ಚಿರಾಪುಂಜಿಯಲ್ಲಿ ದಾಖಲೆ ಮಳೆ

Update: 2017-12-30 18:42 GMT

* 1999: ಡಿ.24ರಂದು ಭಾರತೀಯ ವಿಮಾನಯಾನದ ವಿಮಾನ 814ನ್ನು ನೇಪಾಳದ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ಲಾಣದಿಂದ ತಾಲಿಬಾನ್ ಬಂದೂಕುಧಾರಿ ಉಗ್ರರು ಅಪಹರಿಸಿದ್ದರು. ವಿಮಾನದಲ್ಲಿದ್ದ 175 ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಪ್ರತಿಯಾಗಿ ಭಾರತದ ವಶದಲ್ಲಿದ್ದ ಮೂವರು ಉಗ್ರಗಾಮಿಗಳನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆಯನ್ನು ಅಪಹರಣಕಾರರು ಇಟ್ಟಿದ್ದರು. ಬೇರೆ ದಾರಿಯಿಲ್ಲದೆ ಡಿ.31ರಂದು ಅಂದಿನ ಪ್ರಧಾನಿ ವಾಜಪೇಯಿ ಸರಕಾರ ಮೂವರು ಉಗ್ರಗಾಮಿಗಳನ್ನು ಅಪಹರಣಕಾರರ ವಶಕ್ಕೆ ಒಪ್ಪಿಸಿದ್ದರಿಂದ, ವಿಮಾನದಲ್ಲಿದ್ದ ಪ್ರಯಾಣಿಕರು ಬಚಾವಾದರು.

* 1775: ಅಮೆರಿಕ ಕ್ರಾಂತಿಯ ಭಾಗವಾಗಿ ನಡೆದ ಕ್ಯೂಬೆಕ್ ಕದನದಲ್ಲಿ ಅಮೆರಿಕದ ಕ್ರಾಂತಿಕಾರಿಗಳು ಸೋಲು ಅನುಭವಿಸಿದರು.

* 1861: ಅಸ್ಸಾಂನ ಚಿರಾಪುಂಜಿಯಲ್ಲಿ 22,990 ಮಿ.ಮೀ. ಮಳೆ ದಾಖಲಾಗುವುದರ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಿತ್ತು.

* 1911: ರೇಡಿಯಂ ಹಾಗೂ ಪೊಲೊನಿಯಂಗಳನ್ನು ಸಂಶೋಧಿಸುವ ಮೂಲಕ ರಸಾಯನಶಾಸ್ತ್ರ ಬೆಳವಣಿಗೆಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ವಿಜ್ಞಾನಿ ಮೇರಿ ಕ್ಯೂರಿ ಅವರಿಗೆ ಎರಡನೇ ನೊಬೆಲ್ ಪ್ರಶಸ್ತಿ ನೀಡಲಾಯಿತು.

* 2016: ಬ್ರಿಟನ್‌ನ ಖ್ಯಾತ ಕಲಾವಿದ ಕ್ರಿಸ್ ಒಫಿಲಿ ಕಲೆಗೆ ಸಲ್ಲಿಸಿದ ಸೇವೆಗಾಗಿ ಕಮಾಂಡರ್ ಆಫ್ ದ ಆರ್ಡರ್ ಆಫ್ ದ ಬ್ರಿಟಿಷ್ ಎಂಫೈರ್ ಆಗಿ ನೇಮಕವಾದರು.

1986: ಜನತಾ ಪಕ್ಷದ ನಾಯಕ, ಇಂದಿರಾ ಗಾಂಧಿಯವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದ ರಾಜ್ ನಾರಾಯಣ್ ನಿಧನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ