ಪುರಾತನ ನಾಣ್ಯ ಹಾಗು ನೋಟುಗಳ ಪ್ರದರ್ಶನ

Update: 2018-01-27 15:18 GMT

ಚೆಟ್ಟಳ್ಳಿ,ಜ.27: ಚೆಟ್ಟಳ್ಳಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿರಾಜಪೇಟೆ ಪದವಿ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ಎನ್‍ಎಸ್‍ಎಸ್ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಅಜಯ್‍ ನಾರಾಯಣರಾವ್ ರವರು ಹಲ್ವು ವರ್ಷಗಳಿಂದ ಸಂಗ್ರಹಿಸಿದ ಪುರಾತನ ನಾಣ್ಯ ಹಾಗು ನೋಟುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಿಸಿದ  ಅಜಯ್‍ ನಾರಾಯಣರಾವ್ ಏನಾದರೂ ನೆನಪಿನಲ್ಲಿ ಉಳಿಯುವ  ಕಾರ್ಯವನ್ನು ಮಾಡಬೇಕೆಂದು ಕಳೆದ ಆರು ವರ್ಷಗಳಿಂದ ಪುರಾತನ ನಾಣ್ಯಗಳನ್ನು ಹಾಗು ಸಂಗ್ರಹಿಸಿ ಪ್ರದರ್ಶನಕ್ಕೆ ಇಡುತಿದೇನೆ. ಇದರಲ್ಲಿ ಶ್ರೀರಾಮ ಪಟಾಭಿಶೇಕದ ನಾಣ್ಯದಿಂದ ಹಿಡಿದು ನಿಜಾಮ್, ಮೊಗಲ್, ವೀರಾರಾಜೆಮದ್ರ, ಟಿಪ್ಪು ಸುಲ್ತಾನ್ ಕಾಲದ ನಾಣ್ಯಗಳಿದ್ದು 165 ದೇಶಗಳ ನಾಣ್ಯ ಹಾಗು ನೋಟುಗಳನ್ನು ಸಂಗ್ರಹಿಸಲಾಗಿದೆ. ಗರ್ವನರ್ ಸಹಿ ಇರುವ ವಿವಿಧ ಬಗೆಬಗೆಯ ನೋಟುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದರಿಂದ ಬರುವ ಹಣವನ್ನು ಅನಾಥ,ಅಂಗವಿಲಕ,ಬಡವ ಮಕ್ಕಳಿಗೆ ವಿನಿಯೋಗಿಸುತ್ತಿದ್ದೇನೆಂದರು. 

ಜನವರಿ 24ರಂದು ಬಲ್ಲಾರಂಡ ಮೋತಿದೇವಯ್ಯನವರ ಅಧ್ಯಕ್ಷರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಕಾರಿ ಸಂಘದ ನಿರ್ದೇಕರಾದ ಕೊಂಗೇಟಿರ ವಾಣಿ ಕಾಳಪ್ಪ, ಕಣಜಾಲು ಪೂವಯ್ಯ, ಕಾಫಿ ಬೆಳೆಗಾರರಾದ ಮುಳ್ಳಂಡ ಕಾಶಿದೇವಯ್ಯ ಚೆಟ್ಟಳ್ಳಿ ಸ.ಪ್ರಾ,ಶಾಲೆಯ ಸಹಶಿಕ್ಷರ ರಾದ ದೀನಾ,ಶಾರದಾ ಶ್ರೀಮತಿ ಬಲ್ಲಾರಂಡ ದೇವಯ್ಯ ಹಾಗು ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಭಾಗವಹಿಸಿದ್ದರು. ಅಜಯ್‍ ನಾರಾಯಣರಾವ್‍ರವರನ್ನು ಶಾಲುಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸಂಜೆ 7ರಿಂದ ವಿರಾಜಪೇಟೆಯ ಹಾರ್ಟ್‍ಬೀಟ್ ಮ್ಯೂಸಿಕಲ್ ನೈಟ್ ವತಿಯಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News