ಇದು ವಿಶ್ವದ ಅತೀ ಚಿಕ್ಕ ಮೊಬೈಲ್ ಫೋನ್

Update: 2017-12-21 17:06 GMT

ಬ್ರಿಟನ್, ಡಿ.21: ವಿಶ್ವದ ಅತೀ ಚಿಕ್ಕ ಮೊಬೈಲ್ ಫೋನ್ ಎಂದು ಹೇಳಲಾದ ‘ಝಾಂಕೋ ಟಿನಿ ಟಿ1’ ಎಂಬ ಹೆಸರಿನ ಮೊಬೈಲ್ ಫೋನೊಂದನ್ನು ಬ್ರಿಟನ್ ಮೂಲಕ ಕಂಪೆನಿ ಕ್ಲುಬಿಟ್ ಮೀಡಿಯಾ ತಯಾರಿಸಿದೆ.

ಈ ಫೋನ್ ಹೆಬ್ಬೆರಳಿಗಿಂತ ಸಣ್ಣ ಗಾತ್ರದಲ್ಲಿದ್ದು, 2 ಡಾಲರ್ ನಾಣ್ಯಕ್ಕಿಂತ ಕಡಿಮೆ ತೂಕವನ್ನು ಹೊಂದಿದೆ. ಕಳೆದ ವಾರ ಈ ಫೋನ್ ಲಾಂಚ್ ಆಗಿದೆ. ಕ್ಲೂಬಿಟ್ ನ್ಯೂ ಮೀಡಿಯಾ ಎನ್ನುವ ಕಂಪೆನಿ ಈ ಫೋನನ್ನು ತಯಾರಿಸಿದೆ. 2 ಡಾಲರ್ ನಾಣ್ಯಕ್ಕಿಂತ ಈ ಫೋನ್ ಸ್ವಲ್ಪ ದೊಡ್ಡ ಗಾತ್ರದ್ದಾಗಿದೆ.

ಜಾಗಿಂಗ್ ಮಾಡುವವವರು, ಓಟಗಾರರು, ವಾಕರ್ಸ್ ಹಾಗು ಸೈಕ್ಲಿಸ್ಟ್ ಗಳಿಗೆ ಈ ಫೋನ್ ಅತ್ಯುತ್ತಮ ಆಯ್ಕೆಯಾಗಿದೆ. 300 ಕಾಂಟಾಕ್ಟ್ ಗಳನ್ನು ಈ ಮೊಬೈಲ್ ನಲ್ಲಿ ಸೇವ್ ಮಾಡಬಹುದಾಗಿದ್ದು, 50 ಎಸ್ಸೆಮ್ಮೆಸ್ ಗಳನ್ನು ಸೇವ್ ಮಾಡುವ ಸಾಮರ್ಥ್ಯ ಹೊಂದಿದೆ.  32 ಎಂಬಿ ಮೆಮೊರಿ ಸಾಮರ್ಥ್ಯವಿದೆ.

2ಜಿ ಸಂಪರ್ಕ ಹೊಂದಿರುವ ಈ ಮೊಬೈಲ್ ನಲ್ಲಿ 200 ಎಂಎಎಚ್ ಬ್ಯಾಟರಿಯಿದೆ. 0.49 ಇಂಚು ಒಎಲ್ ಇಡಿ ಡಿಸ್ ಪ್ಲೇ ಹೊಂದಿದ್ದು, ಡಿಸ್ ಪ್ಲೇ ರೆಸೆಲ್ಯೂಶನ್ 64 x 32 ಪಿಕ್ಸೆಲ್ ಗಳಾಗಿದೆ. ನ್ಯಾನೋ ಸಿಮ್ ಕಾರ್ಡ್ ಸ್ಲಾಟ್, ಬ್ಯಾಕ್ ಲಿಟ್ T9 ಕೀಪ್ಯಾಡ್, ಮೈಕ್ರೋ ಯುಎಸ್ ಬಿ ಹಾಗು ಬ್ಲುಟೂಥ್ ಇದರ ವಿಶೇಷತೆಗಳಾಗಿವೆ.

2018ರ ಮೇ ತಿಂಗಳಲ್ಲಿ ಈ ಮೊಬೈಲ್ ವಿಶ್ವಾದ್ಯಂತ ಲಭ್ಯವಾಗಲಿದ್ದು. ಇದರ ಬೆಲೆ 2,280 ರೂ,ಗಳಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News