ಮೂರನೇ ಪಾಣಿಪತ್ ಕದನ
* 1761: 18ನೇ ಶತಮಾನದ ಭಾರತದ ಅತ್ಯಂತ ಘನಘೋರ ಕದನಗಳಲ್ಲಿ ಒಂದಾದ ಮೂರನೇ ಪಾಣಿಪತ್ ಕದನವು ಆರಂಭವಾಯಿತು. ಇದು ಅಫ್ಘಾನಿಸ್ತಾನ್ ದೊರೆ ಅಹ್ಮದ್ ಷಾ ಅಬ್ದಾಲಿ ಸೈನ್ಯದ ಒಕ್ಕೂಟ ಹಾಗೂ ಮರಾಠರ ಮಧ್ಯೆ ನಡೆಯಿತು.
* 1784: ಅಮೆರಿಕನ್ ಕಾಂಗ್ರೆಸ್, ಪ್ಯಾರಿಸ್ ಒಪ್ಪಂದವನ್ನು ಅನುಮೋದಿಸುವ ಮೂಲಕ ಅಮೆರಿಕ ಕ್ರಾಂತಿ ಕದನಕ್ಕೆ ಮಂಗಳ ಹಾಡಲಾಯಿತು.
* 1907: ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ಪ್ರಬಲ ಭೂಕಂಪಕ್ಕೆ 1,000ಕ್ಕಿಂತ ಹೆಚ್ಚು ಜನ ಮೃತಪಟ್ಟರು.
* 1914: ಮಹಾತ್ಮಾ ಗಾಂಧೀಜಿ ಹಾಗೂ ಬ್ರಿಟಿಷ್ ಜನರಲ್ ಜೆ.ಸಿ.ಸ್ಮಟ್ ಮಧ್ಯೆ ಭಾರತೀಯ ವಿವಾಹ ಪದ್ಧತಿ, ಸ್ವಯಂ ನೋಂದಣಿ, ವಯಸ್ಕ ತೆರಿಗೆ ಇನ್ನಿತರ ವಿಷಯಗಳ ಕುರಿತು ಒಪ್ಪಂದ ಏರ್ಪಟ್ಟಿತು.
* 1974: ವಿಶ್ವ ಫುಟ್‌ಬಾಲ್ ಲೀಗ್ ಸ್ಥಾಪನೆ.
* 1986: ಗ್ವಾಟೆಮಾಲಾದಲ್ಲಿ ಸಂವಿಧಾನ ಜಾರಿಗೆ ಬಂದಿತು.
* 1998: ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಸಂಶೋಧಕರು, ಕೋಶ ನಾಶ ಹಾಗೂ ಮಾನವನ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುವ ಕಿಣ್ವದ ಕ್ರಿಯೆಯನ್ನು ಪ್ರದರ್ಶಿಸಿದರು.
* 2011: ಕೇರಳದ ಶಬರಿಮಲೆಯಲ್ಲಿ ಭಕ್ತರ ನೂಕುನುಗ್ಗಲಿಗೆ 104 ಜನರು ಪ್ರಾಣ ಕಳೆದುಕೊಂಡರು. 100ಕ್ಕಿಂತ ಹೆಚ್ಚು ಜನ ಗಾಯಗೊಂಡರು.
* 2012: ಇರಾಕ್‌ನ ಬಸ್ರಾದಲ್ಲಿ ಆತ್ಮಹತ್ಯಾ ಬಾಂಬರ್ ಸ್ಫೋಟಿಸಿಕೊಂಡ ಪರಿಣಾಮ 53 ಜನ ಸಾವಿಗೀಡಾದರು. 130 ಜನ ಗಾಯಗೊಂಡರು.
* 1977: ಫಾರ್ಮುಲಾ ಒನ್ ಚಾಲಕ ನರೈನ್ ಕಾರ್ತಿಕೇಯನ್ ಜನ್ಮದಿನ.