ಜಾನ್ ಸ್ಯಾಂಡರ್ಸ್ ಹತ್ಯೆ
* 1927: ಸೈಮನ್ ಆಯೋಗವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಬ್ರಿಟಿಷ್ ಪೊಲೀಸರ ಲಾಠಿ ಚಾರ್ಜ್‌ನಿಂದ ಗಂಭೀರ ಗಾಯಗೊಂಡು ಸ್ವಾತಂತ್ರ ಹೋರಾಟಗಾರ ಲಾಲಾ ಲಜಪತ್‌ರಾಯ್ ಅಸು ನೀಗಿದ್ದರು. ಈ ಲಾಠಿ ಚಾರ್ಜ್‌ಗೆ ಕಾರಣನಾಗಿದ್ದ ಬ್ರಿಟಿಷ್ ಎಸ್ಪಿ ಜೇಮ್ಸ್ ಸ್ಕಾಟ್‌ನನ್ನು ಹತ್ಯೆಗೈಯಲು ಕ್ರಾಂತಿಕಾರಿ ಭಗತ್‌ಸಿಂಗ್ ಮತ್ತು ಆತನ ಸಂಗಾತಿಗಳು ನಿರ್ಧರಿಸಿದ್ದರು. ಆದರೆ ಈ ಪ್ರಯತ್ನದಲ್ಲಿ ಅವರು ತಪ್ಪಾಗಿ ಅರ್ಥೈಸಿ ಸಹಾಯಕ ಎಸ್ಪಿ ಜಾನ್ ಸ್ಯಾಂಡರ್ಸ್‌ನನ್ನು ಇಂದು ಗುಂಡಿಕ್ಕಿ ಕೊಂದರು.
* 1895: ಕಾಗದದ ಹುರಿ ತಯಾರಿಸುವ ಯಂತ್ರಕ್ಕೆ ಅಮೆರಿಕದ ಜಾರ್ಜ್ ಬ್ರೌನೆಲ್ ಪೇಟೆಂಟ್ ಪಡೆದರು.
* 1903: ಅಮೆರಿಕದ ರೈಟ್ ಸಹೋದರರಿಂದ ಪ್ರಥಮ ಯಾಂತ್ರೀಕೃತ ವಿಮಾನ ಹಾರಾಟ ಪ್ರದರ್ಶನ ನಡೆಯಿತು.
* 1925: ಸೋವಿಯತ್ ಒಕ್ಕೂಟ ಹಾಗೂ ಟರ್ಕಿ ಮಧ್ಯೆ ಪರಸ್ಪರ ಆಕ್ರಮಣ ಮಾಡದಿರುವ ಒಪ್ಪಂದ ಏರ್ಪಟ್ಟಿತು.
* 1938: ಯುರೇನಿಯಂ ಸಹಾಯದಿಂದ ಪರಮಾಣು ವಿದಳನ ಕ್ರಿಯೆಯ ಸಂಶೋಧನೆಯಲ್ಲಿ ಜರ್ಮನ್ ರಸಾಯನಶಾಸ್ತ್ರಜ್ಞ ಒಟ್ಟೊ ಹಾನ್ ಹಾಗೂ ಆತನ ಸಹಾಯಕ ಫ್ರಿಟ್ಝ್ ಸ್ಟ್ರಾಸ್‌ಮನ್ ಯಶಸ್ವಿಯಾದರು.
* 1983: ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಡಿಸ್ಕೊ ಕ್ಲಬ್‌ವೊಂದಕ್ಕೆ ಬೆಂಕಿ ಬಿದ್ದು 83 ಜನ ಸಾವನ್ನಪ್ಪಿದರು.
* 1999: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನ.25ರ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನವನ್ನಾಗಿ ಆಚರಿಸುವ ನಿರ್ಣಯ ಪಾಸು ಮಾಡಿತು.
* 2002: ಚಂದ್ರನ ವ್ಯಾಪ್ತಿಯಲ್ಲಿ ಬರುವ ಗುರುತ್ವಾಕರ್ಷಣ ಕ್ಷೇತ್ರದ ಅಳತೆಯನ್ನು ನಾಸಾ ಇಂದು ಯಶಸ್ವಿಯಾಗಿ ಮುಗಿಸಿತು.