೊಂದು ಕಾಣಿಸಿಕೊಳ್ಳತೊಡಗಿತು. ಗಲ್ಲದ ಮೇಲೆ ತನ್ನ ಬೆರಳನ್ನು ಊರಿ, ಗಾಢವಾದ ಚಿಂತನೆಯ ಮುಖಭಾವದ ಧೀರೂಭಾಯಿ ಅಂಬಾನಿಯ ಛಾಯಾಚಿತ್ರವುಳ್ಳ ಈ ಜಾಹೀರಾತಿನ ಅಡಿಬರಹ (ಟ್ಯಾಗ್‌ಲೈನ್) ಹೀಗಿತ್ತು. ‘‘ಪೋಸ್ಟ್‌ಕಾರ್ಡ್ ಬೆಲೆಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ನೂತನ ಟೆಲಿಸಂಪರ್ಕ ಸವಲತ್ತುಗಳನ್ನು ಒದಗಿಸುವುದೇ ನಮ್ಮ ಗುರಿಯಾಗಿದೆ’’. ‘‘ಪ್ರತಿಯೊಬ್ಬ ಭಾರತೀಯನಿಗೂ ಉಚಿತ ಮೊಬೈಲ್’’ ಒದಗಿಸುವ ಸುಳಿವು ನೀಡುವಂತಹ ಅಡಿಬರಹಗಳೂ ಕೂಡಾ ಪ್ರಕಟವಾಗಿದ್ದವು.

ಬಹುಮಟ್ಟಿಗೆ ಅದು ಕಾರ್ಪೊರೇಟ್ ಶಕ್ತಿಗಳ ಆಳ್ವಿಕೆಯ ಕಮ್ಯುನಿಸ್ಟ್ ಜಗತ್ತು ಸೃಷ್ಟಿಯಾಗುತ್ತಿರುವಂತೆ ಭಾಸವಾಗುತ್ತಿತ್ತು.

ಜ್ಞಾನದ ಆರ್ಥಿಕತೆಯು ಅನಾವರಣಗೊಳ್ಳಲು ಆರಂಭವಾಗುತ್ತಿದ್ದಂತೆಯೇ, ಎಲ್ಲಾ ರೀತಿಯ ಭರವಸೆಯನ್ನು ನೀಡುವ ಸಾಮರ್ಥ್ಯಗಳೊಂದಿಗೆ ಹೊರಹೊಮ್ಮಿದ ಇಂಟರ್‌ನೆಟ್ ಎಂಬ ಹೊಸ ವಿದ್ಯಮಾನವನ್ನು ದೇಶಗಳು ಹಾಗೂ ಸಂಸ್ಕೃತಿಗಳ ಗಡಿಗಳನ್ನು ಮೀರಿ ಯುವಜನ ಹಾಗೂ ವೃದ್ಧಾರಾದಿಯಾಗಿ ಎಲ್ಲರೂ ಉತ್ಸುಕತೆಯೊಂದಿಗೆ ಸ್ವಾಗತಿಸಿದರು. ಈಗ ಅತ್ಯಂತ ಜನಪ್ರಿಯ ಲಘುಪಾನೀಯವಾಗಿರುವ ಕೋಕ್ ಬ್ರಾಂಡ್ ಜಗತ್ತಿನ ಹಲವು ಸಂಸ್ಕೃತಿಗಳಿಗೆ ತೀರಾ ಅಪರಿಚಿತವಾಗಿತ್ತು. ಆದರೆ ಇಂಟರ್‌ನೆಟ್ ಅಲ್ಲಿನ ಮನೆಗಳ ಮೆಟ್ಟಲನ್ನೇರಿದ ಬಳಿಕ ಎಲ್ಲವೂ ಬದಲಾಯಿತು.ಅಂತರ್ಜಾಲದೊಂದಿಗೆ ಜನತೆಯನ್ನು, ಸಂಸ್ಕೃತಿಯನ್ನು ಸಂಪರ್ಕಿಸುವ ಮೂಲಕ ಈ ಜಾಗತೀಕರಣದ ಉತ್ಪನ್ನದ ಬೆಳವಣಿಗೆಗೆ ಯಾವುದೇ ಪ್ರತಿರೋಧ ಇಲ್ಲವಾಯಿತು. ಇಂತಹ ಸನ್ನಿವೇಶದಲ್ಲಿ ಕೋಕ್ ಯಾರಿಗೆ ತಾನೇ ಮೋಡಿ ಮಾಡದೆ ಇದ್ದೀತು?.

ಟ್ರೋಲ್ ಸೇನೆಗಳ ಮೂಲಕ ಸಮ್ಮತಿಯ ಉತ್ಪಾದನೆ

‘ಸಮ್ಮತಿಯ ಉತ್ಪಾದನೆ’ (manufacturing consent)ಕುರಿತ ಭಾಷಣವೊಂದರಲ್ಲಿ ಖ್ಯಾತ ಸಾಹಿತಿ ನೋಮ್ ಚೋಮ್‌ಸ್ಕಿ ಹೀಗೆ ಬೆಟ್ಟು ಮಾಡುತ್ತಾರೆ. ‘‘ಕಾರ್ಲ್ ಭವಿಷ್ಯ ನುಡಿದಿದ್ದ ರೀತಿಯಲ್ಲಿ ಜನರು ವ್ಯವಸ್ಥೆಯ ವಿರುದ್ಧ ಬಂಡೇಳುವ ಬದಲು ಪ್ರಚಲಿತ ಸಮಾಜದಲ್ಲಿ ನೆಲೆಯನ್ನು ಕಂಡುಕೊಳ್ಳುವ ಇಚ್ಛೆಯನ್ನು ಹೊಂದಿರುವುದೇ ಯಜಮಾನಿಕೆ ವ್ಯವಸ್ಥೆಯು ಅಸ್ತಿತ್ವದಲ್ಲಿರಲು ಕಾರಣವಾಗಿದೆಯೆಂದು ಇಟಲಿಯ ಮಾರ್ಕ್ಸಿಸ್ಟ್‌ವಾದಿ ಹಾಗೂ ರಾಜಕಾರಣಿ ಆ್ಯಂಟೊನಿಯೊ ಗ್ರಾಮ್ಸಿಯ ವಾದವಾಗಿತ್ತು ’’ ಎಂದವರು ಹೇಳುತ್ತಾರೆ.

ಅಂತರ್ಜಾಲ ಯುಗದ ಆರಂಭದಲ್ಲಿ ಮಾಹಿತಿಗಳನ್ನು ಜಡವಾದ ರೀತಿಯಲ್ಲಿ ಪ್ರದರ್ಶಿಸಲಾಗುತ್ತಿತ್ತು. ಇಂಟರ್‌ನೆಟ್‌ನಲ್ಲಿ ಪ್ರಸಾರವಾಗುವ ಮಾಹಿತಿಗಳ ಬಗ್ಗೆ ಬಳಕೆದಾರರು ಸಂವಹನ ನಡೆಸುವ ವ್ಯವಸ್ಥೆ ಆಗ ಇರಲಿಲ್ಲ. ಆದರೆ ವೆಬ್ 2.0 ಆಗಮನವು ಬಳಕೆದಾರನಿಗೆ ಸಂವಹನದ ಸಾಮರ್ಥ್ಯವನ್ನು ದೊರಕಿಸಿಕೊಟ್ಟಿತು. ನೀವು ಎಂದಿಗೂ ಭೇಟಿಯಾಗಲು ಸಾಧ್ಯವಿರದ ವ್ಯಕ್ತಿಗಳ ಜೊತೆ ಈಗ ನೀವು ಚಾಟ್‌ರೂಂಗಳಲ್ಲಿ, ಯೂಸರ್ ಗ್ರೂಪ್‌ಗಳಲ್ಲಿ, ಫೋರಂಗಳಲ್ಲಿ, ಇಮೇಲ್‌ಗಳಲ್ಲಿ ಸುಲಭವಾಗಿ ಸಂವಹನ ಮಾಡಬಹುದಾಗಿದೆ. ನಿಮ್ಮ ಪ್ರಿಯಪಾತ್ರರ ಜೊತೆಗೆ ನಿರಂತರವಾದ ಸಂಪರ್ಕ ಇರಿಸಿಕೊಳ್ಳಬಹುದಾಗಿದೆ ಮತ್ತು ದಿಢೀರ್ ಸಂದೇಶಗಳನ್ನು ಕಳುಹಿಸಬಹುದಾಗಿದೆ. ಇಷ್ಟೂ ಸಾಲದೆಂಬಂತೆ ನಿಮ್ಮ ಕಂಪ್ಯೂಟರ್‌ನ ಪರದೆಯ ಮೇಲೆ ‘ನಿಮಗೆ ಮೇಲ್ ಬಂದಿದೆ’ ಎಂಬ ಸಂದೇಶಗಳು ನಿಮ್ಮನ್ನು ಎಚ್ಚರಿಸುತ್ತವೆ. ಹೀಗೆ ಇಂದಿನ ಯುಗದಲ್ಲಿ ಅಂತರ್ಜಾಲದ ಮೂಲಕ ಮಾಹಿತಿಗಳ ದಿಢೀರ್ ರವಾನೆ ಹಾಗೂ ಸಂವಹನದಿಂದಾಗಿ ಮಾನವನ ಮೆದುಳಿನಲ್ಲಿ ಜಾಗಪಡೆಯಲು ಕಷ್ಟವಾಗುವಷ್ಟು ಮಾಹಿತಿಗಳ ಸ್ಫೋಟವಾಗುತ್ತಿದೆ.

ಈ ರೀತಿಯ ಸಂವಹನದ ಜೊತೆಗೆ ಟ್ರೋಲ್(ನಿಂದಕರು)ಗಳ ಸೇನೆಯೂ ಲಗ್ಗೆಯಿಟ್ಟಿದೆ. ಯಾವುದೇ ಮಾಹಿತಿಯನ್ನು ಬಹುವಿಧದ ಯೂಸರ್ ಐಡಿಗಳ ಮೂಲಕ ಪ್ರಸಾರ ಮಾಡಲು ಈಗ ಸಾಧ್ಯವಿದೆ. ಅದರೆ ಇದನ್ನು ಪದೇ ಪದೇ ತಮ್ಮ ವಿಚಾರಗಳ ಪ್ರಚಾರಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉದಾಹರಣೆಗೆ ಇಂಟರ್‌ನೆಟ್ ಇಲ್ಲದೆ ಇರುತ್ತಿದ್ದಲ್ಲಿ ಯಾರೂ ಕೂಡಾ ವಿಮಾನ ತಂತ್ರಜ್ಞಾನದ ಕುರಿತಾದ 2ನೇ ಶತಮಾನದ ಆರಂಭದಲ್ಲಿ ರಚನೆಯಾದ ಸಂಸ್ಕೃತ ಗ್ರಂಥವೆಂದು ಹೇಳಲಾಗುವ ವಿಚಿತ್ರವಾದಂತಹ ‘ವೈಮಾನಿಕ ಶಾಸ್ತ್ರ’ದ ಬಗ್ಗೆ ಯಾರೂ ಕೇಳಿರಲು ಸಾಧ್ಯವಿರಲಿಲ್ಲ. ಕೇವಲ ಹತ್ತಿಪ್ಪತ್ತು ಜನರ ನಡುವೆ ಚರ್ಚೆಯಾಗಿ ಮರೆತುಹೋಗುವಂತಹ ವಿಷಯವಾಗಬಹುದಾಗಿದ್ದ ಈ ಗ್ರಂಥವು ಇಂಟರ್‌ನೆಟ್‌ನಲ್ಲಿ ಒಂದೊಮ್ಮೆ ಬಿಸಿಬಿಸಿಯಾಗಿ ಚರ್ಚಿಸಲ್ಪಟ್ಟಿತ್ತು.

ಒಂದು ವೇಳೆ ಈ ಗ್ರಂಥವು ಇಂಟರ್‌ನೆಟ್ ಪ್ರವೇಶಿಸುವ ಮೊದಲೇ, ಅದರ ಬಗ್ಗೆ 1974ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಏರೋನಾಟಿಕಲ್ ಹಾಗೂ ಎಂಜಿನಿಯರಿಂಗ್ ವಿಭಾಗದ ಸಂಶೋಧಕರು ನಡೆಸಿದ ಅಧ್ಯಯನವು ‘ವೈಮಾನಿಕ ಶಾಸ್ತ್ರ’ ಸಂಸ್ಕೃತ ಗ್ರಂಥದಲ್ಲಿ ವಿವರಿಸಲಾದ ವಿಮಾನರಚನೆಯ ಸಿದ್ಧಾಂತಗಳಲ್ಲಿ ಯಾವುದೇ ಹುರುಳಿಲ್ಲವೆಂದು ಘೋಷಿಸಿತ್ತು. ಗ್ರಂಥಕರ್ತನಿಗೆ ವೈಮಾನಿಕ ಶಾಸ್ತ್ರದ ಬಗ್ಗೆ ಯಾವುದೇ ತಿಳುವಳಿಕೆಯಿದ್ದಿರಲಿಲ್ಲವೆಂದೂ ಅವರು ಹೇಳಿದ್ದರು.

ಈ ರೀತಿಯ ಸಿದ್ಧಾಂತಗಳನ್ನು ಅಲ್ಲಗಳೆಯುವುದಕ್ಕಾಗಿ ಇಂಟರ್‌ನೆಟ್‌ನಲ್ಲಿ ಕಾಲಹರಣ ಮಾಡಲು ವಿಜ್ಞಾನಿಗಳಿಗೆ ಸಾಧ್ಯವಾಗದು. ಆದರೆ ಇಂತಹ ವಿಚಾರಗಳನ್ನು ಪ್ರಚಾರ ಮಾಡಲು ಇಲ್ಲವೇ ವಿರೋಧಿಸಲು ಇಂಟರ್‌ನೆಟ್‌ನಲ್ಲಿ ನೇರವಾಗಿ ಸಮಯ ಕಳೆಯುವ ಕೆಲವೇ ಕೆಲವು ಮಾಹಿತಿತಂತ್ರಜ್ಞಾನ ಉದ್ಯೋಗಿಗಳು ಅಥವಾ ವಿದ್ಯಾರ್ಥಿಗಳ ಕೈಯಲ್ಲಿ ಇವು ಸೃಷ್ಟಿಯಾಗುತ್ತವೆ.ಆದಕ್ಕಾಗಿ ಹಣವೂ ಪಾವತಿಯಾಗುತ್ತಿರುತ್ತದೆ. ಅಂತರ್ಜಾಲದ ಮೂಲಕ ಸುತ್ತಮುತ್ತ ಹರಿದಾಡುವ ನಕಲಿ ಸಿದ್ಧಾಂತಗಳಿಂದ ರೋಸಿಹೋಗುವ ಪ್ರಜ್ಞಾವಂತರು, ಚಿಂತಕರು ಅವುಗಳನ್ನು ನಿರಾಕರಿಸಲು ಮುಂದಾಗುತ್ತಾರೆ. ಆದರೆ ಅವರ ಧ್ವನಿಯು ಟ್ರೋಲ್‌ಗಳ ಗದ್ದಲದ ನಡುವೆ ಮುಳುಗಿಹೋಗುತ್ತದೆ. ಅಂತರ್ಜಾಲದಲ್ಲಿ ಪ್ರಸಾರವಾದ ಒಂದು ಪಕ್ಕಾ ಹುಸಿ ವಿಷಯವೊಂದು ಹಲವು ಸ್ತರಗಳ ಚರ್ಚೆಯನ್ನು ಸೃಷ್ಟಿಸಬಹುದಾಗಿದೆ ಹಾಗೂ ಅದನ್ನು ವಿರೋಧಿಸುವ ಯಾವುದೇ ವಾದವನ್ನು ಇಲ್ಲವಾಗಿಸಿಬಿಟ್ಟರೆ ಪರಿಸ್ಥಿತಿ ಹೇಗಿರಬಹುದೆಂದು ನೀವೇ ಊಹಿಸಿಕೊಳ್ಳಿ.

ಇವುಗಳ ಹಿಂದಿದೆ ಸ್ಪಷ್ಟವಾದ ಕಾರ್ಯಸೂಚಿ

ಒಂದು ವೇಳೆ ನಿಮಗೆ, ಇಂತಹ ಹುಸಿಯಾದ ಸುದ್ದಿಗಳಿಗೆ ಇಂಟರ್‌ನೆಟ್‌ನಲ್ಲಿ ಹೇಗೆ ಅನುಮೋದನೆ ಸೃಷ್ಟಿಯಾಗುತ್ತದೆಯೆಂಬುದನ್ನು ಅರಿತುಕೊಳ್ಳಬೇಕಾದರೆ, ಉತ್ತರಪ್ರದೇಶದಲ್ಲಿ ಬಿಜೆಪಿಯ ಐಟಿ ಸೆಲ್‌ನ ಉಸ್ತುವಾರಿಯಾಗಿರುವ ಜೆ.ಪಿ.ಎಸ್. ರಾಥೋರ್ ಹೇಳಿರುವುದನ್ನು ಕೇಳಬೇಕು. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಸುದ್ದಿ ಜಾಲತಾಣವೊಂದರ ಜೊತೆ ಮಾತನಾಡಿದ್ದ ಅವರು ‘‘ಹಮಾರಿ ರಾಜನೀತಿ ಥಿ ಕಿ ಚುನಾವ್ ಕೆ ಪೆಹಲೆ ವೋಟರ್ ಕೆ ದಿಮಾಗ್ ಕೊ ಕ್ಯಾಪ್ಚರ್ ಕರ್ ಲೋ, ಸುಭೇ-ಶಾಮ್ ಮೆಸೇಜ್ ಭೇಜೋ. ಜಬ್ ದೇಖೆ, ಹಮಾರಾ ಚೆಹರಾ ದೇಖೆ, ಹಮಾರಿ ಬಾತ್ ಸುನೆ’’ (ಮತದಾರನ ಮನಸ್ಸನ್ನು ಸೆರೆಹಿಡಿಯುವುದೇ ನಮ್ಮ ರಾಜಕೀಯ ಕಾರ್ಯತಂತ್ರವಾಗಿತ್ತು. ರಾತ್ರಿ ಹಗಲು ಅವರಿಗೆ ಮೆಸೇಜ್ ಕಳುಹಿಸುತ್ತಿರಬೇಕು. ಎಲ್ಲಿ ನೋಡಿದರೂ, ಅವರಿಗೆ ನಾವು ಕಾಣಿಸುತ್ತಿರಬೇಕು, ನಮ್ಮ ಸಂದೇಶವನ್ನು ಅವರು ಆಲಿಸುತ್ತಿರಬೇಕು).

ಹಿಂದೂ ಭಾವನಾತ್ಮಕ ವಿಷಯಗಳ ಬಗ್ಗೆಯೂ ಇಂತಹದೇ ರೀತಿಯ ಚರ್ಚೆ ಗಳು ಇಂಟರ್‌ನೆಟ್‌ಗಳಲ್ಲಿ ದಂಡಿಯಾಗಿ ಹರಿದಾಡುತ್ತಿರುತ್ತವೆ. ಹಿಂದುತ್ವವಾದಿಗಳು ಹಾಗೂ ಟ್ರೋಲ್ ಸೇನೆಗಳು ತಮ್ಮದೇ ಆದ ದೃಷ್ಟಿಕೋನದೊಂದಿಗೆ ಹಿಂದೂ ವಿಚಾರಗಳನ್ನು ನಿಮಗೆ ಬೇಕಿರಲಿ, ಬೇಡದೇ ಇರಲಿ ಇಂಟರ್‌ನೆಟ್ ಮೂಲಕ ಬಿತ್ತುತ್ತಿರುತ್ತವೆ. ಒಮ್ಮೆ ನಿಮಗೆ ಅದರ ಅಸ್ತಿತ್ವದ ಬಗ್ಗೆ ತಿಳಿದಲ್ಲಿ, ಈ ನಕಲಿ ಮಾಹಿತಿಯನ್ನು ನಿಮ್ಮ ಮೆದುಳಿನಿಂದ ತೆಗೆದುಹಾಕಿ ಬಿಡಲು ಸಾಧ್ಯವಿಲ್ಲ. ಹೀಗೆ ಅವುಗಳ ಸಾಮಾನ್ಯೀಕರಣವಾಗುತ್ತದೆ.

ಇಂಟರ್‌ನೆಟ್ ತನ್ನದೇ ಆದಂತಹ ಆರ್ಥಿಕತೆಯನ್ನು ಈಗ ಸೃಷ್ಟಿಸಿಕೊಳ್ಳುತ್ತಿದೆ. ಅಂತರ್ಜಾಲದ ಸಂವಹನ ವೇದಿಕೆಗಳಲ್ಲಿ ಜಾಹೀರಾತುಗಳು ಪ್ರದರ್ಶಿತವಾಗುತ್ತವೆ ಹಾಗೂ ಕ್ಲಿಕ್ ಬೈಟ್‌ಗಳನ್ನು ಸೃಷ್ಟಿಸಲಾಗುತ್ತದೆ. ವಿಷಯಗಳು ಸ್ವಾರಸ್ಯವಾಗಿದ್ದಷ್ಟೂ, ಅದಕ್ಕೆ ಬಳಕೆದಾರರ ಕ್ಲಿಕ್‌ಗಳೂ ಅಧಿಕವಾಗುತ್ತವೆ ಹಾಗೂ ಇವುಗಳಿಗಾಗಿ ಕಾರ್ಪೊರೇಟ್‌ಗಳ ಬ್ಯಾಂಕ್ ಖಾತೆಗಳಿಂದ ಹಣದ ಸುರಿಮಳೆಯಾಗುತ್ತದೆ. ‘ಡು ನೋ ಎವಿಲ್’ (ಕೆಟ್ಟದು ಮಾಡದಿರಿ) ಎಂಬ ಘೋಷಣೆಯೊಂದಿಗೆ ಪ್ರತ್ಯಕ್ಷವಾದ ಗೂಗಲ್ ಸಂಸ್ಥೆಯು ಶೋಧತಾಣ (ಸರ್ಚ್ ಎಂಜಿನ್) ಎಂಬ ಕ್ರಾಂತಿಕಾರಿ ತಂತ್ರಜ್ಞಾನದ ಮೂಲಕ ಮಾಹಿತಿ ಸಾಮ್ರಾಜ್ಯವೊಂದನ್ನು ನಿರ್ಮಿಸಿಕೊಂಡಿದೆ. ಈಗ ಯಾರೂ ಕೂಡಾ ಅತ್ಯಂತ ಸುಲಭವಾಗಿ ಟ್ರೋಲ್‌ಗಳಿಗಾಗಿ ಹುಡುಕಬಹುದಾಗಿದೆ ಹಾಗೂ ಅವುಗಳನ್ನು ಕ್ರೋಢೀಕರಿಸಬಹುದಾಗಿದೆ.

ಕ್ಲಿಕ್ ಆರ್ಥಿಕತೆ

ಈ ರೀತಿ ಪ್ರತಿಸಂಸ್ಕೃತಿಗಳ ಕಲಬೆರಕೆಯ ನಡುವೆ ಫೇಸ್‌ಬುಕ್ ತಲೆಯೆತ್ತಿದೆ. ವ್ಯಕ್ತಿಗಳು ದಿಢೀರನೆ ಸಿಲೆಬ್ರಿಟಿಗಳಾಗಿ, ಅವರ ಅನಿಸಿಕೆಗಳನ್ನು ಹಂಚಿಕೊಳ್ಳುವ ಹಾಗೂ ಪುನರಾವರ್ತಿಸುವ ಸಾಮಾಜಿಕ ಮಾಧ್ಯಮಗಳ ಯುಗ ಇದಾಗಿದೆ. ಈ ನವ ಉದಾರವಾದಿ ಕ್ರಾಂತಿಗಳು ಸಾರ್ವಜನಿಕರನ್ನು ‘ರೋಚಕ ಸಾಹಸ’ಕ್ಕೆ ಪ್ರೇರೇಪಿಸುತ್ತವೆ. ಆ ಮೂಲಕ ಇನ್‌ಸ್ಟಾಗ್ರಾಮ್ ತಾರೆಯರನ್ನು, ಫೇಸ್‌ಬುಕ್ ಸಿಲೆಬ್ರಿಟಿಗಳನ್ನು ಹಾಗೂ ಯೂಟ್ಯೂಬ್ ದೊರೆಗಳನ್ನು ಉತ್ಪಾದಿಸುತ್ತಿವೆ.

ನ್ಯೂಯಾರ್ಕ್ ನಗರದ ಡಾಟಾ ಆ್ಯಂಡ್ ಸೊಸೈಟಿ ರಿಸರ್ಚ್ ಇನ್ಸ್‌ಟಿಟ್ಯೂಟ್‌ನ ಸಂಶೋಧನಾ ವಿದ್ಯಾರ್ಥಿ ಅಲಿಸ್ ಮಾರ್ವಿಕ, ತನ್ನ ಪ್ರೌಡಪ್ರಬಂಧ ‘ಸ್ಟೇಟಸ್ ಅಪ್‌ಡೇಟ್: ಸಿಲೆಬ್ರಿಟಿ, ಪಬ್ಲಿಸಿಟಿ ಹಾಗೂ ಸೆಲ್ಫ್‌ಬ್ರಾಂಡಿಂಗ್ ಇನ್ ವೆಬ್ 2.0’ನಲ್ಲಿ ಹೀಗೆ ವಿವರಿಸಿದ್ದಾರೆ.

ಅಮೆರಿಕದ ಸಿಲಿಕಾನ್ ಕಣಿವೆಯ ವೌಲ್ಯಗಳನ್ನು ಅಂತರ್ಗತವಾಗಿರುವ ಸ್ಟೇಟಸ್ ಕೋರುವ (ಠಿಠ್ಠಿ ಛಿಛಿಜ್ಞಿಜ)ಪದ್ಧತಿಗಳನ್ನು ಸಾಮಾಜಿಕ ಜಾಲತಾಣಗಳು ಉತ್ತೇಜಿಸುತ್ತವೆ. ನವ ಉದಾರವಾದಿ, ಮುಕ್ತ ಮಾರುಕಟ್ಟೆಯ ಸಾಮಾಜಿಕ ವ್ಯವಸ್ಥೆಗೆ ಇದು ಮಾದರಿಯಾಗಿ ಬಿಟ್ಟಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಓರ್ವನ ಹಾಗೂ ಇತರರ ಸಾಮಾಜಿಕ ಪ್ರವೃತ್ತಿಯನ್ನು ಯಶಸ್ವಿಯಾಗಿ ತೀರ್ಮಾನಿಸಲು ಮಾರುಕಟ್ಟೆ ಆಧಾರಿತ ಸಿದ್ಧಾಂತಗಳನ್ನು ಬಳಸಿಕೊಳ್ಳಲಾಗುತ್ತದೆ. ಆನ್‌ಲೈನ್‌ನಲ್ಲಿ ಆಕರ್ಷಣೆಯನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಆಧರಿಸಿ ಆತನ ‘ಸ್ಟೇಟಸ್’ ಅಧಿಕಗೊಳ್ಳುತ್ತದೆ.

ಸ್ಪರ್ಧಾತ್ಮಕವಾಗಿ ಗಮನಸೆಳೆಯುವ ಆರ್ಥಿಕತೆಯಲ್ಲಿ ಒಬ್ಬಾತನು ಸ್ಥಾನಕಂಡುಕೊಳ್ಳುವುದು ಆತನ ಪ್ರತಿಷ್ಠೆ ಹಾಗೂ ಅಸ್ತಿತ್ವದ ಸೂಚಕವಾಗಿಬಿಡುತ್ತವೆ.

ಅರ್ನಬ್ ಗೋಸ್ವಾಮಿ ನಡೆಸುತ್ತಿರುವ ‘ರಿಪಬ್ಲಿಕನ್ ಚಾನೆಲ್’ ಎಂಬ ಬೋಗಸ್ ಟೆಲಿವಿಶನ್ ಮಾಧ್ಯಮವು ದಿನಬೆಳಗಾಗುವುದರೊಳಗೆ ಸೃಷ್ಟಿಯಾದುದಲ್ಲ. ಬೃಹತ್ ಪ್ರಮಾಣದ ಇಂಟರ್‌ನೆಟ್ ಟ್ರೋಲ್ ಸೇನೆಗಳ ನೇರ ಉತ್ಪನ್ನ ಇದಾಗಿದೆ. ಯಾರು ಕೂಡಾ ತಪ್ಪು ಮಾಹಿತಿಯನ್ನು ಮಾರಾಟ ಮಾಡಬಹುದಾಗಿದೆ ಮತ್ತು ಅದನ್ನು ಎಲ್ಲೆಡೆಯೂ ಹರಡಿ ಹಲವು ಬಾರಿ ಪುನರಾವರ್ತಿಸಬಹುದಾಗಿದೆ. ಆ ಮೂಲಕ ಆದಾಯವನ್ನು ಕೂಡಾ ಸೃಷ್ಟಿಸಲು ಸಾಧ್ಯವಿದೆ. ಅಂತರ್ಜಾಲದ ಪ್ರಯೋಗಾತ್ಮಕ ನೆಲೆಯಲ್ಲಿ ಇದು ಸಾಬೀತಾಗಿದೆ. ಟೆಲಿವಿಶನ್ ರಂಗದಲ್ಲೂ ಈಗ ಅದು ಪುನರಾವರ್ತನೆಯಾಗಿದೆ. ಈ ರೀತಿಯಾಗಿ ಟಿವಿಯ ಪ್ರೈಮ್‌ಟೈಮ್ ಸಮಯದಲ್ಲಿ ಯಾರನ್ನಾದರೂ ಟ್ರೋಲ್ ಮಾಡಿದಲ್ಲಿ, ಅದಕ್ಕೆ ಅಂಗೀಕಾರ ದೊರೆಯುತ್ತದೆ. ಇನ್ನೂ ಹೆಚ್ಚು ಮುಖ್ಯವೆಂದರೆ ಅದರಿಂದ ಉತ್ತಮ ಆದಾಯ ಕೂಡಾ ಸೃಷ್ಟಿಸಿಕೊಳ್ಳಲು ಸಾಧ್ಯವಿದೆ. ಜಗತ್ತಿನಾದ್ಯಂತ ಈ ಪ್ರವೃತ್ತಿ ಸಂಭವಿಸುತ್ತಲೇ ಇದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರ ಪ್ರಚಾರ ತಂಡದ ಡಿಜಿಟಲ್ ವಿಭಾಗದ ಅಧಿಕಾರಿಯಾಗಿದ್ದ ಬ್ರಾಡ್ ಪಾರ್ಸ್‌ಕೇಲ್ ಅವರು ಅಮೆರಿಕದ ಟಿವಿ ವಾಹಿನಿ ಸಿಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ಡೊನಾಲ್ಡ್ ಟ್ರಂಪ್ ಗೆಲುವಿಗೆ ನೆರವಾಗುವಲ್ಲಿ ಫೇಸ್‌ಬುಕ್ ನಿರ್ಣಾಯಕ ಅಸ್ತ್ರವಾಯಿತೆಂದು ಹೇಳಿಕೊಂಡಿದ್ದರು. ‘‘ಟ್ವಿಟರ್ ಟ್ರಂಪ್‌ಗೆ ಜನರ ಜೊತೆ ಮಾತನಾಡಲು ನೆರವಾದರೆ, ಫೇಸ್‌ಬುಕ್ ಅವರ ಗೆಲುವಿನ ದಾರಿಯನ್ನು ತೋರಿಸಿತು’’ ಎಂದವರು ಹೇಳಿದ್ದರು.

ಟ್ರಂಪ್ ಅವರ ಚುನಾವಣಾ ಪ್ರಚಾರದಲ್ಲಿ ಪ್ರತಿ ದಿನವೂ ಸರಾಸರಿ 50ರಿಂದ 60 ಸಾವಿರದಷ್ಟು ವಿಭಿನ್ನ ಆವೃತ್ತಿಯ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿತ್ತು. ಕೆಲವು ದಿನಗಳಲ್ಲಿ ಅದು 1 ಲಕ್ಷವನ್ನು ಕೂಡಾ ದಾಟುತ್ತಿತ್ತು. ಗಂಟೆಯಿಂದಗಂಟೆಗೆ ಜಾಹೀರಾತಿನ ಬಣ್ಣ. ವಿನ್ಯಾಸ, ಹಿನ್ನೆಲೆ ಹಾಗೂ ಘೋಷವಾಕ್ಯಗಳು ಬದಲಾಗುತ್ತಿದ್ದವು.

ಇದೂ ಸಾಲದೆಂಬಂತೆ, ಫೇಸ್‌ಬುಕ್ ಸಂಸ್ಥೆಯು ಒದಗಿಸಿದ ಉದ್ಯೋಗಿಗಳ ಮೂಲಕ ಫೇಸ್‌ಬುಕ್ ತಂತ್ರಜ್ಞಾನವನ್ನು ತಾನು ಬಳಸಿಕೊಂಡಿದ್ದಾಗಿ ಪಾರ್ಸ್‌ಸ್ಕೇಲ್ ದೃಢಪಡಿಸಿದ್ದಾರೆ. ಟ್ರಂಪ್ ಪರ ಪ್ರಚಾರದ ವೇಳೆ ಫೇಸ್‌ಬುಕ್ ಉದ್ಯೋಗಿಗಳು ತನ್ನ ಕಚೇರಿಯಲ್ಲಿ ಹಲವಾರು ದಿನಗಳ ಕಾಲ ಕೆಲಸ ಮಾಡಿದ್ದರೆಂದು ಆತ ತಿಳಿಸಿದ್ದಾರೆ.

ಹೀಗೆ ಸೋಶಿಯಲ್ ಮಿಡಿಯಾವು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅಭ್ಯರ್ಥಿಯೊಬ್ಬ ಅಧ್ಯಕ್ಷನಾಗಿ ಚುನಾಯಿತನಾಗಲು ನೆರವಾಯಿತು. ಹೀಗೆ ಇಂಟರ್‌ನೆಟ್ ಕ್ರಾಂತಿಯು ದುರಂತಮಯ ತಿರುವನ್ನು ಕಂಡಿದೆ.

ಈ ವರ್ಷದ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿಯ ವೇಳೆ ಶ್ವೇತಭವನದ ರೋಸ್‌ಗಾರ್ಡನ್‌ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಅವರು ‘‘ಸಾಮಾಜಿಕ ಜಾಲತಾಣದಲ್ಲಿ ಭಾರತದ ಪ್ರಧಾನಿ ಮೋದಿ ಹಾಗೂ ನಾನು ಜಾಗತಿಕ ನಾಯಕರೆಂಬುದಾಗಿ ಅಮೆರಿಕದ ಜನತೆ, ಭಾರತದ ಜನತೆಗೆ ಹೆಮ್ಮೆಯಿಂದ ಘೋಷಿಸಿಕೊಳ್ಳುತ್ತೇನೆ’’ ಎಂದು ಹೇಳಿಕೊಂಡಿದ್ದರು.

ಆದರೆ ಪ್ರಜಾಪ್ರಭುತ್ವವನ್ನು ಕೀಳಾಗಿಸಿರುವ ಈ ಇಬ್ಬರು ವ್ಯಕ್ತಿಗಳು ನಾನು ಮತ್ತು ನೀವು ಉಪಯೋಗಿಸುವ ಇದೇ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಹೇಗೆ ಅಧಿಕಾರಕ್ಕೇರಿದರೆಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ. ಸಮಾನತೆಯ ಓಯಸಿಸ್‌ನಂತೆ ಭಾಸವಾಗುವ ಈ ಜಾಲತಾಣಗಳು ಈಗ ನಮ್ಮ ಕಣ್ಣಮುಂದೆಯೇ ಯಾತನಾಮಯವಾದ ುರೀಚಿಕೆಗಳಾಗಿ ಪರಿವರ್ತನೆಗೊಂಡಿವೆ.

Writer - ಇಂಜಿ ಪೆಣ್ಣು

contributor

Editor - ಇಂಜಿ ಪೆಣ್ಣು

contributor

Similar News