ಹನೂರು: ಮುಖ್ಯಮಂತ್ರಿಯಿಂದ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ

Update: 2018-01-11 13:41 GMT

ಹನೂರು,ಜ.11: ರಾಜ್ಯದ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿ, ಮಲೆ ಮಹದೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ನಂತರ ಮಲೈಮಹದೇಶ್ವರ ಸ್ವಾಮಿ ಪ್ರಾಧಿಕರ ಸಭೆಯಲ್ಲಿ ಪಾಲ್ಗೊಂಡರು.

ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ: ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಅಧ್ಯಕ್ಷರು ಸಹ ಆದ ಸಿ.ಎಂ ಸಿದ್ದರಾಮಯ್ಯನವರು ದೇವಸ್ಥಾನದ ಮುಂಭಾಗದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಸುಮಾರು  5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಂಗ ಮಂದಿರ(ನೆರಳು)ವ್ಯವಸ್ಥೆಯನ್ನು ಮತ್ತು  ಅಂತರಗಂಗೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿ, ಯಾತ್ರಾ ಸ್ಥಳಕ್ಕೆ ಬರುವ ಭಕ್ತಾದಿಗಳಿಗೆ ಸಕಲ ಸೌಕರ್ಯಗಳನ್ನು ಒದಗಿಸಿ ಭಕ್ತಾದಿಗಳಿಗೆ ಅನುಕೂಲ ಮಾಡಬೇಕು ಎಂದು ಸೂಚಿಸಿದರು.

ಬೀದಿ ವ್ಯಾಪಾರಿಗಳಿದ್ದೇ ಚರ್ಚೆ: ದೇವಸ್ಥಾನದ ಆಸುಪಾಸಿನಲ್ಲಿ ಸುಮಾರು 300ಕ್ಕೂ ಹೆಚ್ಚು  ಕುಟುಂಬಗಳು ಕಳೆದ ಹಲವು ವರ್ಷಗಳಿಂದ ತಾತ್ಕಾಲಿಕವಾಗಿ ಅಂಗಡಿ ಶೆಡ್ಡುಗಳನ್ನು ಕಟ್ಟಿಕೊಂಡು ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುತ್ತಿದ್ದು. ಆಸುಪಾಸಿನ ವ್ಯಾಪಾರಿಗಳಿಂದ ಯಾತ್ರಿಕರು ಮತ್ತು ವ್ಯಾಪಾರಸ್ಥರರಿಗೂ ತೊಂದರೆಯಾಗದ ರೀತಿ ಶಾಸಕರು ಮತ್ತು ಪ್ರಾಧಿಕಾರ ಮಂಡಳಿಯವರು ಒಟ್ಟಾಗಿ ಸಭೆ ಕರೆದು ಒಂದು ಸೂಕ್ತ ಸ್ಥಳ ಗುರುತಿಸಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೂಡಿ. ವ್ಯಾಪಾರ ಮಾಡಲು ಒದಗಿಸಿಕೂಟ್ಟ ನಂತರವು ಸಹ ಯಾರಾದರೂ ಪ್ರತಿಭಟನೆ ಮಾಡಲು ಮುಂದಾದರೆ ಅವರ ವಿರುದ್ದ ಕಾನುನೂ ಕ್ರಮ ಕೈಗೂಳ್ಳಿ ಎಂದು ಜಿಲ್ಲೆಯ ಪೋಲಿಸ್ ವರಿಷ್ಟಾಧಿಕಾರಿ ಮನೋಜ್‍ಕುಮಾರ್‍ರವರಿಗೆ ಸೂಚಿಸಿದರು.

ಬೆಟ್ಟದ ಪ್ರವೇಶ ದ್ವಾರದ ಬಳಿ ಇರುವ ತಾಳ ಬೆಟ್ಟದ ರಸ್ತೆ ಬದಿಯ 14 ಅಂಗಡಿಗಳ ತೆರವುಮಾಡಲು 45  ದಿನಗಳ ಗಡುವು ಮುಗಿದ ನಂತರ ತೆರವುಗೊಳಿಸಿ, ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜು ಮಾಡುವ ಮೂಲಕ ಅವರಿಗೆ ಒದಗಿಸಿ ಕೂಡಿ ಎಂದು ಸೂಚಿಸಿದರು.

ಯಾತ್ರಿಕರ ಜೀವ ಎಲ್ಲಕ್ಕಿಂತ ಮುಖ್ಯ : ಮಹದೇಶ್ವರ ಪ್ರಾದಿಕಾರದ ನೂತನ 8 ಬಸ್ ಖರೀದಿಗೆ ಸಿ.ಎಂ ಸಿದ್ದರಾಮಯ್ಯನವರು ಸೂಚಿಸಿದ್ದಾರೆ . ಸಂಚರಿಸಲು ಅನರ್ಹ ಬಸ್‍ಗಳನ್ನು ಹೊಸ ಬಸ್‍ ಖರೀದಿಯಾಗುವ ತನಕ ನಿಲ್ಲಿಸಬೇಕು. ಖರೀದಿ ನಂತರ ಹಳೆ ಬಸ್‍ಗಳ ಸ್ಥಳಕ್ಕೆ ಹೊಸ ಬಸ್‍ಗಳನ್ನು ಬಿಡಬೇಕು. ಮಲೈ ಮಹದೇಶ್ವರಬೆಟ್ಟಕ್ಕೆ ಬರುವ ಯಾತ್ರಿಕರ ಸುಖಕರ ಪ್ರಯಾಣ ಮತ್ತು ಅವರ ಜೀವವೇ ಅತೀ ಮುಖ್ಯ.ಪ್ರಾದೀಕಾರದಿಂದ  ಮಹಿಳೆಯರನ್ನು ನೇಮಕಾತಿ ಮಾಡಿಕೂಂಡು ಮಲೈಮಹದೇಶ್ವರ  ಬೆಟ್ಟದ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ನಿಯೋಜನೆ ಮಾಡಿ ಮತ್ತು ಆಂಬುಲೈನ್ಸ್ ವ್ಯವಸ್ಥೆಯನ್ನು ಕಲ್ಪಿಸಿಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News