ಬಾಗೇಪಲ್ಲಿ: ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ

Update: 2018-01-24 17:37 GMT

ಬಾಗೇಪಲ್ಲಿ,ಜ.24: ಮಹಾನ್ ಕ್ರಾಂತಿಕಾರಿ, ದಾರ್ಶನಿಕರು, ಪ್ರಗತಿಪರರು, ಯೋಗಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿರುವದು ಅತ್ಯಂತ ಬೇಸರದ ಸಂಗತಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಪಟ್ಟಣದ ತಾ.ಪಂ ಸಬಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿವಯೋಗಿ ಶ್ರೀ ಸಿದ್ದರಾಮೇಶ್ವರರು ಸಮಾಜದಲ್ಲಿನ ಅನಿಷ್ಠ ಪದ್ದತಿಗಳನ್ನು ಹಾಗೂ ಅಂಕುಡೊಂಕುಗಳನ್ನು ತಿದ್ದಲು ಪ್ರಾಮಾಣಿಕವಾಗಿ ಹೋರಾಟ ನಡೆಸಿದ್ದರು. ಇಂದು ಮಹಾನ್ ನಾಯಕರನ್ನು ಅವರವರ ಜಾತಿಗಳಿಗೆ ಸೀಮಿತಗೊಳಿಸಿ ಜಾತಿ ದೇವರುಗಳನ್ನಾಗಿ ಮಾಡುತ್ತಿದ್ದಾರೆ. ಯಾವುದೇ ಒಬ್ಬ ನಾಯಕರು ಕೇವಲ ಒಂದು ಜಾತಿಗೆ ತಮ್ಮ ಸಂದೇಶಗಳನ್ನು ಸಾರಲಿಲ್ಲ, ಎಲ್ಲಾ ಜಾತಿಗಳಿಗೂ ಸಮಾನ ಸಂದೇಶ ಸಾರಿದರು. ಅದೇ ರೀತಿಯಲ್ಲಿ ಬೋವಿ ಸಮುದಾಯದವರು ಆರ್ಥಿಕ, ಸಾಮಾಜಿಕ,ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು ಅವರನ್ನು ಮುಂದೆ ತರುವ ಪ್ರಯತ್ನವನ್ನ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ  ತಹಸೀಲ್ದಾರ್ ಮಹಮ್ಮದ್ ಆಸ್ಲಂ, ತಾ,ಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಜಿ.ಪಂ ಸದಸ್ಯರಾದ ಲಕ್ಷ್ಮೀನರಸಿಂಹಪ್ಪ, ನಾರಾಯಣಮ್ಮ, ತಾ.ಪಂ ಉಪಾಧ್ಯಕ್ಷೆ ಸರಸ್ಪತಮ್ಮ, ಪುರಸಭೆ ಅಧ್ಯಕ್ಷೆ ಮಮತಾ ನಾಗರಾಜ್‍ ರೆಡ್ಡಿ, ಬಿಇಓ ಶಿವಕುಮಾರ್, ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಜಯರಾಂ, ಲೋಕೋಪಯೋಗಿ ಇಲಾಖೆಯ ಎಇ ಜಿ.ಎನ್.ಪೂಜಪ್ಪ, ಬಿಸಿಎಂ ವಿಸ್ತೀರ್ಣಧಿಕಾರಿ ಶಿವಪ್ಪ, ಭೋವಿ ಸಮುದಾಯದ ಮುಖಂಡರಾದ ವೆಂಕಟಪತಿ, ಲಂಬೂಶೀನಾ. ಪಿ.ಡಿ.ವೆಂಕಟರಾಂ.ವೆಂಕಟೇಶ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News