ಹನೂರು: ಗಣರಾಜ್ಯೋತ್ಸವ ಆಚರಣೆ ಕುರಿತು ಪೂರ್ವ ಸಿದ್ಧತಾ ಸಭೆ

Update: 2018-01-22 11:48 GMT

ಹನೂರು, ಜ.22 : ಪಟ್ಟಣದ ಲೋಕೋಪಯೋಗಿ ವಸತಿ ಗೃಹದ ಸಭಾಂಗಣದಲ್ಲಿ ಸೋಮವಾರ 69 ನೇ ಗಣರಾಜ್ಯೋತ್ಸವ ಆಚರಣೆ ಕುರಿತು ಪೂರ್ವ ಸಿದ್ಧತೆಯ ಬಗ್ಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳಿಂದ ಸಲಹೆ, ಸೂಚನೆಯನ್ನು ಪಡೆಯಲಾಯಿತು. 

ಇದೇ ಸಂದರ್ಭದಲ್ಲಿ ಕ್ರಿಸ್ತರಾಜ ಶಾಲೆಯ ಮುಖ್ಯ ಶಿಕ್ಷಕ ಮಾತನಾಡಿ, ಹನೂರು ನೂತನವಾಗಿ ತಾಲೂಕು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯನ್ನು ರಚಿಸುವುದರ ಮೂಲಕ ರಾಷ್ಟ್ರೀಯ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ತಿಳಿಸಿದರು. 

ನಂತರ ಮಾತನಾಡಿದ ತಹಸೀಲ್ದಾರ್ ಮಹದೇವಸ್ವಾಮಿ, ಜ.26 ರಂದು ಪಟ್ಟಣದಲ್ಲಿ ಗಣರಾಜೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ತಿರ್ಮಾನಿಸಲಾಗಿದೆ. ಯಾವುದೇ ಲೋಪ ಆಗದಂತೆ ಕಾರ್ಯಕ್ರಮವನ್ನು ರೂಪುಗೊಳಿಸಬೇಕು. ಹನೂರು ತಾಲೂಕು ಅಸ್ತಿತ್ವದಲ್ಲಿದ್ದರೂ ಕೂಡ ಸರ್ಕಾರಿ ಕಚೇರಿಗಳು ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಹೀಗಾಗಿ ಪಟ್ಟಣದಲ್ಲಿ ಇರುವ ವಿವಿಧ ಇಲಾಖೆಯ ಅಧಿಕಾರಿಗಳು ನಮ್ಮ ಜತೆ ಕೈಜೋಡಿಸುವುದರ ಮೂಲಕ ಗಣರಾಜ್ಯೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಬೇಕು. ಮುಂದಿನ ವರ್ಷದಿಂದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯನ್ನು ರಚಿಸುವುದರೂಂದಿಗೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಆಚರಿಸೋಣ ಎಂದು ತಿಳಿಸಿದರು.  

ಗಣರಾಜ್ಯೋತ್ಸವದ ದಿನದಂದು ಪಟ್ಟಣದ ವಿವಿಧ ಶಾಲೆಯ ಮಕ್ಕಳು ನಾಡಕಚೇರಿ ಆವರಣದಿಂದ ಹೊರಟು ಅಂಬೇಡ್ಕರ್ ವೃತ್ತ, ಮುಖ್ಯ ರಸ್ತೆ, ಬಸ್ ನಿಲ್ದಾಣದ ಮೂಲಕ ಬ್ಯಾಂಡ್ ಸೆಟ್ಟಿನೊಂದಿಗೆ ಪಥಸಂಚಲನ ನಡೆಸಿ ಮ.ಬೆಟ್ಟದ ರಸ್ತೆಯ ಬದಿಯಲ್ಲಿರುವ ಮಹದೇಶ್ವರ  ಕ್ರೀಡಾಂಗಣದಲ್ಲಿ ಸಮಾವೇಶಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಪಪಂ ಉಪಾಧ್ಯಕ್ಷ ಬಸವರಾಜು, ಉಪ ತಹಸೀಲ್ದಾರ್ ಭೈರಯ್ಯ, ಬಿಇಒ ,ಟಿ ಆರ್  ಸ್ವಾಮಿ, ಉಪನೋಂದಣಾಧಿಕಾರಿ ನಂದೀಶ್, ಬಿಆರ್‍ಸಿ ಹೆಚ್ ಕ್ಯಾತ ವಿವೇಕಾನಂದ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮಧುಸೂದನ್,  ಕ್ರಿಸ್ತರಾಜಶಾಲೆಯ ದೈಹಿಕ ಶಿಕ್ಷಕರಾದ ಉದಯನಂದಪ್ರಸಾದ್ ,ಹಾಗೂ ಪಟ್ಟಣದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News