ನಾನು ಸೀರೆಗಳನ್ನು ಹಂಚುತ್ತಿರುವುದು ಹೆಣ್ಣು ಮಕ್ಕಳ ಗೌರವ ಕಾಪಾಡಲು: ಎಸ್.ಎನ್.ಸುಬ್ಬಾರೆಡ್ಡಿ
ಬಾಗೇಪಲ್ಲಿ,ಜ.14: ನಾನು ಸೀರೆಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿರುವುದು ಯಾವುದೇ ರಾಜಕೀಯ ಉದ್ದೇಶದಿಂದ ಅಲ್ಲ, ಹೆಣ್ಣು ಮಕ್ಕಳ ಗೌರವ ಕಾಪಾಡುವ ಉದ್ದೇಶದಿಂದ ಸೀರೆಗಳನ್ನು ವಿತರಣೆ ಮಾಡುತ್ತಿದ್ದೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ತಾಲೂಕಿನ ಗೂಳೂರು ಗ್ರಾಮದಲ್ಲಿ ಸೀರೆಗಳ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೆಲವರು ರೇಷ್ಮೆ ಸೀರೆಗಳನ್ನು ಹಂಚಲು ಬರುತ್ತಿದ್ದಾರೆ. ಅವರು ಚುನಾವಣೆ ಸಮಯದಲ್ಲಿ ಮಾತ್ರ ಏಕೆ ಹಂಚಬೇಕು? ಬೇರೆ ಸಂದರ್ಭದಲ್ಲಿ ಏಕೆ ಹಂಚಬಾರದು. ಇವರು ರಾಜಕೀಯ ದುರುದ್ದೇಶದಿಂದ ಈ ಕೆಲಸ ಮಾಡುತ್ತಿದ್ದಾರೆ,. ನಾನು ಚುನಾವಣೆ ಸಮಯದಲ್ಲಿ ಅಲ್ಲ ಪ್ರತಿ ವರ್ಷ ಶಾಸಕನಾಗಿದ್ದರೂ ಅಥವಾ ಶಾಸಕನಾಗದೇ ಇದ್ದರೂ ಸೀರೆಗಳನ್ನು ಉಚಿತವಾಗಿ ಹಂಚುತ್ತೇನೆ. ಇದಕ್ಕೆ ಬೇಕಾಗುವ ಹಣವನ್ನು ನನ್ನ ಸ್ವಂತ ಖರ್ಚಿನಿಂದಲೇ ಭರಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ನರಸಿಂಹಪ್ಪ, ತಾ.ಪಂ.ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಗ್ರಾ.ಪಂ.ಅಧ್ಯಕ್ಷ ಮುನ್ನಖಾನ್, ತಾ.ಪಂ.ಮಾಜಿ ಅಧ್ಯಕ್ಷರಾದ ಎಸ್.ಎಸ್.ರಮೇಶಬಾಬು, ಅಶ್ವತ್ತಪ್ಪ, ಯಲ್ಲಂಪಲ್ಲಿ ವಿಎಸ್‍ಎಸ್‍ಎನ್ ಎ.ಕೃಷ್ಣಪ್ಪ, ಮುಖಂಡರಾದ ಅಮರನಾಥರೆಡ್ಡಿ, ವೀರನಾರಾಯಣ, ಅದಿನರಾಯಣ, ಇಕ್ಬಾಲ್, ಸುಬ್ಬುರಾಮು, ಜಬಿಉಲ್ಲಾ, ಮತ್ತಿತರರರು ಹಾಜರಿದ್ದರು.