"ಹಿಂದೂ ಸಂಘಟನೆಗಳು ತಲವಾರು ಹಿಡಿದು ಹೊರಟರೆ ಮುಸ್ಲಿಮರು ನಿರ್ನಾಮ"

Update: 2018-01-05 13:53 GMT
ಸಾಂದರ್ಭಿಕ ಚಿತ್ರ

ಮೂಡಿಗೆರೆ, ಜ.5: ಹಿಂದೂ ಸಂಘಟನೆಗಳು ತಲವಾರು ಹಿಡಿದು ಹೊರಟರೆ ಒಂದೇ ಕ್ಷಣದಲ್ಲಿ ಇಲ್ಲಿನ ಮುಸ್ಲಿಮರನ್ನು ಕೊಚ್ಚಿ ನಿರ್ನಾಮ ಮಾಡಿಬಿಡಲು ನಮಗೆ ತಾಕತ್ತಿದೆ ಎಂದು ತಾಲೂಕು ಬಜರಂಗದಳದ ಸಂಚಾಲಕ ಅವಿನಾಶ್ ವಿವಾದಾತ್ಮಕ, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. 

ದೀಪಕ್‍ ರಾವ್ ಕೊಲೆಯನ್ನು ಖಂಡಿಸಿ ವಿಎಚ್‍ಪಿ ಮತ್ತು ಬಜರಂಗದಳ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು. ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿವಾದಾತ್ಮಕವಾಗಿ ಮಾತನಾಡಿದರು. 

ಎಂಎಲ್‍ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಹಿಂದೂಗಳನ್ನು ಪಿಎಫ್‍ಐ ಕಾರ್ಯಕರ್ತರು ಹುಡುಕಿ ಹುಡುಕಿ ಕೊಲೆ ಮಾಡುತ್ತಿದ್ದಾರೆ. ಇದು ಅವರ ಹಿಂದೂ ವಿರೋಧಿ ನೀತಿಯಾಗಿದೆ. ಆದ್ದರಿಂದ ಪಿಎಫ್‍ಐ ಹಾಗೂ ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರು, ಸರಕಾರದ ಹಣ ದುಂದು ವೆಚ್ಚ ಮಾಡುತ್ತಾ ರಾಜ್ಯವನ್ನು ಸುತ್ತಿ ವಿವಿಧ ಕೋಮುಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕೋಮುವಾದಿ ಮುಖ್ಯಮಂತ್ರಿಯನ್ನು ಕೆಳಗಿಳಿಸಬೇಕೆಂದು ಹೇಳಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಸರಕಾರ ಮೂಡಿಗೆರೆ ಕ್ಷೇತ್ರದ ಅಭಿವೃದ್ಧಿಗೆ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಹಿಂದಿನ ಬಿಜೆಪಿ ಸರಕಾರ ಬಿಡುಗಡೆಗೊಳಿಸಿದ ಅನುದಾನದಲ್ಲಿ ಅಭಿವೃದ್ಧಿ ಮಾಡಿ, ಅದನ್ನು  ಮುಖ್ಯಮಂತ್ರಿಯೆ ಉದ್ಘಾಟಿಸಲು ಹೊರಟಿರುವುದು ನಾಚಿಗೇಡಿನ ಸಂಗತಿ ಎಂದರು.

ಪ್ರಾರಂಭದಲ್ಲಿ ಪಟ್ಟಣದ ಲಯನ್ಸ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ನಂತರ ತಹಸೀಲ್ದಾರ್‍ಗೆ ಮನವಿ ಸಲ್ಲಿಸಲಾಯಿತು. 
ಪ್ರತಿಭಟನೆಯಲ್ಲಿ ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ಉಪಾಧ್ಯಕ್ಷೆ ಸವಿತಾ ರಮೇಶ್, ಜಿ.ಪಂ. ಸದಸ್ಯರಾದ ಅಮಿತಾ, ಸುಧಾ, ಶಾಮಣ್ಣ, ತಾಪಂ ಸದಸ್ಯರಾದ ಭಾರತೀ ರವೀಂದ್ರ, ದೇವರಾಜು, ಪ.ಪಂ. ಸದಸ್ಯೆ ಲತಾ ಲಕ್ಷ್ಮಣ್, ಮುಖಂಡರಾದ ದೀಪಕ್ ದೊಡ್ಡಯ್ಯ, ಆಶಾಮೋಹನ್, ಸರೋಜಾ ಸುರೇಂದ್ರ, ದುಂಡುಗ ಪ್ರಮೋದ್, ಜಯಪಾಲ್, ಮನೋಜ್, ಹುಲ್ಲೆಮನೆ ಚಂದ್ರು, ದೀಕ್ಷಿತ್, ಸುದರ್ಶನ್, ಗಜೇಂದ್ರ, ಸಂದರ್ಶ, ಪ್ರವೀಣ್ ಪೂಜಾರಿ, ಅರುಣ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News