ಮಕ್ಕಳ ದಿನವನ್ನು ನವೆಂಬರ್ 14ರಂದೇ ಯಾಕೆ ಆಚರಿಸಬೇಕು?

Update: 2017-11-13 18:44 GMT

1889 ನವೆಂಬರ್ 14ರಂದು ಜನಿಸಿದ ಜವಾಹರ ಲಾಲ್ ಅವರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ನವೆಂಬರ್ 14ರಂದು ಭಾರತದಲ್ಲಿ ಮಕ್ಕಳ ದಿನಾ ಚರಣೆ ಆಚರಿಸಲಾಗುತ್ತಿದೆ. ಮಕ್ಕಳನ್ನು ಪ್ರೀತಿಸುವ, ಅವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನೆಹರೂ ಅವರನ್ನು ಮಕ್ಕಳು ಚಾಚಾ ನೆಹರೂ ಅಥವಾ ಚಾಚಾಜಿ ಎಂದೇ ಕರೆಯುತ್ತಾರೆ. ಮಕ್ಕಳ ದಿನಾ ಚರಣೆಯಂದು ಮಕ್ಕಳು ಚಾಕಲೆಟ್ ಹಾಗೂ ಉಡುಗೊರೆ ವಿತರಿಸಿ ಸಂಭ್ರಮಿಸುತ್ತಾರೆ. ಶಾಲೆಗಳಲ್ಲಿ ಚರ್ಚೆ, ಸಂಗೀತ ನೃತ್ಯದಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಅನಾಥ ಮಕ್ಕಳಿಗೆ ಬಟ್ಟೆ, ಆಟಿಕೆ ಹಾಗೂ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

ವಿಶ್ವಸಂಸ್ಥೆ ನವೆಂಬರ್ 20ರಂದು ವಿಶ್ವ ಮಕ್ಕಳ ದಿನಾ ಚರಣೆ ಆಚರಿಸುತ್ತದೆ. ಈ ಹಿನ್ನೆಲೆಯಲ್ಲಿ 1964ಕ್ಕಿಂತ ಹಿಂದೆ ಭಾರತದಲ್ಲಿ ಡಿಸೆಂಬರ್ 20ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿತ್ತು. ಆದರೆ, 1964ರಲ್ಲಿ ಜವಾಹರಲಾಲ್ ನೆಹರೂ ನಿಧನ ಹೊಂದಿದ ತರುವಾಯ ಅವರ ಜನ್ಮ ದಿನಾಚರಣೆಯನ್ನೇ ದೇಶಾದ್ಯಂತ ಬಾಲ ದಿವಸವಾಗಿ ಆಚರಿಸಲು ಸರ್ವ ಸಮ್ಮತವಾಗಿ ನಿರ್ಧರಿಸಲಾಯಿತು. ನೆಹರೂ ಅವರು ಒಂದು ಬಾರಿ ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂದು ಹೇಳಿದ್ದರು. ದೇಶದ ಮಕ್ಕಳ ಅಭಿವೃದ್ಧಿ ಹಾಗೂ ಶಿಕ್ಷಣದ ಬಗ್ಗೆ ಅವರು ಅಪಾರ ಕಾಳಜಿ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಕೆಲವು ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ದೂರದೃಷ್ಟಿಯನ್ನು ಅವರು ಹೊಂದಿದ್ದರು. ಯುವ ಜನತೆಯ ಪ್ರಗತಿ ಬಗ್ಗೆ ಅವರಿಗಿದ್ದ ಮುನ್ನೋಟವೇ ಎಐಐಎಂಎಸ್ ಹಾಗೂ ಐಐಟಿಯಂತಹ ಅತ್ಯುಚ್ಚ ಸಂಸ್ಥೆಗಳ ಸ್ಥಾಪನೆಗೆ ಕಾರಣವಾಯಿತು.

ಸ್ವಾತಂತ್ರ ಹೋರಾಟ ಹಾಗೂ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ನೆಹರೂ ಅವರು ಈ ದೇಶದ ಮಕ್ಕಳಿಗಾಗಿ ಶಿಕ್ಷಣ ಹಾಗೂ ಅಭಿವೃದ್ಧಿಯ ಪರಂಪರೆ ಯನ್ನೇ ಬಿಟ್ಟು ಹೋಗಿದ್ದಾರೆ. ಆದುದರಿಂದ ಅವರಿಗೆ ಗೌರವ ಸಲ್ಲಿಸಲು ನವೆಂಬರ್ 14ರಂದು ಮಕ್ಕಳ ದಿನಾಚರಣೆ ಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ