ಹೊಸ ವರ್ಷಾಚರಣೆ: ಶುಭಾಶಯ ತಿಳಿಸಲು ತುದಿಗಾಲಲ್ಲಿ ನಿಂತಿದ್ದವರಿಗೆ ಕೈಕೊಟ್ಟ ವಾಟ್ಸ್ ಆ್ಯಪ್!

Update: 2018-01-01 09:14 GMT

ಹೊಸದಿಲ್ಲಿ, ಜ.1: ಹೊಸ ವರ್ಷಾಚರಣೆಯ ಸಂದರ್ಭ ವಾಟ್ಸ್ ಆ್ಯಪ್ ಡೌನ್ ಆದ ಪರಿಣಾಮ ಗೆಳೆಯರಿಗೆ, ಕುಟುಂಬಸ್ಥರಿಗೆ ಶುಭ ಹಾರೈಸಲು ಸಾಧ್ಯವಾಗದೆ ಬಳಕೆದಾರರು ಆಕ್ರೋಶಗೊಂಡ ವಿದ್ಯಮಾನವೊಂದು ನಡೆದಿದೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲೇ ವಿಶ್ವಾದ್ಯಂತ ಹಲವೆಡೆಗಳಲ್ಲಿ ವಾಟ್ಸ್ ಆ್ಯಪ್ ಈ ಸಮಸ್ಯೆಯನ್ನು ಎದುರಿಸಿತು.

“ತೊಂದರೆಗಾಗಿ ಕ್ಷಮೆ ಯಾಚಿಸುತ್ತೇವೆ” ಎಂದು ವಾಟ್ಸ್ ಆ್ಯಪ್ ವಕ್ತಾರರೊಬ್ಬರು ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾದ ನಂತರ ಪ್ರತಿಕ್ರಿಯಿಸಿದ್ದಾರೆ.

ಭಾರತ ಹಾಗು ವಿಶ್ವದ ಹಲವೆಡೆಗಳಲ್ಲಿ ವಾಟ್ಸ್ ಆ್ಯಪ್ ಡೌನ್ ಆಗಿದೆ ಎಂದು ಬಳಕೆದಾರರು ರಿಪೋರ್ಟ್ ಮಾಡಿದ್ದರು. ಕುಟುಂಬಸ್ಥರು ಹಾಗು ಗೆಳೆಯರಿಗೆ ಹೊಸ ವರ್ಷದ ಶುಭಾಶಗಳನ್ನು ತಿಳಿಸಲಾಗಿದೆ ವಾಟ್ಸ್ ಆ್ಯಪ್ ಬಳಕೆದಾರರು ಆಕ್ರೋಶಗೊಂಡಿದ್ದರು.

ಮಧ್ಯರಾತ್ರಿಯ ವೇಳೆ ವಾಟ್ಸ್ ಆ್ಯಪ್ ಈ ಸಮಸ್ಯೆಯನ್ನು ಎದುರಿಸಿತ್ತು. 2015ರ ಹೊಸ ವರ್ಷಾಚರಣೆಯ ಸಂದರ್ಭವೂ ಇಂತಹದ್ದೇ ಆಕ್ರೋಶವನ್ನು ವಾಟ್ಸ್ ಆ್ಯಪ್ ಎದುರಿಸಿತ್ತು. ವಾಟ್ಸ್ ಆ್ಯಪ್ ಡೌನ್ ಬಗ್ಗೆ ಸುಮಾರು 3000 ಮಂದಿ ರಿಪೋರ್ಟ್ ಮಾಡಿದ್ದರು ಎಂದು Outage.report ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News