ನಕಲಿ ಗೋರಕ್ಷಣೆ ಭಾರತದೊಳಗಿನ ‘ವ್ರಣ’: ತಾಂಜೇನಿಯ ಶಾಸಕ

Update: 2018-01-10 16:50 GMT

 ಹೊಸದಿಲ್ಲಿ, ಜ. 10: ಭಾರತದಲ್ಲಿ ನಕಲಿ ಗೋರಕ್ಷಕರ ಹಾವಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಭಾರತೀಯ ಮೂಲದ ತಾಂಜೇನಿಯಾದ ಶಾಸಕ ಸಲೀಂ ಟರ್ಕಿ, ಇದು ದೇಶದೊಳಗಿನ ‘ವ್ರಣ’ವಾಗಲಿದೆ ಎಂದಿದ್ದಾರೆ.

ತಾಂಜೇನಿಯಾದ ಆಡಳಿತಾರೂಢ ಪಕ್ಷ ಚಮಾ ಚಾ ಮಾಪಿಂಡುಝಿಯಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ ಸಲೀಂ ಟರ್ಕಿ ಹೊಸದಿಲ್ಲಿಯಲ್ಲಿ ನಡೆದ ಮೊದಲ ಪಿಐಒ-ಸಂಸದೀಯ ಸಮಾವೇಶದಲ್ಲಿ ಪಾಲ್ಗೊಂಡ ಸಂದರ್ಭ ಮಾತನಾಡಿದರು.

ನಾವು ಭಾರತದಲ್ಲಿ ಬದುಕುತ್ತಿಲ್ಲ. ಆದರೆ, ಸುದ್ದಿಗಳು ವಿಶೇಷವಾಗಿ ಇಲೆಕ್ಟ್ರಾನಿಕ್ಸ್ ಮೀಡಿಯಾದ ಸುದ್ದಿಗಳನ್ನು ನಾವು ನೋಡುತ್ತಿರುತ್ತೇವೆ. ಈ ಸುದ್ದಿಗಳಲ್ಲಿ ಜನರನ್ನು ಹತ್ಯೆಗೈಯುವುದು, ಉತ್ತೇಜಿಸುವುದನ್ನು ನಾವು ಗಮನಿಸುತ್ತಿರುತ್ತೇವೆ. ಇದು ದೌರ್ಜನ್ಯ ಎಂದು ಅವರು ಹೇಳಿದರು.

ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಗೋರಕ್ಷಣೆ ಹೆಸರಲ್ಲಿ ನಡೆದ ದೌರ್ಜನ್ಯದ ಹಿನ್ನೆಲೆಯಲ್ಲಿ ಸಲೀಂ ಟರ್ಕಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News