ಸುಲಿಗೆಕೋರರ ಬಂಧನ : 80 ಸಾವಿರ ರೂ. ಮೌಲ್ಯದ ವಸ್ತು ವಶ

Update: 2018-01-07 16:03 GMT

ಮಂಡ್ಯ, ಜ.7: ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ ಚಿನ್ನದ ಸರ, ಎರಡು ಮೊಬೈಲ್, 800 ರೂ. ನಗದು ಸೇರಿದಂತೆ ಒಟ್ಟು 80 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಕ್ಯಾತುಂಗೆರೆಯ ನಾಗೇಶ ಅಲಿಯಾಸ್ ಪೃಥ್ವಿ, ಕನಕಪುರ ತಾಲೂಕು ಕಚವಾನಹಳ್ಳಿಯ ಹಾಲಿ ವಾಸ ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯ ಲಿಖಿತ್ ಮತ್ತು ಇನ್ನಿಬ್ಬರು ಬಾಲಪರಾಧಿಗಳು ಬಂಧಿತರು.

ಮೇಲುಕೋಟೆ ಠಾಣೆ ವ್ಯಾಪ್ತಿಯ ಮಂಡ್ಯ-ಮೇಲುಕೋಟೆ ರಸ್ತೆಯ ಮುದ್ದು ಬೆಟ್ಟ ನೇರದ ತಿರುವಿನ ಹಂಪ್ಸ್ ಬಳಿ ಸ್ಟೇಟ್ ಬ್ಯಾಂಕ್ ಇಂಡಿಯ ಮೇಲುಕೋಟೆ ಶಾಖೆಯ ವ್ಯವಸ್ಥಾಪಕರ ಕಾರನ್ನು ಅಡ್ಡಗಟ್ಟಿ ಚಿನ್ನದ ಚೈನು, ಮೊಬೈಲ್, ವಾಚ್, 2000 ರೂ. ಹಾಗು ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಕಾಲೇಜು ಗೇಟ್ ಬಳಿ ಟಿಪ್ಪರ್ ಲಾರಿ ಚಾಲಕನನ್ನು ಬೆದರಿಸಿ ಆತನ ಬಳಿ 2,000 ರೂ., ಒಂದು ಮೊಬೈಲ್‍ನ್ನು ರೇಜರ್ ತೋರಿಸಿ ಬೆದರಿಸಿ ಆರೋಪಿಗಳನ್ನು ದೋಚಿದ್ದರು.

ಬಂಧಿಸಲ್ಪಟ್ಟ 4 ಜನ ಆರೋಪಿತರಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಾಗಿದ್ದು, ಅವರನ್ನು ಬಾಲನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದೆ. ಮತ್ತೊಬ್ಬ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದು, ರವಿವಾರ ಬಂಧಿಸಲ್ಪಟ್ಟ  ಮತ್ತೊಬ್ಬ ಆರೋಪಿಯನ್ನು ತನಿಖೆಗೊಳಪಡಿಸಲಾಗಿದೆ ಎಂದು ಎಸ್ಪಿ ಜಿ.ರಾಧಿಕಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News