ನಾಲ್ವರು ಅಂತರಾಜ್ಯ ಕಳ್ಳಿಯರ ಬಂಧನ

Update: 2018-01-09 17:35 GMT

ಮೈಸೂರು,ಜ.9: ದೇವರಾಜ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಅಂತಾರಾಜ್ಯ ಕಳ್ಳಿಯರನ್ನು ಬಂಧಿಸಿದ್ದಾರೆ.

ಜ.7. ರಂದು ಪ್ರಭಾ ಚಿತ್ರಮಂದಿರ ಸಮೀಪದ ಮನ್ನಾರ್ಸ್ ಸೀರೆ ಮಳಿಗೆಯಲ್ಲಿ ಸೀರೆ ಖರೀದಿ ಮಾಡುವ ನೆಪದಲ್ಲಿ ಗ್ರಾಹಕರೋರ್ವರ 40 ಸಾವಿರ ರೂ. ನಗದು ಇದ್ದ ಪರ್ಸ್ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ದೇವರಾಜ ಠಾಣೆ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ  ತಮಿಳುನಾಡು ಸೇಲಂ ಮೂಲದ ಸುಮತಿ, ಪ್ರಿಯಾ,ಅರಾಯಿ, ಲಕ್ಷ್ಮೀ ಎಂಬವರನ್ನು ಇಂದು ಟೌನ್ ಹಾಲ್ ಸಮೀಪ ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News