ವ್ಯಕ್ತಿ ನಾಪತ್ತೆ ದೂರು ದಾಖಲು
Update: 2018-01-13 15:37 GMT
ಶಿವಮೊಗ್ಗ, ಜ.13:ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಪರಮೇಶ್ವರಪ್ಪ ಬಿನ್ ಲೇಟ್ ನಂಜಪ್ಪ ಮಲ್ಲಾಪುರ ವಾಸಿ ಇವರ ಮಗ ಮಲ್ಲೇಶಪ್ಪ ಎಂಬ 30 ವರ್ಷದ ವ್ಯಕ್ತಿ ಡಿಸೆಂಬರ್ 8ರಂದು ನಾಪತ್ತೆೆಯಾಗಿದ್ದಾರೆ ಎಂದು ಪೊಲೀಸ್ ಠಾನೆಯಲ್ಲಿ ದೂರು ದಾಖಲಿಸಲಾಗಿದೆ.
ಮಲ್ಲೇಶಪ್ಪಮನೆಯಲ್ಲಿ ಜಗಳ ಮಾಡಿಕೊಂಡು ಬೆಳಗ್ಗೆ 8ಕ್ಕೆೆ ಮನೆಯಿಂದ ಬೈಕಿನಲ್ಲಿ ಹೋದವರು ಮನೆಗೆ ವಾಪಸ್ಸು ಬಂದಿರುವುದಿಲ್ಲ. ಈ ವ್ಯಕ್ತಿ ಚಹರೆ 5.6 ಅಡಿ ಎತ್ತರ, ಗುಂಡುಮುಖ ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು , ಕಪ್ಪುಕೂದಲು ಕನ್ನಡ ಭಾಷೆ ಮಾತನಾಡುತ್ತಾರೆ. ಕಾಪಿಕಲ್ ಚಕ್ಸ್ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈತನ ಬಗ್ಗೆ ಸುಳಿವು ದೊರತಲ್ಲಿ ಪಿಎಸ್ಸೈ ಹೊಳೆಹೊನ್ನೂರು ಅಥವಾ ಎಸ್ಪಿ ಕಚೇರಿ ಶಿವಮೊಗ್ಗ. ದೂ ಸಂಖ್ಯೆ: 08182-261400, 9480803359, 08282-235494. ಇವರಿಗೆ ಮಾಹಿತಿ ನೀಡಲು ಕೋರಿದೆ.