ಕೊಳ್ಳೇಗಾಲ:ಶಾಲಾ ವಾಹನ ಮತ್ತು ಗೂಡ್ಸ್ ಆಟೋ ಮುಖಾಮುಖಿ ಢಿಕ್ಕಿ
Update: 2018-01-03 12:41 GMT
ಕೊಳ್ಳೇಗಾಲ,ಜ.03: ಶಾಲಾ ವಾಹನ ಮತ್ತು ಗೂಡ್ಸ್ ಆಟೋ ಮುಖಾಮುಖಿ ಢಿಕ್ಕಿ ಹೊಡೆದ ಘಟನೆ ಬಾಪುನಗರ ಮುಂಭಾಗದ ಪೆಟ್ರೋಲ್ ಬಂಕ್‍ನ ಬಳಿ ನಡೆದಿದೆ.
ಎನ್.ಹೆಚ್ ಕಾಮಗಾರಿಯ ಹಿನ್ನೆಲೆಯಲ್ಲಿ ಏಕಮುಖ ರಸ್ತೆಯಲ್ಲಿ ಸಂಚರಿಸುತ್ತಿದ್ದ ಗೂಡ್ಸ್ ಆಟೋ ಮತ್ತು ಶಾಲಾ ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಹೊಡೆದು ವಾಹನಗಳು ಜಖಂಗೊಂಡಿದೆ ಎಂದು ತಿಳಿದು ಬಂದಿದೆ.
ಅಪಘಾತ ಸ್ಥಳಕ್ಕೆ ಪಟ್ಟಣ ಠಾಣೆಯ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.