ಗುರುಗ್ರಹದ ಮೊದಲ ಮೂರು ಉಪಗ್ರಹಗಳ ಅನ್ವೇಷಣೆ

Update: 2018-01-06 18:44 GMT

* 1610: ಖ್ಯಾತ ಖಗೋಳಶಾಸ್ತ್ರಜ್ಞ ಇಟಲಿಯ ಗೆಲಲಿಯೋ ಗೆಲಿಲಿಯು ಗುರುಗ್ರಹದ ಮೊದಲ ಮೂರು ಉಪಗ್ರಹಗಳನ್ನು ಅನ್ವೇಷಿಸಿದರು. ಇವೊ, ಯುರೋಪಾ ಮತ್ತು ಗ್ಯಾನಿಮಿಡ್ ಎಂಬುದು ಅವುಗಳ ಹೆಸರು.

* 1949: ದಕ್ಷಿಣ ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಂಶವಾಹಿನಿಗಳ ಪ್ರಥಮ ಫೋಟೊವನ್ನು ಪೀಸ್ ಹಾಗೂ ಬೇಕರ್ ಎಂಬ ವಿಜ್ಞಾನಿಗಳು ತೆಗೆದರು.

* 1953: ತಾನು ಜಲಜನಕ ಬಾಂಬ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಹ್ಯಾರಿ ಟ್ರೂಮನ್ ಘೋಷಿಸಿದರು.

* 1972: 98 ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 104 ಜನರನ್ನು ಸಾಗಿಸುತ್ತಿದ್ದ ಸ್ಪೇನ್‌ನ ವಿಮಾನವು ಇಬೆಝಾ ಎಂಬಲ್ಲಿ ಪತನಗೊಂಡಿತು. ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಎಲ್ಲ ಜನರು ಸಾವಿಗೀಡಾದರು.

* 1990: ಇಟಲಿಯ ಪ್ರಸಿದ್ಧ ಪೀಸಾ ವಾಲು ಗೋಪುರದ ವೀಕ್ಷಣೆಗೆ 800 ವರ್ಷಗಳಲ್ಲಿ ಮೊದಲ ಬಾರಿಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಯಿತು. ಏಕೆಂದರೆ ಗೋಪುರ ಬೀಳಲಿದೆ ಎಂಬ ಆತಂಕ. ಪ್ರತೀವರ್ಷ ಒಂದು ಇಂಚಿನ 12 ಭಾಗದಷ್ಟು ಗೋಪುರ ವಾಲುತ್ತಿದೆ ಎಂಬ ಮಾತುಗಳಿವೆೆ.

* 2015: ಪ್ಯಾರಿಸ್‌ನಲ್ಲಿ ವ್ಯಂಗ್ಯ ದಿನಪತ್ರಿಕೆ ‘ಚಾರ್ಲಿ ಹೆಬ್ಡೊ’ ಕಚೇರಿ ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿ ಮಾಡಿದರು. ಈ ಸಂದರ್ಭದಲ್ಲಿ ವ್ಯಂಗ್ಯಚಿತ್ರಕಾರರಾದ ಜೀನ್ ಕ್ಯಾಬಟ್ ಹಾಗೂ ಸ್ಟೀಫನ್ ಚಾರ್ಬೋನ್ನಿರ್ ಸೇರಿದಂತೆ 12 ಜನರು ಮೃತಪಟ್ಟರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ