ಯುವತಿಯ ಅತ್ಯಾಚಾರಗೈದು ಜೀವಂತ ದಹಿಸಿದ ದುಷ್ಕರ್ಮಿಗಳು: ಆರೋಪ

Update: 2018-01-15 13:23 GMT

ಕಾನ್ಪುರ, ಜ.15: ಮನೆಯಲ್ಲಿ ಒಬ್ಬಂಟಿಯಾಗಿದ್ದ 17 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಆಕೆಯನ್ನು ಜೀವಂತ ದಹಿಸಿದ ಘಟನೆ ಉತ್ತರ ಪ್ರದೇಶದ ಹಮೀರ್ ಪುರ್ ಜಿಲ್ಲೆಯಲ್ಲಿ ನಡೆದಿದೆ.

ಇಷ್ಟೇ ಅಲ್ಲದೆ ದುಷ್ಕರ್ಮಿಗಳು ಮನೆಗೆ ಬಂದಿದ್ದ ಯುವತಿಯ ಸಹೋದರನಿಗೆ ಕೊಡಲಿ ಮತ್ತು ದೊಣ್ಣೆಯಿಂದ ದಾಳಿ ನಡೆಸಿದ್ದಾರೆ. ಆದರೆ ಆತ ಅಲ್ಲಿಂದ ಪರಾರಿಯಾಗಿದ್ದ ಎನ್ನಲಾಗಿದೆ.

ಇಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಹಮೀರ್ ಪುರದ ಎಎಸ್ಪಿ ಸಾಹಬ್ ಲಾಲ್ ಯಾದವ್ ಹೇಳಿದ್ದಾರೆ.

“ಅತ್ಯಾಚಾರಕ್ಕೊಳಗಾದ ನಂತರ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳ ಬಗ್ಗೆ ಕೆಲವರಲ್ಲಿ ವಿಚಾರಿಸುತ್ತಿದ್ದೇವೆ” ಎಂದವರು ಹೇಳಿದರು,

ಆದರೆ ಪೊಲೀಸರ ಹೇಳಿಕೆಯನ್ನು ಯುವತಿಯ ಮನೆಯವರು ನಿರಾಕರಿಸಿದ್ದು, ಸೋನು ಹಾಗು ಸುನಿಲ್ ಎಂಬವರು ತಮ್ಮ ಮಗಳನ್ನು ಅತ್ಯಾಚಾರಗೈದು ಬಳಿಕ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News